'ಲವ್ ಮಾಕ್ಟೇಲ್'- 3 ಸ್ಕ್ರಿಪ್ಟ್ ಸಿದ್ಧ, ನಿಧಿಮಾ ಇರ್ತಾಳಾ?; ಡಾರ್ಲಿಂಗ್ ಕೃಷ್ಣ ಮಾತು

ಇತ್ತೀಚೆಗೆ ನಟ, ನಿರ್ದೇಶಕ, ನಿರ್ಮಾಪಕ ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ 'ಫಾದರ್' ಚಿತ್ರದ ಪೋಸ್ಟರ್ ಹಾಗೂ 'ಬ್ರ್ಯಾಟ್' ಚಿತ್ರದ ಟೀಸರ್ ಗಿಫ್ಟ್ ಸಿಕ್ಕಿತ್ತು. ಸದ್ಯ 'ಲವ್ ಮಾಕ್ಟೇಲ್'- 3 ಚಿತ್ರವನ್ನು ತೆರೆಗೆ ತರಲು ಕೃಷ್ಣ ಸಜ್ಜಾಗುತ್ತಿದ್ದಾರೆ.

ಮಗಳು ಪರಿ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಮಿಲನಾ ಸಿನಿಮಾಗಳ ಕಡೆಗೂ ಗಮನ ಹರಿಸಿದ್ದಾರೆ. 7 ತಿಂಗಳ ಹಿಂದೆ ಆಕೆ ನಟಿಸಿದ್ದ 'ಆರಾಮ್ ಆರವಿಂದ್‌ಸ್ವಾಮಿ' ಸಿನಿಮಾ ಬಿಡುಗಡೆಯಾಗಿತ್ತು. 'ಬೆಲ್ಲ' ಎಂಬ ಮತ್ತೊಂದು ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಇದೀಗ ಇಬ್ಬರೂ 'ಲವ್ ಮಾಕ್ಟೇಲ್'- 3 ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

Darling Krishna Confirms Love Mocktail 3 Script Ready Shoot Begins Soon

ಮೊದಲಿಗೆ ಕೃಷ್ಣ, ಮಿಲನಾ ನಟಿಸಿದ್ದ 'ಲವ್ ಮಾಕ್ಟೇಲ್' ಸಿನಿಮಾ ಗೆದ್ದಿದ್ದು ಬಳಿಕ ಅದರ ಸೀಕ್ವೆಲ್ ಬಂದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸುಕಂಡಿದ್ದು ಗೊತ್ತೇಯಿದೆ. 'ಲವ್ ಮಾಕ್ಟೇಲ್'-2 ಕ್ಲೈಮ್ಯಾಕ್ಸ್ ನೋಡಿದಾಗಲೇ ಪಾರ್ಟ್-3 ಕೂಡ ಬರುತ್ತಾ ಎನ್ನುವ ಅನುಮಾನ ಮೂಡಿತ್ತು. ಈ ಬಗ್ಗೆ ಕೇಳಿದಾಗ ಕಂಡಿತ ಮಾಡ್ತೀವಿ. ಗೊತ್ತಿಲ್ಲ ಯಾವಾಗ ಎಂದು ಇಬ್ಬರು ಹೇಳಿದ್ದರು. ಇದೀಗ ಆ ಬಗ್ಗೆ ಸುಳಿವು ಕೊಟ್ಟು ಸಣ್ಣದೊಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಸಾಕು ನಾಯಿಯ ಜೊತೆ ಕೃಷ್ಣ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ಮಿಲನಾ "ಎಲ್ಲರೂ 'ಲವ್ ಮಾಕ್ಟೇಲ್-3' ಯಾವಾಗ ಅಂತ ಕೇಳ್ತಿದ್ದಾರೆ. ಆದರೆ ಈ ಯಪ್ಪಾ ನೋಡಿದ್ರೆ, ಹಲೋ ಸ್ಕ್ರಿಪ್ಟ್ ಮುಗ್ಸಲ್ವಾ?" ಎಂದು ಕೇಳಿದ್ದಾರೆ. ಆ ಮೂಲಕ 'ಲವ್ ಮಾಕ್ಟೇಲ್-3' ಆದಷ್ಟು ಬೇಗ ಬರುತ್ತದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಸ್ವತಃ ಡಾರ್ಲಿಂಗ್ ಕೃಷ್ಣ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

'ಲವ್ ಮಾಕ್ಟೇಲ್-3' ಸಿನಿಮಾ ಕೆಲಸ ಎಲ್ಲಿಗೆ ಬಂತು?

ಸ್ಕ್ರಿಪ್ಟ್ ಕಂಪ್ಲೀಟ್ ಆಯ್ತು. ಎಲ್ಲಿ ಪಾರ್ಟ್-2 ಕಥೆ ಮುಗಿತೋ ಅಲ್ಲಿಂದಲೇ ಕಥೆ ಮುಂದುವರೆಯುತ್ತದೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ಶುರುವಾಗುತ್ತದೆ. ಸದ್ಯ ಸ್ಕ್ರೀನ್‌ಪ್ಲೇ ಮುಗಿದು, ಡೈಲಾಗ್ ವರ್ಷನ್ ಬರಿತ್ತಿದ್ದೀನಿ. ಹೊಸ ಹೊಸ ಪಾತ್ರಗಳು ಇರಲಿದೆ, ಕಲಾವಿದರ ಆಯ್ಕೆ ನಡೆಯಬೇಕು. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ.

ನಟನೆ, ನಿರ್ದೇಶನ ಜೊತೆಗೆ ಸಿನಿಮಾ ನಿರ್ಮಾಣ ಸಹ ಮಾಡ್ತೀರಾ?

ಖಂಡಿತ. ಈ ಬಾರಿ ಕೂಡ ನಮ್ಮದೇ ತಂಡ ಇರುತ್ತದೆ. ನಾನೇ ನಿರ್ದೇಶನ ಮಾಡುತ್ತೇನೆ. ನಮ್ಮ ಬ್ಯಾನರ್‌ನಲ್ಲೇ ಸಿನಿಮಾ ನಿರ್ಮಾಣವಾಗುತ್ತದೆ. 15 ದಿನಗಳಿಂದ ಸ್ಕ್ರಿಪ್ಟ್ ಕೆಲಸಗಳು ನಡೀತಿದೆ. 'ಫಾದರ್' ಹಾಗೂ 'ಬ್ರ್ಯಾಟ್' ಸಿನಿಮಾಗಳು ಮುಗಿಯುತ್ತಾ ಬಂತು. ಬಳಿಕ 'ಲವ್ ಮಾಕ್ಟೇಲ್-3' ಕೆಲಸ ಆರಂಭವಾಗುತ್ತದೆ.

ಪಾರ್ಟ್‌-3ನಲ್ಲಿ ಕೂಡ ನಿಧಿಮಾ ಇರ್ತಾಳಾ?

'ಲವ್ ಮಾಕ್ಟೇಲ್-2'ನಲ್ಲಿ ನಿಧಿ ಇರ್ತಾಳಾ? ಇಲ್ವಾ ಎನ್ನುವುದು ಸಿನಿಮಾ ತೆರೆಗೆ ಬರುವವರೆಗೂ ಗೊತ್ತಾಗದಂತೆ ನೋಡಿಕೊಂಡಿದ್ದೆವು. ಈ ಬಾರಿ ಕೂಡ ಕಥೆ ಏನು? ಯಾರೆಲ್ಲಾ ಇರ್ತಾರೆ? ಎನ್ನುವುದನ್ನು ನೀವು ತೆರೆಮೇಲೆ ನೋಡಬೇಕು.

'ಫಾದರ್' ಹಾಗೂ 'ಬ್ರ್ಯಾಟ್' ಚಿತ್ರಗಳು ಎಲ್ಲಿಗೆ ಬಂತು?

ಇತ್ತೀಚೆಗೆ ಅಳೆದು ತೂಗಿ ನಾನು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. 'ಫಾದರ್' ಹಾಗೂ 'ಬ್ರ್ಯಾಟ್' ಕಥೆಗಳು ಬಹಳ ಚೆನ್ನಾಗಿದೆ. ತಲಾ ಒಂದೊಂದು ಹಾಡು ಬಿಟ್ಟರೆ ಎರಡೂ ಸಿನಿಮಾಗಳ ಚಿತ್ರೀಕರಣ ಕಂಪ್ಲೀಟ್ ಆಗಿದೆ. 'ಫಾದರ್' ಬಹಳ ವಿಭಿನ್ನವಾದ ಸಿನಿಮಾ. ತಂದೆ-ಮಗನ ಕಥೆ ಆಗಿದ್ದರೂ ಅದನ್ನು ಬೇರೆಯದ್ದೇ ರೀತಿಯಲ್ಲಿ ಹೇಳಲಾಗ್ತಿದೆ. ಎಮೋಷನಲ್, ಥ್ರಿಲ್, ಕಾಮೆಡಿ ಎಲ್ಲಾ ಇರುತ್ತದೆ. 'ಬ್ರ್ಯಾಟ್' ಚಿತ್ರದಲ್ಲಿ ಇವತ್ತಿನ ಯುವಜನತೆಯ ಕಥೆ ಇದೆ. 'ಕೌಸಲ್ಯ ಸುಪ್ರಜ ರಾಮ' ಫ್ಯಾಮಿಲಿ ಆಡಿಯನ್ಸ್‌ನ ಟಾರ್ಗೆಟ್ ಮಾಡಿದ್ದ ಸಿನಿಮಾ. ಆದರೆ 'ಬ್ರ್ಯಾಟ್' ಚಿತ್ರದಲ್ಲಿ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಶಶಾಂಕ್ ಸರ್ ಕಥೆ ಮಾಡಿದ್ದಾರೆ.

More from Filmibeat

English summary
Darling Krishna reveals that the script for 'Love Mocktail 3' is complete and shooting will begin in two months. He also gives updates on his upcoming films 'Father' and 'Brat'.
Read more about: krishna milana nagaraj sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X