ದುನಿಯಾ ಸೂರಿ ಚಿತ್ರದಲ್ಲಿ ನಟಿಸೋ ಆಸೆ ಹೊತ್ತಿರುವ ಅಶ್ವಿನ್
ಅಶ್ವಿನ್ ರಾವ್ ಪಲ್ಲಕ್ಕಿ... 'ಕಿರಿಕ್ ಪಾರ್ಟಿ', 'ಕೆಫೆ ಗ್ಯಾರೆಜ್' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ನಟನಾಗಿ ಪರಿಚಯವಾದವರು. ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಗೆಳೆಯನ ಪಾತ್ರದಲ್ಲಿ ಮಿಂಚಿದ್ದ ಅಶ್ವಿನ್ ರಾವ್ ಪಲ್ಲಕ್ಕಿ ಸದ್ಯ ನಿರ್ದೇಶಕನಾಗಿ ಚಿತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಸ್ವತಃ ನಿರ್ದೇಶಕನಾಗಿ 'ಕ್ಯೂರಿಯಸ್ ಕೇಸಸ್ ಆಫ್ ಎದೆಬಡಿತ' ಎಂಬ ಚಿತ್ರವನ್ನು ಮಾಡುತ್ತಿದ್ದರು ದುನಿಯಾ ಸೂರಿ ಅವರ ಜೊತೆಯಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದಾರಂತೆ.

ದುನಿಯಾ ಸೂರಿ ಸಿನಿಮಾ ಮೇಕಿಂಗ್ ನೋಡಿ ಇಂಪ್ರೆಸ್ ಆಗಿರುವ ಅಶ್ವಿನ್ ರಾವ್ ಪಲ್ಲಕ್ಕಿ ಅವರ ನಿರ್ದೇಶನದಲ್ಲಿ ನಟನೆ ಮಾಡಬೇಕು ಎನ್ನುವುದನ್ನು ಇತ್ತೀಚಿಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಂತಹ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಆ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಿಲ್ಲವಂತೆ ಅಶ್ವಿನ್.
ಸದ್ಯ 'ಕ್ಯೂರಿಯಸ್ ಕೇಸಸ್ ಆಫ್ ಎದೆಬಡಿತ'ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಅಶ್ವಿನ್ ಈ ಚಿತ್ರದ ಮೂಲಕ ನಾಲ್ಕು ಹುಡುಗರ ಬ್ರೇಕ್ ಅಪ್ ನಂತರದ ಕಥೆ ಹೇಳಲು ಹೊರಟಿದ್ದಾರಂತೆ. ಸಿನಿಮಾದಲ್ಲಿ ನಾಲ್ಕು ಹೀರೋಗಳು ಹಾಗೂ ಮೂರು ಹೀರೋಯಿನ್ ಗಳು ಇರಲಿದ್ದಾರಂತೆ. ಅಂದ್ಹಾಗೆ ಅಶ್ವಿನ್ ದಿಗಂತ್ ಅಭಿನಯದ 'ಕಥೆಯೊಂದು ಶುರುವಾಗಿದೆ' ಚಿತ್ರದಲ್ಲಿಯೂ ಆಕ್ಟ್ ಮಾಡಿದ್ದಾರೆ.


Click it and Unblock the Notifications











