'ಮುದ್ದು ಮನಸೇ' ಅರು ಗೌಡ ಮನದಾಳದ ಮಾತು

By ರಾಘವೇಂದ್ರ ಸಿ ವಿ

"ಮುದ್ದು ಮನಸೇ" ಹೆಸರೇ ಹೇಳುವಂತೆ ಒಂದು ಮುದ್ದಾದ ತ್ರಿಕೋನ ಪ್ರೇಮಕಥಾ ಹಂದರವುಳ್ಳ ಕನ್ನಡ ಚಿತ್ರ ಇದೇ ಶುಕ್ರವಾರ (ಆಗಸ್ಟ್ 28) ವರ ಮಹಾಲಕ್ಷ್ಮಿ ಹಬ್ಬದಂದು ರಾಜ್ಯಾದ್ಯಂತ ಸುಮಾರು ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು. ಇಡೀ ಚಿತ್ರ ತಂಡ ಫಿಲ್ಮೀ ಬೀಟ್ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ ..

ಸಂಪೂರ್ಣ ಸ್ವಚ್ಛ ಕನ್ನಡ ಮನಸ್ಸುಗಳೆಲ್ಲಾ ಸೇರಿ ತಯಾರಿಸಿರುವ ಈ ಚಿತ್ರಕ್ಕೆ ವಿದಾಯ ಎಂಬ ಕಿರುಚಿತ್ರ ನಿರ್ದೇಶಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ನಿರ್ದೇಶಕ ಅನಂತ್ ಶೈನ್ ಚೊಚ್ಚಲ ನಿರ್ದೇಶನವಿದೆ .

ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ನಂತರ ಅನೇಕ ಖಾಸಗಿ ವಾಹಿನಿಗಳಲ್ಲಿ ನಿರೂಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಗೌಡ ಈ ಚಿತ್ರದ ಮೂಲಕ ನಾಯಕನಾಗಿ ಚಂದನವಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ನಾಯಕಿಯರಾಗಿ ಬುಲ್ ಬುಲ್ ಖ್ಯಾತಿಯ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಮತ್ತು ಜಾಲಿ ಡೇಸ್ ಖ್ಯಾತಿಯ ಐಶ್ವರ್ಯ ನಾಗ್ ಅಭಿನಯಿಸಿದ್ದಾರೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಈಗಾಗಲೇ ಸುದ್ದಿ ಮಾಡಿರುವ ಚಿತ್ರ ತಂಡ ಗೆಲ್ಲುವ ಭರವಸೆಯಲ್ಲಿದ್ದಾರೆ .

ನಾಯಕ ನಟ ಅರುಣ್ ಗೌಡ ಅವರ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ...

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಸಂಗೀತ ನಿರ್ದೇಶಕ ವಿನೀತ್ ರಾಜ್ ಮೆನನ್ ಸಂಯೋಜಿಸಿರುವ ಹಾಡುಗಳಿಗೆ ಕನ್ನಡದ ಆರು ಪ್ರತಿಭಾನ್ವಿತ ನಿರ್ದೇಶಕರು ಒಂದೊಂದು ಹಾಡಿಗೆ ಪದ ಪೋಣಿಸಿರುವುದು ಅದರಲ್ಲಿ ಯೋಗರಾಜ್ ಭಟ್ ( ನೀವು ಹೇಳಬಾರದು ನಾವು ಕೇಳಬಾರದು ) , ಶಶಾಂಕ್ ( ತಿಂತಾಳೆ ತಿಂತಾಳೆ ) ವಿ . ನಾಗೇಂದ್ರ ಪ್ರಸಾದ್ ( ಎದೆಯೋಳ್ ಯಾರೋ ) , ಸಿಂಪಲ್ ಸುನಿ ( ಮೀಸೆ ಚಿಗುರು ) ಅಲೆಮಾರಿ ಸಂತು ( ದೂರದೊಂದು ) ಎ.ಪಿ. ಅರ್ಜುನ್ ( ಹಾಗೋ ಹೀಗೋ ) ಹೀಗೆ ಹೊಸಬರ ಚಿತ್ರಕ್ಕೆ ಈ ನಿರ್ದೇಶಕರು ತಮ್ಮ ಸಾಹಿತ್ಯ ಮೂಲಕ ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ .

ನಿರ್ದೇಶಕ ಅನಂತ್ ಶೈನ್ ಹೇಳಿದಂತೆ ಈ ಚಿತ್ರದ ನಾಯಕನ ಪಾತ್ರಕ್ಕೆ ಆಡಿಶನ್ ಮಾಡಿದಾಗ ಸಿಕ್ಕಂತ ನಟ ಅರುಣ್ ಗೌಡ. ಈ ಚಿತ್ರದಲ್ಲಿ ಅರುಣ್ ಗೌಡರಿಗೆ ಎರಡು ಶೇಡ್ ಗಳಿದ್ದು ಒಂದು ಹಳ್ಳಿಯ ಸೊಗಡಿನ ಪಾತ್ರ ಮತ್ತೊಂದು ಸಿಟಿ ಹುಡುಗನ ಪಾತ್ರ .

ಹಳ್ಳಿಯ ಹುಡುಗನಿಗೆ ಜೋಡಿಯಾಗಿ ನಿತ್ಯಾ ರಾಮ್ ಮತ್ತು ಸಿಟಿ ಹುಡುಗನಿಗೆ ಜೋಡಿಯಾಗಿ ಐಶ್ವರ್ಯ ನಾಗ್ ಕಾಣಿಸಿಕೊಂಡಿದ್ದಾರೆ .ಬೆಂಗಳೂರು ಮತ್ತು ಸಿಗಂದೂರು ಸೇರಿದಂತೆ ರಾಜ್ಯದ ನಾನಾ ಕಡೆ ಚಿತ್ರೀಕರಿಸಿರುವ ಈ ಚಿತ್ರಕ್ಕೆ ಮೂರು ಜನ ನಿರ್ಮಾಪಕರಿದ್ದಾರೆ.

ಅದರಲ್ಲಿ ಪ್ರಮುಖರೆಂದರೆ ಹೋಟೆಲ್ ಉದ್ಯಮಿ , ಕುಂದಾಪುರ ಮೂಲದ ಜೀವನ್ ಶೆಟ್ಟಿ . ಈಗಾಗಲೇ ಚಿತ್ರವನ್ನು ನೋಡಿರುವ ನಿರ್ಮಾಪಕರು ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದೊಂದಿಗೆ ಫುಲ್ ಖುಷ್ ಆಗಿದ್ದು ಈ ಚಿತ್ರದ ನಿರ್ದೇಶಕ ಅನಂತ್ ರವರಿಗೆ ಮತ್ತೊಂದು ಕಥೆ ಸಿದ್ದಪಡಿಸಲು ಸೂಚಿಸಿರುವುದು ವಿಶೇಷ .

More from Filmibeat

English summary
Kannada movie 'Muddu Manase' Hero Arun Gowda Exclusive Interview. 'Muddu Manase' features Kannada Actor Arun Gowda, Kannada Actress Nithya Ram, Kannada Actress Aishwarya Nag in the lead role. The movie is directed by Ananth Shine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X