ಲವ್ ಮ್ಯಾರೇಜಾ ? ಅರೆಂಜ್ ಮ್ಯಾರೇಜಾ ? ಅರಳಿದ್ಹೇಗೆ ಅನುರಾಗ ? 'ಸಂಧ್ಯಾ'ರಾಗದ ಕುರಿತು ಮ್ಯಾಕ್ಸ್‌ ಮಂಜು ಮನದ ಮಾತು

ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇನ್ನು ಪ್ರೀತಿ ಎಂದರೆ ಸಂತೋಷ ಅದರ ಮಾಯೆಯೇ ಅಂತಹದು ಎನ್ನುವುದು ಅನುಭವಿಸಿದವರ ಅಭಿಪ್ರಾಯ. ಪ್ರೀತಿಸುವ ವ್ಯಕ್ತಿಯನ್ನು ಅಳೆಯಲಾಗದಷ್ಟು, ಅಂತ್ಯ ಇಲ್ಲದಷ್ಟು ...

ಪ್ರೀತಿಸುವ ಅನೇಕರು ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿರುತ್ತಾರೆ. ಚಿತ್ರರಂಗದಲ್ಲಿ ಕೂಡ ಇವರ ಸಂಖ್ಯೆ ಹೆಚ್ಚಿದೆ. ಈ ಸಾಲಿಗೆ ಸದ್ಯ ನಿಮ್ಮ ನೆಚ್ಚಿನ ಆಕ್ಟರ್ ಮತ್ತು ಬಿಗ್ ಬಾಸ್ ಸ್ಫರ್ಧಿ, ಉಗ್ರಂ ಮಂಜು ಅಲಿಯಾಸ್ ಮ್ಯಾಕ್ಸ್‌ ಮಂಜು ಕೂಡ ಸೇರಿಕೊಂಡಿದ್ದಾರೆ. ಪ್ರೀತಿಯ ಅಮೃತಗಾನ ಸದ್ಯ ಹಾಡುತ್ತಿದ್ದಾರೆ. ಸದ್ದಿಲ್ಲದೇ ಮನ ಮೆಚ್ಚಿದ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

EXCLUSIVE Ugramm Manju Opens Up on Sandhya First Encounter and His Love vs Arranged Marriage Plan

ತಮ್ಮ ಬದುಕಿನ ಈ ಹೊಸ ಆರಂಭದ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಉಗ್ರಂ ಮಂಜು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ... ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ... ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ, ಹೊಸ ಬಂಧದ ಆರಂಭ... ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ತಮ್ಮ ಮನದ ಮಾತುಗಳಿಗೆ ಅಕ್ಷರಶ ರೂಪ ನೀಡಿದ್ದಾರೆ.

ಇನ್ನೂ ಎಲ್ಲಿಗೆ ಗೊತ್ತಿರುವಂತೆ ಉಗ್ರಂ ಮಂಜು ಕನ್ನಡ ಚಿತ್ರರಂಗದ ಪ್ರತಿಭಾವಂತ. ರಂಗಭೂಮಿಯಲ್ಲಿ ಅಭಿನಯದ ಪಟ್ಟುಗಳನ್ನು ಕಲಿತು, ನಾನಾ ವಿಭಾಗದಲ್ಲಿ ದುಡಿದ ಮಂಜು, ಚಿತ್ರರಂಗದಲ್ಲಿ ಹಂತ ಹಂತವಾಗಿ ಮೇಲೆ ಬಂದವರು. ಹೆಸರು, ಹಣ, ಕೀರ್ತಿಯನ್ನು ಸಂಪಾದಿಸಿದವರು. ಇಂಥಾ ಉಗ್ರಂ ಮಂಜು ಅವರ ಮದುವೆ ಯಾವಾಗ..? ಕೈ ಹಿಡಿಯುವ ಹುಡುಗಿ ಯಾರು..? ಎನ್ನುವ ಕುತೂಹಲ ಹಲವರಲ್ಲಿತ್ತು.

ಎಲ್ಲಕ್ಕಿಂತ ಹೆಚ್ಚಾಗಿ ''ಬಿಗ್ ಬಾಸ್‌'' ಮನೆಯಲ್ಲಿ ಮಂಜಣ್ಣ ಇದ್ದಾಗ ಹೆಚ್ಚಾಗಿ ಚರ್ಚೆಯಾಗಿದ್ದು ಇವರ ಮದುವೆಯ ವಿಷ್ಯನೇ. ಈ ಹಿನ್ನೆಲೆ ಹಲವರು ಇವರ ಮದುವೆ ಕುರಿತು ತಲೆ ಕೆಡಿಸಿಕೊಂಡಿದ್ದರು. ಎದುರು ಸಿಕ್ಕಾಗೆಲ್ಲಾ ಮದುವೆ ಯಾವಾಗ ..? ಎನ್ನುವ ಪ್ರಶ್ನೆ ಕೇಳಲು ಶುರು ಮಾಡಿದ್ದರು. ಈ ಪ್ರಶ್ನೆಗಳಿಗೆ ಉಗ್ರಂ ಮಂಜು ಸದ್ಯ ಉತ್ತರ ನೀಡಿದ್ದಾರೆ. ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಷ್ಟೇ ತಮ್ಮ ಖುಷಿಯನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಕೂಡ ಹಂಚಿಕೊಂಡಿರುವ ಉಗ್ರಂ ಮಂಜು, ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ತಮ್ಮ ಪ್ರೇಮ ಕಥೆಯನ್ನು ಕೂಡ ಹಂಚಿಕೊಂಡಿದ್ದಾರೆ. ಮದುವೆ ಯಾವಾಗ ಎನ್ನುವುದನ್ನು ಕೂಡ ಹೇಳಿದ್ದಾರೆ.

ಈ ಕುರಿತು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಉಗ್ರಂ ಮಂಜು, ''ನಾನು ಮದುವೆ ಆಗುತ್ತಿರುವ ಹುಡುಗಿಯ ಹೆಸರು ಸಂಧ್ಯಾ. ರಾಜರಾಜೇಶ್ವರಿ ನಗರದಲ್ಲಿನ ''ಸ್ಫರ್ಶ ಆಸ್ಪತ್ರೆ''ಯಲ್ಲಿ ಅವರು ಕಳೆದ 07-08 ತಿಂಗಳಿನಿಂದ ಕೆಲಸ ಮಾಡ್ತಿದ್ದಾರೆ. ಅದಕ್ಕೂ ಮೊದಲು ''ಬಿಜಿಎಸ್‌'' ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು'' ಎಂದು ಹೇಳಿದ್ದಾರೆ.

EXCLUSIVE Ugramm Manju Opens Up on Sandhya First Encounter and His Love vs Arranged Marriage Plan

''ಇನ್ನು ಅವರ ವೃತ್ತಿಯ ಕುರಿತು ಮಾತನಾಡುವುದಾದರೆ ಅಂಗಾಂಗ ದಾನಕ್ಕೆ ಬರುವವರ ಜೊತೆ ಇವರು ಸಮಾಲೋಚನೆ ಮಾಡುತ್ತಾರೆ, ಸಲಹೆಗಳನ್ನು ನೀಡುತ್ತಾರೆ. ರೋಗಿ ಅಂಗಾಂಗ ದಾನ ಮಾಡಬಹುದಾ ಅಥವಾ ಇಲ್ಲವಾ.. ? ಎನ್ನುವುದನ್ನು ಇವರೇ ನಿರ್ಧಾರ ಮಾಡುತ್ತಾರೆ. ಒಂದರ್ಥದಲ್ಲಿ ರೋಗಿ ಮತ್ತು ವೈದ್ಯರ ನಡುವೆ ಇವರು ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಾರೆ'' ಎಂದು ಉಗ್ರಂ ಮಂಜು ತಮ್ಮ ಭಾವಿ ಪತ್ನಿ ಸಂಧ್ಯಾ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನೂ ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಹಲವರಲ್ಲಿರುವ ಮಿಲಿಯನ್ ಡಾಲರ್ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಉಗ್ರಂ ಮಂಜು, ''ಕಳೆದ ಮೂರು ತಿಂಗಳ ಹಿಂದೆ ಸ್ನೇಹಿತರೊಬ್ಬರ ಮೂಲಕ ನನಗೆ ಸಂಧ್ಯಾ ಪರಿಚಯ ಆದರು. ಅಲ್ಲಿಂದ ಸ್ನೇಹ ಶುರುವಾಯ್ತು. ಹೀಗೆ ಮಾತನಾಡುತ್ತಾ ಮಾತನಾಡುತ್ತಾ.. ಇಬ್ಬರ ಆಲೋಚನೆಗಳು ಒಂದೇ ಎನ್ನುವುದು ಗೊತ್ತಾಯ್ತು. ಹೊಂದಾಣಿಕೆ ಆಯ್ತು. ಆ ನಂತರ ಇಬ್ಬರ ಮನೆಯಲ್ಲಿ ಮಾತುಕತೆ ನಡೆಯಿತು. ಹೀಗೆ ನಡೆದ ಮಾತುಕತೆ ಸದ್ಯ ನಿಶ್ಚಿತಾರ್ಥದವರೆಗೆ ನಮ್ಮನ್ನು ಕರೆದುಕೊಂಡು ಬಂದಿದೆ. ಇಂದು (ನವೆಂಬರ್ 9) ಸರಳವಾಗಿ ಪೀಣ್ಯದಲ್ಲಿರುವ ಸಂಧ್ಯಾ ಅವರ ಮನೆಯಲ್ಲಿ ನಿಶ್ಚಿತಾರ್ಥ ಆಯ್ತು. ನಮ್ಮ ಮನೆಯಲ್ಲಿ ನಮ್ಮ ತಂದೆ ಅವರಿಂದ ಹಿಡಿದು ಎಲ್ಲರೂ ಖುಷಿಯಾಗಿದ್ದಾರೆ'' ಎಂದು ಹೇಳಿದ್ದಾರೆ.

ಮುಂಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಆಲೋಚನೆ ಇದೆ ಎಂದು ಹೇಳಿರುವ ಉಗ್ರಂ ಮಂಜು, ''ಬಾಲ್ಯದಲ್ಲಿಯೇ ಅವರು ಅವರ ತಂದೆಯನ್ನು ಕಳೆದುಕೊಂಡಿದ್ದಾರೆ. ಅವರನ್ನು ಸಾಕಿ ಸಲುಹಿರುವುದು ಅವರ ತಾಯಿ ಮಾತ್ರ. ಕಷ್ಟ ಅಂದರೇನು..? ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಆದರೆ ಕಷ್ಟದ ತನಗೆ ಕಷ್ಟ ಇದೆ ಅಂದಾಗ ಯಾರ ಹತ್ರಾನೂ ಹೇಳಿಕೊಳ್ಳಲ್ಲ. ಅರ್ಥ ಮಾಡಿಕೊಳ್ಳುವ ಹಾಗೇ ಇದ್ದರೆ ಅರ್ಥ ಮಾಡಿಕೊಳ್ಳಲಿ ಎನ್ನುವ ಮನೋಭಾವ ಅವರದ್ದು. ಸಂಬಂಧಗಳಿಗೆ ತುಂಬಾ ಬೆಲೆ ಕೊಡ್ತಾರೆ. ಸ್ವಾಭಿಮಾನ ತುಂಬಾ ಇದೆ. ಹೀಗೆ ಅವರಲ್ಲಿರುವ ಕೆಲವೊಂದಿಷ್ಟು ಗುಣಗಳು ನನಗೆ ತುಂಬಾ ಇಷ್ಟ ಆದವು. ಹೀಗಾಗಿಯೇ ಈ ನಿರ್ಧಾರ'' ಎಂದು ಹೇಳಿದ್ದಾರೆ.

ಇನ್ನೂ ಸೆಲೆಬ್ರೆಟಿಗಳನ್ನು ಯಾರಾದರೂ ಮದುವೆಯಾಗುತ್ತಾರೆ ಎಂದಾಗ ಮೊದಲು ಬರುವುದೇ ನಿಮ್ಮ ಭಾವಿ ಪತಿ ಅಥವಾ ಪತ್ನಿ ಅಭಿನಯಿಸಿರುವ ಚಿತ್ರಗಳಲ್ಲಿ ನಿಮ್ಮ ನೆಚ್ಚಿನ ಚಿತ್ರ ಯಾವುದು ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಉಗ್ರಂ ಮಂಜು, '' ಸಿನಿಮಾಗಳಿಂದ ಸಂಧ್ಯಾ ತುಂಬಾ ದೂರ. ಅದರಲ್ಲಿಯೂ ನನ್ನ ಸಿನಿಮಾಗಳನ್ನು ಅವರು ನೋಡಿರುವುದು ತುಂಬಾ ಕಡಿಮೆ. ನಾನು ಅಭಿನಯಿಸಿರುವ ಎರಡು ಮೂರು ಸಿನಿಮಾ ನೋಡಿರಬಹುದು ಅಷ್ಟೇ. ಇತ್ತೀಚೆಗೆ ಕಾಂತಾರ ಚಿತ್ರವನ್ನು ನೋಡಿದ್ದಾರೆ. ತುಂಬಾನೇ ವರ್ಕೋಹಾಲಿಕ್ ಅವರು. ಬೆಳಗ್ಗೆ ಹೋದರೆ ಸಂಜೆಯವರೆಗೆ ಆಸ್ಪತ್ರೆಯಲ್ಲಿ ಕೆಲಸದಲ್ಲಿ ಮುಳುಗಿರ್ತಾರೆ. ಇನ್ನೂ ಆಪರೇಷನ್ ಅಥವಾ ಎಮರ್ಜೆನ್ಸಿ ಕೇಸ್ ಬಂದಾಗ ಎರಡ್ಮೂರು ದಿನ ಅವರು ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿರುವ ದಿನಗಳು ಕೂಡ ಇವೆ. ಸಿನಿಮಾ ಹುಚ್ಚು ಅಷ್ಟೊಂದು ಇಲ್ಲ'' ಎಂದು ಹೇಳಿದ್ಧಾರೆ.

ಮುಂದುವರೆದು ''ಸಿನಿಮಾ ಹುಚ್ಚು ಕಡಿಮೆ ಆದರೆ ಕಳೆದ ಬಾರಿ ನಾನು ಇದ್ದ ''ಬಿಗ್ ಬಾಸ್‌'' ಸೀಸನ್ ನೋಡಿದ್ದಾರೆ. ಈಗಲೂ ಕೂಡ ಬಿಡುವು ಇದ್ದಾಗ ಮೊಬೈಲ್‌ನಲ್ಲಿ ಆಗಾಗ ನಮ್ಮ ಸೀಸನ್‌ನ ಯಾವುದಾದರೂ ತುಣುಕು ಬಂದರೆ ನೋಡ್ತಿರ್ತಾರೆ. ಅದರ ಬಗ್ಗೆ ಮಾತನಾಡ್ತಾರೆ. ತುಂಬಾ ಹೊಗಳುವುದು ಎಲ್ಲಾ ಅವರು ಮಾಡಲ್ಲ'' ಎಂದು ನಕ್ಕಿರುವ ಉಗ್ರಂ ಮಂಜು ''ಪ್ರೀತಿ ಇರುತ್ತೆ ಆದರೆ ಅದನ್ನು ಅವರು ಹೆಚ್ಚು ತೋರಿಸಿಕೊಳ್ಳುವುದಿಲ್ಲ, ಹೇಳಿಕೊಳ್ಳುವುದಿಲ್ಲ'' ಎಂದು ಹೇಳಿದ್ದಾರೆ.

ಇನ್ನೇನು ಇನ್ನೊಂದೆರಡು ಮೂರು ತಿಂಗಳಿನಲ್ಲಿ ನನ್ನ ಬ್ಯಾಚುಲರ್ ಜೀವನಕ್ಕೆ ನಾನು ವಿದಾಯ ಹೇಳುತ್ತೇನೆ, ಈ ಎರಡು ಮೂರು ತಿಂಗಳಿನಲ್ಲಿ ಬ್ಯಾಚುಲರ್ ಜೀವನ ಎಂಜಾಯ್ ಮಾಡಬೇಕು ಎಂದು ನಗೆಚಟಾಕಿಯನ್ನು ಕೂಡ ಹಾರಿಸಿರುವ ಉಗ್ರಂ ಮಂಜು ಮದುವೆಯ ನಂತರ ಜವಾಬ್ಧಾರಿ ಹೆಚ್ಚಾಗಲಿವೆ ಆದರೆ ನಾವು ಗಂಡ ಹೆಂಡ್ತಿ ಎನ್ನುವುದಕ್ಕಿಂತ ಸ್ನೇಹಿತರಂತೆ ಇರಬೇಕು ಎನ್ನುವುದು ನಮ್ಮ ಕನಸು ಮತ್ತು ಉದ್ದೇಶ ಎಂದು ಹೇಳಿದ್ದಾರೆ.

ಹೀಗೆ ತಮ್ಮ ಮನದ ಮಾತುಗಳನ್ನು ಉಗ್ರಂ ಮಂಜು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ದು ಅವರ ಹೊಸ ಬದುಕಿಗೆ ನಿಮ್ಮ ಶುಭಕಾಮನೆಗಳು ಕೂಡ ಇರಲಿ. ಉಗ್ರಂ ಮಂಜು ಅವರಿಗೆ ಮತ್ತೊಮ್ಮೆ ಶುಭಾಶಯಗಳು.

More from Filmibeat

English summary
Sandalwood's Ugramm Manju has exchanged rings with Transplant Coordinator Sandhya. The Bigg Boss 11 star shares candid details about his upcoming marriage and how he first met his fiancée.
Read more about: engagement ugram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X