twitter
    For Quick Alerts
    ALLOW NOTIFICATIONS  
    For Daily Alerts

    'ಮನರಂಜನೆಯೊಂದೇ ನನ್ನ ಧ್ಯೇಯ': ದಶಕದ ಸಂಭ್ರಮದಲ್ಲಿ ರಣ್ವೀರ್ ಸಿಂಗ್

    By ಫಿಲ್ಮಿಬೀಟ್ ಡೆಸ್ಕ್
    |

    'ಮನರಂಜಿಸುವ ನಟ ಎಂದು ಜನರು ನನ್ನನ್ನು ನೆನಪಿಟ್ಟುಕೊಳ್ಳಬೇಕು' ಎಂದು ಬಾಲಿವುಡ್ ನಟ ರಣ್ವೀರ್ ಸಿಂಗ್ ಬಹಳ ಹೆಮ್ಮಯಿಂದ ಹೇಳಿಕೊಂಡಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಯುವ ಚಿತ್ರಪ್ರೇಮಿಗಳ ಪಾಲಿಗೆ ರಣವೀರ್ ಸಿಂಗ್‌ ಸೂಪರ್ ಸ್ಟಾರ್ ಆಗಿದ್ದಾರೆ. ಸೆಲ್ಫ್ ಮೇಡ್ ಆಕ್ಟರ್ ಎಂದು ಗುರುತಿಸಿಕೊಂಡಿರುವ ರಣ್ವೀರ್ ಬಿಗ್ ಇಂಡಸ್ಟ್ರಿಯಲ್ಲಿ ಒಂದು ದಶಕವನ್ನು ಪೂರೈಸಿದ್ದಾರೆ.

    ರಣ್ವೀರ್ ನಟನೆಯ ಮೊದಲ ಸಿನಿಮಾ 'ಬ್ಯಾಂಡ್‌ ಬಾಜಾ ಬಾರಾತ್' ಡಿಸೆಂಬರ್‌ 10ಕ್ಕೆ 10 ವರ್ಷ ಪೂರೈಸಿದೆ. ದಶಕದಲ್ಲಿ ರಣ್ವೀರ್ ಸಿಂಗ್ ಪಯಣವನ್ನು ನೋಡಿದರೆ, ಅವರ ಪ್ರತಿಭೆ ಮತ್ತು ವೈವಿಧ್ಯತೆ ಭಾರತೀಯ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಹೇಳುತ್ತಿದೆ. ಅತ್ಯಂತ ಪರಿಣಿತ ಪರ್ಫಾರ್ಮರ್ ಆಗಿರುವ ರಣವೀರ್, ವಿವಿಧ ಜಾನರ್ ಮತ್ತು ಪಾತ್ರಗಳಲ್ಲಿ ತಮ್ಮ ನಟನೆಯನ ಪರಿಣಿತಿಯನ್ನು ಸಾಬೀತುಪಡಿಸಿದ್ದಾರೆ.

    ಪತಿ ರಣ್ವೀರ್ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದಾರೆ ದೀಪಿಕಾ ಪಡುಕೋಣೆಪತಿ ರಣ್ವೀರ್ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದಾರೆ ದೀಪಿಕಾ ಪಡುಕೋಣೆ

    ಬ್ಯಾಂಡ್ ಬಾಜಾ ಬಾರಾತ್‌ನಲ್ಲಿನ ಇಷ್ಟವಾಗುವ 'ಬಿಟ್ಟು ಶರ್ಮ' ಪಾತ್ರವಾಗಿರಲಿ, ಲೂಟೆರಾದಲ್ಲಿ ಮೃದು ಹೃದಯದ ಚಾಣಾಕ್ಷ ಕಳ್ಳನ ಪಾತ್ರ, ರಾಮ್‌ಲೀಲಾದಲ್ಲಿ ರೋಮಿಯೋ ಪಾತ್ರ, ಬಾಜಿರಾವ್ ಮಸ್ತಾನಿಯಲ್ಲಿ ತೀಕ್ಷ್ಣ ನೋಟದ ಪೇಶ್ವಾ ಬಾಜಿರಾವ್, ದಿಲ್ ಧಡಕನೆ ದೋ ಸಿನಿಮಾದಲ್ಲಿನ ಸಮಾಧಾನ ಚಿತ್ತದ ಮತ್ತು ಅತ್ಯಂತ ಸಂಕೀರ್ಣ ಮನಸ್ಥಿತಿಯ ಕಬೀರ್ ಮೆಹ್ತಾ, ಪದ್ಮಾವತ್‌ನಲ್ಲಿ ಅತ್ಯಂತ ಚಾಣಾಕ್ಷ ಅಲ್ಲಾವುದ್ದೀನ ಖಿಲ್ಜಿ, ಸಿಂಬಾದಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿ ಮತ್ತು ಗಲ್ಲಿ ಬಾಯ್‌ನಲ್ಲಿ ಬೀದಿ ಬದಿಯ ಗಾಯಕನಾಗಿ ಮುರಾದ್ ಪಾತ್ರದ ಮೂಲಕ ತನ್ನ ಕಾಲದ ಇತರ ಎಲ್ಲ ನಟರಿಗಿಂತ ವೈವಿಧ್ಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

    10 ವರ್ಷದ ಈ ಪಯಣದಲ್ಲಿ ತನ್ನ ನಿರೀಕ್ಷೆಗಳು ಮತ್ತು ಕನಸುಗಳು, ಚೊಚ್ಚಲ ಚಿತ್ರಕ್ಕೂ ಮೊದಲು ಎದುರಿಸಿದ ಸಂಕಷ್ಟಗಳ ಬಗ್ಗೆ ಮತ್ತು ಅವರು ದಾಖಲಿಸಲು ಬಯಸಿದ ಇತಿಹಾಸದ ಕುರಿತು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂದೆ ಓದಿ....

    ಹೆಂಡ್ತಿ ದೀಪಿಕಾ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡ್ರಾ ರಣ್ವೀರ್ ಸಿಂಗ್.?ಹೆಂಡ್ತಿ ದೀಪಿಕಾ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡ್ರಾ ರಣ್ವೀರ್ ಸಿಂಗ್.?

    ಹತ್ತು ವರ್ಷದ ಜರ್ನಿ ಹೇಗಿದೆ?

    ಹತ್ತು ವರ್ಷದ ಜರ್ನಿ ಹೇಗಿದೆ?

    ಪ್ರಶ್ನೆ: ಈ 10 ವರ್ಷಗಳಲ್ಲಿ ಹಿಂದೆ ತಿರುಗಿ ನೋಡಿದರೆ, ಯಾವ ಕ್ಷಣಗಳು ಅತಿದೊಡ್ಡ ವೃತ್ತಿ ಮೈಲಿಗಲ್ಲು ಎಂಬುದಾಗಿ ಕಾಣಿಸುತ್ತದೆ ಮತ್ತು ಯಾಕೆ?

    ''ವೃತ್ತಿಯಲ್ಲಿ ಎಲ್ಲಕ್ಕಿಂತ ಅತಿದೊಡ್ಡ ಮೈಲಿಗಲ್ಲು ಎಂದರೆ, ನನ್ನ ಮೊದಲ ಸಿನಿಮಾಗೆ ನಾನು ಆಯ್ಕೆಯಾಗಿದ್ದು. ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾಗದು. ಈಗ ನಾನು ಅದರ ಬಗ್ಗೆ ಯೋಚಿಸಿದರೂ ನನಗೆ ಅಚ್ಚರಿಯಾಗುತ್ತದೆ. ನನ್ನ ರೀತಿಯ ಹಿನ್ನೆಲೆ ಇರುವ ಯಾರಿಗೂ ಕನಸಿನಲ್ಲೂ ಈ ರೀತಿಯ ಅವಕಾಶ ಸಿಗುವುದಿಲ್ಲ. ಅದು ನಿಜಕ್ಕೂ ಕನಸಿನ ಮಾತೇ ಆಗಿತ್ತು. ಒಮ್ಮೆ ಅದೃಷ್ಟ ತಿರುಗಿದ ನಂತರ, ಕಲಿಯುವುದು ಮತ್ತು ಬೆಳೆಯುವುದರ ಪಯಣ ಸಾಗಿತು. ಕ್ರಿಯಾಶೀಲ ವ್ಯಕ್ತಿ, ಪರ್ಫಾರ್ಮರ್ ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ನಾನು ರೂಪುಗೊಂಡೆ''

    ಪ್ರತಿ ಅವಕಾಶಕ್ಕೂ ಆಭಾರಿಯಾಗಿದ್ದೇನೆ

    ಪ್ರತಿ ಅವಕಾಶಕ್ಕೂ ಆಭಾರಿಯಾಗಿದ್ದೇನೆ

    ''ವರ್ಷ ಕಳೆದಂತೆ ಮತ್ತು ಪ್ರತಿ ಸಿನಿಮಾದಲ್ಲಿ ನಟಿಸಿದಂತೆಯೇ ನಾನು ಇನ್ನಷ್ಟು ಹೊಸ ಹೊಸ ಸಂಗತಿಗಳನ್ನು ಕಲಿಯುತ್ತಾ ಹೋದೆ. ನಾನು ನನ್ನನ್ನು ಸುಧಾರಿಸಿಕೊಳ್ಳುತ್ತಾ ಮತ್ತು ನನ್ನ ಕೌಶಲ್ಯಗಳನ್ನು ಸುಧಾರಿಸಿಕೊಳ್ಳುತ್ತಲೇ ಸಾಗಿದೆ. ಪ್ರತಿ ಸಿನಿಮಾ ಮತ್ತು ಪ್ರತಿ ಪಾತ್ರದ ಮೂಲಕ ನಾನು ನನ್ನನ್ನು ಇನ್ನಷ್ಟು ಅನಾವರಣಗೊಳಿಸಿಕೊಳ್ಳುತ್ತಲೇ ಸಾಗಿದೆ. ಕೆಲವು ಬಾರಿ ನಾವು ಬೇರೆಯವರಾಗುತ್ತಾ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಅನುಭವ ಮತ್ತು ಪ್ರತಿ ಸಿನಿಮಾ ಕೂಡ ಸ್ವಲ್ಪ ಹೆಚ್ಚು ತೆರೆದುಕೊಳ್ಳಲು ಅವಕಾಶ ಮಾಡಿತು. ಈ ಮೂಲಕ ನಾನು ಪ್ರತಿ ಅವಕಾಶಕ್ಕೂ ಆಭಾರಿಯಾಗಿದ್ದೇನೆ''

    ಚಿತ್ರರಂಗದಲ್ಲಿ ನೀವು ಎದುರಿಸಿದ ಸಮಯ?

    ಚಿತ್ರರಂಗದಲ್ಲಿ ನೀವು ಎದುರಿಸಿದ ಸಮಯ?

    ಪ್ರಶ್ನೆ: 'ಬ್ಯಾಂಡ್‌ ಬಾಜಾ ಬಾರಾತ್'‌ ಆಯ್ಕೆಯಾಗುವ ಮೊದಲು ನೀವು ಹಲವು ಬಾರಿ ರಿಜೆಕ್ಟ್ ಆಗಿದ್ರಿ. ನೀವು ಅನಿಶ್ಚಿತತೆಯನ್ನು ಎದುರಿಸಿದ ಸಮಯದ ಬಗ್ಗೆ ಹೇಳಿ?

    ''ನಾನು ಸಿನಿಮಾದಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದ ದಿನಗಳು ಸುಲಭದ್ದೇನೂ ಆಗಿರಲಿಲ್ಲ. ಆ ಸಮಯದಲ್ಲಿ ಆರ್ಥಿಕ ಹಿಂಜರಿಕೆ ಇತ್ತು. ಸಿನಿಮಾ ವ್ಯಾಪಾರ ಅಷ್ಟೇನೂ ಚೆನ್ನಾಗಿ ನಡೆಯುತ್ತಿರಲಿಲ್ಲ. ಸಿನಿಮಾಗಳೇ ಕಡಿಮೆ ನಿರ್ಮಾಣವಾಗುತ್ತಿದ್ದವು. ಹೀಗಾಗಿ, ಈಗಿನ ನಟರಿಗಿಂತ ಆಗ ನಟರಿಗೆ ಅವಕಾಶಗಳು ಕಡಿಮೆ ಇದ್ದವು. ಈ ವೆಬ್‌ ಪ್ಲಾಟ್‌ಫಾರಂಗಳು, ಒಟಿಟಿ ಪ್ಲಾಟ್‌ಫಾರಂಗಳು ಇತ್ಯಾದಿ ಇರಲಿಲ್ಲ. ಹೀಗಾಗಿ, ಒಳ್ಳೆಯ ಅವಕಾಶಗಳು ಸಿಗುವುದೇ ಕಷ್ಟವಾಗುತ್ತಿತ್ತು. 3-3.5 ವರ್ಷಗಳವರೆಗೆ ಸುಮ್ಮನೆ ಹುಡುಕುತ್ತಿದ್ದೆ, ಹಲವು ಅವಕಾಶಗಳನ್ನು ಪ್ರಯತ್ನಿಸುತ್ತಿದ್ದೆ, ಒಂದು ಬ್ರೇಕ್‌ಗೆ ಕಾಯುತ್ತಿದ್ದೆ, ನನ್ನ ಪೋರ್ಟ್‌ಫೋಲಿಯೋ ಹಿಡಿದುಕೊಂಡು ಹಲವು ಕಚೇರಿಗಳಿಗೆ ಅಲೆಯುತ್ತಿದ್ದೆ ಮತ್ತು ಎಂದಾದರೂ ಸಿನಿಮಾ ನಿರ್ಮಾಣವಾಗುತ್ತದೆಯೇ ಎಂದು ತಿಳಿಯದೇ ಪ್ರಯತ್ನ ಮಾಡುತ್ತಿತ್ತು. ನನ್ನ ಪರಿಸ್ಥಿತಿಯಂಥವರಿಗೆ ಹಿಂದಿನ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಅವಕಾಶ ಸಿಗುತ್ತದೆ ಎಂದು ಯೋಚಿಸುವುದೇ ಕಷ್ಟಕರವಾಗಿತ್ತು. ಒಂದು ಅವಕಾಶ ಸಿಗುವುದೇ ದೊಡ್ಡ ಸಂಗತಿಯಾಗಿತ್ತು.''

    ಪೋಷಕ ಪಾತ್ರ ಸಿಕ್ಕಿತ್ತು

    ಪೋಷಕ ಪಾತ್ರ ಸಿಕ್ಕಿತ್ತು

    ''ಆದರೆ ನನಗೆ ಆ ಅವಕಾಶ ಸಿಕ್ಕಿತು. ನನ್ನ ಪಾಲಕರ ಪ್ರೀತಿ, ತ್ಯಾಗ ಮತ್ತು ಬೆಂಬಲದಿಂದಾಗಿ ನಾನು ಈ ನಿರಂತರ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ನನಗೆ ಹಸಿವಿತ್ತು. ಕೆಲವು ಬಾರಿ ಮೂರ್ಖತನವನ್ನೂ ಹೊಂದಿದ್ದೆ. ಆದರೆ, ಬದ್ಧತೆ ಇತ್ತು. ನಾನು ಪ್ರಯತ್ನ ಶುರು ಮಾಡಿದಾಗ 21 ವರ್ಷವಾಗಿತ್ತು. 24ನೇ ವಯಸ್ಸಿನಲ್ಲಿ ನನಗೆ ಬ್ರೇಕ್ ಸಿಕ್ಕಿತು. ಆ ಕಥೆಗಳು ಎಂದಿಗೂ ನೆನಪಿಸಿಕೊಳ್ಳುವಂಥದ್ದಾಗಿದೆ. ಪಟಿಯಾಲಾ ಹೌಸ್ ಸಿನಿಮಾದಲ್ಲಿ ನನ್ನನ್ನು ಪೋಷಕ ಪಾತ್ರಕ್ಕೆ ಬಹುತೇಕ ನಿಗದಿಯಾಗಿತ್ತು. ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿದ್ದ/ನಿರ್ವಹಿಸುತ್ತಿದ್ದ ಸಣ್ಣ ಬಜೆಟ್ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಅನುರಾಗ್, ನಿಖಿಲ್ ಹಾಗೂ ನನಗೆ ಈಗಿನ ಸನ್ನಿವೇಶಗಳು ನಮಗೆ ಅಚ್ಚರಿಯಾಗುವಂತಿವೆ''

    ಈ ಯಶಸ್ಸು ನಿರೀಕ್ಷಿಸಿದ್ರಾ?

    ಈ ಯಶಸ್ಸು ನಿರೀಕ್ಷಿಸಿದ್ರಾ?

    ಪ್ರಶ್ನೆ: ಇಂದು, ನೀವು ಎಲ್ಲ ನಿರ್ದೇಶಕರಿಗೆ ಮೆಚ್ಚಿನವರಾಗಿದ್ದೀರಿ. ಮೊದಲ ಸಿನಿಮಾ ಗೆದ್ದ ಬಳಿಕ ಈ ಮಟ್ಟದ ಯಶಸ್ಸನ್ನು ಸಾಧಿಸುತ್ತೀರಿ ಎಂದು ನೀವು ಭಾವಿಸಿದ್ರಿ?

    ''ಖಂಡಿತ ಇಲ್ಲ. ನನ್ನ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ಶುಕ್ರವಾರದವರೆಗೂ, ನನ್ನ ಎದುರು ತೆರೆದುಕೊಂಡ ಸನ್ನಿವೇಶಗಳು, ನನ್ನ ವೃತ್ತಿಯ ಮೈಲಿಗಲ್ಲುಗಳು ಮತ್ತು ನನ್ನ ಪಯಣವು ನನ್ನ ಕನಸಿಗೂ ಮೀರಿದ್ದಾಗಿತ್ತು. ನನ್ನ ಸುತ್ತ ನಡೆಯುತ್ತಿರುವ ಸಂಗತಿಗಳೆಲ್ಲವೂ ನನಗೆ ಕನಸಿನಂತೆಯೇ ಇವೆ. ಇಷ್ಟು ದೊಡ್ಡದಾಗಿ ಬೆಳೆಯುತ್ತೇನೆ ಎಂಬ ಕನಸನ್ನೂ ನಾನು ಕಟ್ಟಿರಲಿಲ್ಲ. ಏನಾದರೂ ಒಂದು ಆಗುತ್ತದೆ ಎಂದುಕೊಂಡಿದ್ದೆ. ಆದರೆ ಈ ರೀತಿ ಬೆಳೆದು ನಿಲ್ಲುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ದೊಡ್ಡ ಕನಸನ್ನು ಕಾಣಬೇಕು ಎಂದು ಹೇಳುತ್ತಾರೆ. ಆದರೆ, ನಾನೇ ನನ್ನ ಬಗ್ಗೆ ಇಷ್ಟು ದೊಡ್ಡ ಕನಸು ಕಟ್ಟಿಕೊಂಡಿರಲಿಲ್ಲ. ಹೀಗಾಗಿ, ನಾನು ಯೋಚಿಸುವುದನ್ನು ನಿಲ್ಲಿಸಿ, ಜೀವನ ಹೇಗೆ ಬದಲಾಗಿದೆ ಮತ್ತು ನಾನು ಇಂದು ಎಲ್ಲಿದ್ದೇನೆ ಎಂದು ನೋಡಿಕೊಂಡರೆ, ಇದು ನನಗೆ ಕನಸಿನಂತೆಯೇ ಇದೆ.''

    ಭಾರತೀಯ ಸಿನಿಮಾದಲ್ಲಿ ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು?

    ಭಾರತೀಯ ಸಿನಿಮಾದಲ್ಲಿ ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು?

    ಪ್ರಶ್ನೆ: ಹೆಜ್ಜೆ ಗುರುತಿನ ಬಗ್ಗೆ ನೀವು ತುಂಬಾ ಯೋಚಿಸುತ್ತೀರಾ? ಭಾರತೀಯ ಸಿನಿಮಾದಲ್ಲಿ ನಿಮ್ಮನ್ನು ಯಾವ ರೀತಿ ನೆನಪಿಸಿಕೊಳ್ಳಬೇಕು ಎಂದು ಬಯಸುತ್ತೀರಿ?

    ''ಹೌದು, ಪ್ರತಿ ದಿನವೂ ನಾನು ನನ್ನ ಹೆಜ್ಜೆ ಗುರುತನ್ನು ಮೂಡಿಸುವ ಕುರಿತೇ ಶ್ರಮಿಸುತ್ತಿರುತ್ತೇನೆ. ಇದು ನನಗೆ ಹೆಮ್ಮೆ ಕೊಡುವ ಫಿಲ್ಮೋಗ್ರಫಿಯ ರೂಪದಲ್ಲಿ ಇರಬೇಕು. ಕಲೆಗೆ ನಾನು ಗಮನಾರ್ಹ ಕೊಡುಗೆ ನೀಡಬೇಕು ಮತ್ತು ಇತರ ಕಲಾಕಾರರಿಗೆ ಸ್ಫೂರ್ತಿ ನೀಡಬೇಕು. ಇದೇ ರೀತಿ ನನ್ನ ಹಿರಿಯ ಕಲಾವಿದರೂ ನನಗೆ ಸ್ಫೂರ್ತಿಯಾಗಿದ್ದರು. ಇತಿಹಾಸ ನಮ್ಮನ್ನು ನೆನಪಿಟ್ಟುಕೊಳ್ಳಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ನಾವು ಸಾಮಾಜಿಕ ಜೀವಿಗಳಾಗಿರುವುದರಿಂದ ಇದು ನಮಗೆ ಸಹಜ ಸಂಗತಿ. ಮನರಂಜನೆಯ ನಟ, ವೈವಿಧ್ಯಮಯ ನಟ ಹಾಗೂ ನಮ್ಮ ದೇಶದ ಉತ್ತಮ ಸಿನಿಮಾಗಳಲ್ಲಿ ಕಾಣಿಸಿಕೊಂಡವ ಎಂದು ಜನರು ನನ್ನನ್ನು ಮನಸಲ್ಲಿಟ್ಟುಕೊಳ್ಳಬೇಕು ಎಂದು ನಾನು ಬಯಸಿದ್ದೇನೆ.''

    ಮನರಂಜನೆ ನೀಡಬೇಕು ಎಂಬುದೇ ನನ್ನ ಧ್ಯೇಯ

    ಮನರಂಜನೆ ನೀಡಬೇಕು ಎಂಬುದೇ ನನ್ನ ಧ್ಯೇಯ

    ''ಇವು ಅತಿ ದೊಡ್ಡ ಮಹತ್ವಾಕಾಂಕ್ಷೆಗಳು. ಆದರೆ, ನಾನು ಮಾಡುವ ಸಿನಿಮಾಗಳಲ್ಲಿ ಇದು ಸಾಬೀತಾಗುವಂಎ ಮತ್ತು ನನ್ನ ಕೆಲಸದ ಮೂಲಕ ನನ್ನ ದೇಶಕ್ಕೆ ಹೆಮ್ಮೆ ತರುವಂತೆ ಮಾಡುವಲ್ಲಿ ನಾನು ಪ್ರತಿ ದಿನವೂ ಶ್ರಮಿಸುತ್ತಿರುತ್ತೇನೆ. ಜನರಿಗೆ ನಾನು ಮನರಂಜನೆ ನೀಡಬೇಕು ಎಂಬುದೇ ನನ್ನ ಮುಖ್ಯ ಧ್ಯೇಯ. ನನ್ನನ್ನು ಜನರು ಮನರಂಜಿಸುವ ನಟ ಎಂದು ನೋಡಬೇಕು ಮತ್ತು ದೇವರು ನನ್ನನ್ನು ಆ ದಾರಿಯಲ್ಲಿ ನಡೆಸುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ.''

    English summary
    Actor Ranveer Singh marks 10 years in Bollywood: Here is the exclusive interview with bollywood actor. Read on.
    Thursday, December 10, 2020, 14:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X