twitter
    For Quick Alerts
    ALLOW NOTIFICATIONS  
    For Daily Alerts

    ರಾಘಣ್ಣ ಸಂದರ್ಶನ: 'ಅಮ್ಮನ ಮನೆ' ನಮ್ಮ ಅಮ್ಮ ಕಳುಹಿಸಿದ ಪ್ರಸಾದ

    |

    Recommended Video

    Raghavendra Rajkumar Exclusive Interview : ನೀವೆಂದು ನೋಡಿರದ ರಾಘಣ್ಣ..!

    14 ವರ್ಷದ ನಂತರ ರಾಘವೇಂದ್ರ ರಾಜ್ ಕುಮಾರ್ ನಟಿಸಿರುವ ಸಿನಿಮಾ ಅಮ್ಮನ ಮನೆ. ಹಲವು ವಿಶೇಷತೆಗಳೊಂದಿಗೆ ಸಿದ್ಧವಾಗಿರುವ ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ.

    ಮತ್ತೆ ಸಿನಿಮಾ ಮಾಡ್ತೀನಿ ಎಂದು ಸ್ವತಃ ರಾಘವೇಂದ್ರ ರಾಜ್ ಕುಮಾರ್ ಅವರೇ ಅಂದಕೊಂಡಿರಲಿಲ್ಲ. ಅಂತಹ ಸಮಯದಲ್ಲಿ ಅವರನ್ನ ಅರಿಸಿಕೊಂಡು ಬಂದ ಚಿತ್ರ 'ಅಮ್ಮನ ಮನೆ'. ರಾಷ್ಟ್ರಪ್ರಶಸ್ತಿ ವಿಜೇತ ನಿಖಿಲ್ ಮಂಜೂ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಈ ಪಾತ್ರಕ್ಕೆ ರಾಘಣ್ಣ ಅವರೇ ಬೇಕು ಎಂದು ನಿರ್ಧರಿಸಿ ಒತ್ತಾಯದಿಂದ ಮಾಡಿಸಿದ್ದಾರೆ. ಹಾಗೆ, ಬಹಳ ಆಸೆಪಟ್ಟು, ಇಷ್ಟು ರಾಘಣ್ಣ ಈ ಸಿನಿಮಾ ಮಾಡಿದ್ದಾರೆ.

    ಕರ್ನಾಟಕಕ್ಕೂ ಮೊದಲೇ ವಿದೇಶದಲ್ಲಿ ತೆರೆಕಾಣಲಿದೆ 'ಅಮ್ಮನ ಮನೆ'ಕರ್ನಾಟಕಕ್ಕೂ ಮೊದಲೇ ವಿದೇಶದಲ್ಲಿ ತೆರೆಕಾಣಲಿದೆ 'ಅಮ್ಮನ ಮನೆ'

    ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮಾತನಾಡಿರುವ ರಾಘಣ್ಣ ಅಮ್ಮನ ಮನೆ ಚಿತ್ರ ನನ್ನ ಜೀವನದಲ್ಲಿ ಬಹಳ ವಿಶೇಷ. ಅಮ್ಮನ್ನನ್ನು ಕಳೆದುಕೊಂಡು ನಂತರ ನಮ್ಮ ಅಮ್ಮಾನೇ ಈ ಪ್ರಸಾದವನ್ನ ಕಳುಹಿಸಿದ್ದಾರೆ. ಹಾಗಾಗಿ, ಈ ಚಿತ್ರದಲ್ಲಿ ನಾನು ನಟಿಸಿಲ್ಲ, ಜೀವಿಸಿದ್ದೀನಿ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    Ammana mane movie most special for Raghavendra rajkumar

    14 ವರ್ಷಗಳ ಬಳಿಕ ರಾಘಣ್ಣ ಒಪ್ಪಿಕೊಂಡ ಈ ಚಿತ್ರ ಯಾವುದು? 14 ವರ್ಷಗಳ ಬಳಿಕ ರಾಘಣ್ಣ ಒಪ್ಪಿಕೊಂಡ ಈ ಚಿತ್ರ ಯಾವುದು?

    ಏನಿದು ಅಮ್ಮನ ಮನೆ ಕಥೆ?

    ''ಒಂದು ಹೆಣ್ಣು ಗಂಡು ಜನ್ಮಕ್ಕೆ ಮೂರು ಸಲ ತಾಯಿ ಆಗ್ತಾರೆ, ಮೊದಲನೇ ಸಲ ಜನ್ಮ ನೀಡಿ, ಎರಡನೇ ಸಲ ಹೆಂಡತಿ ಆಗಿ, ಮೂರನೇ ಸಲ ಮಗಳಾಗಿ ಅಮ್ಮನ ಸ್ಥಾನ ತುಂಬ್ತಾಳೆ. ಈ ಮೂರು ಜನರ ತಾಯಿಂದಿರನ್ನ ಒಬ್ಬ ಗಂಡು ಹೇಗೆ ನಿಭಾಯಿಸ್ತಾನೆ ಎಂಬುದು ಈ ಚಿತ್ರ''

    Ammana mane movie most special for Raghavendra rajkumar

    ಕಮ್ ಬ್ಯಾಕ್ ಮಾಡಿದ ರಾಘಣ್ಣನಿಗೆ ಅಮ್ಮನಾಗುತ್ತಿರುವವರು ಇವರೇಕಮ್ ಬ್ಯಾಕ್ ಮಾಡಿದ ರಾಘಣ್ಣನಿಗೆ ಅಮ್ಮನಾಗುತ್ತಿರುವವರು ಇವರೇ

    ನೀವೇ ಯಾಕೆ ಈ ಪಾತ್ರಕ್ಕೆ ಬೇಕಾಯಿತು?

    ''ನಿರ್ದೇಶಕ ಬಂದು ನೀವೇ ಈ ಪಾತ್ರ ಮಾಡ್ಬೇಕು ಎಂದು ಕೇಳಿದಾಗ, ನನಗೆ ಮಾತು ಬರಲಿಲ್ಲ. ನನ್ನ ಪರಿಸ್ಥಿತಿ ಬಗ್ಗೆ ಗೊತ್ತಿದ್ದರೂ ಕೇಳುತ್ತಿದ್ದಾರೆ ಅಲ್ವಾ ಅಂತ ಅಚ್ಚರಿಯಾಯಿತು. ನಾನು ನಿರ್ದೇಶಕರನ್ನ ಕೇಳಿದೆ, ನನ್ನಿಂದ ಇದು ಸಾಧ್ಯನಾ, ನನ್ನಿಂದ ಈ ಸಿನಿಮಾ ಮಾಡಿಸೋಕೆ ಕಷ್ಟ ಆಗಬಹುದು ಅಂತ. ಅದಕ್ಕೆ ಅವರು ಹೇಳಿದ್ರು, ನಮಗೆ ನಂಜುಂಡಿ ಕಲ್ಯಾಣದ ರಾಘಣ್ಣ ಬೇಡ. ಈಗ ಅಮ್ಮನ ಮಗನಾಗಿ, ದೊಡ್ಮನೆಯ ಜವಾಬ್ದಾರಿಯುತ ವ್ಯಕ್ತಿಯಾಗಿ, ಇಂಡಸ್ಟ್ರಿಯಲ್ಲೊಬ್ಬ ಹಿರಿಯನಾಗಿ ಹೇಗಿದ್ದೀರೋ ಅದೇ ರಾಘಣ್ಣ ಬೇಕು ಅಂದ್ರು''

    14 ವರ್ಷದ ಸಿನಿಮಾ ಮಾಡ್ತೀನಿ ಅಂತ ಅಂದುಕೊಂಡಿದ್ರಾ?

    ''ಮೊದಲ ನನಗೆ ಭಯ ಆಯ್ತು. ಆಗ ಅಪ್ಪ-ಅಮ್ಮ ಇದ್ರು, ಈಗ ಯಾರೂ ಇಲ್ಲ ಎಂಬ ಆತಂಕ. ಸಿನಿಮಾ ಬಗ್ಗೆ ಟಚ್ ಇತ್ತು. ಆದ್ರೆ, ಆಕ್ಟ್ ಮಾಡಿರಲಿಲ್ಲ. ಈ ಪರಿಸ್ಥಿತಿಯಲ್ಲಿ ನನ್ನ ಆರೋಗ್ಯ ಸಪೋರ್ಟ್ ಮಾಡುತ್ತಾ ಎಂಬ ಆತಂಕವಿತ್ತು. ನನಗೆ ಶೂಟಿಂಗ್ ಸಮಯದಲ್ಲಿ ಏನಾದರೂ ಆದ್ರೆ ನಿರ್ಮಾಪಕರಿಗೆ ತೊಂದರೆಯಾಗುತ್ತಾ ಎಂಬ ಭಯ ಇತ್ತು. ಎಲ್ಲವೂ ಚೆನ್ನಾಗಿ ನಡೆಯಿತು, ಸಂತೋಷ ಇದೆ'' ಎಂದು ರಾಘಣ್ಣ ತಿಳಿಸಿದರು.

    ನಿಮ್ಮ ಜೀವನಕ್ಕೆ ಇದು ಹೇಗೆ ಹತ್ತಿರ?

    20 ದಿನದಲ್ಲಿ ಚಿತ್ರೀಕರಣ ಮುಗಿತು. ಒಂದೇ ದಿನದಲ್ಲಿ ಡಬ್ಬಿಂಗ್ ಆಯ್ತು. ಈ ಪಾತ್ರದಲ್ಲಿ ನಟಿಸಿಲ್ಲ, ಜೀವಿಸಿದೆ. ಯಾಕಂದ್ರೆ, ನಾನು ಜೀವನದಲ್ಲಿ ಆ ಮೂರು ಪಾತ್ರವನ್ನ ನಿಭಾಯಿಸಿದ್ದೇನೆ. ಮಗ, ತಂದೆ, ಗಂಡನಾಗಿ ನಾನು ಜೀವನ ನೋಡಿದ್ದೀನಿ. ನನ್ನಲ್ಲಿ ಜನರು ಅವರ ಜೀವನ ನೋಡಬಹುದು.

    Ammana mane movie most special for Raghavendra rajkumar

    ಇದು ನನ್ನ ಸೆಕೆಂಡ್ ಇನ್ನಿಂಗ್ಸ್ ಇದ್ದ ಹಾಗೆ

    ನನಗೆ ಈ ಚಿತ್ರ ಸೆಕೆಂಡ್ ಇನ್ನಿಂಗ್ಸ್ ಇದ್ದ ಹಾಗೆ. ನಾನು ಪೂರ್ತಿ ಸಿನಿಮಾದಲ್ಲಿ ಒಬ್ಬ ಗಂಡನಾಗಿ ಅಭಿನಯಿಸಿಲ್ಲ. ಇಲ್ಲಿ ಮಗ, ಗಂಡ, ತಂದೆಯಾಗಿ ಆಕ್ಟ್ ಮಾಡಿದ್ದೀನಿ. ಇಂತಹ ಪಾತ್ರ ಮೊದಲನೇ ಸಲ ಮಾಡಿರೋದು'' ಎಂದು ಖುಷಿ ಹಂಚಿಕೊಂಡಿದ್ದಾರೆ.

    English summary
    ''Ammana mane movie is most special for me'' said actor raghavendra rajkumar in filmibeat kannada interview.
    Saturday, March 2, 2019, 18:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X