ತಂದೆ-ಮಗಳ ಜುಗಲಬಂದಿ ; ಲ್ಯಾಂಡ್ ಲಾರ್ಡ್ ಅಬ್ಬರಕ್ಕೆ ದಿನಗಣನೆ-ಸಲಗ ವಿಜಯ್ ಕುಮಾರ್ ಪುತ್ರಿ ರಿತನ್ಯ ಜೊತೆ ಮಾತು-ಮಂಥನ

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ ಪ್ರಯತ್ನ ಮಾಡುತ್ತಾರೆ.

ಕನ್ನಡ ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹಲವಾರು ಜನ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಬಂದಿದ್ಧಾರೆ. ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಗೆದ್ದಿದ್ದಾರೆ. ಈ ಸಾಲಿನಲ್ಲಿ ದುನಿಯಾ ವಿಜಯ್ ಅವರ ಮಗಳು ರಿತನ್ಯ ಯಾವ ಸಾಲಿಗೆ ಸೇರುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ರಿತನ್ಯ ತಮ್ಮ ತಂದೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ.

exclusive-duniya-vijay-s-daughter-ritanya-on-sharing-screen-with-her-father-in-landlord

ಇದೇ 23ಕ್ಕೆ ಬಿಡುಗಡೆಯಾಗುತ್ತಿರುವ ತಮ್ಮ ಚೊಚ್ಚಲ ಚಿತ್ರ ''ಲ್ಯಾಂಡ್‌ಲಾರ್ಡ್‌''ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ತಮ್ಮ ಖುಷಿಯನ್ನು ನಿಮ್ಮ ಫಿಲ್ಮಿಬೀಟ್ ಕನ್ನಡ ಮೂಲಕ ಹಂಚಿಕೊಂಡಿದ್ದಾರೆ. ಹಾಗಿದ್ದರೆ ರಿತನ್ಯ ಹೇಳಿದ್ದೇನು..? ಮೊದಲ ಚಿತ್ರದಲ್ಲೇ ತಂದೆಯ ಜೊತೆ ಆಕ್ಟ್ ಮಾಡಿದ ಅನುಭವ ಹೇಗಿತ್ತು..? ಎಂದು ತಿಳಿಯಲು ಮುಂದೆ ಓದಿ.


ಮೊದಲ ಚಿತ್ರ ಬಿಡುಗಡೆಯಾಗುತ್ತಿದೆ. ಎಷ್ಟು ಆತುರ-ಕಾತುರ ಇದೆ..?

ತುಂಬಾನೇ ಖುಷಿಯಾಗ್ತಿದೆ. ಪ್ರೇಕ್ಷಕರ ಅಭಿಪ್ರಾಯ ಹೇಗಿರುತ್ತೆ ಎಂದು ನೋಡಲು ತುಂಬಾನೇ ಕಾತುರದಿಂದ ನಾನು ಕಾಯ್ತಿದ್ದೇನೆ. ಮೊದಲ ಚಿತ್ರ ಮಾಡಿರುವ ಸಂಭ್ರಮ ಒಂದು ಕಡೆ ಆದರೆ, ಮೊದಲ ಚಿತ್ರದ ಪ್ರಚಾರವನ್ನು ಮಾಡುವುದು ಇನ್ನೊಂದು ರೀತಿಯ ಸಂಭ್ರಮ. ಯಾಕೆಂದರೆ ಚಿತ್ರೀಕರಣ ಮಾಡುವುದು ಒಂದು ಪ್ರಕ್ರಿಯೆ ಆದರೆ, ಪ್ರಚಾರದ್ದು ಮತ್ತೊಂದು ಪ್ರಕ್ರಿಯೆ. ಹೀಗಾಗಿ ಪ್ರಚಾರ ಮಾಡುತ್ತ ಸದ್ಯ ನಾನು ಬಿಡುಗಡೆಯ ದಿನವನ್ನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ ರಿತನ್ಯ.

exclusive-duniya-vijay-s-daughter-ritanya-on-sharing-screen-with-her-father-in-landlord


ತಂದೆಯ ಜೊತೆ ಆಕ್ಟ್ ಮಾಡುವಾಗ ಭಯ ಆಗ್ತಿತ್ತಾ ?

ಭಯ ಇದ್ದೇ ಇತ್ತು. ಯಾಕೆಂದರೆ ಅವರ ಜೊತೆ ಅಭಿನಯಿಸುವಾಗ ಸೈಕಲ್ ಹೊಡೆದರೆ ಅವರು ಸಹಿಸಲ್ಲ. ಹೀಗಾಗಿ ಅವರನ್ನು ಮೆಚ್ಚಿಸಬೇಕು, ತಪ್ಪಾಗಬಾರದು ಎನ್ನುವ ಆಲೋಚನೆ ತಲೆಯಲ್ಲಿತ್ತು. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಅವರಿದ್ದಾರೆ ಅಂದರೆ ನನಗೆ ಒಂಥರಾ ಧೈರ್ಯ. ಅಪ್ಪಾ ಇದಾರಲ್ಲ ಎನ್ನುವ ಆತ್ಮ ವಿಶ್ವಾಸ. ಈ ಕಾರಣಕ್ಕೆ ಭಯ ಹೆಚ್ಚಿರಲಿಲ್ಲ. ಆದರೆ ಅವರನ್ನು ಮೆಚ್ಚಿಸಬೇಕು ಅನ್ನೋ ಉದ್ದೇಶ ಮಾತ್ರ ಇತ್ತು ಆದರೆ ನನ್ನ ಅಭಿನಯದ ಬಗ್ಗೆ ಅವರಿನ್ನೂ ಏನು ಹೇಳಿಲ್ಲ. ಜನ ಹೇಳಲಿ ನಾನೇನು ಹೇಳೋದು ಎಂದು ಹೇಳುತ್ತಾರೆ ಎಂದಿದ್ದಾರೆ ರಿತನ್ಯ.


ಚಿತ್ರರಂಗಕ್ಕೆ ಬರುವ ಮುನ್ನ ತಯಾರಿ ಹೇಗಿತ್ತು..?

ನಾನು ಶಾಲೆ ಮತ್ತು ಕಾಲೇಜ್‌ನಲ್ಲಿದ್ದಾಗಲೇ ನನಗೆ ಅವಕಾಶಗಳು ಬಂದಿದ್ದವು. ಆದರೆ ಅಪ್ಪ ಬೇಡ ಅಂತ ಹೇಳಿದ್ದರು. ಯಾಕೆಂದರೆ ಅದಕ್ಕೆ ಅದ್ರದ್ದೇ ತಯಾರಿ ಇರುತ್ತೆ. ಚಿತ್ರರಂಗಕ್ಕೆ ನಾನು ಏಕಾಏಕಿ ಬಂದಿದ್ದಲ್ಲ. ದುನಿಯಾ ವಿಜಯ್ ಮಗಳಾಗಿ ಚಿತ್ರರಂಗಕ್ಕೆ ಬಂದಿಲ್ಲ. ಹಲವು ವರ್ಷ ತಯಾರಿ ನಡೆಸಿ ಇಲ್ಲಿ ಬಂದೆ. ಮುಂಬೈನಲ್ಲಿ ಅನುಪಮ್ ಖೇರ್ ಅವರ ಇನ್ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದೆ. ಆ ನಂತರ ಬೆಂಗಳೂರಿನಲ್ಲಿ ರಂಗತಂಡದ ಜೊತೆ ನಾನು ಸುಮಾರು ನಾಟಕಗಳನ್ನು ಮಾಡಿದೆ. ನನ್ನ ಪ್ರಕಾರ ಅಭಿನಯ ಅನ್ನುವುದು ಒಂದು ಕಲಿಕೆ. ಇಲ್ಲಿ ದಿನ ನಿತ್ಯ ಏನಾದರೂ ಕಲಿಯಲು ಸಿಗುತ್ತೆ. ಹೀಗೆ ಒಟ್ನಲ್ಲಿ ತಯಾರಿ ಮಾಡಿಕೊಂಡು ಬಂದಿದ್ದೇನೆ, ಪ್ರೇಕ್ಷಕರ ಅಭಿಪ್ರಾಯ ಹೇಗಿರುತ್ತೆ ಎನ್ನುವ ಕುತೂಹಲ ಇದೆ ಎಂದು ರಿತನ್ಯ ''ಫಿಲ್ಮಿಬೀಟ್ ಕನ್ನಡ''ಗೆ ಪ್ರತಿಕ್ರಿಯೆ ನೀಡಿದ್ದಾರೆ.

Take a Poll


ಲ್ಯಾಂಡ್ ಲಾರ್ಡ್‌ನಲ್ಲಿ ನೀವು ಮರೆಯದ ಕ್ಷಣ

ಲ್ಯಾಂಡ್‌ ಲಾರ್ಡ್‌ನ ಮೊದಲ ದಿನದ ಚಿತ್ರೀಕರಣ ನನ್ನ ಪಾಲಿಗೆ ತುಂಬಾ ವಿಶೇಷ. ಯಾಕೆಂದರೆ ಅವತ್ತು ನನ್ನ ತಂದೆಯ ಜೊತೆ ಮೊದಲ ದಿನವೇ ನನ್ನ ಭಾಗದ ಚಿತ್ರೀಕರಣ ಇತ್ತು. ತೆರೆಯ ಹಿಂದೆ ಅಪ್ಪ ಮಗಳಾದರು ಕೂಡ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುವುದು ಅದು ಮೊದಲನೇ ಸಿನಿಮಾದಲ್ಲಿ. ಹೀಗಾಗಿ ತುಂಬಾ ಖುಷಿಯಾಯ್ತು ಅವತ್ತು. ಇನ್ನು ಅವತ ಇಬ್ಬರು ಕ್ಯಾರಾವಾನ್‌ನಲ್ಲಿ ಅಕ್ಕ ಪಕ್ಕ ಕುಂತು ಮೇಕಪ್ ಮಾಡಿಕೊಂಡಿದ್ದೆವು. ಇದೆಲ್ಲ ಮರೆಯಲು ಸಾಧ್ಯ ಇಲ್ಲ. ಇನ್ನು ಮೊದಲ ಸಿನಿಮಾದಲ್ಲಿ ತುಂಬಾ ಜನ ಕಲಾವಿದರ ಜೊತೆ ಅಭಿನಯಿಸುವ ಅವಕಾಶ ನನಗೆ ಸಿಕ್ತು. ಇದಕ್ಕಿಂತ ಸೌಭಾಗ್ಯ ಬೇರೆ ಏನಿದೆ ಎಂದು ಹೇಳಿದ್ದಾರೆ ರಿತನ್ಯ


ಮುಂದಿನ ಕನಸು ಯೋಜನೆ..?

ಲ್ಯಾಂಡ್‌ ಲಾರ್ಡ್‌ ಚಿತ್ರದಲ್ಲಿ ನನ್ನ ಪಾತ್ರಕ್ಕೆ ತದ್ವಿರುದ್ದವಾದ ಪಾತ್ರಗಳನ್ನು ಮಾಡಬೇಕೆನ್ನುವ ಆಶಯ ಇದೆ. ನಿರ್ದೇಶಕರು ಹೇಳಿದಂತೆ ಅಭಿನಯಿಸಬೇಕು ಅವರ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕು ಎನ್ನುವ ಆಸೆ ಇದೆ. ನಟಿಯಾಗಿ ಚಿತ್ರರಂಗದಲ್ಲಿ ಗುರತಿಸಿಕೊಳ್ಳಬೇಕು, ನೆಲೆಯೂರಬೇಕು ಎನ್ನುವ ಕನಸು ಇದೆ. ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗುರಿ ಇದೆ ಎಂದು ''ಫಿಲ್ಮಿಬೀಟ್ ಕನ್ನಡ''ಗೆ ರಿತನ್ಯ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
The ‘Duniya’ legacy continues! Rithnya Vijay shares her excitement and the challenges of sharing the screen with father Duniya Vijay in her debut film ‘Landlord.’
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X