"ದೊಡ್ಡ ಕನಸು ಕಾಣುವವರು ದೊಡ್ಡ ಹೆಜ್ಜೆ ಇಡಬೇಕು": ಡಬ್ಬೂ ಫೋಟೋಶೂಟ್‌ ಬಜೆಟ್, ತಯಾರಿ ಬಗ್ಗೆ ಸಾನ್ಯಾ ಮಾತು

ಕಿರುತೆರೆಯಲ್ಲಿ ಬಾಲನಟಿಯಾಗಿ ನಟಿಸಿದ ಸಾನ್ಯಾ ಅಯ್ಯರ್ ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ಬಾಲಿವುಡ್ ಖ್ಯಾತ ಫೋಟೊಗ್ರಫರ್ ಡಬ್ಬೂ ರತ್ನಾನಿ ಕ್ಯಾಮರಾ ಎದುರು ನಿಂತಿದ್ದ ಚೆಲುವೆ ಫಿಲ್ಮಿಬೀಟ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಫೋಟೊಶೂಟ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಾನ್ಯಾ ಅಯ್ಯರ್ ಶೇರ್ ಮಾಡಿದ್ದ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

'ಪುಟ್ಟಗೌರಿ' ಮದುವೆ ಧಾರಾವಾಹಿಯಲ್ಲಿ ಪುಟಾಣಿ ಗೌರಿ ಆಗಿ ಸಾನ್ಯಾ ಮನೆ ಮಾತಾಗಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಚಿತ್ರರಂಗಕ್ಕೆ ಅಡಿ ಇಡಲು ಪ್ರಯತ್ನಿಸುತ್ತಿದ್ದಾರೆ. ಡ್ಯಾನ್ಸ್ ಶೋನಲ್ಲಿ ಗಮನ ಸೆಳೆದ ಬೆಡಗಿ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿ ಆಗಿದ್ದರು. ಹಲವು ದಿನಗಳಿಂದ ಡಬ್ಬು ರತ್ನಾನಿ ಬಳಿ ಫೋಟೊಶೂಟ್ ಮಾಡಿಸುವ ಲೆಕ್ಕಾಚಾರದಲ್ಲಿದ್ದರಂತೆ. ಆದರೆ ಕೊರೋನಾ, ಬಿಗ್‌ಬಾಸ್ ಶೋ ಕಾರಣಕ್ಕೆ ತಡವಾಗಿತ್ತು. ಅಂತು ಇಂತೂ ಇದೀಗ ಅದು ಸಾಧ್ಯವಾಗಿದೆ.

Bigg Bos Fame Saanya Iyer opens up about her Latest Daboo Ratnanis Photoshoot

4 ಬೇರೆ ಬೇರೆ ಲುಕ್‌ಗಳಲ್ಲಿ ಸಾನ್ಯಾ ಫೋಟೊಶೂಟ್ ಮಾಡಿಸಿದ್ದಾರೆ. ಇದಕ್ಕಾಗಿ ತಮ್ಮ ತಂಡದ ಜೊತೆ ಮುಂಬೈಗೆ ಹೋಗಿದ್ದರು. ಒಂದಿಡಿ ದಿನ ಡಬ್ಬೂ ರತ್ನಾನಿ ಸ್ಟುಡಿಯೋದಲ್ಲಿ ಫೋಟೊಶೂಟ್ ಮಾಡಲಾಯಿತು. ಈಗಾಗಲೇ 2 ಲುಕ್‌ಗಳ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಈ ಬಗ್ಗೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಕ್ರೇಜಿ ಫೋಟೊಶೂಟ್‌ಗೆ ಕಾರಣ ಏನು?

"4 ವರ್ಷಗಳಿಂದ ಈ ಫೋಟೊಶೂಟ್ ಪ್ಲ್ಯಾನ್ ಇತ್ತು. ನಂತರ ಕೋವಿಡ್ ಬಂತು. ಆ ನಂತರ ನಾನು ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿಬಿಟ್ಟೆ. ಡಬ್ಬೂ ರತ್ನಾನಿ ಮೊದಲಿನಿಂದಲೂ ಪರಿಚಯ ಇದ್ದರು. ಬಿಗ್‌ಬಾಸ್‌ ಶೋನಿಂದ ಹೊರ ಬಂದ ಮೇಲೆ ತೂಕ ಹೆಚ್ಚಾಗಿತ್ತು. ಸಿಕ್ಕಾಪಟ್ಟೆ ಡಯೆಟ್, ಡ್ಯಾನ್ಸ್, ವರ್ಕೌಟ್ ಮಾಡಿ ತೂಕ ಇಳಿಸಿಕೊಂಡು ಫೋಟೊಶೂಟ್‌ನಲ್ಲಿ ಭಾಗಿ ಆಗಿದ್ದೆ. ಫೋಟೊಶೂಟ್‌ನಲ್ಲಿ ಹೀಗೆ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇತ್ತು. ಅದೇ ರೀತಿ ಕಾಣಿಸಿಕೊಂಡಿದ್ದೇನೆ"

Bigg Bos Fame Saanya Iyer opens up about her Latest Daboo Ratnanis Photoshoot

ಫೋಟೂಶೂಟ್ ತಯಾರಿ ಹೇಗಿತ್ತು?

"ಫೋಟೊಶೂಟ್ ಲುಕ್ಸ್ ಪ್ಲ್ಯಾನ್ ಮಾಡೋಕೆ ಒಂದು ತಿಂಗಳು ಸಮಯ ಬೇಕಾಯಿತು. ಡಬ್ಬೂ ರತ್ನಾನಿ ಸಿಕ್ಕಾಪಟ್ಟೆ ಬ್ಯುಸಿ ಇರ್ತಾರೆ. ಅವರ ಡೇಟ್ಸ್ ತಗೊಂಡು, ನಾವು ಎಲ್ಲವನ್ನು ಸಿದ್ಧಪಡಿಸಿಕೊಂಡು ಹೋಗಲು 2 ತಿಂಗಳಾಯಿತು. ಪ್ರಶಾಂತ್ ಮೇಕ್‌ಓವರ್ ಮಾಡಿದ್ದು. ಅವರು ತುಂಬಾ ಚೆನ್ನಾಗಿ ಮೇಕಪ್ ಮಾಡುತ್ತಾರೆ. ಬಹಳ ಸಿಂಪಲ್‌ ಆಗಿ ಬಹಳ ಚೆನ್ನಾಗಿ ಮೇಕಪ್ ಮಾಡಿದ್ದರು. ಮೋಹನ್ ಗೌಡ ಡಿಸೈನರ್. ನಾವೆಲ್ಲಾ ತಂಡವಾಗಿ ಹೋಗಿ ಫೋಟೋಶೂಟ್ ಮಾಡಿದ್ದು. ಒಂದು ದಿನ ಶೂಟ್ ಮಾಡಿದ್ವಿ.

4 ಲುಕ್ಸ್‌ನಲ್ಲಿ ಫೋಟೊಶೂಟ್, ಅದರ ಬಗ್ಗೆ ಹೇಳಿ

"ಒಂದಕ್ಕಿಂತ ಒಂದು ವಿಭಿನ್ನವಾದ ಲುಕ್‌ಗಳಲ್ಲಿ ಫೋಟೊಶೂಟ್ ಮಾಡಿಸಿದ್ದು. ಈಗಾಗಲೇ 2 ಲುಕ್ಸ್ ರಿವೀಲ್ ಮಾಡಿದ್ದೀನಿ. ಒಂದು ವೈಟ್ ಮಿನಿ ಡ್ರೆಸ್ ಲುಕ್‌ ಮೊದಲು ಶೇರ್ ಮಾಡಿದ ಫೋಟೊಗಳು. ಎರಡನೆಯದು ಕ್ರಾಪ್‌ಟಾಪ್ ಹಾಗೂ ಶಾರ್ಟ್ ಮಿಡಿ ಸ್ಕರ್ಟ್. ಮೂರನೇಯದ್ದು ಪಾಪ್‌ ಸ್ಟೈಲ್‌ನಲ್ಲಿ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿರುತ್ತೆ. ಕೊನೆಯದ್ದು ಬಾಸ್ ಲೇಡಿ ಸ್ಟೈಲ್‌ ಲುಕ್ ಇದೆ.

ಡಬ್ಬೂ ರತ್ನಾನಿ ಬಳಿ ಫೋಟೋಶೂಟ್ ಯಾಕೆ?

"ದೊಡ್ಡ ಕನಸು ಕಾಣುವಾಗ ದೊಡ್ಡದಾಗಿಯೇ ಹೆಜ್ಜೆ ಇಡಬೇಕು, ಪ್ರಯತ್ನ ಮಾಡಬೇಕು ಅಂತಾರಲ್ಲ ಹಾಗೆ. ನನ್ನ ಆಸೆ ಈಡೇರಿಸಿಕೊಳ್ಳಲು ಯಾವುದು ಸಹಾಯ ಆಗುತ್ತೋ ಅದನ್ನು ಮಾಡಬೇಕು. ಹಾಗಾಗಿನೇ ಡಬ್ಬೂ ರತ್ನಾನಿ ಬಳಿ ಫೋಟೋಶೂಟ್ ಮಾಡಿಸಿದ್ದು.

ದುಬಾರಿ ಫೋಟೊಶೂಟ್‌ಗೆ ತಗುಲಿದ ವೆಚ್ಚ?

"ಡಬ್ಬೂ ರತ್ನಾನಿ ಸಿಕ್ಕಾಪಟ್ಟೆ ಬ್ಯುಸಿ ಇರ್ತಾರೆ. ಅವರ ಬಳಿ ಫೋಟೊಶೂಟ್ ಮಾಡಿಸೋದು ಸುಲಭ ಅಲ್ಲ. ಅಷ್ಟೊಂದು ಬ್ಯುಸಿ ಶೆಡ್ಯೂಲ್ ನಡುವೆ ನಮ್ಮ ಫೋಟೊಶೂಟ್ ಮಾಡಿಸಲು ಪ್ಲ್ಯಾನ್ ಮಾಡಿದ್ದೇ ಹೆಚ್ಚು, ಸಿಕ್ಕಾಪಟ್ಟೆ ದುಬಾರಿನೇ ಆಯಿತು. ಎಷ್ಟು ಎನ್ನುವ ಅಂಕಿ ಅಂಶ ರಿವೀಲ್ ಮಾಡಲ್ಲ"

ಸಿನಿಮಾಗಳಲ್ಲಿ ನಟಿಸೋದು ಯಾವಾಗ?

"ಬಾಲಿವುಡ್‌ನಲ್ಲೂ ಕತೆಗಳನ್ನು ಕೇಳುತ್ತಿದ್ದೇನೆ. ಸೌತ್‌ನಲ್ಲೂ ಒಂದಷ್ಟು ಕಥೆಗಳ ಚರ್ಚೆ ನಡೀತಿದೆ. ಕನ್ನಡ ಜೊತೆಗೆ ಅಕ್ಕಪಕ್ಕದ ಭಾಷೆಗಳ ಸಿನಿಮಾ ಕತೆ ಕೂಡ ಕೇಳುತ್ತಿದ್ದೇನೆ. ಸದ್ಯ ಒಂದು ಸಿನಿಮಾ ಮಾತುಕತೆ ಹಂತದಲ್ಲಿ ಇದೆ. ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆಯಿದೆ. ನಾನು ಯಾವುದೇ ಭಾಷೆಯಲ್ಲಿ ನಟಿಸಿದರೂ ಕಥೆ, ಬ್ಯಾನರ್ ಬಹಳ ಮುಖ್ಯ. ಕಲಾವಿದರಾಗಿ ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ನಟಿಸ್ತೀನಿ. ಆದರೆ ಕನ್ನಡದಲ್ಲೇ ದೊಡ್ಡ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ"

More from Filmibeat

English summary
Bigg Bos Fame Saanya Iyer opens up about her Latest Daboo Ratnani's Photoshoot. She Also Reveals her Big Screen Entry Plans. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X