ವಿಡಿಯೋ : ಮಗನ ಸಿನಿಮಾ ನೋಡಿ ದೇವರಾಜ್ ಹೀಗೆ ಹೇಳಿದ್ರು
Recommended Video

ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಪುತ್ರ ಪ್ರಣಮ್ ದೇವರಾಜ್ ಅವರ ಮೊದಲ ಚಿತ್ರ 'ಕುಮಾರಿ 21F' ನಾಳೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಇದೀಗ ನಟ ಪ್ರಣಮ್ ಹಾಗೂ ನಟಿ ನಿಧಿ ಕುಶಾಲಪ್ಪ ಮಾತನಾಡಿದ್ದಾರೆ. 'ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಇಬ್ಬರು ಚಿತ್ರದ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ವಿಶೇಷ ಅಂದರೆ, ಫೇಸ್ ಬುಕ್ ಲೈವ್ ನಡುವೆ ನಟ ದೇವರಾಜ್ ಸಹ ಫೋನ್ ಲೈನ್ ಗೆ ಬಂದು ಮಗನ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ, ಸಿನಿಮಾ ನೋಡಿರುವ ಅವರು ಮಗನ ನಟನೆ ಹಾಗೂ ಡ್ಯಾನ್ಸ್ ಅನ್ನು ಇಷ್ಟಪಟ್ಟಿದ್ದಾರೆ. ದೇವರಾಜ್ ಅವರ ಪ್ರಕಾರ ಚಿತ್ರದ ಸೆಕೆಂಡ್ ಹಾಫ್ ತುಂಬನೇ ಗಟ್ಟಿಯಾಗಿದೆ.

ಈಗಾಗಲೇ, ಈ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ಗಳು ಚಿತ್ರವನ್ನು ಹೊಗಳಿದ್ದಾರೆ. ಟಾಲಿವುಡ್ ನಲ್ಲಿ ಹಿಟ್ ಆದ ಈ ಚಿತ್ರ ಕನ್ನಡದಲ್ಲಿಯೂ ಸಕ್ಸಸ್ ಕಾಣಲಿದೆ ಎಂಬ ನಂಬಿಕೆಯಲ್ಲಿ ಚಿತ್ರತಂಡ ಇದೆ.
ಸಿನಿಮಾದಲ್ಲಿ ಸಿದ್ದು ಎಂಬ ಸಿಂಪಲ್ ಹುಡುಗನ ಪಾತ್ರದಲ್ಲಿ ಪ್ರಣಮ್ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಆಗಿ ಸಖತ್ ಬೋಲ್ಡ್ ಆಗಿ ನಿಧಿ ನಟಿಸಿದ್ದಾರೆ. ಯುವ ಮುನಸುಗಳಿಗೆ ಹತ್ತಿರ ಆಗುವ ಕಥೆ ಚಿತ್ರದಲ್ಲಿದೆ. ಅಂದಹಾಗೆ, ನಾಳೆ ಸಿನಿಮಾ ರಾಜ್ಯಾದಂತ್ಯ ರಿಲೀಸ್ ಆಗಲಿದೆ.


Click it and Unblock the Notifications











