'ಮುದ್ದು ಮನಸೇ' ನಿರ್ದೇಶಕ ಅನಂತ್ ಶೈನ್ ಜೊತೆ ಫಿಲ್ಮಿಬೀಟ್
'ಮುದ್ದು ಮನಸೇ' ಚಿತ್ರ ತಂಡ ಫಿಲ್ಮೀ ಬೀಟ್ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಚಿತ್ರದ ನಿರ್ದೇಶಕ ಅನಂತ್ ಶೈನ್ ಅವರ ಕಂಪ್ಲೀಟ್ ಸಂದರ್ಶನ ನಿಮಗಾಗಿ ಫಿಲ್ಮಿಬೀಟ್ ಹೊತ್ತು ತಂದಿದೆ.
''ಮುದ್ದು ಮನಸೇ" ಶುಕ್ರವಾರ (ಆಗಸ್ಟ್ 28) ವರ ಮಹಾಲಕ್ಷ್ಮಿ ಹಬ್ಬದಂದು ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಸಂಪೂರ್ಣ ಸ್ವಚ್ಛ ಕನ್ನಡ ಮನಸ್ಸುಗಳೆಲ್ಲಾ ಸೇರಿ ತಯಾರಿಸಿರುವ ಈ ಚಿತ್ರಕ್ಕೆ 'ವಿದಾಯ' ಎಂಬ ಕಿರುಚಿತ್ರ ನಿರ್ದೇಶಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ನಿರ್ದೇಶಕ ಅನಂತ್ ಶೈನ್ ಅವರು ಚೊಚ್ಚಲವಾಗಿ ನಿರ್ದೇಶನ ಮಾಡಿರುವ ಮುದ್ದು ಮುದ್ದು ಮನಸುಗಳ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.['ಮುದ್ದು ಮನಸೇ' ಅರು ಗೌಡ ಮನದಾಳದ ಮಾತು]

ಚಿತ್ರದ ನಾಯಕನ ಪಾತ್ರಕ್ಕೆ ಆಡಿಶನ್ ಮಾಡಿದಾಗ ಸಿಕ್ಕಂತ ನಟ ಅರುಣ್ ಗೌಡ. ಈ ಚಿತ್ರದಲ್ಲಿ ಅರುಣ್ ಗೌಡರಿಗೆ ಎರಡು ಶೇಡ್ ಗಳಿದ್ದು ಒಂದು ಹಳ್ಳಿಯ ಸೊಗಡಿನ ಪಾತ್ರ ಮತ್ತೊಂದು ಸಿಟಿ ಹುಡುಗನ ಪಾತ್ರ . ಹಳ್ಳಿಯ ಹುಡುಗನಿಗೆ ಜೋಡಿಯಾಗಿ ನಿತ್ಯಾ ರಾಮ್ ಮತ್ತು ಸಿಟಿ ಹುಡುಗನಿಗೆ ಜೋಡಿಯಾಗಿ ಐಶ್ವರ್ಯ ನಾಗ್ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು ಮತ್ತು ಸಿಗಂದೂರು ಸೇರಿದಂತೆ ರಾಜ್ಯದ ನಾನಾ ಕಡೆ ಚಿತ್ರೀಕರಿಸಿರುವ ಈ ಚಿತ್ರಕ್ಕೆ ಮೂರು ಜನ ನಿರ್ಮಾಪಕರಿದ್ದಾರೆ. ಅದರಲ್ಲಿ ಪ್ರಮುಖರೆಂದರೆ ಹೋಟೆಲ್ ಉದ್ಯಮಿ ಕುಂದಾಪುರ ಮೂಲದ ಜೀವನ್ ಶೆಟ್ಟಿ.[ಸಂದರ್ಶನ: ಮುದ್ದು ಮನಸೇ ಸ್ವರ ಸಂಯೋಜಕ ವಿನೀತ್ ]
ಈಗಾಗಲೇ ಚಿತ್ರವನ್ನು ನೋಡಿರುವ ನಿರ್ಮಾಪಕರು ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದೊಂದಿಗೆ ಫುಲ್ ಖುಷ್ ಆಗಿದ್ದು ಈ ಚಿತ್ರದ ನಿರ್ದೇಶಕ ಅನಂತ್ ರವರಿಗೆ ಮತ್ತೊಂದು ಕಥೆ ಸಿದ್ದಪಡಿಸಲು ಸೂಚಿಸಿದ್ದಾರೆ.
ನಿರ್ದೇಶಕ ಅನಂತ್ ಶೈನ್ ಅವರ ನೋಟದಲ್ಲಿ 'ಮುದ್ದು ಮನಸೇ' ಅಂದರೆ ಏನು ನೋಡಲು ಈ ವಿಡಿಯೋ ನೋಡಿ..


Click it and Unblock the Notifications












