'ಅಸತೋಮ ಸದ್ಗಮಯ' ನೋಡಲು ಈ 5 ಕಾರಣ ಸಾಕು
ರಾಧಿಕಾ ಚೇತನ್, ಲಾಸ್ಯ ನಾಗ್, ಕಿರಣ್ ರಾಜ್ ಅಭಿನಯದ 'ಅಸತೋಮ ಸದ್ಗಮಯ' ಸಿನಿಮಾ ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಟ್ರೈಲರ್, ಹಾಡುಗಳನ್ನ ಈಗಾಗಲೇ ನೋಡಿದ್ದೀರಾ. ಆದ್ರೂ, ಈ ಸಿನಿಮಾ ಯಾಕೆ ನೋಡಬೇಕು ಎಂಬ ಒಂದು ಸಣ್ಣ ಪ್ರಶ್ನೆ ನಿಮ್ಮನ್ನ ಕಾಡಬಹುದು. ಅದಕ್ಕೆ ಉತ್ತರವನ್ನ ಚಿತ್ರದ ನಿರ್ದೇಶಕ ರಾಜೇಶ್ ವೇಣೂರು ಅವರು ನೀಡಿದ್ದಾರೆ.
'ಅಸತೋಮ ಸದ್ಗಮಯ' ಚಿತ್ರವನ್ನ ನೋಡಲು ಈ ಐದು ಕಾರಣಗಳನ್ನ ನೀಡಿರುವ ನಿರ್ದೇಶಕರು ಚಿತ್ರದ ವಿಶೇಷತೆಗಳ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
ಸಂದರ್ಶನ: ಭರತ್ ಕುಮಾರ್

ಕಾನ್ಸೆಪ್ಟ್ ಹೊಸತು
''ಈಗಿನ ಜನರೇಷನ್ ಯಾವ ದಿಕ್ಕಿನಲ್ಲಿ ಹೋಗ್ತಿದೆ. ಅದಕ್ಕೆ ಏನು ಕಾರಣ. ಈಗಿನ ಮಕ್ಕಳ ಶಿಕ್ಷಣ ಹೇಗಿದೆ, ಸಂಬಂಧಗಳು, ಮೌಲ್ಯಗಳಿಗೆ ಬೆಲೆ ಕಮ್ಮಿಯಾಗಿದೆ ಎಂಬುದನ್ನ ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ರೀತಿಯ ಕಾನ್ಸೆಪ್ಟ್ ಗಳು ಕನ್ನಡದಲ್ಲಿ ಹೊಸತು. ಹಿಂದಿ, ಬೇರೆ ಭಾಷೆಯಲ್ಲಿ ಈ ರೀತಿ ಚಿತ್ರಗಳು ಬಂದಿದೆ. ಸದ್ಯ, ಕನ್ನಡದಲ್ಲಿ ಹಾರರ್, ಥ್ರಿಲ್ಲಿಂಗ್, ಆಕ್ಷನ್ ಹೆಚ್ಚಾಗಿದೆ. ಆದ್ರೆ, ಈ ರೀತಿಯ ಅಂಶವನ್ನಿಟ್ಟು ಮನರಂಜನೆಯಿಂದ ಹೇಳಲಾಗಿದೆ''

ಶಿಕ್ಷಣದ ವ್ಯವಸ್ಥೆ ಬಗ್ಗೆ ಪ್ರಸ್ತಾಪ
''ನಮ್ಮಲ್ಲಿರುವ ಶಿಕ್ಷಣದ ವ್ಯವಸ್ಥೆ ಬಗ್ಗೆ ಈ ಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಶಿಕ್ಷಣ ಮುಖ್ಯ ಎಂಬ ಕಾರಣಕ್ಕೆ ಮಕ್ಕಳನ್ನ ಹೇಗೆ ಒತ್ತಾಯಪೂರ್ವಕವಾಗಿ ಓದಿಸಲಾಗುತ್ತಿದೆ. ಕನ್ನಡ ಮೀಡಿಯಂ ಶಾಲೆಗಳು ಮುಚ್ಚುತ್ತಿದ್ದಾರೆ. ಅದಕ್ಕೆ ಕಾರಣವೇನು ಮತ್ತು ಅದನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಹಾರವೇನು ಎಂಬುದು ಚಿತ್ರದ ಬಹಳ ಮುಖ್ಯವಾದ ಅಂಶ''

ಹಾಡುಗಳು ಹೈಲೈಟ್
''ಚಿತ್ರದ ಹಾಡುಗಳು ತುಂಬಾ ಚೆನ್ನಾಗಿದೆ. ವಿಶ್ಯೂಲ್ ಕೂಡ ಅಷ್ಟೇ ಸುಂದರವಾಗಿ ಮೂಡಿ ಬಂದಿದೆ. ಟೆಕ್ನಿಕಲಿ ಸಿನಿಮಾ ಅದ್ಧೂರಿಯಾಗಿ ಸಿದ್ದವಾಗಿದೆ. ಅದರಲ್ಲೂ 'ಓ ಸಂಜೆ....'ಎಂಬ ಹಾಡು ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಇನ್ನೊಂದು ವಿಜಯ ಪ್ರಕಾಶ್ ಅವರು ಹಾಡಿರುವ ಫಿಲಾಸಫಿ ಹಾಡಿದೆ. ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಯಾವ ಹಾಡುಗಳು ಬೋರ್ ಮಾಡಲ್ಲ. ವಹಾಬ್ ಸಲೀಂ ಅವರ ಸಂಗೀತದ ಹಾಡುಗಳು ಮತ್ತು ಹಿನ್ನಲೆ ಸಂಗೀತ ಇಂಟ್ರೆಸ್ಟಿಂಗ್ ಆಗಿದೆ''

ಟೆಕ್ನಿಕಲಿ ಕೆಲಸ ಚೆನ್ನಾಗಿದೆ
''ಇದು ಕಂಪ್ಲೀಟ್ ಆಗಿ ಹೊಸಬರು ಮಾಡಿರುವ ಸಿನಿಮಾ. ಆದ್ರೆ, ಎಲ್ಲೂ ಹೊಸಬರ ಸಿನಿಮಾ ಎಂದು ಎನಿಸಿವುದಿಲ್ಲ. ಎಲ್ಲರೂ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಕಿಶೋರ್ ಕುಮಾರ್ ಅವರ ಛಾಯಾಗ್ರಾಹಣ ಕಣ್ಮನ ಸೆಳೆಯುವಂತಿದೆ. ರವಿಚಂದ್ರನ್ ಅವರ ಸಂಕಲನ ಕುತೂಹಲ ಹೆಚ್ಚಿಸುವಂತಿದೆ''

ಕನ್ನಡದ ಬಗ್ಗೆ ಕಾಳಜಿ
''ಇದು ಅಪ್ಪಟ ಸ್ವಮೇಕ್ ಸಿನಿಮಾ. ಈ ಸಿನಿಮಾದಲ್ಲಿ ಕನ್ನಡದ ಬಗ್ಗೆ ಮುಖ್ಯವಾಗಿ ದನಿ ಎತ್ತಲಾಗಿದೆ. ಕನ್ನಡ ಶಾಲೆ, ಕರ್ನಾಟಕ ಶಿಕ್ಷಣದ ಬಗ್ಗೆ ತೋರಿಸಲಾಗಿದೆ. ಹೀಗಾಗಿ, ಕನ್ನಡ ಪ್ರೇಕ್ಷಕರು ಈ ಸಿನಿಮಾ ನೋಡಲೇಬೇಕು'' ಎಂದು ನಿರ್ದೇಶಕ ರಾಜೇಶ್ ವೇಣೂರು ತಿಳಿಸಿದ್ದಾರೆ.


Click it and Unblock the Notifications











