ಆನಂದ್ "ಬಿಗ್ ಬಾಸ್" ಸೀಸನ್ 3 ನಲ್ಲಿ ಸ್ಪರ್ಧಿಸುತ್ತಾರಾ?
"ಡಾನ್ಸಿಂಗ್ ಸ್ಟಾರ್" ಸೀಸನ್ 2 ರಿಯಾಲಿಟಿ ಶೋ ವಿನ್ನರ್ ಆದ ಸಡಗರದಲ್ಲಿರುವ ಮಾಸ್ಟರ್ ಆನಂದ್ ಗೆ ಶುಭಕೋರುತ್ತಾ, 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಚುಟುಕು ಸಂದರ್ಶನದ ಮುಂದುವರೆದ ಭಾಗ ಇಲ್ಲಿದೆ
* ಡೇಂಜರ್ ಝೋನ್ ಗೆ ಬಂದಾಗ ನಿಮಗೆ ಹೇಗೆ ಫೀಲ್ ಆಯ್ತು, ನೀವು ಫೈನಲ್ ಪ್ರವೇಶ ಪಡೆಯುತ್ತೀರಿ ಎನ್ನುವ ಭರವಸೆ ಇತ್ತಾ?
- ಇಲ್ಲಿ ಡೇಂಜರ್ ಝೋನ್ ನಲ್ಲಿ ತೀರ್ಪುಗಾರರು 50% ಮಾತ್ರ ಡಿಸೈಡ್ ಮಾಡುತ್ತಾರೆ. ಇನ್ನುಳಿದಂತೆ ವೀಕ್ಷಕರ ವೋಟಿನ ಮೇಲೆ ಡಿಪೆಂಡ್ ಆಗಿರುತ್ತದೆ. ಇವಾಗ ಡೇಂಜರ್ ಝೋನ್ ಅಂದ್ರೆ ಬಾಟಮ್ ನಿಂದ ಮೂರು ಜನರನ್ನು ಸೆಲೆಕ್ಟ್ ಮಾಡಲಾಗುತ್ತೆ ಅದರಲ್ಲಿ ಕೊನೆಯಲ್ಲಿದ್ರೆ ಎಲಿಮಿನೇಟ್ ಆಗುತ್ತೆ ಬಿಟ್ರೆ ಫಸ್ಟ್, ಸೆಕೆಂಡ್ ಸ್ಥಾನದಲ್ಲಿದ್ರೆ ಎಲಿಮಿನೇಟ್ ಆಗಲ್ಲಾ.
ನಾನು ಡೇಂಜರ್ ಝೋನ್ ಗೆ ಬಂದಿದ್ದು, ನ್ಯೂ ಫಾರ್ಮೆಷನ್ ಗಳನ್ನು ವೇದಿಕೆಗೆ ತರುವ ಮೊದಲು ಬರೀ ಡಾನ್ಸ್ ಮಾತ್ರ ಮಾಡುತ್ತಾ ಇದ್ದೆ. ಅದು ಬಿಟ್ರೆ ನಾವು ಮೆಂಟಲಿ ಪ್ರಿಪೇರ್ ಆಗಿರ್ತಿವಿ, ತೀರ್ಪುಗಾರರು ಮಾಕ್ಸ್ ಕೊಟ್ಟರು ಕೂಡಾ ವೀಕ್ಷಕರು ವೋಟ್ ಮಾಡಿಲ್ಲಾಂದ್ರೆ, ಯಾರೇ ಆದ್ರೂ ಎಲಿಮಿನೇಟ್ ಆಗೇ ಆಗ್ತಾರೆ. ಈ ವಾರ ಸೇಮ್ ಆದ್ರೆ ಮುಂದಿನವಾರ ಬೆಟ್ಟರ್ ಫರ್ಫಾಮೆನ್ಸ್ ಕೊಡಬೇಕು ಅಂತಾ ಮೆಂಟಲಿ ಡಿಸೈಡ್ ಮಾಡುತ್ತಾ ಇದ್ದೆವು.

* ನಿಮ್ಮ ಗೆಲುವು ವೀಕ್ಷಕರಿಂದಾನ ಅಥವಾ ನಿಮ್ಮದೇ ಎಫರ್ಟ್ ನಿಂದಾನ?
_ ಈಗ ಈ ಷೋ ಅನ್ನೋದು ಟಿವಿಯಲ್ಲಿ ಕಾಣುವಂತಹ ವಿಷ್ಯಾ. ಜನ ಸುಮ್ಮನೆ ವೋಟ್ ಮಾಡಕ್ಕಾಗಲ್ಲಾ. ಅದ್ರಲ್ಲೂ ಜನ ವೋಟ್ ಮಾಡಿದ್ದಾರೆ. ಅವರಿಗೆ ಪ್ರೇರಣೆ ಕೊಡುವಂತಹ ಡಾನ್ಸ್ ನಾವು ಮಾಡಿದ್ದೀವಿ ಅಂದ್ರೆ ಅದ್ರಲ್ಲಿ ನಮ್ಮ ಎಫರ್ಟ್ ಕೂಡಾ ತುಂಬಾನೇ ಮುಖ್ಯ ಆಗುತ್ತೆ.
* ನಿಮ್ಮ ಫ್ಯಾಮಿಲಿ ಸಪೋರ್ಟ್ ಹೇಗಿತ್ತು ?
- ಖಂಡಿತವಾಗ್ಲೂ ಫ್ಯಾಮಿಲಿ ಸಪೋರ್ಟ್ ತುಂಬಾನೇ ಇತ್ತು. ಯಾಕಂದ್ರೆ ಒಂದೊಂದು ಬಾರಿ ಮನೆಗೆ ಹೋಗಕ್ಕೆ ಆಗ್ತಾ ಇರಲಿಲ್ಲಾ. ಊಟ ತಿಂಡಿಗೂ ಟೈಮ್ ಇರುತ್ತಿರಲಿಲ್ಲಾ. ಆಮೇಲೆ ನನ್ನ ತಮ್ಮನಿಗೆ ಸೀರಿಯಲ್ ಶೂಟಿಂಗ್ ವೇಳೆಯಲ್ಲಿ ಆಕ್ಟಿಂಗ್ ಕಮ್ ಡೈರೆಕ್ಷನ್ ಅಂತಾ ಡಬ್ಬಲ್ ಕೆಲಸಗಳು ಆಗ್ತಾ ಇತ್ತು. ಇಂತಹ ಸಂದರ್ಭಗಳಲ್ಲಿ ನನ್ನ ಫ್ಯಾಮಿಲಿ ನನಗೆ ತುಂಬಾನೇ ಸಹಾಯ ಮಾಡಿದ್ದಾರೆ.

* ಸದ್ಯಕ್ಕೆ ಕಿರುತೆರೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ನೀವು ಮುಂದೆ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವ ಪ್ಲಾನ್ ಇದೆಯಾ?
- ಇವಾಗ ನಾನು ಸೀರಿಯಲ್ ಬ್ಯುಸಿ ಇದ್ದೆ ಅಂತಾನೇ ನನ್ನನ್ನು ಯಾರು ಬಿಗ್ ಸ್ಕ್ರೀನ್ ಗೆ ಕರೀತಾ ಇರಲಿಲ್ಲ. ಎಲ್ಲರಿಗೂ ಗೊತ್ತು, ನಮ್ಮದು ಹೋಮ್ ಪ್ರೊಡಕ್ಷನ್, ಡೈರಕ್ಷನ್ ಮಾಡ್ತಾ ಇದ್ದೀನಿ ಅಂತಾ. ಈಗ ಡಾನ್ಸಿಂಗ್ ಸ್ಟಾರ್ ವಿನ್ನರ್ ಆಗಿದ್ದೇನೆ ಅಂತಾ ಯಾವುದೇ ಆಫರ್ ಗಳು ಬರುವುದಿಲ್ಲಾ. ಬದ್ಲಾಗಿ ನಾನು ಸಿರೀಯಲ್ ಬಿಟ್ಟೆ ಅಂತಾ ಗೊತ್ತಾದ್ರೆ ಖಂಡಿತ ಸಿನೆಮಾಗಳಿಗೆ ಆಫರ್ ಬರುತ್ತೆ. ದಿನಾ ಟಿವಿ ಸಿರೀಯಲ್ ನಲ್ಲಿ ನನ್ನನ್ನು ನೋಡಿ ನಾನು ಬ್ಯುಸಿ ಅಂತಾ ಅಂದುಕೊಳ್ಳುತ್ತಾರೆ. ಏನೇ ಆದ್ರೂ ಡಿಸಿಷನ್ ನಾನೂ ತೆಗೆದುಕೊಳ್ಳಬೇಕು ಸಿನೆಮಾನ ಅಥವಾ ಸಿರೀಯಲ್ ಅಂತಾ.

* ನೀವು "ಬಿಗ್ ಬಾಸ್" ಸೀಸನ್ 3 ಯಲ್ಲಿ ಭಾಗವಹಿಸುತ್ತಿದ್ದೀರಾ ಅಂತಾ ಸುದ್ದಿ, ಇದಕ್ಕೆ ನಿಮ್ಮ ಪ್ರತಿಕ್ರಿಯೆ.
- "ಬಿಗ್ ಬಾಸ್" ಸೀಸನ್ 3 ಯಾವ ಚಾನಲ್ ನಲ್ಲಿ ಪ್ರಸಾರ ಆಗುತ್ತೆ ಅಂತಾ ನನಗೆ ಇನ್ನೂ ಗೊತ್ತಿಲ್ಲ. ಅದರ ಬಗ್ಗೆ ಇನ್ನೂ ಯಾರು ನನ್ನ ಜೊತೆ ಮಾತೇ ಆಡಿಲ್ಲಾ. "ಬಿಗ್ ಬಾಸ್" ಸೀಸನ್ 1, 2 ಗೆ ಕರೆದಿದ್ದರು ಆದ್ರೆ ನನಗೆ ಹೋಗಕ್ಕೆ ಆಗಿರಲಿಲ್ಲಾ. ಸೀಸನ್ 2 ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಿತ್ತು. ಆದ್ರೆ ನಾನು ಕಲರ್ಸ್ ವಾಹಿನಿಯಲ್ಲಿ ಸಿರೀಯಲ್ ಮಾಡ್ತಾ ಇದ್ದೆ. ಆದ ಕಾರಣ ಹೋಗಕ್ಕೆ ಆಗಿಲ್ಲಾ. ಇನ್ನೂ ಸೀಸನ್ 3 ಯಾವ ಚಾನಲ್ ನಲ್ಲಿ ಪ್ರಸಾರ ಆಗುತ್ತೆ ಮತ್ತು ನಾನು ಸಿರೀಯಲ್ ಶೂಟಿಂಗ್ ನಲ್ಲಿ ಫ್ರೀ ಇರುತ್ತೇನಾ, ಅನ್ನೋದ್ರಲ್ಲಿ ಡಿಪೆಂಡ್ ಆಗಿದೆ.
* ಈ ಪ್ರಶಸ್ತಿಯನ್ನು ಯಾರಿಗೆ ಅರ್ಪಿಸುತ್ತಿರಾ?
- ಇಡೀ ನಮ್ಮ "ಡಾನ್ಸಿಂಗ್ ಸ್ಟಾರ್" ತಂಡಕ್ಕೆ ಈ ಪ್ರಶಸ್ತಿ ಹಾಗೆ ಗೆಲುವನ್ನು ಅರ್ಪಿಸುತ್ತೇನೆ.
* ಕೊನೆಯದಾಗಿ "ಡಾನ್ಸಿಂಗ್ ಸ್ಟಾರ್" ಬಗ್ಗೆ ಏನು ಹೇಳೋಕೆ ಇಷ್ಟ ಪಡ್ತೀರಾ?
- ಇದೊಂದು ಒಳ್ಳೆ ಅನುಭವ. ಸುಮ್ಮನೆ ಮನೆಯಲ್ಲಿ ಕೂತಿರುತ್ತಿದ್ದರೆ, ಡಾನ್ಸ್ ಬಗ್ಗೆ ನನಗೆ ಇಷ್ಟು ಗೊತ್ತಾಗ್ತಾ ಇರ್ಲಿಲ್ಲಾ. ದೈನಂದಿನ ಚಟುವಟಿಕೆಗಳ ಮಧ್ಯೆ ಯೂಟ್ಯೂಬ್ ನೋಡಿ ಡ್ಯಾನ್ಸ್ ಫಾರ್ಮೇಷನ್ ಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಖಂಡಿತ ಬರುತ್ತಿರಲಿಲ್ಲಾ. ಕಾಂಪಿಟೇಷನ್ ನಲ್ಲಿ ಭಾಗವಹಿಸಿದ್ದಕ್ಕೆ ಅದಕ್ಕೆ ಪ್ರಾಮುಖ್ಯತೆ ಕೊಟ್ಟೆ. ಆದ್ರಿಂದ ಏನೋ ಸ್ವಲ್ಪ ಕಲಿತುಕೊಂಡಿದ್ದೇವೆ. ಪೂರ್ತಿ ಅಲ್ಲದಿದ್ದರು ಏನೋ ಚೂರು ಗೊತ್ತಿದೆ. ಇದನ್ನೆಲ್ಲಾ ಡಾನ್ಸಿಂಗ್ ಸ್ಟಾರ್ ನಲ್ಲಿ ಕಲಿತುಕೊಂಡೆ. ಒಂದೊಳ್ಳೆ ಅನುಭವ ಅಂತಾ ಹೇಳೋಕೆ ಇಷ್ಟ ಪಡುತ್ತೇನೆ.


Click it and Unblock the Notifications











