»   » "ಅಶೆಂ ಜಾಲೆ ಕಶೆಂ?"ದಿಂದ ಜೆನಿಫರ್ ಕನಸು ನನಸು!

"ಅಶೆಂ ಜಾಲೆ ಕಶೆಂ?"ದಿಂದ ಜೆನಿಫರ್ ಕನಸು ನನಸು!

Posted By: ಲೆನಾರ್ಡ್ ಫರ್ನಾಂಡೀಸ್
Subscribe to Filmibeat Kannada

ಅತೀ ಶೀಘ್ರದಲ್ಲಿ ಮಂಗಳೂರಿನಾದ್ಯಂತ ಹಾಗೂ ಗಲ್ಪ್ ಮತ್ತು ಇತರ ರಾಷ್ಟ್ರಗಳಲ್ಲಿ ತೆರೆಕಾಣಲು ಅಣಿಯಾಗಿರುವ ಮೊಟ್ಟ ಮೊದಲ ಕೊಂಕಣಿ-ತುಳು ಭಾಷೆ ಮಿಶ್ರಿತ ಸಿನಿಮಾ "ಅಶೆಂ ಜಾಲೆಂ ಕಶೆಂ- ಇಂಚ ಅಂಡ್ ಏಂಚ". ಈ ಚಲನಚಿತ್ರದ ಮುಖ್ಯ ಭೂಮಿಕೆಯಲ್ಲಿ ಮೂವರು ನಾಯಕಿಯರಿದ್ದು, ಅವರಲ್ಲಿ ಜೆನಿಫರ್ ಡಿಸೌಝ ಸಹ ಒಬ್ಬರು.

ಈಗಾಗಲೇ ಚಿತ್ರದ ಡೊಲಿ ಬೀಚ್ ಹಾಡು ಎಲ್ಲರ ಮೆಚ್ಚುಗೆಗಳಿಸಿದ್ದಲ್ಲದೇ ಅವರದ್ದೇ ಆದಾ ಅಭಿಮಾನಿಗಳನ್ನ ಹುಟ್ಟು ಹಾಕಿದೆ. ಜೆನಿಫರ್ ಡಿಸೌಝ ಅವರಿಗೆ ಇದು ಮೊದಲ ಚಿತ್ರವಾದರು, ಚಿತ್ರತಂಡ ಇವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜೆನಿಫರ್ ಡಿಸೌಝ ಅವರು ಫಿಲ್ಮಿಬೀಟ್ ನೊಂದಿಗೆ ಮಾತಿಗೆ ಸಿಕ್ಕಾಗ ತಾವು ಚಿತ್ರದಲ್ಲಿ ನಟಿಸಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಫಿಲ್ಮಿಬೀಟ್ ಜೆನಿಫರ್ ಜೊತೆ ನಡೆಸಿದ ಸಂದರ್ಶನ ನಿಮಗಾಗಿ ಇಲ್ಲಿದೆ ಓದಿರಿ.

ಸಂದರ್ಶನ: ಲೆನಾರ್ಡ್ ಫರ್ನಾಂಡೀಸ್

ಜೆನಿಫರ್ ನಿಮ್ಮ ಬಗ್ಗೆ ಸ್ವಲ್ಪ ಚುಟುಕಾಗಿ ಹೇಳಬಹುದೇ?

- ನಾನು ಮಂಗಳೂರಿನ ಮೊಗರ್ನಾಡಿನವಳು. ಜೀವನದಲ್ಲಿ ಆಶಾವಾದಿ ಹಾಗೂ ನಾನು ಮಾಡುವ ಕೆಲಸ ಕಾರ್ಯಗಳಲ್ಲಿ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವವಳು.

"ಅಶೆಂ ಜಾಲೆಂ ಕಶೆಂ" ಚಿತ್ರದಲ್ಲಿ ನಟಿಸಿದ ನಂತರ ಜೀವನದಲ್ಲಿ ಏನಾದರೂ ಬದಲಾವಣೆ ಆಗಿದೆಯೇ?

-ಇಲ್ಲಪ್ಪಾ... ನಿಜವಾಗಿಯೂ ವೈಯಕ್ತಿಕ ಜೀವನ ಹಾಗು ಜೀವನ ಶೈಲಿಯಲ್ಲಿ ಏನೂ ಬದಲಾವಣೆಗಳಾಗಿಲ್ಲ, ಮುಂದೆಯೂ ಆಗುವುದು ಇಲ್ಲಾ. ಯಾವಾಗ್ಲು ಸಿಂಪಲ್ ಆಗಿರಲು ಇಷ್ಟ. ಆದರೆ ಈ ಸಿನಿಮಾದಲ್ಲಿ ನಟಿಸಿದ ನಂತರ ಸಾಮಾಜಿಕ ಜಾಲತಾಣಗಳಿಂದಾಗಿ ಜನರು ನನ್ನನ್ನು ಹೆಚ್ಚು ಹೆಚ್ಚು ಗುರುತಿಸುತ್ತಿದ್ದಾರೆ.

"ಆಶೆಂ ಜಾಲೆಂ ಕಶೆಂ?" ಗೆ ಅವಕಾಶ ಬಂದಿದ್ದು ಹೇಗೆ? ನಟನೆ ಆಸಕ್ತಿ ಮೊದಲಿನಿಂದಲೂ ಇತ್ತೇ?

-ಹೌದು. ಅಭಿನಯದ ಕನಸು ಮೊದಲಿನಿಂದಲೂ ಇತ್ತು. ಈ ಕನಸು ನನಸಾಗಲು ಕಾರಣವಾಗಿದ್ದು "ಆಶೆಂ ಜಾಲೆಂ ಕಶೆಂ"(ಹೀಗಾಯಿತು ಯಾಕೆ?) ಚಲನಚಿತ್ರದ ಆಡಿಷನ್. ನನ್ನ ಪ್ರತಿಭೆಯನ್ನು ತೋರಿಸಲು ಈ ಆಡಿಷನ್ ಅವಕಾಶವೆಂದು ಭಾವಿಸಿ ಟ್ರೈ ಮಾಡಿದೆ. ಅದೃಷ್ಟವಶಾತ್ ನನ್ನ ನಟನೆ ಮೆಚ್ಚಿ ಚಿತ್ರತಂಡ ಅವಕಾಶ ನೀಡಿತು.

ಸಿನಿಮಾ ಕ್ಷೇತ್ರದಲ್ಲಿ ನಿಮಗೆ ಮಾರ್ಗದರ್ಶಕರು ಇದ್ದಾರಾ?

- ಇದ್ದಾರೆ. ನಮ್ಮ ಸಂಬಂಧಿ ನಟ ದೀಪಕ್ ಪಾಲಡ್ಕ. ನನಗೆ ಅವರ ಪ್ರತಿಭೆ ಹಾಗೂ ನಟನೆ ಬಗ್ಗೆ ತುಂಬಾ ಅಭಿಮಾನವಿದೆ. ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತಿರುತ್ತಾರೆ.

ಚಿತ್ರೀಕರಣ ಸಂದರ್ಭದಲ್ಲಿ ಎದುರಾದ ಸವಾಲು..

- ಚಿತ್ರೀಕರಣ ನಡೆಯುವಾಗ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸ ಹಾಗೂ ಚಿತ್ರೀಕರಣ ಸ್ವಲ್ಪ ಕಷ್ಟಕರ ಎನಿಸಿತ್ತು. ಆದರೆ ನಿರ್ದೇಶಕ ಮೆಕ್ಸಿಮ್ ಪಿರೇರಾ ಅವರ ಸಂಪೂರ್ಣ ಸಹಕಾರ ನನಗೆ ದೊರಕಿತು. ಈ ಚಲನಚಿತ್ರದಲ್ಲಿ ನನ್ನ ಸಂಭಾಷಣೆ ತುಳು ಭಾಷೆಯಲ್ಲಿದ್ದು, ತುಂಬಾನೇ ಅಭ್ಯಾಸ ಮಾಡಬೇಕಾಯಿತು .ಇದೇ ಸಮಯದಲ್ಲಿ ನನ್ನ ತಂದೆಯವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೂ ನನ್ನ ಅಮ್ಮ ಹಾಗೂ ಮನೆಯಲ್ಲಿ ಎಲ್ಲರೂ ಪ್ರೋತ್ಸಾಹ ನೀಡಿದರು. ಈ ಸಂದರ್ಭದಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ಸದಾ ಋಣಿಯಾಗಿರುತ್ತೇನೆ.

ಹೊಸ ಚಿತ್ರಗಳಿಗೆ ಅವಕಾಶ ಬಂದಿದೆಯೇ?

-ಅವಕಾಶಗಳು ಬಂದಿವೆ. ಆದರೆ ಪ್ರಸ್ತುತ ದುಬೈನಲ್ಲಿ ಕೆಲಸ ಮಾಡುತ್ತಿರುವುದರಿಂದ ಆಯ್ಕೆಯಲ್ಲಿ ಸ್ವಲ್ಪ ಗೊಂದಲವಿದೆ. ಇನ್ನು ಯಾವುದನ್ನು ಒಪ್ಪಿಕೊಂಡಿಲ್ಲ.

ಚಿತ್ರ ಮತ್ತು ಚಿತ್ರೀಕರಣ ಸಂದರ್ಭದಲ್ಲಿ ನಿಮಗಾದ ಅನುಭವದ ಬಗ್ಗೆ ಹೇಳಿ..

-ಈ ಚಿತ್ರತಂಡ ಹಲವಾರು ಪ್ರತಿಭಾವಂತರನ್ನ ಹೊಂದಿದೆ. ಉತ್ತಮ ಕಥೆ ಇದೆ. ಇದಕ್ಕೆ ಪೂರಕವಾಗಿ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದು, ಮೆಕ್ಸಿಮ್ ಪಿರೇರಾ ಅವರ ನಿರ್ದೇಶನದಲ್ಲಿ ಮತ್ತು ಇಂಪಾದ ಹಾಡುಗಳಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಬೀಚ್ ನಲ್ಲಿ ಚಿತ್ರೀಕರಿಸಿದ ಹಾಡು ಮತ್ತು ಕೆಲವು ಹಿರಿಯ ಕಲಾವಿದರೊಂದಿಗೆ ನಟಿಸಿದ ನೆನಪು ತುಂಬಾ ಖುಷಿ ಕೊಡುತ್ತದೆ.

ಕೊನೆಯದಾಗಿ ಸಿನಿ ಪ್ರೇಮಿಗಳಿಗೆ ಹಾಗೂ ಫಿಲ್ಮಿ ಬೀಟ್ ಓದುಗರಿಗೆ ಏನು ಹೇಳಲು ಬಯಸುತ್ತೀರಿ?

-ಏಪ್ರಿಲ್ 21 ರಂದು ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲರೂ ದಯವಿಟ್ಟು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಕುಟುಂಬದೊಂದಿಗೆ ಬಂದು ಚಿತ್ರ ವೀಕ್ಷಿಸಿ. ನನ್ನಂತಹ ಎಲ್ಲಾ ಹೊಸ ಪ್ರತಿಭೆಗಳಿಗೂ ಹರಸಿ ಎಂದು ಹೇಳಲು ಬಯಸುತ್ತೇನೆ.

English summary
A Maxim Pereira's Direcotorial 'Ashem jaalem Kashem?' Konkani-Tulu Movie Actress Jenifer D'souza Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada