ಮೋದಿಯನ್ನು ಭೇಟಿಯಾಗಲು ಹೊರಟ 'ಬಿಗ್ ಬಾಸ್' ಸ್ಪರ್ಧಿ ಸಮೀರ್ ಆಚಾರ್ಯ! ಕಾರಣ ಏನು.?

By ಯಶಸ್ವಿನಿ ಎಂ.ಕೆ

Recommended Video

ಮೋದಿಯನ್ನು ಭೇಟಿಯಾಗಲು ಹೊರಟ 'ಬಿಗ್ ಬಾಸ್' ಸ್ಪರ್ಧಿ ಸಮೀರ್ ಆಚಾರ್ಯ! ಕಾರಣ ಏನು.? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಗೆದ್ದು ಕರ್ನಾಟಕದಲ್ಲಿ ದೊಡ್ಡ ವಿದ್ಯಾಕ್ರಾಂತಿ ಮಾಡಬೇಕು ಎಂಬ ಮಹದಾಸೆ ಹೊಂದಿದ್ದವರು ಹುಬ್ಬಳ್ಳಿಯ ಸಮೀರಾಚಾರ್ಯ. ಆದ್ರೆ, ಸಮೀರಾಚಾರ್ಯ ಕನಸು ಈಡೇರಲಿಲ್ಲ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಟಾಪ್ 5 ಹಂತಕ್ಕೆ ಏರಲು ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ಸಮೀರಾಚಾರ್ಯ ಮುಗ್ಗರಿಸಿಬಿದ್ದರು. ನೂರು ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇದ್ದ ಸಮೀರಾಚಾರ್ಯ ರಾತ್ರೋ ರಾತ್ರಿ ಸೂಟ್ ಕೇಸ್ ಹಿಡಿದು ಹೊರ ನಡೆದರು.

'ಬಿಗ್ ಬಾಸ್' ಮನೆಯಲ್ಲಿ ಸಮೀರಾಚಾರ್ಯ ಕನಸಿಗೆ ಪ್ರೋತ್ಸಾಹ ಸಿಗದೆ ಇರಬಹುದು. ಆದ್ರೆ, ಅವರ ಹೋರಾಟ ಮಾತ್ರ ನಿಂತಿಲ್ಲ. ಮಹದಾಯಿ ವಿವಾದಕ್ಕೆ ಅಂತ್ಯ ಹಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಲು ಸದ್ಯದಲ್ಲೇ ದೆಹಲಿಗೆ ತೆರಳುತ್ತಿದ್ದಾರಂತೆ ಸಮೀರಾಚಾರ್ಯ. ಮುಂದೆ ಓದಿರಿ...

'ಬಿಗ್ ಬಾಸ್' ಮನೆಗೆ ಬಂದಿದ್ದೇ ಈ ಉದ್ದೇಶಕ್ಕೆ

'ಬಿಗ್ ಬಾಸ್' ಮನೆಗೆ ಬಂದಿದ್ದೇ ಈ ಉದ್ದೇಶಕ್ಕೆ

'ಬಿಗ್ ಬಾಸ್' ಮನೆಗೆ ಸಮೀರಾಚಾರ್ಯ ಬಂದ ಮುಖ್ಯ ಉದ್ದೇಶವೇ ಮಹದಾಯಿ ಹೋರಾಟ. ''ನನ್ನ ಮುಖ್ಯ ಉದ್ದೇಶ ಮಹದಾಯಿ ಹೋರಾಟ. ಅನೇಕ ಬಾರಿ ಈ ವಿಚಾರವನ್ನು 'ಬಿಗ್ ಬಾಸ್' ಮನೆಯೊಳಗೆ ಪ್ರಸೆಂಟ್ ಮಾಡಿದ್ದೆ. ನನ್ನ ನಿಲುವು ರೈತ ಪರ. ಮೋದಿ ಬೆಳಗಾವಿಗೆ ಬಂದಾಗ ರೈತರನ್ನು ಭೇಟಿಯಾಗಲು ಬಿಡಲಿಲ್ಲ. ನಾನು ರೈತರ ಮಗ ಅಲ್ಲ. ಆದರೆ ಅವರ ಕಷ್ಟವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವರ ಬಲಿದಾನ ನನ್ನ ಕಣ್ಣಲ್ಲಿ ನೀರು ತರಿಸುತ್ತದೆ'' ಎನ್ನುತ್ತಾರೆ ಸಮೀರಾಚಾರ್ಯ.

ಸಮೀರಾಚಾರ್ಯ ಅವರಿಗೆ ಬೇಸರ ಆಗಿತ್ತು

ಸಮೀರಾಚಾರ್ಯ ಅವರಿಗೆ ಬೇಸರ ಆಗಿತ್ತು

'ಬಿಗ್ ಬಾಸ್' ನಲ್ಲಿ ಫ್ಯಾಷನ್ ಶೋ ನಡೆಸಿದಾಗ ನಾನು ಮಹದಾಯಿ ಬಗ್ಗೆ ಮಾತನಾಡಿದ್ದೆ. ಆದರೆ ನನಗೆ ಕಡಿಮೆ ಅಂಕ ಸಿಕ್ಕಿತು. ನನಗೆ ಆಗ ಬೇಸರವೆನಿಸಿತು. ಯಾರು ಕೂಡ ನನಗೆ ಸಪೋರ್ಟ್ ಮಾಡಲಿಲ್ಲ'' ಎನ್ನುತ್ತಾರೆ ಸಮೀರಾಚಾರ್ಯ.

ಮೋದಿ ಭೇಟಿ ಮಾಡಲು ಹೊರಟ ಸಮೀರಾಚಾರ್ಯ

ಮೋದಿ ಭೇಟಿ ಮಾಡಲು ಹೊರಟ ಸಮೀರಾಚಾರ್ಯ

ಮಹದಾಯಿ ವಿಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ಮಾಡಲು ಸಮೀರಾಚಾರ್ಯ ದೆಹಲಿಗೆ ಹೊರಟಿದ್ದಾರೆ. ''ಮುಂದಿನ ತಿಂಗಳು ಮೋದಿಯವರನ್ನು ಭೇಟಿಯಾಗಲು ಮಹದಾಯಿ ವಿಚಾರವಾಗಿ ಅವರೊಂದಿಗೆ ಮಾತನಾಡಲು ದಿನಾಂಕ ನಿಗದಿ ಮಾಡುತ್ತಿದ್ದೇನೆ'' ಅಂತಾರೆ ಸಮೀರಾಚಾರ್ಯ.

ಮತ್ತೆ ರಿಯಾಲಿಟಿ ಶೋಗಳಲ್ಲಿ ಸಮೀರಾಚಾರ್ಯ

ಮತ್ತೆ ರಿಯಾಲಿಟಿ ಶೋಗಳಲ್ಲಿ ಸಮೀರಾಚಾರ್ಯ

ಸದ್ಯ 4 ರಿಯಾಲಿಟಿ ಶೋಗಳಿಗೆ ಸಮೀರಾಚಾರ್ಯ ಒಪ್ಪಿಗೆ ನೀಡಿದ್ದಾರಂತೆ. ರಾಮಾಯಣ, ಮಹಾಭಾರತ ವಿಚಾರವಾಗಿ ರಿಸರ್ಚ್ ನಡೆಸಲು ತಯಾರಿ ಸಹ ನಡೆಸುತ್ತಿದ್ದಾರಂತೆ.

More from Filmibeat

English summary
Bigg Boss Kannada 5 contestant Sameer Acharya to meet Narendra Modi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X