'ಕ್ಲಾಟ್ಲೆ ಕಿಚನ್' ಅದ್ಭುತ ಅನುಭವ, ಸದಾ ನೆನಪಿನಲ್ಲಿ ಉಳಿಯುವಂಥದ್ದು- ಪ್ರಶಾಂತ್ ಗೌಡ

ಕಲರ್ಸ್ ಕನ್ನಡ ವಾಹಿನಿಯ ವಿಭಿನ್ನ ರಿಯಾಲಿಟಿ ಶೋ 'ಕ್ವಾಟ್ಲೆ ಕಿಚನ್' ಮುಕ್ತಾಯದ ಹಂತ ತಲುಪಿದೆ. ಈ ವಾರಾಂತ್ಯದಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಕನ್ನಡ ಕಿರುತೆರೆಯಲ್ಲಿ ಬಹಳ ವಿಭಿನ್ನವಾದ ರಿಯಾಲಿಟಿ ಶೋ ಇದಾಗಿದೆ. ನೋಡ್ತಾ ನೋಡ್ತಾ ಫಸ್ಟ್ ಸೀಸನ್ ಮುಗಿದೇ ಹೋಯ್ತು ಎಂದು ಸ್ಪರ್ಧಿ ಪ್ರಶಾಂತ್ ಗೌಡ ಪ್ರತಿಕ್ರಿಯಿಸಿದ್ದಾರೆ.

ಚೆನ್ನಾಗಿ ಅಡುಗೆ ಮಾಡುವ 'ಕುಕ್‌'ಗಳು ಒಂದ್ಕಡೆ. ಊಟ ತಿನ್ನೋಕೆ ಗೊತ್ತು ಅಡುಗೆ ಮಾಡೋಕೆ ಗೊತ್ತಿಲ್ಲ, ಬಹಳ ಕಾಡುತ್ತೀವಿ ಎನ್ನುವ 'ಕ್ವಾಟ್ಲೆ'ಗಳು ಮತ್ತೊಂದು ಕಡೆ. ಎಲ್ಲರೂ ಸೇರಿ ನಗುವಿನ ಔತಣ ಉಣಬಡಿಸುತ್ತಾ ಬಂದ ಶೋ ಇದು. ಅಡುಗೆ ಮಾಡುವಾಗ ಹುಟ್ಟುವ ತಮಾಷೆ, ತರ್ಲೆ, ಅಡುಗೆ ಮಾಡೋಕೆ ಬಿಡದೇ ಮಾತಲಲೇ ಕಾಲು ಎಳೆಯುತ್ತಾ ಮಜಾ ಕೊಡುವ ಶೋ ಇದು. ಕುರಿ ಪ್ರತಾಪ್ ಹಾಗೂ ಅನುಪಮಾ ಗೌಡ ಶೋ ನಿರೂಪಣೆ ಮಾಡಿದ್ರೆ. ನಟಿ ಶ್ರುತಿ ಹಾಗೂ ಖ್ಯಾತ ಶೆಫ್ ಕೌಶಿಕ್ ತೀರ್ಪುಗಾರರಾಗಿ ಶೋ ನಿಬಾಯಿಸಿದ್ದರು.

Colors Kannada s Kwatle Kitchen Gave Me My Best Moments Reveals Prashanth Gowda

ಬೆಳ್ಳುಳ್ಳಿ ಕಬಾಬ್ ಚಂದ್ರು, ನಟ ಆರ್‌. ಕೆ ಚಂದನ್, ಜಿಮ್ ಕೋಚ್- ನಟ ರಾಘವೇಂದ್ರ, ನಟಿ ಶರ್ಮಿತಾ ಶೆಟ್ಟಿ, ನಟಿ ಕಾವ್ಯಾ ಗೌಡ ಹಾಗೂ ದಿಲೀಪ್ ಶೆಟ್ಟಿ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಕ್ವಾಟ್ಲೆ ತಂಡದಲ್ಲಿದ್ದ ತುಕಾಲಿ ಸಂತು, ಪ್ರಶಾಂತ್ ಗೌಡ ಎಲ್ಲರೂ ವೀಕ್ಷಕರನ್ನು ಸಿಕ್ಕಾಪಟ್ಟೆ ನಗಿಸಿದ್ದಾರೆ. 'ಕಾಟ್ಲೆ ಕಿಚನ್' ಸೀಸನ್-1ರ ಜರ್ನಿಯನ್ನು ಫಿಲ್ಮಿಬೀಟ್ ಕನ್ನಡ ಜೊತೆ ಪ್ರಶಾಂತ್ ಹಂಚಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಐದಾರು ಶೋಗಳಲ್ಲಿ ಭಾಗವಹಿಸಿದ್ದ ಅವರು ಇದು ಮರೆಯಲಾಗದ ಶೋ ಎಂದಿದ್ದಾರೆ.

'ಕ್ವಾಟ್ಲೆ ಕಿಚನ್' ಜರ್ನಿ ಹೇಗಿತ್ತು?

ನಿಜಕ್ಕೂ ಅದ್ಭುತವಾಗಿತ್ತು. ಮರೆಯಲಾಗದ ಅನುಭವ. ಕುಕ್‌ಗಳ ಜೊತೆ ಕ್ವಾಟ್ಲೆ ಮಾಡುವ ಶೋ ನಾನು ನೋಡಿರಲಿಲ್ಲ. ಮೊದಲ ಸೀಸನ್‌ನಲ್ಲಿ ನಾನು ಭಾಗವಹಿಸಿದ್ದು ಹೆಮ್ಮೆ ಅನ್ನಿಸ್ತಿದೆ. ನನ್ನ ಬಿಟ್ಟು ಸಾಕಷ್ಟು ಜನ ಕಲಾವಿದರು ಇದ್ದರು. ಅವರನ್ನೆಲ್ಲಾ ಬಿಟ್ಟು ನನ್ನನ್ನು ಆಯ್ಕೆ ಮಾಡಿದ್ರು. ನನ್ನ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ಶೋ ಇದು. ನಾನು ನಾನಾಗಿಯೇ ಇರುವಂತೆ ಮಾಡಿದ ಶೋ ಇದು. ಮುಂದೆ ಎಷ್ಟೇ ಸೀಸನ್ ಬಂದರೂ ಇದು ಬೆಸ್ಟ್ ಸೀಸನ್ ಆಗಿರುತ್ತದೆ.

ಶೋನಲ್ಲಿ ಭಾಗವಹಿಸಿದ ಅನುಭವ?

ಆರಂಭದಲ್ಲಿ ಏನೋ ಅಂದುಕೊಂಡಿದ್ದೆ. ನಮ್ಮ ಕ್ವಾಟ್ಲೆಯನ್ನು ಯಾರು ಯಾವ ರೀತಿ ತಗೋತ್ತಾರೆ ಎನ್ನುವ ಅಳುಕಿತ್ತು. ಯಾರಾದರೂ ಸೀರಿಯಸ್ ಆಗಿ ಸಮಸ್ಯೆ ಆಗುತ್ತಾ ಎನ್ನುವ ಭಯ ಇತ್ತು. ಆದರೆ 'ಕುಕ್‌'ಗಳು ಕೂಡ ಇದನ್ನು ಜಾಲಿಯಾಗಿ ತಗೊಂಡ್ರು. ಹಾಗಾಗಿ ಕ್ವಾಟ್ಲೆ ಕೊಡಲು ಸುಲಭವಾಯಿತು. ಏನೇನೋ ಮಾತನಾಡೋಕೆ ಆಗುವುದಿಲ್ಲ, ಒಂದು ಎಲ್ಲೆ ಅಂತ ಇರುತ್ತೆ. ಅಷ್ಟರಲ್ಲೇ ನಾವು ತಮಾಷೆ ಮಾಡಬೇಕಿತ್ತು. ಅಡುಗೆ ಮಾಡುವುದನ್ನು ಕೆಡಿಸುವುದಲ್ಲ, ಬರೀ ಕಾಟ ಕೊಡುವುದು ಅಷ್ಟೆ. ಸಖತ್ ಎಂಜಾಯ್ ಮಾಡಿದ್ದೀವಿ. ನಾನು, ಸೂರಜ್, ಧನರಾಜ್, ತುಕಾಲಿ ಎಲ್ಲರೂ ಸಖತ್ ಎಂಜಾಯ್ ಮಾಡಿದ್ದೀವಿ. ಅತ್ತಿದ್ದೀನಿ, ನಕ್ಕಿದ್ದೀವಿ ಬಹಳ ಎಮೋಷನಲ್ ಆಗಿತ್ತು.

Colors Kannada s Kwatle Kitchen Gave Me My Best Moments Reveals Prashanth Gowda

ಶೋ ಚಿತ್ರೀಕರಣ ಹೇಗಿರುತ್ತಿತ್ತು?

ನಾನು ನೋಡಿರುವ ಶೋಗಳಲ್ಲಿ 'ಕ್ವಾಟ್ಲೆ ಕಿಚನ್' ಬಹಳ ಕಠಿಣವಾಗಿತ್ತು. ಕಾರಣ ಬರೋಬ್ಬರಿ 22 ಗಂಟೆಗಳ ಕಾಲ ನಿಂತೇ ಇರಬೇಕಿತ್ತು. ನಿಂತು, ಕುಂತು, ಮಲಗಿ ರೆಸ್ಟ್ ಮಾಡಿ ಯಾವುದೇ ಶೋ ಮಾಡಬಹುದು. ಆದರೆ ಈ ಶೋನಲ್ಲಿ ಅದು ಸಾಧ್ಯವಿರುತ್ತಿರಲಿಲ್ಲ. ನಿಲ್ಲಬೇಕು, ಇಲ್ಲ ಓಡಾಡುತ್ತಲೇ ಇರಬೇಕಿತ್ತು. ನೋಡುವವರಿಗೆ ಒಂದೂವರೆ ಗಂಟೆ ಶೋ ಎನಿಸಬಹುದು. ಆದರೆ ನಾವು 22 ಗಂಟೆ ಅದನ್ನು ಚಿತ್ರೀಕರಣ ಮಾಡಬೇಕು. ಫೈನಲ್ ಟಾಸ್ಕ್ ಶುರುವಾಗುವ ವೇಳೆಗೆ ರಾತ್ರಿ 2 ಗಂಟೆ ಆಗಿರುತ್ತಿತ್ತು. ಅಷ್ಟು ಸುಲಭ ಅಲ್ಲ. ಕೆಲವೊಮ್ಮೆ ಕಾಲು ಬೊಬ್ಬೆ ಬರುತ್ತಿತ್ತು. ಆದರೂ ಇಷ್ಟಪಟ್ಟು ಅಷ್ಟೇ ಎಂಜಾಯ್ ಮಾಡಿದ್ದೀವಿ.

ನಿರೂಪಕರು, ತೀರ್ಪುಗಾರರ ಸಹಕಾರ ಹೇಗಿತ್ತು?

ಅಯ್ಯೋ.. ಅವರೆಲ್ಲರ ಸಹಕಾರ ಮರೆಯೋಕೆ ಸಾಧ್ಯವಿಲ್ಲ. ಕುರಿ ಪ್ರತಾಪ್ ಸರ್ ಬಹಳ ಜಾಲಿ ಮನುಷ್ಯ. ಅಷ್ಟು ಹೆಸರು ಮಾಡಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲ. ನನ್ನೊಟ್ಟಿಗೆ ಬಹಳ ಆತ್ಮೀಯವಾಗಿ ಇರುತ್ತಿದ್ದರು. ಇನ್ನು ನಾನು ಹಾಗೂ ಅನುಪಮಾ ಅಕ್ಕ ಬಹಳ ಕ್ಲೋಸ್. ಒಮ್ಮೆ ಪ್ರತಾಪ್ ಸರ್ ಬಂದು ಪ್ರಾಂಕ್ ಮಾಡೋಕೆ ನೋಡಿದ್ರು. ನಾನು ಹೇಳಿದ್ದನ್ನು ಅಕ್ಕ ಗಂಭೀರವಾಗಿ ತೆಗೆದುಕೊಂಡಿದ್ರು. ಅವರಿಗೆ ಆಂಕರಿಂಗ್ ಬರಲ್ಲ ಎಂದುಬಿಟ್ಟಿದ್ದೆ. ನಾನು ತಮಾಷೆ ಮಾಡಿದ್ದನ್ನು ಸೀರಿಯಸ್ ಆಗಿ ತಗೊಂಡಿದ್ರು. ಬಳಿಕ ಕ್ಷಮೆ ಕೇಳಿದ್ದೆ. ಅವ್ರು ಹೋಗ್ಲಿ ಬಿಡು ಅಂದ್ರು. ತೀರ್ಪುಗಾರರಾದ ಕೌಶಿಕ್ ನಿಜಕ್ಕೂ ಪುಣ್ಯಾತ್ಮ. ತಮಿಳಿನಲ್ಲಿ ದೊಡ್ಡ ಶೋ ಮಾಡಿದ್ದರೂ ನಮ್ಮ ಜೊತೆ ಬಹಳ ಆರಾಮಾಗಿ ಇರುತ್ತಿದ್ರು. ಚೆನ್ನೈಗೆ ಬನ್ನಿ ಎಂದು ಕರೆಯುತ್ತಾರೆ. ಇನ್ನು ಶ್ರುತಿ ಮೇಡಂ ಬಗ್ಗೆ ಹೊಸದಾಗಿ ಹೇಳುವುದು ಬೇಕಿಲ್ಲ. ಅವರೊಟ್ಟಿಗೆ 4ನೇ ಶೋ ಇದು. 100 ಸಿನಿಮಾಗಳಲ್ಲಿ ನಟಿಸಿದ್ರು, ಯಾವುದೇ ಅಹಂ ಇರಲ್ಲ. ನಮ್ಮೊಟ್ಟಿಗೆ ಖುಷಿಯಾಗಿ ಇರುತ್ತಿದ್ರು.

ಕಲರ್ಸ್ ಕನ್ನಡ ಜೊತೆಗಿನ ಅನುಬಂಧದ ಬಗ್ಗೆ ಹೇಳಿ

ನಾನು ಯಾವತ್ತೂ ಕಲರ್ಸ್ ಕನ್ನಡ ವಾಹಿನಿಗೆ ಋಣಿಯಾಗಿ ಇರ್ತೀನಿ. ವಾಹಿನಿಯಲ್ಲಿ ಇದು ನನ್ನ 6ನೇ ಶೋ. 'ಗಿಚ್ಚಿ ಗಿಲಿಗಿಲಿ' ಶೋ 3 ಸೀಸನ್‌ನಲ್ಲಿ ನಾನು ಕಾಣಿಸಿಕೊಂಡಿದ್ದೀನಿ. ಬೇರೆ ಯಾವುದೇ ಜಾಗಕ್ಕೆ ಹೋಗಿದ್ದರೂ ಇಷ್ಟು ಶೈನ್ ಆಗ್ತಿರಲಿಲ್ಲ. ವಾಹಿನಿ ಮೂರ್ನಾಲ್ಕು ವರ್ಷ ನನಗೆ ಊಟ ಹಾಕಿದೆ. ಆ ತಂಡ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ. ಟಿಕ್‌ಟಾಕ್, ರೀಲ್ಸ್ ಮಾಡಿಕೊಂಡು ಬಂದವರು ಬೇರೆ ವಾಹಿನಿಗಳಲ್ಲಿ ಇಷ್ಟು ದಿನ ಉಳಿದುಕೊಂಡಿಲ್ಲ. ಆದರೆ ನಾನು 6ನೇ ಶೋ ಮಾಡ್ತಿದ್ದೀನಿ. ಘಟಾನುಘಟಿ ಕಲಾವಿದರ ನಡುವೆ ನಾನು ಉಳಿದುಕೊಂಡಿದ್ದು ವಿಶೇಷ.

ಮುಂದಿನ ಪ್ಲ್ಯಾನ್ಸ್ ಏನೇನಿದೆ?

ಮತ್ತೆ ಕಲರ್ಸ್ ಕನ್ನಡ ವಾಹಿನಿಯಿಂದ ಯಾವುದೇ ಶೋ ಸಿಕ್ಕರೂ ಮಾಡ್ತೀನಿ. 2 ಸಿನಿಮಾ ಅವಕಾಶಗಳು ಸಿಕ್ಕಿದೆ. ಅದರಲ್ಲಿ ನಟಿಸಬೇಕಿದೆ. 'ಕ್ಲಾಟ್ಲೆ ಕಿಚನ್' ಶೋ ಬಹಳ ಮಿಸ್ ಮಾಡಿಕೊಳ್ತೀನಿ. ಪ್ರತಿ ವೀಕೆಂಡ್ ಎಲ್ಲರ ಜೊತೆ ಸೇರಿ ಜಾಲಿಯಾಗಿ ಎಂಜಾಯ್ ಮಾಡ್ತಿದ್ದೆ. ಅದೆಲ್ಲಾ ಇನ್ನು ನೆನಪು ಮಾತ್ರ.

More from Filmibeat

English summary
Behind the Fun of Kwatle Kitchen: Prashanth Gowda Shares His Real Experience
Read more about: tv kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X