For Quick Alerts
  ALLOW NOTIFICATIONS  
  For Daily Alerts

  Exclusive: ರಿಷಬ್ 'ಅಟ್ಯಾಕ್' ಕಾನ್ಸೆಪ್ಟ್ ಏನು? ಸಿಂಗಲ್ ಟೇಕ್ ಸಿನಿಮಾ ಮೇಕಿಂಗ್ ಹೇಗಿತ್ತು? ನಿರ್ದೇಶಕ ಅರವಿಂದ್ ಕೌಶಿಕ್

  |

  'ಕಾಂತಾರ' ಬ್ಲಾಕ್‌ಬಸ್ಟರ್ ಹಿಟ್ ನಂತರ ರಿಷಬ್ ಶೆಟ್ಟಿ ನಟನೆಯ 'ಅಟ್ಯಾಕ್' ಚಿತ್ರಕ್ಕೆ ಜೀವ ಬಂದಿದೆ. ಸ್ವತಃ ರಿಷಬ್ ಶೆಟ್ಟಿ ಕೂಡ ಮರೆತುಬಿಟ್ಟಿದ್ದ ಈ ಪ್ರಯೋಗಾತ್ಮಕ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ಅಣಜಿ ನಾಗರಾಜ್ ಮುಂದಾಗಿದ್ದಾರೆ. 9 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಸಿನಿಮಾ ಕಾನ್ಸೆಪ್ಟ್ ಏನು? ಮೇಕಿಂಗ್ ಹೇಗಿತ್ತು ಎನ್ನುವುದರ ಬಗ್ಗೆ ನಿರ್ದೇಶಕ ಅರವಿಂದ್ ಕೌಶಿಕ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

  ರಿಷಬ್ ಶೆಟ್ಟಿ ಹೀರೊ ಆಗುವ ಕನಸಿನಿಂದ ಚಿತ್ರರಂಗಕ್ಕೆ ಬಂದವರು. ಆರಂಭದ ದಿನಗಳಲ್ಲಿ ನಾಯಕನಾಗಿ ನಟಿಸುವ ಅವಕಾಶಗಳು ಸಿಕ್ಕರೂ ಕಾರಣಾಂತರಗಳಿಂದ ಆ ಸಿನಿಮಾಗಳು ನಿಂತು ಹೋಗುತ್ತಿತ್ತು. ರಿಷಬ್ ಬ್ಯಾಕ್ ಲಕ್ ಅಂದರೆ ಶೂಟಿಂಗ್ ಸಮಯದಲ್ಲೆ ದಾಖಲೆ ಬರೆದಿದ್ದ 'ಅಟ್ಯಾಕ್' ಸಿನಿಮಾ ಕೂಡ ಡಬ್ಬಾ ಸೇರಿತ್ತು. 'ಕಾಂತಾರ' ಸೂಪರ್ ಹಿಟ್ ಆಗುತ್ತಿದ್ದಂತೆ 'ಅಟ್ಯಾಕ್' ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಆದರೆ ಹೀರೊ ಆಗಿ ಅಲ್ಲ. ಈ ಸಿನಿಮಾ ಪ್ರೇಕ್ಷಕರಿಗೆ ಖಂಡಿತ ಅದ್ಭುತ ಅನುಭವನ ನೀಡುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ.

  'ಕಾಂತಾರ' ಎಫೆಕ್ಟ್.. ಶೀಘದಲ್ಲೇ ರಿಷಬ್ ಶೆಟ್ಟಿ ನಟನೆಯ 'ಅಟ್ಯಾಕ್' ಸಿನಿಮಾ ರಿಲೀಸ್: ಅಣಜಿ ನಾಗರಾಜ್'ಕಾಂತಾರ' ಎಫೆಕ್ಟ್.. ಶೀಘದಲ್ಲೇ ರಿಷಬ್ ಶೆಟ್ಟಿ ನಟನೆಯ 'ಅಟ್ಯಾಕ್' ಸಿನಿಮಾ ರಿಲೀಸ್: ಅಣಜಿ ನಾಗರಾಜ್

  ನಿರ್ದೇಶಕ- ನಟ ರಿಷಬ್ ಶೆಟ್ಟಿ ಆರಂಭದ ದಿನಗಳಲ್ಲಿ ಅರವಿಂದ್ ಕೌಶಿಕ್ ತಂಡದಲ್ಲಿ ಗುರ್ತಿಸಿಕೊಂಡಿದ್ದರು. ಅರವಿಂದ್ ಕೌಶಿಕ್ ನಿರ್ದೇಶನದ 'ತುಗ್ಲಕ್' ಚಿತ್ರದಲ್ಲೂ ಕೆಲಸ ಮಾಡಿದ್ದರು. 'ತುಗ್ಲಕ್' ನಂತರ ಇದೇ ತಂಡ ಮಾಡಿದ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ 'ಅಟ್ಯಾಕ್'. ರಿಷಬ್ ಶೆಟ್ಟಿ ಒಳಗೆ ಮೊದಲಿನಿಂದಲೂ ಏನಾದರೂ ಸಾಧಿಸುವ ಕಿಚ್ಚು ಇತ್ತು. ಅದಕ್ಕೆ 'ಕಾಂತಾರ' ಮೂಲಕ ಫಲ ಸಿಕ್ಕಿದೆ ಎಂದು ಅರವಿಂದ್ ಕೌಶಿಕ್ ಹೇಳುತ್ತಾರೆ.

  9 ವರ್ಷ ಹಿಂದೆ ಮಾಡಿದ್ದ ಚಿತ್ರ 'ಅಟ್ಯಾಕ್'

  9 ವರ್ಷ ಹಿಂದೆ ಮಾಡಿದ್ದ ಚಿತ್ರ 'ಅಟ್ಯಾಕ್'

  "2013ರಲ್ಲಿ ಅಣಜಿ ನಾಗರಾಜ್ ನಿರ್ಮಾಣ ಮಾಡಿದ್ದ ಸಿನಿಮಾ 'ಅಟ್ಯಾಕ್'. ಯಾಕೆ ಈ ಸಿನಿಮಾ ಸ್ಪೆಷಲ್ ಅಂದರೆ, ಇಡೀ ಸಿನಿಮಾವನ್ನು ನಾವು ಒಂದು ಮುಕ್ಕಾಲು ಗಂಟೆಯಲ್ಲಿ ಶೂಟ್ ಮಾಡಿದ್ದೆವು. ಒಂದೇ ಟೇಕ್‌ನಲ್ಲಿ ಸಿನಿಮಾ ಮಾಡಿ ಮುಗಿಸಿದ್ದೆವು. ಆಗ ಸಿನಿಮಾ ರಿಲೀಸ್ ಆಗಿರಲಿಲ್ಲ. ಈಗ ನಿರ್ಮಾಪಕರು ರಿಲೀಸ್ ಮಾಡಲು ಹೊರಟಿದ್ದಾರಂತೆ. ನನಗೂ ವಿಷಯ ಗೊತ್ತಾಯಿತು."

  'ಯಾರದು? ಏನು ಮಾಡ್ತಿದ್ದಾರೆ?' ನಟ ಚೇತನ್‌ ಹೇಳಿಕೆಗೆ ರಿಷಬ್ ಶೆಟ್ಟಿ ಟಾಂಗ್:'ಯಾರದು? ಏನು ಮಾಡ್ತಿದ್ದಾರೆ?' ನಟ ಚೇತನ್‌ ಹೇಳಿಕೆಗೆ ರಿಷಬ್ ಶೆಟ್ಟಿ ಟಾಂಗ್:

  ರಿಯಲ್ ಟೈಮ್ ಡ್ರಾಮಾ ಸಿನಿಮಾ

  ರಿಯಲ್ ಟೈಮ್ ಡ್ರಾಮಾ ಸಿನಿಮಾ

  "ಸಿನಿಮಾ ಐಡಿಯಾ ಏನು ಅಂದರೆ, ಈ ಕಥೆನೇ ರಿಯಲ್ ಟೈಮ್ ಡ್ರಾಮ. ಉದಾಹರಣೆಗೆ ಬೆಳಗ್ಗೆ 10 ಗಂಟೆಗೆ ಶುರುವಾಗದರೆ 12 ಗಂಟೆ ಒಳಗೆ ನಡೆಯುವ ಘಟನೆಗಳನ್ನು ಸಿನಿಮಾ ಮಾಡಿರೋದು. ಸತತವಾಗಿ ಪ್ರತಿ ನಿಮಿಷ ಏನಾಗುತ್ತದೆ ಎನ್ನುವುದನ್ನು ತೋರಿಸಿದ್ದೇವೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಒಂದೊಂದು ಸನ್ನಿವೇಷ ಒಂದೊಂದು ಕಡೆ ನಡೆಯುತ್ತದೆ. ಒಂದೊಂದು ಡ್ರಾಮಾ ಒಂದೊಂದು ತರ ಇರುತ್ತದೆ. ಆ ರೀತಿ ಅಲ್ಲದೇ 10ರಿಂದ 12 ಗಂಟೆ ಒಳಗೆ ಒಂದು ಏರಿಯಾದಲ್ಲಿ 7 ಜನ ಹುಡುಗರ ಲೈಫಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದು ಕಾನ್ಸೆಪ್ಟ್.

  49 ದಿನ ರಿಹರ್ಸಲ್ ಮಾಡಿ ಶೂಟಿಂಗ್

  49 ದಿನ ರಿಹರ್ಸಲ್ ಮಾಡಿ ಶೂಟಿಂಗ್

  "ರಿಯಲ್ ಟೈಮ್ ಡ್ರಾಮಾನ ರಿಯಲ್ ಟೈಮ್‌ನಲ್ಲೇ ಅಂದರೆ ಒಂದೇ ಟೇಕ್‌ನಲ್ಲಿ ಶೂಟ್ ಮಾಡುವುದು ಎಂದು ತೀರ್ಮಾನ ಆಯಿತು. 40 ದಿನ ರಿಹರ್ಸಲ್ ಮಾಡಿ 8 ಕ್ಯಾಮರಾಗಳನ್ನು ಒಟ್ಟಿಗೆ ರೋಲ್ ಮಾಡಿ ಶೂಟ್ ಮಾಡಿದ್ವಿ. ಪ್ರತಿಯೊಬ್ಬರ ಡೈಲಾಗ್‌ಗಳು ಎಲ್ಲರಿಗೂ ಗೊತ್ತಿತ್ತು. ಒಟ್ಟೊಟ್ಟಿಗೆ ಎರಡೆರಡು ಕಡೆ ಕಥೆ ನಡೀತಿರುತ್ತೆ. ಒಂದು ಕಡೆ ರಿಷಬ್ ಶೆಟ್ಟಿ ಹಾಗೂ ಅಚ್ಯುತ್‌ ಕಥೆ ನಡೀತಿದ್ದರೆ, ಮತ್ತೊಂದು ಕಡೆ 7 ಜನ ಹುಡುಗರು ಏರಿಯಾದಲ್ಲಿ ಕೂತು ಮಾತನಾಡುತ್ತಿರುತ್ತಾರೆ. ನಾಲ್ಕು ಫೈಟ್ಸ್, ಸಾಂಗ್ ಇಟ್ಟುಕೊಂಡು ಮಾಡಿರುವ ಸಿನಿಮಾ ಅಟ್ಯಾಕ್. ಒಂದು ಗಂಟೆ 40 ನಿಮಿಷದಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮಾಡಿದ್ದೆವು.

  ಶೂಟಿಂಗ್‌ ಸಮಯದಲ್ಲೇ ದಾಖಲೆ ಆಗಿತ್ತು

  ಶೂಟಿಂಗ್‌ ಸಮಯದಲ್ಲೇ ದಾಖಲೆ ಆಗಿತ್ತು

  "ನಮಗೂ ಇದೊಂದು ಚಾಲೆಂಜ್. ಬಹಳ ರಿಹರ್ಸಲ್ ಮಾಡಿ ಸಿನಿಮಾ ಶೂಟ್ ಮಾಡಿದ್ದೆವು. ಸಾಮಾನ್ಯವಾಗಿ ಇಂತಹ ಸಿನಿಮಾ ಮಾಡುವಾಗ ಯಾವುದಾದರೂ ಮನೆಯಲ್ಲಿ ಮಾಡುತ್ತಾರೆ. ಆದರೆ ನಾವು ಒಂದು ಏರಿಯಾದ ಆರೇಳು ಕಿಲೋ ಮೀಟರ್ ಸುತ್ತಳತೆಯ ಜಾಗದಲ್ಲಿ ಮಾಡಬೇಕು ಎನ್ನುವ ಪ್ಲ್ಯಾನ್ ಇತ್ತು. ಅದೇ ರೀತಿ ಮಾಡಿದ್ವಿ. ಅದಕ್ಕಾಗಿ ಬಹಳ ತಯಾರಿಯನ್ನು ನಡೆಸಿಕೊಂಡಿದ್ವಿ. ಪ್ರಸಾದ್ ಅಂತ ನಮ್ಮ ಚೀಫ್ ಸಿನಿಮಾಟೋಗ್ರಫರ್ ಇದ್ದರು. ಮೊದಲೇ ಕ್ಯಾಮರಾಗಳನ್ನು ಎಲ್ಲಿಲ್ಲಿ ಇಡಬೇಕು ಅನ್ನುವುದನ್ನೆಲ್ಲಾ ಪ್ಲ್ಯಾನ್ ಮಾಡಿ ಮಾಡಿದ್ವಿ. ಹಾಗಾಗಿ ಅದೊಂದು ದಾಖಲೆ ಆಗಿತ್ತು. ಸಿನಿಮಾ ಆಗಲೇ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ".

  ರಿಷಬ್ 'ಅಟ್ಯಾಕ್' ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ?

  ರಿಷಬ್ 'ಅಟ್ಯಾಕ್' ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ?

  "ನಮ್ಮದೆಲ್ಲಾ ಆಗ ಒಂದು ತಂಡ. ನಮ್ಮ ತಂಡದಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಇದ್ದರು. ಆಗಷ್ಟೇ 'ತುಗ್ಲಕ್' ಸಿನಿಮಾ ಮಾಡಿದ್ವಿ. ರಿಷಬ್ ಶೆಟ್ಟಿ ಪ್ರತಿದಿನ ಟಚ್ ಅಲ್ಲಿ ಇರುತ್ತಿದ್ದರು. ಇಂತಾದೊಂದು ಪ್ರಯೋಗ ಮಾಡಬೇಕು ಎಂದಾಗ ಜೊತಯಾದರು. ಆಕ್ಟರ್ ರಿಷಬ್ ಶೆಟ್ಟಿಗೆ ಈ ರೀತಿ ಏನೇನೋ ಮಾಡಬೇಕು ಎನ್ನುವ ತುಡಿತ ಇತ್ತು. ಆ ಪಾತ್ರಕ್ಕೆ ರಿಷಬ್ ಶೆಟ್ಟಿ ಸೂಟ್ ಆಗುತ್ತಾರೆ ಎನ್ನಿಸಿತು. ಹಾಗಾಗಿ ಅವರು ಮಾಡಿದರು. ಸಿಕ್ಕಾಪಟ್ಟೆ ಶ್ರಮವಹಿಸಿ ಕೆಲಸ ಮಾಡಿದರು. ಒಂದು ಸನ್ನಿವೇಶದಲ್ಲಿ ಯಾವುದೇ ಡ್ಯೂಪ್ ಇಲ್ಲದೇ 20 ಅಡಿ ಎತ್ತರದಿಂದ ಜಂಪ್ ಮಾಡಿದ್ದರು. ಆನ್ ಶಾಟ್‌ ಜಂಪ್ ಮಾಡಿ ಕಾಲು ಸ್ವಲ್ಪ ಟ್ವಿಸ್ಟ್ ಆದರೂ ತೋರಿಸಿಕೊಳ್ಳದೇ ಹಾಗೆ ನಡೆದುಕೊಂಡು ಬಂದು ಸಿನಿಮಾ ಕಂಪ್ಲೀಟ್ ಮಾಡಿದ್ದ. ಅಂತಾದೊಂದು ಡೆಡಿಕೇಷನ್ ಇತ್ತು."

  ರಿಷಬ್ ಶೆಟ್ಟಿ ಅವ್ರದ್ದು ನೆಗೆಟಿವ್ ರೋಲ್

  ರಿಷಬ್ ಶೆಟ್ಟಿ ಅವ್ರದ್ದು ನೆಗೆಟಿವ್ ರೋಲ್

  ನಿಜ ಹೇಳಬೇಕು ಅಂದರೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರದ್ದು ನೆಗೆಟಿವ್ ರೋಲ್. ಇಡೀ ಕಥೆಯನ್ನು ಒಬ್ಬ ಖಳ ನಾಯಕ ಹೇಗೆ ತೆಗೆದುಕೊಂಡುಹೋಗುತ್ತಾನೆ ಎನ್ನುವುದು ವಿಶೇಷ. ಆ ಪಾತ್ರದಿಂದಲೇ ಕಥೆಗೆ ತಿರುವು ಸಿಗುವುದು. ಅವರನ್ನು ಬಿಟ್ಟರೆ ರವಿಶಂಕರ್ ಗೌಡ, ಪಟ್ರೆ ಅಜಿತ್, ಚೇತನ್ ಚಂದ್ರ, ಸತ್ಯ ಎಲ್ಲರಿಗೂ ಸಮಾನ ಅವಕಾಶ ಇದೆ. ರಿಷಬ್ ಶೆಟ್ಟಿ ಪಾತ್ರ ಒಂದರ್ಥದಲ್ಲಿ ವಿಲನ್ ಎನ್ನಬಹುದು. ನೆಗೆಟಿವ್ ಶೇಡ್ ಇರುವ ಪಾತ್ರ.

  'ಅಟ್ಯಾಕ್' ಒನ್‌ಲೈನ್ ಸ್ಟೋರಿ ಏನು?

  'ಅಟ್ಯಾಕ್' ಒನ್‌ಲೈನ್ ಸ್ಟೋರಿ ಏನು?

  "ಇದೊಂದು ಪ್ರಯೋಗಾತ್ಮಕ ಸಿನಿಮಾ. ರೆಗ್ಯುಲರ್ ಕಥೆಗಳಿಗೂ ಇದಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸ ಇರುತ್ತದೆ. ಪ್ರತಿ ನಿಮಿಷ ಒಂದು ಏರಿಯಾದಲ್ಲಿ ನಡೆಯುವ ಕಥೆ. ಒಂದು ಏರಿಯಾದಲ್ಲಿ 7 ಜನ ಹುಡುಗರು ಇದ್ದಾಗ ಒಂದು ಟೆರರಿಸ್ಟ್ ಅಟ್ಯಾಕ್ ನಡೆಯುತ್ತದೆ. ಆ ಟೆರರಿಸ್ಟ್‌ಗಳನ್ನು ಇವರು ಹೇಗೆ ಮಟ್ಟ ಹಾಕುತ್ತಾರೆ ಅನ್ನೋದು 'ಅಟ್ಯಾಕ್' ಸಿನಿಮಾ ಕಥೆ" ಎಂದು ನಿರ್ದೇಶಕ ಅರವಿಂದ್ ಕೌಶಿಕ್ ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Director Aravind Kaushik Shares Rishab shetty's Singel Take Attack Movie Shooting Experience. Kantara success Effect Rishab Shetty Starrer Attack Film To Hit Screens. Know More.
  Friday, October 21, 2022, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X