twitter
    For Quick Alerts
    ALLOW NOTIFICATIONS  
    For Daily Alerts

    ಆನಂದ್ ಆಡಿಯೋಗೆ 20 ವರ್ಷ : ಅತಿ ಹೆಚ್ಚು ಮಾರಾಟವಾದ ಕ್ಯಾಸೆಟ್ ಇದು!

    |

    ಕನ್ನಡದ ಖ್ಯಾತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಈಗ ಇಪ್ಪತ್ತು ವರ್ಷಗಳನ್ನು ಪೂರೈಸಿದೆ. 2 ದಶಕದ ಈ ಸಾಧನೆಯ ಹಾದಿಯಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳು ಈ ಆಡಿಯೋ ಕಂಪನಿ ಮೂಲಕ ಹೊರಹೊಮ್ಮಿದೆ.

    ಕನ್ನಡದಲ್ಲಿ ಈಗ ಬಹಳಷ್ಟು ಆಡಿಯೋ ಕಂಪನಿಗಳು ಇವೆ. ದಿನದಿಂದ ದಿನಕ್ಕೆ ಹೊಸ ಹೊಸ ಆಡಿಯೋ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಆನಂದ್ ಆಡಿಯೋ ಮಾತ್ರ ಮಾರ್ಕೆಟ್ ನಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿದೆ. ಆಡಿಯೋದ ಜೊತೆಗೆ 'ಫ್ರೆಂಡ್ಸ್' ಹಾಗೂ 'ವಿಕ್ಟರಿ' ಸಿನಿಮಾವನ್ನೂ ಈ ಸಂಸ್ಥೆ ನಿರ್ಮಾಣ ಮಾಡಿದೆ.

    'ಏನಮ್ಮಿ ಏನಮ್ಮಿ..' ಹಾಡಿಗೆ ಸಿಕ್ಕಿದೆ 50 ಮಿಲಿಯನ್ ಹಿಟ್ಸ್ 'ಏನಮ್ಮಿ ಏನಮ್ಮಿ..' ಹಾಡಿಗೆ ಸಿಕ್ಕಿದೆ 50 ಮಿಲಿಯನ್ ಹಿಟ್ಸ್

    ಕ್ಯಾಸೆಟ್ ಯುಗದಿಂದ ಯೂ ಟ್ಯೂಬ್ ಯುಗದ ವರೆಗೂ ಆನಂದ್ ಆಡಿಯೋ ಅಗ್ರ ಸ್ಥಾನದಲ್ಲಿ ಇದೆ. ತಮ್ಮ ಸಂಸ್ಥೆಯ ಈ ಸಾಧನೆಯ ಹಾದಿಯ ಬಗ್ಗೆ ಆನಂದ್ ಆಡಿಯೋ ಸಂಸ್ಥೆಯ ಮಾಲಿಕ ಶ್ಯಾಮ್ ಮಾತನಾಡಿದ್ದಾರೆ.

    ಅಂದಹಾಗೆ, ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ ಅವರ ತಮ್ಮ ಸಂಸ್ಥೆಯ ಅನೇಕ ವಿಷಯಗಳನ್ನು ಹೇಳಿಕೊಂಡರು. ಮುಂದೆ ಓದಿ..

    ಸಂದರ್ಶನ : ನವಿ ಕನಸು (ನವೀನ್ ಎಮ್ ಎಸ್)

    ಸುಮಾರು 700 ಸಿನಿಮಾಗಳ ಹಾಡುಗಳು

    ಸುಮಾರು 700 ಸಿನಿಮಾಗಳ ಹಾಡುಗಳು

    ಆಡಿಯೋ ಉದ್ಯಮದಲ್ಲಿ ಎರಡು ವರ್ಷವನ್ನು ಪೂರ್ಣ ಮಾಡಿರುವ ಆನಂದ್ ಆಡಿಯೋ ಸಂಸ್ಥೆ ಈವರಗೆ ಸುಮಾರು 700 ಸಿನಿಮಾಗಳ ಹಾಡುಗಳನ್ನು ಹೊರತಂದಿದೆ. ಸುಮಾರು 12000 ಭಕ್ತಿಗೀತೆ ಗೀತೆಗಳು ಕೂಡ ಆನಂದ್ ಆಡಿಯೋದಿಂದ ಬಂದಿವೆ. 700 ಸಿನಿಮಾಗಳ ಪೈಕಿ ಸಾಕಷ್ಟು ಸಿನಿಮಾಗಳ ಆಡಿಯೋ ದೊಡ್ಡ ಹಿಟ್ ಆಗಿದೆ. ಕನ್ನಡ ಸಿನಿಮಾದ ಹಾಡುಗಳಿಗೆ ಮಾತ್ರ ಮಾನ್ಯತೆ ನೀಡಿದೆ.

    'ಹಬ್ಬ' ಮೊದಲ ಸಿನಿಮಾ

    'ಹಬ್ಬ' ಮೊದಲ ಸಿನಿಮಾ

    ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ 'ಹಬ್ಬ' ಸಿನಿಮಾದ ಮೂಲಕ ಆನಂದ್ ಆಡಿಯೋ ತನ್ನ ಖಾತೆ ತೆರೆಯಿತು. ಅಲ್ಲಿಂದ ಶುರುವಾದ ಈ ಆಡಿಯೋ ಕಂಪನಿ ಇಂದಿಗೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಶ್ಯಾಮ್ ''ದೇವರ ಆಶೀರ್ವಾದಿಂದ ನಮ್ಮ ಕನಸು ಈಡೇರುತ್ತಿದೆ. ನಾವು ಯಾವ ಉದ್ದೇಶದಿಂದ ಈ ಸಂಸ್ಥೆ ಶುರು ಮಾಡಿದ್ದೇವೆ ಅದೇ ಹಾದಿಯಲ್ಲಿ ಹೋಗುತ್ತಿದೆ'' ಎಂದರು.

    ಬರೋಬ್ಬರಿ 75 ಮಿಲಿಯನ್ ಹಿಟ್ಸ್ ದಾಟಿದ 'ಚುಟು ಚುಟು' ಹಾಡುಬರೋಬ್ಬರಿ 75 ಮಿಲಿಯನ್ ಹಿಟ್ಸ್ ದಾಟಿದ 'ಚುಟು ಚುಟು' ಹಾಡು

    ಆನಂದ್ ಮ್ಯೂಸಿಕ್ ನಿಂದ ಆನಂದ್ ಆಡಿಯೋ

    ಆನಂದ್ ಮ್ಯೂಸಿಕ್ ನಿಂದ ಆನಂದ್ ಆಡಿಯೋ

    ಆನಂದ್ ಆಡಿಯೋ ಶುರು ಆಗಿದ್ದಕ್ಕೂ ಒಂದು ಕಾರಣ ಇದೆ. ಶ್ಯಾಮ್ ಅವರ ಅಣ್ಣ ಮೋಹನ್ ಚಾಬ್ರಿಯಾ 1989ರಲ್ಲಿ ಟ್ರೆಂಡಿಂಗ್ ನಲ್ಲಿ ಇದ್ದರು. ಟಿವಿ ರೈಟ್ಸ್ ಗಳನ್ನು ನೋಡಿಕೊಳ್ಳುತ್ತಿದ್ದರು. ಆಗ ತಮ್ಮ ಅಂಗಡಿ ಆನಂದ್ ಮ್ಯೂಸಿಕ್ ಅನ್ನು ಆನಂದ್ ಆಡಿಯೋ ಆಗಿ ಮಾಡಿದರು. ಆನಂದ್ ಎನ್ನುವುದು ಮೋಹನ್ ಚಾಬ್ರಿಯಾ ಅವರ ಮಗನ ಹೆಸರು ಆನಂದ್

    ಸ್ಟಾರ್ ನಟರ ಪ್ರಾರಂಭದ ಸಿನಿಮಾಗಳು

    ಸ್ಟಾರ್ ನಟರ ಪ್ರಾರಂಭದ ಸಿನಿಮಾಗಳು

    ನಟ ಸುದೀಪ್ ಅವರ ಎರಡನೇ ಸಿನಿಮಾ, ನಟ ಗಣೇಶ್ ಅವರ ಮೊದಲ ಐದು ಸಿನಿಮಾಗಳು, ಧ್ರುವ ಸರ್ಜಾ, ಶರಣ್, ಶ್ರೀ ಮುರಳಿ ಹೀಗೆ ಸಾಕಷ್ಟು ನಟರ ಮೊದಲ ಸಿನಿಮಾದ ಆಡಿಯೋ ಹೊರಬಂದಿದ್ದು ಆನಂದ್ ಆಡಿಯೋ ಮೂಲಕ. ಶ್ರೀ ಮುರಳಿ ಚೊಚ್ಚಲ ಚಿತ್ರ 'ಚಂದ್ರಚಕ್ಕೋರಿ' ಸಿನಿಮಾಗೆ ಆ ಕಾಲದಲ್ಲಿಯೇ ದೊಡ್ಡ ಮೊತ್ತ ನೀಡಿ ಕೊಂಡುಕೊಂಡಿದ್ದರು. ಅಂಬರೀಶ್ ಕೊನೆ ಚಿತ್ರ 'ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಆಡಿಯೋ ಕೂಡ ಆನಂದ್ ಆಡಿಯೋ ಹೆಸರಿನಲ್ಲಿ ಇದೆ.

    ಅತಿ ಹೆಚ್ಚು ಸೇಲ್ ಆದ ಕ್ಯಾಸೆಟ್

    ಅತಿ ಹೆಚ್ಚು ಸೇಲ್ ಆದ ಕ್ಯಾಸೆಟ್

    'ಯಜಮಾನ' ಹಾಗೂ 'ಮುಂಗಾರು ಮಳೆ' ಆನಂದ್ ಆಡಿಯೋದ ಮೂಲಕ ಬಂದ ದೊಡ್ಡ ಆಡಿಯೋ ಹಿಟ್ ಸಿನಿಮಾಗಳು. ಈ ಎರಡು ಚಿತ್ರಗಳ ಬರೋಬ್ಬರಿ 10 ಲಕ್ಷ ಕ್ಯಾಸೆಟ್ ಸೇಲ್ ಆಗಿವೆ. 'ತವರಿಗೆ ಬಾ ತಂಗಿ', ಅಮೃತಧಾರೆ, 'ಚೆಲುವಿನ ಚಿತ್ತಾರಾ', 'ಚಿತ್ರ', 'ಕೃಷ್ಣನ್ ಲವ್ ಸ್ಟೋರಿ', 'ಮೈನಾ' 'ರಾಂಬೋ' ಹೀಗೆ ಈ ಸಂಸ್ಥೆಯ ದೊಡ್ಡ ಹಿಟ್ ಆದ ಚಿತ್ರಗಳ ಪಟ್ಟಿ ಬಹಳ ದೊಡ್ಡದಿದೆ.

    ಕ್ಯಾಸೆಟ್ ನಿಂದ ಯೂ ಟ್ಯೂಬ್ ವರೆಗೆ

    ಕ್ಯಾಸೆಟ್ ನಿಂದ ಯೂ ಟ್ಯೂಬ್ ವರೆಗೆ

    ಅಂದಿನ ಹಾಗೂ ಇಂದಿನ ಸ್ಪರ್ಧೆಯ ಬಗ್ಗೆ ಉತ್ತರ ನೀಡಿದ ಶ್ಯಾಮ್ ''ನಾವು ಕಾಂಪಿಟೇಶನ್ ಅಂತ ಎಂದಿಗೂ ಎಂದುಕೊಂಡೆ ಇಲ್ಲ. ಎಲ್ಲರೂ ಸಾಧನೆ ಇದನ್ನು ಎನ್ನುತ್ತಾರೆ ಆದರೆ, ಇದು ಆಶೀರ್ವಾದದ ಫಲ ಅಷ್ಟೇ. ಪ್ಯಾಶನ್ ಆಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅದೃಷ್ಟದಿಂದ ತುಂಬ ಒಳ್ಳೆಯ ಸಿನಿಮಾ ಸಿಗುತ್ತಿವೆ. ಮುಂಚೆ ನಮಗೆ ಪೈರಸಿಯಿಂದ ಭಯ ಆಗುತ್ತಿತ್ತು, ಆಗ ರೂಪಾಯಿಗಳು ಸಿಗುತಿತ್ತು. ಈಗ ಎಲ್ಲರೂ ಉಚಿತವಾಗಿ ಹಾಡು ಕೇಳುತ್ತಾರೆ ನಮಗೆ ಪೈಸಾದಲ್ಲಿ ದುಡ್ಡು ಬರುತ್ತದೆ. ಎಂದು ಹೇಳಿ ನಕ್ಕರು.

    ಅತಿ ಹೆಚ್ಚಿನ ಮೊತ್ತ ನೀಡಿದ್ದು 'ದಿ ವಿಲನ್' ಚಿತ್ರಕ್ಕೆ

    ಅತಿ ಹೆಚ್ಚಿನ ಮೊತ್ತ ನೀಡಿದ್ದು 'ದಿ ವಿಲನ್' ಚಿತ್ರಕ್ಕೆ

    ಆನಂದ್ ಆಡಿಯೋ ಈವರೆಗೂ ದೊಡ್ಡ ಮೊತ್ತ ನೀಡಿ, ಸಾಕಷ್ಟು ಸಿನಿಮಾಗಳ ಆಡಿಯೋ ಖರೀದಿ ಮಾಡಿದೆ. ಆ ಪೈಕಿ 'ದಿ ವಿಲನ್' ಸಿನಿಮಾ ಮೊದಲ ಸ್ಥಾನದಲ್ಲಿ ಇದೆ. ಇದರ ಬಳಿಕ ಈಗಾಗಲೇ 'ದೇವಕಿ', '99', 'ಅಮರ್', 'ಭರಾಟೆ', 'ಕೋಟಿಗೊಬ್ಬ 3', 'ಮದಗಜ' ಹೀಗೆ ಆನಂದದ ಪಯಣ ಮುಂದುವರೆದಿದೆ.

    ಅತಿ ಹೆಚ್ಚು ವೀಕ್ಷಣೆ ಪಡೆದ 'ಚುಟು ಚುಟು'

    ಅತಿ ಹೆಚ್ಚು ವೀಕ್ಷಣೆ ಪಡೆದ 'ಚುಟು ಚುಟು'

    ಆನಂದ್ ಆಡಿಯೋದ 20 ವರ್ಷದ ಸಂಭ್ರಮದಲ್ಲಿ 'ಚುಟು ಚುಟು' ಹಾಡು ದೊಡ್ಡ ಮೈಲಿಗಲ್ಲು ಸಾಧಿಸಿದೆ. 'ರಾಂಬೋ 2' ಸಿನಿಮಾದ ಈ ಹಾಡು 75 ಮಿಲಿಯನ್ ಹಿಟ್ಸ್ ಪಡೆಯುವ ಮೂಲಕ ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಹಾಡಾಗಿದೆ. 'ಅಯೋಗ್ಯ' ಚಿತ್ರದ 'ಏನಮ್ಮಿ ಏನಮ್ಮಿ..' ಹಾಡು ಕೂಡ 50 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

    English summary
    Anand Audio company completes 20 years in kannada music industry. Anand Audio owner Shyam interview.
    Tuesday, March 26, 2019, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X