'ಗೌರಿಪುರದ ಗಯ್ಯಾಳಿಗಳು' ಖ್ಯಾತಿಯ ಕೌಶಿಕ್ ಈಗ 'ರೇಣುಕಾ ಯಲ್ಲಮ್ಮ' ಧಾರಾವಾಹಿಯ ಪರಶುರಾಮ; ಇವರ ಜರ್ನಿಯೇ ಇಂಟ್ರೆಸ್ಟಿಂಗ್

ನಟ ಕೌಶಿಕ್ ಅವರ ಮೂಲ ಹುಟ್ಟೂರು ಮೈಸೂರು. ಆದರೆ, ಅವರು ಬೆಳೆದು ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಬೆಂಗಳೂರಿನಲ್ಲೇ. ತಮ್ಮ ವೃತ್ತಿಜೀವನದ ಆರಂಭದ ಬಗ್ಗೆ ಮಾತನಾಡುತ್ತಾ, 'ಗೌರಿಪುರದ ಗಯ್ಯಾಳಿಗಳು' ಧಾರಾವಾಹಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಕಾಮಿಡಿ ಪಾತ್ರದಲ್ಲಿ ನಟಿಸಿ, ಈ ರೇಣುಕಾ ಯಲ್ಲಮ್ಮದಲ್ಲಿ ಅಭಿನಯಿಸುತ್ತಿರುವ ಅನುಭವವನ್ನು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ

ಈ ಧಾರಾವಾಹಿಯು ಸಾವಿರ ಸಂಚಿಕೆಗಳನ್ನು ಪೂರೈಸಿದ ಸಂಭ್ರಮದ ಬಗ್ಗೆ ಅವರು ಬಹಳ ಖುಷಿಯಿಂದ ಮಾತನಾಡಿದರು. ಒಬ್ಬ ನಟನಾಗಿ ಅಲ್ಲಿ ಎಲ್ಲಾ ತರಹದ ಭಾವನೆಗಳನ್ನು ಅಭಿನಯಿಸಲು ಅವಕಾಶ ಸಿಕ್ಕಿದ್ದರಿಂದ ಬಹಳಷ್ಟು ಕಲಿತಿದ್ದೇನೆ ಎಂದು ಅವರು ತಿಳಿಸಿದರು. ಈ ಸುದೀರ್ಘ ಪಯಣದಲ್ಲಿ ತಮಗೆ ಬೆಂಬಲ ನೀಡಿದ ರವಿತೇಜ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಅವರ ಜರ್ನಿಯ ಬಗ್ಗೆ ಒಂದು ಮೆಲುಕು.

From Comedy to Mythology Actor Koushik s Journey as Parashurama in Renuka Yellamma serial

ನಿಮ್ಮ ಮೂಲ ಊರು ಯಾವುದು?

ಕೌಶಿಕ್: ನಮ್ಮ ಮೂಲ ಹುಟ್ಟೂರು ಮೈಸೂರು, ಆದರೆ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ.

'ಗೌರಿಪುರದ ಗಯ್ಯಾಳಿಗಳು' 1000 ಸಂಚಿಕೆ ಪೂರೈಸಿದ ಸಂಭ್ರಮ ಹೇಗಿತ್ತು?

ಕೌಶಿಕ್: ಚೆನ್ನಾಗಿತ್ತು, ಅದೊಂದು ಮೂರು ವರ್ಷದ ಜರ್ನಿ. ಒಬ್ಬ ಆಕ್ಟರ್ ಆಗಿ ಅದೊಂದು ಡಿಫರೆಂಟ್ ಎಕ್ಸ್‌ಪೀರಿಯನ್ಸ್ ಆಗಿತ್ತು. ಯಾಕಂದ್ರೆ, ಮೂರು ವರ್ಷ ಕಾಮಿಡಿ ರೋಲ್ ಮಾಡ್ಕೊಂಡು, ಅದರಲ್ಲಿ ಕಾಮಿಡಿ ಅನ್ನೋದಕ್ಕಿಂತ ಎಲ್ಲಾ ತರಹದ ಜಾನರ್ಸ್ - ಎಮೋಷನ್ಸ್ ಇತ್ತು. ಅದರಿಂದನೂ ಬಹಳಷ್ಟು ಕಲಿತಿದ್ದೇನೆ. ಇದಕ್ಕಾಗಿ ರವಿತೇಜ ಸರ್ ಅವರಿಗೆ ಧನ್ಯವಾದ ಹೇಳುತ್ತೇನೆ.

Also Read
'ಗೌರಿಶಂಕರ' ಧಾರಾವಾಹಿಯ ನಾಯಕ ಯಶವಂತ್‌ಗೆ ಯಶ್, ಅಪ್ಪುನೇ ಪ್ರೇರಣೆ; ನಟನ ಯಶಸ್ಸಿನ ಗುಟ್ಟೇನು?
'ಗೌರಿಶಂಕರ' ಧಾರಾವಾಹಿಯ ನಾಯಕ ಯಶವಂತ್‌ಗೆ ಯಶ್, ಅಪ್ಪುನೇ ಪ್ರೇರಣೆ; ನಟನ ಯಶಸ್ಸಿನ ಗುಟ್ಟೇನು?

3. ಆ ಕಾಮಿಡಿ ಸೀರಿಯಲ್‌ನಲ್ಲಿ ಲೀಡ್ ರೋಲ್ ಮಾಡಿದ ಅನುಭವ ಹೇಗಿತ್ತು?

ಕೌಶಿಕ್: ಒಂಥರಾ ಖುಷಿ ಆಯ್ತು ನನಗೆ. ಪ್ರತಿದಿನ ಅಲ್ಲಿ ಒಂದು ವಾತಾವರಣ ಹಾಗೆ ಇತ್ತು. ಎಲ್ಲರೂ ಜಾಲಿಯಾಗಿ ಎಂಜಾಯ್ ಮಾಡಿಕೊಂಡು ಶೂಟ್ ಮಾಡ್ತಾ ಇದ್ವಿ.

From Comedy to Mythology Actor Koushik s Journey as Parashurama in Renuka Yellamma serial

4. 'ರೇಣುಕಾ ಯಲ್ಲಮ್ಮ' ಸೀರಿಯಲ್‌ನ ಪರಶುರಾಮನ ಪಾತ್ರಕ್ಕೆ ನೀವು ಆಯ್ಕೆಯಾಗಿದ್ದು ಹೇಗೆ?

ಕೌಶಿಕ್: ನಾನು ಹೊರಗಡೆ ಇದ್ದೆ ಆಕ್ಚುಲಿ ಅವತ್ತು, ಮುರುಡೇಶ್ವರ ದೇವಸ್ಥಾನ ಮುಗಿಸಿಕೊಂಡು ಬರ್ತಾ ಇದ್ವಿ. ಆಗ ನನಗೆ ನಮ್ಮ ಪ್ರೊಡಕ್ಷನ್ ಮ್ಯಾನೇಜರ್ ಶ್ರೀನಿವಾಸ್ ಕಾಲ್ ಮಾಡಿದ್ರು. ಮಾರನೇ ದಿನ ಬಂದು ಒಂದು ಲುಕ್ ಟೆಸ್ಟ್ ಕೊಟ್ಟೆ. ಅದಾದ್ಮೇಲೆ ಒಂದು ತ್ರೀ-ಫೋರ್ ಡೇಸ್ ಆದ್ಮೇಲೆ ಕಾಲ್ ಬಂತು ಸೆಲೆಕ್ಟ್ ಆಗಿದೆ ಅಂತ.

5. ಪರಶುರಾಮನ ಅಧ್ಯಾಯದ ಬಗ್ಗೆ ನಿಮಗೇನನ್ನಿಸುತ್ತಿದೆ?

ಕೌಶಿಕ್: ಇದು ಈಗಾಗಲೇ ಶುರುವಾಗಿದೆ. ಸ್ಟಾರ್ಟ್ ಆಗಿ ಒಂದು ನಾಲ್ಕೈದು ತಿಂಗಳು ಆಗಿದೆ. ಬಾಲ ಪರಶುರಾಮ ಇದ್ದಾಗ ಅವರು ಕಾಡಿಗೆ ಹೋಗಿ ಅಲ್ಲಿಂದ ತಪಸ್ಸು ಮಾಡ್ತಾ ಬೆಳೆದು ತಿರುಗಿ ವಾಪಸ್ ಆಶ್ರಮಕ್ಕೆ ಬಂದು ಅಲ್ಲಿಂದ ಕಥೆ ಮುಂದಕ್ಕೆ ಹೋಗ್ತಿದೆ.

6. ಜಮದಗ್ನಿ ಮಹರ್ಷಿಯ ಆಜ್ಞೆ ಪಾಲಿಸುವ ಸನ್ನಿವೇಶಗಳು ಸವಾಲು ಎನಿಸಿತೇ?

ಕೌಶಿಕ್: ಪರಶುರಾಮನಾಗಿ ಖಂಡಿತವಾಗ್ಲೂ ತಂದೆಯ ಆಜ್ಞೆ ಏನಿರುತ್ತೋ ಅದನ್ನ ಪಾಲಿಸಲೇಬೇಕಾಗುತ್ತೆ. ಆದರೆ, ಕೆಲವೊಂದು ಬಾರಿ ಇಂತಹ ಸನ್ನಿವೇಶಗಳಲ್ಲಿ ತಂದೆಯ ಮೇಲೆ ಸ್ವಲ್ಪ ಮೌಖಿಕ ಮಾತುಕತೆ ಹೆಚ್ಚಾದಾಗ ಕಥೆ ಹಾಗೆ ಟರ್ನ್ ಆಗ್ತಾ ಹೋಗ್ತಾ ಇರುತ್ತೆ.

7. ತಾಯಿ ರೇಣುಕೆಯ ಶಿರಚ್ಛೇದದ ರೋಚಕ ಘಟ್ಟದ ಚಿತ್ರೀಕರಣ ಹೇಗಿತ್ತು?

ಕೌಶಿಕ್: ಆ ಇನ್ನು ಎಪಿಸೋಡ್‌ಗಳು ಇನ್ನು ಶೂಟ್ ಆಗಿಲ್ಲ. ಅದು ಮುಂದಿನ ದಿನಗಳಲ್ಲಿ ಖಂಡಿತವಾಗ್ಲೂ ಆಗುತ್ತೆ.

From Comedy to Mythology Actor Koushik s Journey as Parashurama in Renuka Yellamma serial

8. ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಅನುಭವ ಹೇಗಿತ್ತು?

ಕೌಶಿಕ್: ಇಲ್ಲ, ಕನ್ನಡ ಬಿಟ್ಟು ನಾನು ಬೇರೆ ಯಾವುದು ಮಾಡಿಲ್ಲ. ನನಗೆ ಕನ್ನಡ ಬಿಟ್ಟು ಹೋಗೋಕೆ ನನಗೂ ಮನಸ್ಸಿಲ್ಲ. ಏನಾದ್ರೂ ಮಾಡ್ಬೇಕು ಅಂದ್ರೆ ಇಲ್ಲೇ ಮಾಡ್ಬೇಕು ಅನ್ನೋದು ನಮ್ದೊಂದು ಹಠ.

9. ಸಿನಿಮಾ ಜರ್ನಿ ಶುರುವಾಗಿದೆಯಾ?

ಕೌಶಿಕ್: ಒಂದು ಸಿನಿಮಾ ಮಾತುಕತೆಯಲ್ಲಿ ನಡೀತಾ ಇದೆ. ಇದಕ್ಕಿಂತ ಮುಂಚೆ ಮಾಡ್ಬೇಕಾಗಿದ್ದು ಒಂದು ಎರಡ್ಮೂರು ಸಿನಿಮಾ ಹಾಗೆ ಸ್ಟಾರ್ಟಿಂಗ್ ಆಯ್ತು, ಅರ್ಧಕ್ಕೆ ನಿಂತು ಹೋಯ್ತು.

10. ನ್ಯೂ ಕಮರ್ ಆಗಿ ಪೌರಾಣಿಕ ಪಾತ್ರ ಸಿಕ್ಕಾಗ ಏನನ್ನಿಸಿತು?

ಕೌಶಿಕ್: ತುಂಬಾ ಜವಾಬ್ದಾರಿಯುತ ಪಾತ್ರ ಇದು. ಈ ಒಂದು ಅವಕಾಶ ಲೈಫ್ ಅಲ್ಲಿ ಸಿಗುತ್ತೋ ಇಲ್ವೋ ಗೊತ್ತಿಲ್ಲ, ಬಟ್ ಇವಾಗ ಸಿಕ್ಕಿದೆ. ಅದಕ್ಕೆ ಎಷ್ಟು ಎಫರ್ಟ್ ಹಾಕಿ ಕೆಲಸ ಮಾಡ್ಬೇಕೋ ಅಷ್ಟು ಎಫರ್ಟ್ ಹಾಕ್ತಾ ಇದೀನಿ. ಈ ಒಂದು ಪಾತ್ರನ ನಾನಂತೂ ಎಂಜಾಯ್ ಮಾಡ್ತಾ ಇದೀನಿ.

11. ನಿಮ್ಮ ಈ ಹೊಸ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಏನು ಹೇಳುತ್ತೀರಿ?

ಕೌಶಿಕ್: ಖಂಡಿತವಾಗ್ಲೂ, ತುಂಬಾ ಜವಾಬ್ದಾರಿಯುತ ಪಾತ್ರ ಇದು, ನಾನು ಇದನ್ನ ತುಂಬಾ ಎಂಜಾಯ್ ಮಾಡ್ತಾ ಇದೀನಿ. ಎಲ್ಲರೂ ಸೀರಿಯಲ್ ನೋಡಿ, ನಮ್ಮನ್ನು ಹಾಗೆ ಸಪೋರ್ಟ್ ಮಾಡಿ ಅಂತ ಹೇಳಲು ಇಷ್ಟಪಡುತ್ತೇನೆ.

More from Filmibeat

English summary
From Comedy to Mythology: Actor Koushik's Journey as Parashurama in 'Renuka Yellamma';
Read more about: actor tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X