ನಿವೇದಿತಾ ಗೌಡಗೆ ಬಂದಿದೆ ಎರಡು ಹೊಸ ಸಿನಿಮಾ ಆಫರ್!

By Naveen

Recommended Video

ಜೂನಿಯರ್ ನಿವೇದಿತಾ ಗೌಡ ವಿಡಿಯೋ ವೈರಲ್ | Filmibeat Kannada

'ಬಿಗ್ ಬಾಸ್ ಸೀಸನ್ 5' ಮುಗಿದಿದೆ. ದಿನ ಟಿವಿ ಮುಂದೆ ಕೂರುತ್ತಿದ್ದ ವೀಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಕ್ಯೂಟ್ ಸ್ಪರ್ಧಿ ಆಗಿದ್ದ ನಿವೇದಿತಾ ಗೌಡ 'ಬಿಗ್ ಬಾಸ್' ಜರ್ನಿ ಮುಗಿಸಿ ಮನೆಗೆ ಬಂದಿದ್ದಾರೆ. ಇಷ್ಟು ದಿನ ಬಿಟ್ಟಿದ್ದ ತಮ್ಮ ಫ್ಯಾಮಿಲಿ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ಮೊದಲು ನಿವೇದಿತಾ ನೋಡಿ ಈಕೆ ಎರಡ್ಮೂರು ವಾರಕ್ಕೆ ಔಟ್ ಆಗುತ್ತಾರೆ ಅಂತ ಬಹುತೇಕರು ಲೆಕ್ಕ ಹಾಕಿದ್ದರು. ಆದರೆ ನಿವೇದಿತಾ ಫೈನಲ್ ಹಂತಕ್ಕೆ ಬಂದು ಎಲ್ಲರ ಗಮನ ಸೆಳೆದರು. 'ಬಿಗ್ ಬಾಸ್' ನಿಂದ ವಾಪಸ್ ಬಂದಿರುವ ನಿವೇದಿತಾ ತಮ್ಮ ಅನುಭವಗಳ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆಗೆ ಮಾತನಾಡಿದ್ದಾರೆ. ಅಂದಹಾಗೆ, ನಿವೇದಿತಾ ಗೌಡ ಅವರ ಸಂದರ್ಶನದ ಆಯ್ದ ಭಾಗ ಮುಂದಿದೆ ಓದಿ...

ಹೇಗಿತ್ತು ನಿಮ್ಮ ಇಡೀ 'ಬಿಗ್ ಬಾಸ್' ಜರ್ನಿ ?

ಹೇಗಿತ್ತು ನಿಮ್ಮ ಇಡೀ 'ಬಿಗ್ ಬಾಸ್' ಜರ್ನಿ ?

''ತುಂಬ ಚೆನ್ನಾಗಿತ್ತು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಾನು ತುಂಬ ಇಷ್ಟ ಪಟ್ಟು ಹೋಗಿದೆ. ನಾನು ಅಲ್ಲಿಗೆ ಹೋಗಬೇಕು ಅಂತ ಕನಸು ಕಂಡಿದೆ. ಅಲ್ಲಿ ಕೆಲವು ಕಷ್ಟ ಇತ್ತು ಆದರೆ ನಾನು ಮ್ಯಾನೆಜ್ ಮಾಡಿಕೊಂಡೆ. ಅಲ್ಲಿ ತುಂಬ ಖುಷಿ ಇತ್ತು.''

ಬಿಗ್ ಬಾಸ್ ಮನೆಗೆ ಮೊದಲು ಹೋದಾಗ ಅಲ್ಲಿಗೆ ಹೇಗೆ ಹೊಂದುಕೊಂಡ್ರಿ?

ಬಿಗ್ ಬಾಸ್ ಮನೆಗೆ ಮೊದಲು ಹೋದಾಗ ಅಲ್ಲಿಗೆ ಹೇಗೆ ಹೊಂದುಕೊಂಡ್ರಿ?

''ಮೊದಲು ಹೋದಾಗ ತುಂಬ ಟೆನ್ಷನ್ ಇತ್ತು. ಆದರೆ ಎಲ್ಲರ ಜೊತೆಗೆ ಚೆನ್ನಾಗಿ ಹೊಂದುಕೊಂಡೆ. ನಾನು ಕಾಮನ್ ಮ್ಯಾನ್ ಆಗಿ ಅಲ್ಲಿಗೆ ಹೋಗಿದ್ದರು ನನಗೆ ಯಾವುದು ಫೀಲ್ ಇರಲಿಲ್ಲ. ಒಬ್ಬ ಪರ್ಸನ್ ಆಗಿ ನಾನು ಹೋಗಿದೆ ಅಷ್ಟೆ.''

ಚಂದನ್ ಶೆಟ್ಟಿ ಜೊತೆಗೆ ಸಿನಿಮಾ ಮಾಡ್ತಿರಂತೆ ಹೌದಾ?

ಚಂದನ್ ಶೆಟ್ಟಿ ಜೊತೆಗೆ ಸಿನಿಮಾ ಮಾಡ್ತಿರಂತೆ ಹೌದಾ?

''ನಾನು ಸಿನಿಮಾ ಬಗ್ಗೆ ಸದ್ಯ ತಲೆ ಕೆಡಿಸಿಕೊಂಡಿಲ್ಲ. ನಾನು ಮೊದಲು ನನ್ನ ವಿದ್ಯಾಬ್ಯಾಸ ಮುಂದುವರೆಸಬೇಕು.''

ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಟೆಜಿ ಇಟ್ಟುಕೊಂಡು ಆಟ ಆಗಿದ್ರಾ?

ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಟೆಜಿ ಇಟ್ಟುಕೊಂಡು ಆಟ ಆಗಿದ್ರಾ?

''ನಾನು ನಿವೇದಿತಾ ಆಗಿ ಮನೆಯಲ್ಲಿ ಇದ್ದೇ. ಕೆಲವರು ಸ್ಟ್ರಾಟೆಜಿ.. ಗೇಮ್ ಪ್ಲಾನ್.. ಅಂತ್ತಾರೆ. ಅದು ಏನು ಅಂತ ಈಗಲೂ ನನಗೆ ಗೊತ್ತಿಲ್ಲ. ಯಾರು ನನಗೆ ಸ್ಟ್ರಾಟೆಜಿ ಮಾಡಿದ್ದೀನಿ ಅಂತ ಹೇಳಿದ್ದರೋ ಅವರೇ ಸ್ಟ್ರಾಟೆಜಿ ಮಾಡಿದ್ದಾರೆ. ನಾನು ಎಲ್ಲ ವಿಷಯದಲ್ಲಿಯೂ ಡೈರೆಕ್ಟ್ ಆಗಿ ಮಾತನಾಡುತ್ತಿದೆ.''

ಯಾವ ಟಾಸ್ಕ್ ತುಂಬ ಇಷ್ಟ ಆಗಿದ್ದು.. ಯಾವುದು ಕಷ್ಟ ಇತ್ತು..?

ಯಾವ ಟಾಸ್ಕ್ ತುಂಬ ಇಷ್ಟ ಆಗಿದ್ದು.. ಯಾವುದು ಕಷ್ಟ ಇತ್ತು..?

''ಸ್ಕೂಲ್ ಟಾಸ್ಕ್ ನನಗೆ ತುಂಬ ಇಷ್ಟ ಆಯ್ತು. ಯಾಕಂದ್ರೆ ಅದರಲ್ಲಿ ನಾನು ಕ್ಯಾಪ್ಟನ್ ಆಗಿದ್ದೆ. ಎಲ್ಲವನ್ನು ನಾನೇ ನೋಡಿಕೊಳ್ಳಬೇಕಿತ್ತು. ಚಾಲೆಂಜಿಂಗ್ ಆಗಿ ಇತ್ತು. ಅದು ಬಿಟ್ಟರೆ ಕೋಳ ಹಾಕಿದ್ದ ಟಾಸ್ಕ್ ಇಷ್ಟ ಆಯ್ತು. ಕೊನೆ ವಾರದ ಎಲ್ಲ ಟಾಸ್ಕ್ ಇಷ್ಟ ಆಯ್ತು. ನನಗೆ ಕಷ್ಟ ಅಂತ ಯಾವುದು ಟಾಸ್ಕ್ ಅನಿಸಿಲ್ಲ.''

'ಬಿಗ್ ಬಾಸ್'ಗೆ ಹೋದಾಗ ಒಂದು ವಾರ ಇದ್ದರೆ ಸಾಕು ಅಂತ ಹೇಳಿದ್ರಿ.. ಆದರೆ ಅಷ್ಟೊಂದು ದಿನ ಇದ್ರಿ ಅದು ಹೇಗೆ?

'ಬಿಗ್ ಬಾಸ್'ಗೆ ಹೋದಾಗ ಒಂದು ವಾರ ಇದ್ದರೆ ಸಾಕು ಅಂತ ಹೇಳಿದ್ರಿ.. ಆದರೆ ಅಷ್ಟೊಂದು ದಿನ ಇದ್ರಿ ಅದು ಹೇಗೆ?

''ನನಗೆ 106 ದಿನ ಇರಬೇಕು ಅಂತ ಇಷ್ಟ ಇತ್ತು. ಅಲ್ಲಿ ತುಂಬ ಹೆಸರು ಮಾಡಿದ ಸ್ಪರ್ಧಿಗಳೆ ಬಂದಿದ್ದರು. ಅದರ ಜೊತೆಗೆ ನಾನು ಕಾಂಪೀಟ್ ಮಾಡುತ್ತೇನಾ.. ಇಲ್ವಾ.. ಎಂದು ಒಂದು ವಾರ ಇದ್ದರೆ ಸಾಕು ಎಂದು ಮೊದಲು ಅಂದು ಕೊಂಡೆ. ಆಮೇಲೆ ನಾನು ಸೇವ್ ಆಗ್ತಾ ಆಗ್ತಾ ನನಗೆ ಒಂದು ಆತ್ಮವಿಶ್ವಾಸ ಬಂತು.''

ಒಂದು ಟಾಸ್ಕ್ ನಲ್ಲಿ ಚಂದನ್ ಶೆಟ್ಟಿ ಅವರು ಔಟ್ ಆಗಲಿ ಎಂದು ಹೇಳಿದ್ರಿ ಯಾಕೆ?

ಒಂದು ಟಾಸ್ಕ್ ನಲ್ಲಿ ಚಂದನ್ ಶೆಟ್ಟಿ ಅವರು ಔಟ್ ಆಗಲಿ ಎಂದು ಹೇಳಿದ್ರಿ ಯಾಕೆ?

''ಕೋಳದ ಟಾಸ್ಕ್ ನಲ್ಲಿ ನಾನು ಮತ್ತು ಚಂದನ್ ಇಬ್ಬರಲ್ಲಿ ಒಬ್ಬರನ್ನು ನಾಮಿನೇಟ್ ಆಗಬೇಕಿತ್ತು. ಆಗ ಅಷ್ಟೇ ಅವರ ಹೆಸರನ್ನು ತೆಗೆದುಕೊಂಡೆ. ಅದು ಬಿಟ್ಟರೆ ಬೇರೆ ಯಾವುದೇ ಟೈಂ ನಲ್ಲಿಯೂ ನಾನು ಚಂದನ್ ನಾಮಿನೇಟ್ ಮಾಡಿಲ್ಲ.''

ಕೆಲವೊಂದು ಟಾಸ್ಕ್ ನಲ್ಲಿ ಭಾಗವಹಿಸುವುದಕ್ಕೆ ನೀವು ಹಿಂಜರಿಯುತ್ತ ಇದ್ರಾ?

ಕೆಲವೊಂದು ಟಾಸ್ಕ್ ನಲ್ಲಿ ಭಾಗವಹಿಸುವುದಕ್ಕೆ ನೀವು ಹಿಂಜರಿಯುತ್ತ ಇದ್ರಾ?

''ಮೊದಲು ಎಲ್ಲರೂ ನನಗೆ ಆಗಲ್ಲ ಎಂದು ಹೇಳಿದರು. ನನಗೆ ಅದೇ ವಿಷಯ ಮೈಂಡ್ ನಲ್ಲಿ ಬಂತು. ಅದಕ್ಕೆ ಮೊದ ಮೊದಲು ನಾನು ಹೆಚ್ಚು ಟಾಸ್ಕ್ ಮಾಡಲಿಲ್ಲ. ಆಮೇಲೆ ನನಗೂ ಎಲ್ಲ ಟಾಸ್ಕ್ ಮಾಡಬೇಕು ಅನಿಸಿತು.''

ಯಾರಾದರೂ ನಿಮ್ಮನ್ನು ಡಾಮಿನೇಟ್ ಮಾಡಿದ್ರಾ?

ಯಾರಾದರೂ ನಿಮ್ಮನ್ನು ಡಾಮಿನೇಟ್ ಮಾಡಿದ್ರಾ?

''ನನಗೆ ಏನಾದರೂ ಹೇಳಬೇಕು ಅನಿಸಿದರೆ ಹೇಳುತ್ತಿದೆ. ನನಗೆ ಬೇಕಾದನ್ನು ಮಾತ್ರ ತೆಗೆದುಕೊಳ್ಳುತ್ತಿದೆ. ನನಗೆ ಡಾಮಿನೇಟ್ ಆದೆ ಎನ್ನುವ ಫೀಲ್ ಬಂದಿಲ್ಲ.''

ಚಂದನ್ ನಿಮ್ಮ ಬಗ್ಗೆ ಒಂದು ಹಾಡು ಮಾಡಿದ್ದಾರೆ ಅದಕ್ಕೆ ನೀವೆ ನಟಿಸುತ್ತೀರಾ?

ಚಂದನ್ ನಿಮ್ಮ ಬಗ್ಗೆ ಒಂದು ಹಾಡು ಮಾಡಿದ್ದಾರೆ ಅದಕ್ಕೆ ನೀವೆ ನಟಿಸುತ್ತೀರಾ?

''ನೋಡಬೇಕು.. ಮಾಡುವ ಆಸೆ ಇದೆ.. ಯಾಕೆ ಮಾಡಬಾರದು..''

ಬಿಗ್ ಬಾಸ್ ನಿಂದ ಬಂದ ಮೇಲೆ ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರ?

ಬಿಗ್ ಬಾಸ್ ನಿಂದ ಬಂದ ಮೇಲೆ ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರ?

''ಪ್ರತಿಯೊಂದನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಮೈಕ್, ಬಿಗ್ ಬಾಸ್ ವಾಯ್ಸ್, ಟಾಕ್ಸ್ ಎಲ್ಲವನ್ನು ಮಿಸ್ ಮಾಡಿಕೊಳ್ಳುತ್ತೇನೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಅದೇ ಮೂಡ್ ನಲ್ಲಿ ಇದ್ದೇನೆ.''

ನಿಮ್ಮ ಮುಂದಿನ ಪ್ಲಾನ್ ಏನು.. ಯಾವುದಾದ್ರೂ ಸಿನಿಮಾ ಮಾಡುತ್ತೀರ?

ನಿಮ್ಮ ಮುಂದಿನ ಪ್ಲಾನ್ ಏನು.. ಯಾವುದಾದ್ರೂ ಸಿನಿಮಾ ಮಾಡುತ್ತೀರ?

''ನಾನು ಬಿ.ಸಿ.ಎ ಮಾಡಿ ಎಂ.ಸಿ.ಎ ಮಾಡಬೇಕು. ಮುಂದೆ ಏನು ಮಾಡಬೇಕು ಎನ್ನುವ ಪ್ಲಾನ್ ಇರಲಿಲ್ಲ. ಆಫರ್ ಗಳು ಬರುತ್ತಿದೆ. ಮುಂದೆ ನನಗೆ ಇಷ್ಟ ಆದರೆ ಸಿನಿಮಾ ಮಾಡುತ್ತೇನೆ''

More from Filmibeat

English summary
Bigg boss kannada 5 contestant Niveditha Gowda interview. She shared her 106 days experience at bigg boss house with filmibeat kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X