twitter
    For Quick Alerts
    ALLOW NOTIFICATIONS  
    For Daily Alerts

    ಇವರೇ 'ಕೆಜಿಎಫ್'ಗೆ ಶಿಳ್ಳೆ ಹೊಡೆಯುವ ಸಂಭಾಷಣೆ ಬರೆದವರು

    |

    Recommended Video

    ಇವರೇ 'ಕೆಜಿಎಫ್'ಗೆ ಶಿಳ್ಳೆ ಹೊಡೆಯುವ ಸಂಭಾಷಣೆ ಬರೆದವರು..! | FILMIBEAT KANNADA

    'Do what you love, Love what you do' ಎಂಬ ಮಾತಿದೆ. ಜೀವನದಲ್ಲಿ ನಮಗೆ ಯಾವ ಕೆಲಸ ಇಷ್ಟನೋ ಆ ಕೆಲಸ ಮಾಡಬೇಕು. ನಾವು ಮಾಡುವ ಕೆಲಸವನ್ನು ಇಷ್ಟ ಪಡಬೇಕು. ಈ ಮಾತಿನಂತೆ ನಡೆದುಕೊಂಡಿರುವುದು ಚಂದ್ರಮೌಳಿ ಎಂ.

    'ಕೆಜಿಎಫ್' ಸಿನಿಮಾ ನೋಡುವಾಗ ಸಿಕ್ಕಾಪಟ್ಟೆ ಶಿಳ್ಳೆಗಳು ಅದರ ಡೈಲಾಗ್ ಗಳಿಗೆ ಬರುತ್ತಿದೆ. ಜನ ಸಿನಿಮಾದ ಪ್ರತಿ ಸಂಭಾಷಣೆಯನ್ನ ಎಂಜಾಯ್ ಮಾಡುತ್ತಿದ್ದಾರೆ. ಇಂತಹ ಅದ್ಬುತ ಸಂಭಾಷಣೆಯನ್ನು ಬರೆದಿರುವವರು ಚಂದ್ರಮೌಳಿ ಎಂ. ಮೂಲತಃ ಬೆಂಗಳೂರಿನವರೇ ಆದ ಚಂದ್ರಮೌಳಿ 'ಕೆಜಿಎಫ್'ನಲ್ಲಿ ತಾವು ಬರೆದ ಸಾಲುಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

    ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೆಕ್ಚರ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಮೌಳಿ ತಮ್ಮ ಕೆಲಸ ಬಿಟ್ಟು ಸಿನಿಮಾ ಪಯಣ ಶುರು ಮಾಡಿದರು. ಸಿನಿಮಾ ಎಂಬ ಸಾಧನೆಯ ಗುರಿ ಹಿಡಿದು ಹೊರಟ ಅವರಿಗೆ ಇಂದು ಒಂದು ಮಟ್ಟಕ್ಕೆ ಹೆಸರು ಬಂದಿದೆ. 'ಕೆಜಿಎಫ್' ಎಂಬ ಮಹಾ ಸಿನಿಮಾದ ಬರೆವಣಿಗೆಯ ಜವಾಬ್ದಾರಿಯನ್ನು ಅವರು ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ.

    'ಕೆಜಿಎಫ್' ಡೈಲಾಗ್ ಗಳ ಪಟ್ಟಿ : ಗಾಯಗೊಂಡಿರೋ ಸಿಂಹದ ಸಂಭಾಷಣೆಗಳಿವು 'ಕೆಜಿಎಫ್' ಡೈಲಾಗ್ ಗಳ ಪಟ್ಟಿ : ಗಾಯಗೊಂಡಿರೋ ಸಿಂಹದ ಸಂಭಾಷಣೆಗಳಿವು

    ತಮ್ಮ ಸಿನಿಮಾ ಜರ್ನಿ ಹಾಗೂ 'ಕೆಜಿಎಫ್' ಚಿತ್ರದ ಸಂಭಾಷಣೆಗಳ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಅವರು ಮಾತನಾಡಿದ್ದಾರೆ. ಮುಂದೆ ಓದಿ...

    ಸಂದರ್ಶನ : ನವಿಕನಸು (ನವೀನ ಎಂ ಎಸ್)

    ತುಂಬ ಖುಷಿ ಆಗುತ್ತಿದೆ

    ತುಂಬ ಖುಷಿ ಆಗುತ್ತಿದೆ

    ''ತುಂಬ ಖುಷಿ ಆಗುತ್ತಿದೆ. ಎರಡ್ಮೂರು ಬಾರಿ ಥಿಯೇಟರ್ ಗ ಹೋಗಿ ಸಿನಿಮಾ ನೋಡಿದ್ದೇನೆ. ಜನ ಪ್ರತಿ ಡೈಲಾಗ್ ಬಂದಾಗ ಶಿಳ್ಳೆ ಹೊಡೆದು ಕಿರುಚಿತ್ತಾರೆ. ಇದನ್ನ ನೋಡಿದಾಗ ಖುಷಿ ಆಗುತ್ತೆ. ಸಿಕ್ಕಾಪಟ್ಟೆ ಮೆಸೇಜ್, ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬರುತ್ತಿದೆ. ಡೈರೆಕ್ಟರ್ ನರ್ತನ್ ಸರ್ ಹಾಗೂ ಓಂ ಪ್ರಕಾಶ್ ಸರ್ ಫೋನ್ ಮಾಡಿ ವಿಶ್ ಮಾಡಿದರು. ಹೀಗೆ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದರು.''

    'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ 'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ

    ಪೂರ್ಣ ಸಿನಿಮಾಗೆ ಡೈಲಾಗ್ ಬರೆದಿದ್ದು ಇದೇ ಮೊದಲು

    ಪೂರ್ಣ ಸಿನಿಮಾಗೆ ಡೈಲಾಗ್ ಬರೆದಿದ್ದು ಇದೇ ಮೊದಲು

    ''ಈ ಹಿಂದೆ ಯಾವ ಸಿನಿಮಾಗೂ ಡೈಲಾಗ್ ಬರೆದಿದಿಲ್ಲ. 'ಉಗ್ರಂ' ಸಿನಿಮಾ ಮುಗಿದ ಮೇಲಿನಿಂದ ಪ್ರಶಾಂತ್ ಸರ್ ಅವರ ಜೊತೆಗೆ ಕೆಲಸ ಮಾಡುತ್ತಿದ್ದೆ. ಬಳಿಕ 'ಮಾಸ್ಟರ್ ಫೀಸ್' ಹಾಗೂ 'ರಥಾವರ' ಸಿನಿಮಾಗಳಲ್ಲಿ ನಿರ್ದೇಶಕರ ತಂಡದಲ್ಲಿ ಕೆಲಸ ಮಾಡಲು ಕಳುಹಿಸಿ ಕೊಟ್ಟರು. ಒಂದು ಪೂರ್ಣ ಸಿನಿಮಾಗೆ ಡೈಲಾಗ್ ಬರೆದಿದ್ದು ಇದೇ ಮೊದಲು.

    ಕಲೆಕ್ಷನ್ ನಲ್ಲಿ 'ಕೆಜಿಎಫ್' ಎದುರು ಮಂಡಿಯೂರಿದ 'ಜೀರೋ'.! ಕಲೆಕ್ಷನ್ ನಲ್ಲಿ 'ಕೆಜಿಎಫ್' ಎದುರು ಮಂಡಿಯೂರಿದ 'ಜೀರೋ'.!

    ಪ್ರಶಾಂತ್ ಸರ್ ಅವರನ್ನ ಭೇಟಿ ಮಾಡಿದ್ದು

    ಪ್ರಶಾಂತ್ ಸರ್ ಅವರನ್ನ ಭೇಟಿ ಮಾಡಿದ್ದು

    ''ನಾನು ಮೊದಲ ಶಾರ್ಟ್ ಮೂವಿಗಳನ್ನ ಮಾಡುತ್ತಿದ್ದೆ. ಆಗ ಪುನೀತ್ ರುದ್ರನಾಗ್ ಅಂತ ಇದ್ದಾರೆ ಅವರಿಂದ ಕರೆ ಬಂತು. ಪ್ರಶಾಂತ್ ಸರ್ ಭೇಟಿಯಾಯ್ತು. ಮೊದಲ ಒಂದು ಇಂಟರ್ ವ್ಯೂ ಮಾಡಿ ಏನು ಎತ್ತ ವಿಚಾರಿಸಿದರು. ನಂತರ ಡೈರೆಕ್ಟನ್ ವಿಭಾಗಕ್ಕೆ ಸೇರಿಕೊಂಡೆ. ಹೊಸ ಹೊಸ ಆಕ್ಟರ್ ಗಳು ಬಂದಾಗ ಅವರಿಗೆ ವರ್ಕ್ ಶಾಪ್ ನಡೆಯುತ್ತಿತ್ತು. ಆಗ ನಾನು ಅವರಿಗಾಗಿ ಒಂದು ಸೀನ್ ಕ್ರಿಯೇಟ್ ಮಾಡಿ ಪ್ರತಿ ದಿನ ಹೊಸ ಹೊಸ ಡೈಲಾಗ್ ಬರೆಯುತ್ತಿದ್ದೆ. ಇದು ಪ್ರಶಾಂತ್ ಸರ್ ಗೆ ಇಷ್ಟ ಆಗಿ 'ಕೆಜಿಎಫ್'ಗೆ ಬರೆಯಲು ಹೇಳಿದರು. ಅದು ಅವರ ದೊಡ್ಡ ಗುಣ.''

    ಕೆಜಿಎಫ್ ನೋಡಿ 'ರಾಕಿ ಭಾಯ್'ಗೆ ಫಿದಾ ಆದ ಬಾಲಿವುಡ್ ನಟಿ.! ಕೆಜಿಎಫ್ ನೋಡಿ 'ರಾಕಿ ಭಾಯ್'ಗೆ ಫಿದಾ ಆದ ಬಾಲಿವುಡ್ ನಟಿ.!

    ಶೂಟಿಂಗ್ ಟೈಮ್ ನಲ್ಲಿಯೂ ಡೈಲಾಗ್ ಬರೆದಿದ್ದೇನೆ

    ಶೂಟಿಂಗ್ ಟೈಮ್ ನಲ್ಲಿಯೂ ಡೈಲಾಗ್ ಬರೆದಿದ್ದೇನೆ

    ''ಈ ರೀತಿಯ ಸಂದರ್ಭಕ್ಕೆ ಡೈಲಾಗ್ ಬೇಕು ಎಂದು ಪ್ರಶಾಂತ್ ಸರ್ ಹೇಳುತ್ತಿದ್ದರು. ಅದಕ್ಕೆ ಸೂಕ್ತ ಎನ್ನುವ ಹಾಗೆ ಸಂಭಾಷಣೆ ಬರೆಯುತ್ತಿದ್ದೆ. ಕೆಲವು ಬಾರಿ ಬರೆಯಲು ಸಮಯ ಸಿಗುತ್ತಿರಲಿಲ್ಲ. ಶೂಟಿಂಗ್ ಟೈಮ್ ನಲ್ಲಿಯೂ ಕೆಲ ಡೈಲಾಗ್ ಬರೆದಿದ್ದೇನೆ. ಡಾನ್ ಬಗ್ಗೆ ಇರುವ ಡೈಲಾಗ್ ಯಶ್ ಸರ್ ಗೆ ಬಹಳ ಇಷ್ಟ.''

    ಕೆಲಸ ಬಿಟ್ಟು ಸಿನಿಮಾ ಶುರು ಮಾಡಿದೆ

    ಕೆಲಸ ಬಿಟ್ಟು ಸಿನಿಮಾ ಶುರು ಮಾಡಿದೆ

    ''ನಾನು ಎಂ ಎಸ್ ಸಿ ಮುಗಿಸಿಕೊಂಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಠ ಮಾಡುತ್ತಿದೆ. ಸಿನಿಮಾ ಬಗ್ಗೆ ಬಹಳ ಆಸಕ್ತಿ ಇತ್ತು. ಶಾರ್ಟ್ ಮೂವಿ ಮಾಡುತ್ತಿದ್ದೇವು. ಒಂದು ಕಿರುಚಿತ್ರ ಮಾಡುವಾಗ ಅದರ ಡೈರೆಕ್ಟರ್ ಗೆ ಪುನೀತ್ ಸಂಪರ್ಕ ಮಾಡಿದರು. ಆಗ ನನ್ನನ್ನ ಅವರು ರೆಫರ್ ಮಾಡಿದರು. ಈ ರೀತಿಯ ಒಂದು ಒಳ್ಳೆಯ ತಂಡ ಸಿಕ್ಕಿದ್ದ ತಕ್ಷಣ ಕೆಲಸ ಬಿಟ್ಟು ಸಿನಿಮಾ ಕೆಲಸ ಶುರು ಮಾಡಿದೆ.''

    ನಮ್ಮನ್ನು ಮನೆಗೆ ಕಳುಹಿಸುತ್ತಿರಲಿಲ್ಲ

    ನಮ್ಮನ್ನು ಮನೆಗೆ ಕಳುಹಿಸುತ್ತಿರಲಿಲ್ಲ

    ''ಬೆಂಗಳೂರು ಗಾರೆಬಾವಿ ಪಾಳ್ಯದಲ್ಲಿ ನಮ್ಮ ಮನೆ. ನಾನೇ ಮನೆಯಲ್ಲಿ ದೊಡ್ಡ ಮಗ ಒಳ್ಳೆಯ ಕೆಲಸ ಬಿಟ್ಟಾಗ ಎಲ್ಲರೂ ಬೇಜಾರು ಮಾಡಿಕೊಂಡಿದ್ದರು. ನಮ್ಮ ಅಪ್ಪನಿಗೆ ಇತ್ತೀಚಿಗೆ ನಾನು ಸಿನಿಮಾಗೆ ಸೇರಿದ ವಿಷಯ ತಿಳಿಯಿತು. 'ಕೆಜಿಎಫ್' ಸಿನಿಮಾದ ಕೆಲಸ ಶುರು ಆದಾಗ ನಮ್ಮನ್ನು ಮನೆಗೆ ಕಳುಹಿಸುತ್ತಿರಲಿಲ್ಲ. ಅಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದೆವು''

    ನಾನು ಸಿನಿಮಾಗೆ ಬರಲು ಕಾರಣ ಉಪೇಂದ್ರ

    ನಾನು ಸಿನಿಮಾಗೆ ಬರಲು ಕಾರಣ ಉಪೇಂದ್ರ

    ''ನಾನು ತುಂಬ ಸಿನಿಮಾ ನೋಡುತ್ತಿದ್ದೆ. ಕಾಲೇಜ್ ನಲ್ಲಿ ಕೆಲವು ಬುಕ್ ಗಳನ್ನು, ಕಥೆಗಳನ್ನು ಓದುತ್ತಿದೆ. ನಾನು ಸಿನಿಮಾಗೆ ಬರಲು ಕಾರಣ ಉಪೇಂದ್ರ. ಡೈಲಾಗ್ ಬರೆಯಲು ಅವರೇ ಸ್ಫೂರ್ತಿ. ಅವರು ಅಂದರೆ ನನಗೆ ತುಂಬ ಇಷ್ಟ. ನಾನು ಜಾಸ್ತಿ ಸಾಹಿತ್ಯ ಓದಿಕೊಂಡಿಲ್ಲ. ಸಿನಿಮಾ ನೋಡಿಯೇ ಬರೆಯುವುದನ್ನ ಕಲಿತಿದ್ದೇನೆ ಅಷ್ಟೇ.''

    ಮುಂದೆ ನನ್ನ ನಿರ್ದೇಶನದ ಸಿನಿಮಾ

    ಮುಂದೆ ನನ್ನ ನಿರ್ದೇಶನದ ಸಿನಿಮಾ

    ''ನಿರ್ದೇಶಕ ಆಗಬೇಕು ಎಂದುಕೊಂಡು ಬಂದ ನಾನು ಈಗ ಸದ್ಯಕ್ಕೆ ಡೈಲಾಗ್ ರೈಟರ್ ಆಗಿದ್ದೇನೆ. 'ಕೆಜಿಎಫ್' ಚಾಪ್ಟರ್ 2 ಸಿನಿಮಾದ ಕೆಲಸಗಳ ನಡೆಯಬೇಕಿದೆ. ಆಮೇಲೆ ನನ್ನ ನಿರ್ದೇಶನದ ಸಿನಿಮಾವನ್ನು ಮಾಡುತ್ತೇನೆ. 'ಕೆಜಿಎಫ್'ಗೆ ಸಿಕ್ಕ ಪ್ರತಿಕ್ರಿಯೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದೆ.''

    English summary
    All about 'KGF' kannada movie dialogue writer Chandramouli M.
    Monday, December 24, 2018, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X