'ಯಜಮಾನ'ನ ಬಸಣ್ಣಿ ಹಾಡಿಗೆ ಭಾವ ತುಂಬಿದ್ದು ಈ ಹುಡುಗಿಯೇ!

'ಯಜಮಾನ' ಸಿನಿಮಾದ ಮೂರು ಹಾಡುಗಳು ಸದ್ಯಕ್ಕೆ ಬಿಡುಗಡೆಯಾಗಿವೆ. ಮೂರು ಹಾಡುಗಳು ಯೂ ಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿವೆ. ಕಳೆದ ಶನಿವಾರ ಬಸಣ್ಣಿ ಹಾಡು ಬಂದಿದ್ದು, ಎಲ್ಲರನ್ನು ಕುಣಿಯುವಂತೆ ಮಾಡುತ್ತಿದೆ.

'ಬಸಣ್ಣಿ ಬಾ..' ಹಾಡಿನ ಹೈಲೆಟ್ ಯೋಗರಾಜ್ ಭಟ್ ಸಾಹಿತ್ಯ. ಅದೇ ರೀತಿ ಹಾಡನ್ನು ಹಾಡಿರುವ ಶೈಲಿ ಕೂಡ ಸೂಪರ್ ಆಗಿದೆ. ಬಸಣ್ಣಿಗೆ ಭಾವ ತುಂಬಿರುವ ರೀತಿ ಹಾಡಿಗೆ ಹೊಸ ರೂಪ ನೀಡಿದೆ. ''ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದಿನಿ..'' ಎನ್ನುವ ಧ್ವನಿ ಕೇಳುಗರಿಗೆ ಕಿಕ್ ನೀಡುತ್ತದೆ. ಎರಡು ಮಿಲಿಯನ್ ಗಟ್ಟಲೆ ಹಿಟ್ಸ್ ಪಡೆದುಕೊಂಡಿರುವ ಈ ಹಾಡನ್ನು ಇಷ್ಟು ಚೆನ್ನಾಗಿ ಹಾಡಿರುವವರು ವರ್ಷ ಬಿ ಸುರೇಶ್.

ಸಾಕಷ್ಟು ವರ್ಷಗಳಿಂದ ಸಂಗೀತ ಕಲಿತು ಕೆಲ ಸಿನಿಮಾಗಳಲ್ಲಿ ಹಾಡುತ್ತಿದ್ದ ಇವರಿಗೆ ಈಗ ಒಂದು ದೊಡ್ಡ ಅವಕಾಶ ಸಿಕ್ಕಿದೆ. 'ರೈಟ್ ಥಿಂಗ್... ಅಟ್ ದಿ ರೈಟ್ ಟೈಮ್' ಎನ್ನುವ ಅವರ ಮಾತಿನ ಹಾಗೆಯೇ ವರ್ಷ ಮುಖದಲ್ಲಿ ಇದೀಗ ಹರ್ಷ ಮೂಡಿದೆ.

ಅಂದಹಾಗೆ, ತಮ್ಮ ಸಂಗೀತ ಯಾನದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ವರ್ಷ ಮಾತನಾಡಿದ್ದಾರೆ. ಅವರ ಮಾತುಗಳು ಮುಂದಿವೆ ಓದಿ...

ಸಂದರ್ಶನ : ನವಿ ಕನಸು (ನವೀನ್ ಎಮ್ ಎಸ್)

ಐದು ವರ್ಷದಿಂದ ಸಂಗೀತ ಕಲಿಯುತ್ತಿದ್ದೇನೆ

ಐದು ವರ್ಷದಿಂದ ಸಂಗೀತ ಕಲಿಯುತ್ತಿದ್ದೇನೆ

''ನನಗೆ ಐದು ವರ್ಷ ಇರುವಾಗಿನಿಂದ ನಾನು ಸಂಗೀತ ಕಲಿಯುತ್ತಿದ್ದೇನೆ. ಎಂಟು ವರ್ಷ ಇರುವಾಗಿನಿಂದ ಶೋಗಳಲ್ಲಿ ಹಾಡಲು ಶುರು ಮಾಡಿದೆ. ಫಸ್ಟ್ ಪಿಯುಸಿ ಓದುವಾಗ ರೆಕಾರ್ಡಿಂಗ್ ಹಾಡಲು ಪ್ರಾರಂಭ ಮಾಡಿದೆ. ಈವರೆಗೂ ತುಂಬ ಭಾವಗೀತೆ ಹಾಡಿದ್ದೇನೆ. ಅದು ನನಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಕನ್ನಡದ ಇಂದಿನ ಜನಪ್ರಿಯ ಕವಿಗಳು ನನ್ನನ್ನು ಗುರುತಿಸುವ ಹಾಗೆ ಮಾಡಿದ್ದು ಕೂಡ ಭಾವಗೀತೆಗಳು.''

ಅಪ್ಪ ಅಮ್ಮನ ತ್ಯಾಗ

ಅಪ್ಪ ಅಮ್ಮನ ತ್ಯಾಗ

''ಬೇಸಿಕಲಿ ನಾನು ಬೆಂಗಳೂರಿನ ಹುಡುಗಿ. ನನ್ನ ಗಾಯನಕ್ಕೆ ಮನೆಯಲ್ಲಿ ತುಂಬ ಪ್ರೋತ್ಸಾಹ ನೀಡುತ್ತಾರೆ. ಸಿನಿಮಾದಲ್ಲಿ ಹಾಡುವುದು ಅಂದರೆ ತುಂಬ ದೊಡ್ಡ ವಿಚಾರ. ನಮ್ಮ ಮನೆಯಲ್ಲಿ ಯಾರು ಇಂಡಸ್ಟ್ರಿಯಲ್ಲಿ ಇಲ್ಲ. ನಮ್ಮ ತಂದೆ ಸುರೇಶ್ ಹಾಗೂ ತಾಯಿ ವೀನಾಕ್ಷಿ, ಅವರಿಂದಲೇ ನಾನು ಇಷ್ಟು ದೂರ ಬಂದಿದ್ದೇನೆ. ನನ್ನ ಗೆಲುವಿನ ಹಿಂದೆ ಅವರ ತ್ಯಾಗ ತುಂಬ ಇದೆ.''

ಎದೆ ತುಂಬಿ ಹಾಡುವೆನು

ಎದೆ ತುಂಬಿ ಹಾಡುವೆನು

''2008 ಹಾಗೂ 2012 ನಲ್ಲಿ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹಾಡಿದ್ದೆ. ನನ್ನ ಹಾಡುಗಳ 'ವರ್ಷ ಧಾರೆ' ಎಂಬ ಒಂದು ಭಾವಗೀತೆಯ ಆಲ್ಬಂ ಇದೆ. ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದೀನಿ. ಹಿನ್ನಲೆ ಗಾಯನ ಶುರು ಮಾಡಿದ್ದು ಎರಡು ವರ್ಷಗಳ ಹಿಂದೆ. ಮೊದಲು ಹಾಡಿದ್ದು 'ಭಾವನೆಗಳ ಬೆನ್ನೇರಿ' ಎನ್ನುವ ಸಿನಿಮಾಗೆ''

ದೊಡ್ಡ ಸಿಂಗರ್ ಗಳಿಂದ ಅನೇಕ ವಿಷಯ ಕಲಿತೆ

ದೊಡ್ಡ ಸಿಂಗರ್ ಗಳಿಂದ ಅನೇಕ ವಿಷಯ ಕಲಿತೆ

''ಮೊದಲು ಕ್ಲಾಸಿಕಲ್ ಹಾಡುಗಳನ್ನು ಹಾಡುತ್ತಿದೆ. ಬಳಿಕ ಭಾವಗೀತೆ ಕಲಿತೆ. ನಾವೇ ಒಂದು ತಂಡ ಮಾಡಿಕೊಂಡು ಕಾರ್ಯಕ್ರಮ ನೀಡುತ್ತಿದ್ದೇವು. ದೊಡ್ಡ ದೊಡ್ಡ ಸಿಂಗರ್ ಗಳ ಜೊತೆಗೆ ಹಾಡಿ ತುಂಬ ವಿಷಯ ಕಲಿತೆ. ಎಲ್ಲ ರೀತಿಯ ಹಾಡುಗಳನ್ನು ಹಾಡಬೇಕು ಎನ್ನುವುದು ನನ್ನ ಆಸೆ. ಈಗಾಗಲೇ ಹಾಡಿರುವ ಹಾಡುಗಳು ಮಾತ್ರವಲ್ಲದೆ, ಹೊಸ ಹಾಡನ್ನು ನಾನು ಚೆನ್ನಾಗಿ ಹಾಡುತ್ತೇನೆ.''

ವಿಜಯ ಪ್ರಕಾಶ್ ಜೊತೆಗೆ ಹಾಡಿದ್ದು

ವಿಜಯ ಪ್ರಕಾಶ್ ಜೊತೆಗೆ ಹಾಡಿದ್ದು

''ಮೊದಲ ಸಿನಿಮಾದ ಬಳಿಕ ಕೆಲ ಚಿತ್ರಗಳಿಗೆ ಹಾಡುತ್ತಾ ಬಂದೆ. ಕಳೆದ ವರ್ಷ ಒಂದು ತುಳು ಸಿನಿಮಾದಲ್ಲಿ ಎರಡು ಹಾಡು ಹಾಡುವ ಅವಕಾಶ ಬಂತು. 'ಕಥಾ ವಿಚಿತ್ರ' ಹಾಗೂ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಹಾಡಿಗೆ ಧ್ವನಿ ನೀಡಿದೆ. 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾದ ಎರಡು ಹಾಡಿನಲ್ಲಿ ಒಂದನ್ನು ವಿಜಯ್ ಪ್ರಕಾಶ್ ಅವರ ಜೊತೆಗೆ ಹಾಡಿದೆ. ಮೆಲೋಡಿ, ಐಟಂ ಸಾಂಗ್, ರಾಕ್ ಶೈಲಿಯ ಹಾಡು ಹೀಗೆ ಎಲ್ಲ ಮಾದರಿಯಲ್ಲಿ ಹಾಡಿದ್ದು ಖುಷಿ ನೀಡಿದೆ.''

ರೈಟ್ ಥಿಂಗ್... ಅಟ್ ದಿ ರೈಟ್ ಟೈಮ್

ರೈಟ್ ಥಿಂಗ್... ಅಟ್ ದಿ ರೈಟ್ ಟೈಮ್

''ರೈಟ್ ಥಿಂಗ್... ಅಟ್ ದಿ ರೈಟ್ ಟೈಮ್ ಎನ್ನುವ ಹಾಗೆ 'ಯಜಮಾನ' ಸಿನಿಮಾಗೆ ಹಾಡುವ ಅವಕಾಶ ಈಗ ಸಿಕ್ಕಿದೆ. 'ಮುಗುಳುನಗೆ' ಸಿನಿಮಾದಿಂದ ಹರಿ ಸರ್ ಅವರ ಎಷ್ಟೊಂದು ಸಿನಿಮಾದ ಟ್ರಾಕ್ ಹಾಡಿದ್ದೇನೆ. 'ಕುರುಕ್ಷೇತ್ರ' ಸಿನಿಮಾದ ಟ್ರಾಕ್ ಗೆ ಕೂಡ ಧ್ವನಿ ನೀಡಿದ್ದೇನೆ. ಬಸಣ್ಣಿ ಹಾಡಿಗೆ ಕೂಡ ಟ್ರಾಕ್ ಹಾಡಬೇಕಿತ್ತು. ಆದರೆ, ನನ್ನ ಧ್ವನಿ ತುಂಬ ಚೆನ್ನಾಗಿದೆ ಅಂತ ಹರಿ ಸರ್ ಪೈನಲ್ ರೆಕಾರ್ಡಿಂಗ್ ಮಾಡಿಸಿದರು. ಹಾಡು ಬಿಡುಗಡೆಯಾಗಿ ಎರಡು ಮಿಲಿಯನ್ ಆಗಿದೆ. ರಿಯಲಿ ಗ್ರೇಟ್ ಫುಲ್ ಟು ಹಿಮ್.''

ರೆಹಮಾನ್ ಸರ್ ಜೊತೆಗೆ ಕೆಲಸ ಮಾಡಬೇಕು

ರೆಹಮಾನ್ ಸರ್ ಜೊತೆಗೆ ಕೆಲಸ ಮಾಡಬೇಕು

''ಈಗ ಹರಿ ಸರ್ ಜೊತೆಗೆ ಕೆಲಸ ಮಾಡಿದ್ದೇನೆ. ಹಾಡು ಕೇಳಿ ಅವರು ಖುಷಿ ಆಗಿದ್ದಾರೆ. ಮುಂದೆ ಅರ್ಜುನ್ ಜನ್ಯ ಸರ್ ಹಾಗೂ ಚರಣ್ ರಾಜ್ ಅವರಿಗೆ ಹಾಡಬೇಕು ಎನ್ನುವ ಆಸೆ ಇದೆ. ಎ ಆರ್ ರೆಹಮಾನ್ ಅವರ ಜೊತೆಗೆ ಕೆಲಸ ಮಾಡಬೇಕು ಎನ್ನುವುದು ನನ್ನ ಜೀವನದ ಕನಸು.''

ಎಲ್ಲ ರೀತಿಯ ಹಾಡನ್ನು ಹಾಡುತ್ತೇನೆ

ಎಲ್ಲ ರೀತಿಯ ಹಾಡನ್ನು ಹಾಡುತ್ತೇನೆ

''ನೀವು ಹೇಳಿದ ಹಾಗೆ ಇಂದು ಸಿಂಗರ್ ಗಳಿಗೆ ತುಂಬ ಕಾಂಪಿಟೇಶನ್ ಇದೆ. ಆದರೆ, ಕ್ವೌಲಿಟಿ ಇದ್ದಾಗ ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನಮ್ಮ ಪಾಡಿಗೆ ನಾವು ಕಲಿಯಬೇಕು. ಎಲ್ಲ ರೀತಿಯ ಹಾಡನ್ನು ನಾನು ಹಾಡುತ್ತೇನೆ, ಹೈ ಪಿಚ್ ನನಗೆ ಚೆನ್ನಾಗಿ ಬರುತ್ತದೆ. ಅದೇ ನನ್ನ ಪ್ಲಾಸ್ ಪಾಯಿಂಟ್. ಎಲ್ಲ ಭಾಷೆಯಲ್ಲಿಯೂ ಹಾಡುತ್ತೇನೆ. ಐ ಯಾಮ್ ಎ ವರ್ಸಟೈಲ್ ಸಿಂಗರ್.''

ದರ್ಶನ್ ಸರ್ ಹಾಗೂ ಅವರ ಫ್ಯಾನ್ಸ್ ಗಳಿಗೆ ಧನ್ಯವಾದ

ದರ್ಶನ್ ಸರ್ ಹಾಗೂ ಅವರ ಫ್ಯಾನ್ಸ್ ಗಳಿಗೆ ಧನ್ಯವಾದ

''ದರ್ಶನ್ ಸರ್ ಸೂಪರ್ ಸ್ಟಾರ್ ಆಫ್ ಸ್ಯಾಂಡಲ್ ವುಡ್. ಅವರು ಹೊಸ ಪ್ರತಿಭೆಗಳಿಗೆ ತುಂಬ ಸಹಾಯ ಮಾಡುತ್ತಾರೆ. ನನ್ನ ಹಾಡು ಕೂಡ ಅವರಿಗೆ ತುಂಬ ಇಷ್ಟ ಆಗಿದೆ. ಇಂತಹ ದೊಡ್ಡ ನಟರ ಸಿನಿಮಾಗೆ ಹಾಡುವ ಮೂಲಕ ನನಗೆ ದೊಡ್ಡ ಬ್ರೇಕ್ ಸಿಕ್ಕಿದೆ. ದರ್ಶನ್ ಸರ್ ಫ್ಯಾನ್ಸ್ ಕ್ಲಬ್ ನನ್ನನ್ನು ತುಂಬ ಚೆನ್ನಾಗಿ ಪ್ರಮೋಟ್ ಮಾಡುತ್ತಿದ್ದಾರೆ.''

More from Filmibeat

English summary
Kannada actor Darshan's 'Yajamana' movie Basanni song song fame singer Varsha B Suresh interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X