ಪವನ್ ಕಲ್ಯಾಣ್ ಎದುರು 'OG' ಚಿತ್ರದಲ್ಲಿ ನಟಿಸಿದ್ದನ್ನು ಮರೆಯೋಕ್ಕಾಗಲ್ಲ; ಭಜರಂಗಿ ಲೋಕಿ

ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಡಿವಿವಿ ದಾನಯ್ಯ ನಿರ್ಮಾಣದ ಚಿತ್ರಕ್ಕೆ ಸುಜಿತ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕನ್ನಡ ನಟ ಸೌರವ್ ಲೋಕೇಶ್ ಕೂಡ ನಟಿಸಿದ್ದಾರೆ. ತಮ್ಮ ಖಡಕ್ ಅಭಿನಯದಿಂದ ಮೋಡಿ ಮಾಡಲು ಬರ್ತಿದ್ದಾರೆ.

'ಭಜರಂಗಿ' ಚಿತ್ರದಲ್ಲಿ ಶಿವಣ್ಣನ ಎದುರು ರಾಣಾ ಆಗಿ ಅಬ್ಬರಿಸಿದ್ದ ಲೋಕೇಶ್ ಮುಂದೆ ಭಜರಂಗಿ ಲೋಕಿ ಎಂದೇ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. ಈಗಾಗಲೇ ಎರಡ್ಮೂರು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ ಈ ಬಾರಿ ಪವನ್ ಕಲ್ಯಾಣ್ ಎದುರು ಬಣ್ಣ ಹಚ್ಚುವ ಅವಕಾಶ ಸಿಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅದ್ಧೂರಿ ಸಿನಿಮಾ ಇದು. ಇಂತಾದೊಂದು ಚಿತ್ರದಲ್ಲಿ ನಟಿಸಿರುವುದಕ್ಕೆ ಲೋಕಿ ಖುಷಿಯಾಗಿದ್ದಾರೆ. 'OG' ಚಿತ್ರದಲ್ಲಿ ನಟಿಸಿದ ಅನುಭವನ್ನು ಅವರು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

Bajarangi film Fame Sourav Lokesh Opens Up on Playing Villain in Pawan Kalyan s OG

'OG' ಚಿತ್ರದ ಅವಕಾಶ ಸಿಕ್ಕಿದ್ದೇಗೆ?

ಎರಡು ವರ್ಷಗಳ ಹಿಂದೆ ಅಲ್ಲಿನ ಕಾಸ್ಟಿಂಗ್ ಡೈರೆಕ್ಟರ್ ಒಬ್ರು ಕರೆ ಮಾಡಿದ್ರು. ಅವ್ರು ಕನ್ನಡದವರೇ. ಚಿತ್ರದ ಪಾತ್ರವೊಂದಕ್ಕೆ ನಟನೊಬ್ಬನ ಹುಡುಕಾಟದಲ್ಲಿದ್ದಾಗ ನನ್ನ ಫೋಟೊ, ಪರ್ಫಾರ್ಮೆನ್ಸ್ ಅನ್ನು ನಿರ್ದೇಶಕರಿಗೆ ತೋರಿಸಿದ್ದಾರೆ. ಬಳಿಕ ನನ್ನ ಪ್ರೋಫೈಲ್, ಈ ಹಿಂದೆ ನಟಿಸಿದ್ದ ಸಿನಿಮಾ ಶೋ ರೀಲ್ ಕೇಳಿದ್ರು, ಕಳ್ಸಿದ್ದೆ. ಅದನ್ನೆಲ್ಲಾ ನೋಡಿ ಇಂತಾದೊಂದು ಪಾತ್ರ ಇದೆ ಮಾಡ್ತಾರಾ ಅಂತ ಕೇಳಿದ್ರು. ನನ್ನ ಪಾತ್ರದ ಬಗ್ಗೆ ಕೇಳ್ದೆ. ಕೇಳಿ ಇಷ್ಟವಾಯ್ತು. ಕಥೆಗೆ ಒಂದು ಮುಖ್ಯವಾದ ಪಾತ್ರ ಹಾಗಾಗಿ ಒಪ್ಪಿಕೊಂಡೆ.

ಪಾತ್ರಕ್ಕಾಗಿ ತಯಾರಿ ಮಾಡಿಕೊಂಡ್ರಾ?

ಈ ಪಾತ್ರಕ್ಕೆ ಅಂತ ಯಾವುದೇ ತಯಾರಿ ಮಾಡಿಕೊಳ್ಳಲಿಲ್ಲ. ಲುಕ್ ಟೆಸ್ಟ್‌ಗೆ ಕರೆದ್ರು. 90ರ ದಶಕದ ಕಥೆ ಅಂದ್ರು. ಅದಕ್ಕೆ ಸೂಕ್ತವಾದ ಗೆಟಪ್‌ಗಳಲ್ಲಿ ಪರ್ಫಾರ್ಮ್ ಮಾಡಿ ತೋರಿಸ್ದೆ. ಅವರಿಗೆ ಇಷ್ಟವಾಯಿತು. ಬೆಲ್‌ಬಾಟಂ ಗೆಟಪ್, ಅದಕ್ಕೆ ಕೊಂಚ ತೆಳ್ಳಗಾದರೆ ಚೆನ್ನಾಗಿರುತ್ತದೆ ಎನಿಸಿತು. ಲುಕ್ ಟೆಸ್ಟ್ ಆಗಿ ಎರಡ್ಮೂರು ತಿಂಗಳ ಗ್ಯಾಪ್ ಇತ್ತು. ಅಷ್ಟರಲ್ಲಿ ತೆಳ್ಳಗಾಗಿ ನಟಿಸೋಕೆ ಸಿದ್ಧವಾಗಿದ್ದೆ.

ಎಷ್ಟು ದಿನಗಳ ಕಾಲ ಚಿತ್ರೀಕರಣ ನಡೀತು?

'OG' ಬಹಳ ಹಿಂದೆ ಶುರುವಾಗಿದ್ದ ಸಿನಿಮಾ. ಪದೇ ಪದೆ ಚಿತ್ರೀಕರಣ ತಡವಾಗುತ್ತಾ ಬಂತು. ಬಿಟ್ಟು ಬಿಟ್ಟು ಶೂಟ್ ಮಾಡಿದ್ರು. ಪವನ್ ಕಲ್ಯಾಣ್ ಸರ್ ಚುನಾವಣೆ ಪ್ರಚಾರಕ್ಕೆ ಅಂತ ಹೋದಾಗ ಒಂದು ವರ್ಷ ಗ್ಯಾಪ್ ಆಗಿತ್ತು. ಬಳಿಕ ಇದೇ ವರ್ಷ ಚಿತ್ರೀಕರಣ ಶುರುವಾಗಿದ್ದು ಬೇಗ ಬೇಗ ಮುಗಿತು. ನಾನು 15ರಿಂದ 20 ದಿನಗಳ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದೆ.

ದೊಡ್ಡ ಚಿತ್ರದಲ್ಲಿ ನಟಿಸಿದ ಅನುಭವ

ಖಂಡಿತ ಬಹಳ ಖುಷಿಯಾಯಿತು. ಯಾವುದೇ ಸಿನಿಮಾ ಆಗಿದ್ದರೂ ಪಾತ್ರ ಇಷ್ಟವಾಗಬೇಕು. ಆ ಪಾತ್ರವನ್ನು ಅದೇ ರೀತಿ ತೋರಿಸ್ತಾರಾ ಎನ್ನುವ ಅನುಮಾನ ಕೂಡ ಇರುತ್ತೆ. ನನಗೂ ಅದೇ ರೀತಿ ಅನಿಸಿತು. ನಿರ್ದೇಶಕ ಸುಜಿತ್ ಈ ಹಿಂದೆ ಪ್ರಭಾಸ್ ಅವರೊಟ್ಟಿಗೆ 'ಸಾಹೋ' ರೀತಿಯ ಸಿನಿಮಾ ಮಾಡಿದವರು. ಅವರೊಟ್ಟಿಗೆ ಸಿನಿಮಾ ಅಂದಾಗ ಸಾಕಷ್ಟು ಕಲಿಯಬಹುದು ಎನಿಸಿತು. ಬಹಳ ದೊಡ್ಡ ಬಜೆಟ್, ಸ್ಕೇಲ್ ಇರುವ ಸಿನಿಮಾ. ರವಿಚಂದ್ರನ್, ಮನೋಜ್ ಪರಮಹಂಸ ರೀತಿಯ ಖ್ಯಾತ ಛಾಯಾಗ್ರಾಹಕರ ಜೊತೆ ಕೆಲಸ ಮಾಡಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ಇಡೀ ಸಿನಿಮಾ ಪ್ರೀ ವಿಷ್ಯುವಲ್ ಆಗಿರುತ್ತಿತ್ತು. ಹೇಗೆ ದೃಶ್ಯಗಳನ್ನು ಸೆರೆಹಿಡಿಯಬೇಕು ಎನ್ನುವುದು ಮೊದಲೇ ಗೊತ್ತಿರುತ್ತಿತ್ತು. ಇದೆಲ್ಲಾ ಹೊಸ ಅನುಭವ. ಸುಜಿತ್ ಅಷ್ಟು ದೊಡ್ಡ ಪ್ರಾಜೆಕ್ಟ್ ಅನ್ನು ನಿಬಾಯಿಸಿದ ರೀತಿ ಅದ್ಭುತ. ಅವರೊಟ್ಟಿಗೆ ಕೆಲಸ ಮಾಡಿದ್ದು ಉತ್ತಮ ಅನುಭವ.

Bajarangi film Fame Sourav Lokesh Opens Up on Playing Villain in Pawan Kalyan s OG

ಪವನ್ ಕಲ್ಯಾಣ್ ಜೊತೆ ನಟಿಸಿದ್ದು

ಇಷ್ಟು ದಿನ ಪವನ್ ಕಲ್ಯಾಣ್ ಅವರನ್ನು ಒಬ್ಬ ಅಭಿಮಾನಿಯಾಗಿ ನಾನು ನೋಡುತ್ತಿದ್ದೆ. ಅವ್ರು ಚಿತ್ರರಂಗಕ್ಕೆ ಬಂದ ದಿನದಿಂದಲೂ ಸೂಪರ್ ಸ್ಟಾರ್. ಅವರ ಜರ್ನಿ ಬಹಳ ಆಕರ್ಷಕ. ಸಿನಿಮಾ ಬಳಿಕ ರಾಜಕೀಯರಂಗಕ್ಕೆ ಬಂದು ಸೋತು ಗೆದ್ದವರು. ಅದನ್ನೆಲ್ಲಾ ನೋಡಿದ್ರೆ ಒಂದು ಕಮರ್ಷಿಯಲ್ ಸಿನಿಮಾ ನೋಡಿದಂತಾಗುತ್ತದೆ. ಆದರೆ ಆನ್‌ಸ್ಕ್ರೀನ್ ಅದಕ್ಕಿಂತ ಇಂಪ್ರೆಸ್ ಮಾಡಿಬಿಟ್ರು. ಅವ್ರ ಪಾತ್ರ ನನಗೆ ಬಹಳ ಇಷ್ಟವಾಯಿತು. ಅವರಿಗೆ ಸಿನಿಮಾ ಮೇಲಿನ ಶ್ರದ್ಧೆ, ಡಿಸಿಎಂ ಆಗಿದ್ದರೂ ರಾಜಕೀಯ ಬೇರೆ, ಸಿನಿಮಾ ಬೇರೆ ಎಂದು ನೋಡುತ್ತಿದ್ರು. ಸೆಟ್‌ಗೆ ಬಂದ್ರೆ ಬರೀ ಸಿನಿಮಾ. ಸ್ಕ್ರಿಪ್ಟ್ ನೋಡ್ತಾ ಅದಕ್ಕೆ ತಯಾರಿ ನಡೆಸುತ್ತಿದ್ದ ರೀತಿ ವಿಶೇಷ ಅನಿಸಿತು. ಬಹಳ ಇನ್ಸ್ಫೈರ್‌ ಮಾಡಿಬಿಟ್ರು.

Take a Poll

ಸಿನಿಮಾ ಬಿಡುಗಡೆಗೆ ಎಷ್ಟು ಎಕ್ಸೈಟ್ ಆಗಿದ್ದೀರಾ?

ಚಿತ್ರೀಕರಣ ಮುಗಿಯುತ್ತಿದ್ದಂತೆ ನನ್ನ ಕೆಲಸ ಮುಗೀತು. ಪವನ್ ಕಲ್ಯಾಣ್ ಅವರೊಟ್ಟಿಗೆ ನಟಿಸಿದ್ದೇ ದೊಡ್ಡ ಖುಷಿ. ಇನ್ನು ಮುಂದೆ ಅವ್ರು ಸಿನಿಮಾಗಳಲ್ಲಿ ನಟಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಅವ್ರ ಅಭಿಮಾನಿಯಾಗಿ ಅವರೊಟ್ಟಿಗೆ ನಟಿಸುವ ಕೆಲಸ ಸಿಕ್ಕಿದ್ದು ಮರೆಯೋಕ್ಕಾಗಲ್ಲ. ಸಿನಿಮಾ ಬಿಡುಗಡೆ ಆದಾಗ ಅದನ್ನು ಹೇಗೆ ಸೆಲೆಬ್ರೇಟ್ ಮಾಡಬೇಕು ಎನ್ನುವುದಕ್ಕೆ ಕಾಯುತ್ತಿದ್ದೇನೆ. ಬೆಂಗಳೂರಿನಲ್ಲೇ ಇದ್ದೀನಿ, ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಸಾಧ್ಯತೆಯಿದೆ.

ಮುಂದಿನ ಸಿನಿಮಾಗಳ ಬಗ್ಗೆ ಹೇಳಿ

'OG' ಬಳಿಕ 'ವಿಶ್ವಂಭರ' ಸಿನಿಮಾ ಬರಲಿದೆ. ಚಿರಂಜೀವಿ ಸರ್ ಜೊತೆ ಬಹಳ ಒಳ್ಳೆಯ ಪಾತ್ರ ಸಿಕ್ಕಿದೆ. ಬೇರೆ ಯಾವುದೇ ಚಿತ್ರದಲ್ಲಿ ನಟಿಸದೇ ಅದೊಂದು ಚಿತ್ರಕ್ಕಾಗಿ ಒಂದೂವರೆ ವರ್ಷ ಮುಡಿಪಾಗಿಟ್ಟು ಪಾತ್ರ ಮಾಡಿದ್ದೀನಿ. ಬಹಳ ಒಳ್ಳೆಯ ಪಾತ್ರ. ಒಂದು ವೇಳೆ ಅದು ಕ್ಲಿಕ್ ಆದ್ರೆ ಕನ್ನಡದಲ್ಲಿ 'ಭಜರಂಗಿ' ಚಿತ್ರದಿಂದ ಸಿಕ್ಕ ಕ್ರೇಜ್ ಅಲ್ಲಿ ಸಿಗುವ ನಿರೀಕ್ಷೆಯಿದೆ. ಫ್ಯಾಂಟಸಿ ಸಿನಿಮಾ ಅದು. ಬಹಳ ದೊಡ್ಡ ಸಿನಿಮಾ. ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಕನ್ನಡದಲ್ಲಿ ಒಂದು ಚಿತ್ರದಲ್ಲಿ ನಟಿಸಿದ್ದೀನಿ. 'ಅರುಂಧತಿ' ರೀತಿ ನಾಯಕಿ ಹಾಗೂ ವಿಲನ್ ನಡುವೆ ಸಾಗುವ ಕಥೆ ಅದು. ಶೀಘ್ರದಲ್ಲೇ ಆ ಸಿನಿಮಾ ಟೈಟಲ್ ಘೋಷಣೆ ಆಗುತ್ತದೆ.

More from Filmibeat

English summary
Sourav Lokesh Gets Candid About Working in OG With Pawan Kalyan, His Tollywood Villain Avatar
Read more about: pawan kalyan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X