ನನಗೆ ಸಿಗೋದೆಲ್ಲಾ ನೆಗೆಟಿವ್ ಪಾತ್ರಗಳೇ, ಜನ ಬೈದಷ್ಟು ಖುಷಿ- ನಟಿ ಮೇಘಶ್ರೀ ಸಂದರ್ಶನ

ನೆಗೆಟಿವ್ ಪಾತ್ರಗಳಲ್ಲಿ ನಟಿಸೋದು ಅಷ್ಟು ಸುಲಭವಲ್ಲ. ಅಪ್ಪಿ ತಪ್ಪಿ ಅದು ಕ್ಲಿಕ್ ಆಗಿಬಿಟ್ರೆ ಅಂಥದ್ದೇ ಪಾತ್ರಗಳಿಗೆ ಬ್ರ್ಯಾಂಡ್ ಮಾಡಿಬಿಡ್ತಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸುವವರು ಇದ್ದಾರೆ. ಆದರೆ ಕನ್ನಡ ಕಿರುತೆರೆ ನಟಿ ಮೇಘಶ್ರೀ ಇದನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.

'ಮೈನಾ', 'ನಿನ್ನ ಜೊತೆ ನನ್ನ ಕಥೆ', 'ಪುಣ್ಯವತಿ ' ಹೀಗೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಮೇಘಶ್ರೀ ನಟಿಸಿ ವೀಕ್ಷಕರ ಮನಗೆದ್ದಿದ್ದಾರೆ. ಬಹುತೇಕ ವಿಲನ್ ಪಾತ್ರಗಳಲ್ಲೇ ನಟಿಸಿ ಮೋಡಿ ಮಾಡಿದ್ದಾರೆ. ಆಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದು ಎಷ್ಟರಮಟ್ಟದಲ್ಲಿ ಪರಿಣಾಮ ಬೀರಿದೆ ಎಂದರೆ ರಸ್ತೆಯಲ್ಲಿ ಕೆಲವರು ಮೇಘಶ್ರೀ ಅವರಿಗೆ ಬೈದಿರುವುದು ಇದೆ. ಅದನ್ನು ಕಾಂಪ್ಲಿಮೆಂಟ್ ಆಗಿಯೇ ಆಕೆ ಸ್ವೀಕರಿಸುತ್ತಾರೆ. ಇದೇ ವರ್ಷ ಮೇಘಶ್ರೀ ಹೊಸಬಾಳಿಕೆ ಕಾಲಿಟ್ಟಿದ್ದರು. ಆ ಬಳಿಕ ಕೂಡ ನಟನೆ ಮುಂದುವರೆಸಿದ್ದಾರೆ.

From On-Screen Villain to Audience Favorite Meghashree Embraces Negative Roles with Pride

ಮಂಡ್ಯ ಮೂಲದ ನಟಿ ಮೇಘಶ್ರೀ ಕೆಲ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಅಪೇಕ್ಷಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮ ಪಾತ್ರ ಹಾಗೂ ಜನರಿಂದ ಸಿಗುತ್ತಿರುವ ಬೆಂಬಲದ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ನೆಗೆಟಿವ್ ಪಾತ್ರಗಳೇ ಜಾಸ್ತಿ ಯಾಕೆ?

ಇಂತಹ ಪಾತ್ರ ಸಿಗುತ್ತಿರುವುದು ನನ್ನ ಆಶೀರ್ವಾದ. ನಾನು ನೆಗೆಟಿವ್ ಪಾತ್ರಗಳನ್ನೇ ಬಹಳ ಇಷ್ಟಪಟ್ಟು ನಟಿಸ್ತೀನಿ. ನಾನು ಇಷ್ಟಪಡ್ತೀನಿ ಎನ್ನುವುದಕ್ಕಿಂತ ಅಂತಹ ಪಾತ್ರಗಳೇ ನನ್ನನ್ನು ಹುಡುಕಿ ಬರ್ತಿವೆ. ಈ ಪಾತ್ರಕ್ಕೆ ಆಕೆನೇ ಸೂಕ್ತ ಎಂದು ಹುಡುಕಿ ಬರುತ್ತದೆ. ಬಹಳ ಸವಾಲು ಕೂಡ. ನನಗೆ ಬರುವ 99% ಪಾತ್ರಗಳು ನೆಗೆಟಿವ್ ಪಾತ್ರಗಳೇ ಆಗಿವೆ. ನಾನು ನಟಿಸಿರುವ 20 ಧಾರಾವಾಹಿಗಳಲ್ಲಿ 19ರಲ್ಲಿ ನೆಗೆಟಿವ್ ಪಾತ್ರ ಮಾಡಿದ್ದೀನಿ.

From On-Screen Villain to Audience Favorite Meghashree Embraces Negative Roles with Pride

ಅಪೇಕ್ಷಾ ಪಾತ್ರದ ಬಗ್ಗೆ ಹೇಳಿ

ನನ್ನ 2ನೇ ಧಾರಾವಾಹಿ ನಿರ್ದೇಶನ ಮಾಡಿದ್ದವರು ಕೋರಮಂಗಲ ಅನಿಲ್ ಸರ್. ಅವ್ರೇ ಈ ಧಾರಾವಾಹಿ ನಿರ್ದೇಶಕರು. ಅಂದು ನನಗೆ ನಟನೆ ಹೇಳಿಕೊಟ್ಟವ್ರು ಈಗ ನನ್ನ ನಟನೆ ನೋಡಿ ಮೆಚ್ಚಿಕೊಳ್ಳುತ್ತಾರೆ. ಅದಕ್ಕಿಂತ ಖುಷಿ ಬೇರೆ ಏನಿದೆ. ನಮ್ಮ ತಂಡ ಒಂದು ಫ್ಯಾಮಿಲಿ ರೀತಿ ಇದೆ. ಇಂತಾದೊಂದು ಧಾರಾವಾಹಿ ಸಿಕ್ಕಿರುವುದಕ್ಕೆ ಅದೃಷ್ಟ ಅನ್ನಿಸುತ್ತದೆ.

ಯಾರೋ ಅರ್ಧಕ್ಕೆ ಬಿಟ್ಟ ಪಾತ್ರಗಳೇ ಹೆಚ್ಚು ಸಿಕ್ತಿದ್ಯಾ?

ಯಾರೋ ಮಾಡಿಬಿಟ್ಟ ಪಾತ್ರಗಳನ್ನು ಮಾಡಲು ಕೆಲವರು ಒಪ್ಪಲ್ಲ. ಅದು ವರ್ಕ್ ಆಗಲ್ಲ. ಈ ಧಾರಾವಾಹಿಯಲ್ಲಿ ಕೂಡ ಅದೇ ರೀತಿ ಬೇರೆಯವರು ಮಾಡಿದ್ದ ಪಾತ್ರಕ್ಕೆ ನಾನು ಆಯ್ಕೆ ಆಗಿದ್ದೆ. ನಾನು ನಟಿಸಿರುವ ಒಂದಷ್ಟು ಧಾರಾವಾಹಿಗಳಲ್ಲಿ ಇದೇ ರೀತಿ ಆಗಿದೆ. ಹಿಂದೆ ಒಂದು ಧಾರಾವಾಹಿಯಲ್ಲಿ ಯಾರೋ ನೆಗೆಟಿವ್ ರೋಲ್ ಮಾಡ್ತಿದ್ರು. ಸೂಟ್ ಆಗ್ಲಿಲ್ಲ ಅಂತ ನನ್ನ ಕರೆದ್ರು. ಅದೆಲ್ಲವೂ ಕ್ಲಿಕ್ ಆಗಿದೆ.

ನಿಮ್ಮ ನಟನೆಗೆ ಮನೆಯವರ ಬೆಂಬಲ ಹೇಗಿದೆ?

ನಮ್ಮ ತಾಯಿ ಮನೆಗಿಂತ ಅತ್ತೆ ಮನೆಯವರ ಬೆಂಬಲ ಜಾಸ್ತಿಯಿದೆ. ನಾನೇ ಕೆಲವೊಮ್ಮೆ ನಟನೆ ಮಾಡಲ್ಲ, ಬೇರೆ ಏನಾದರೂ ಬ್ಯುಸಿನೆಸ್ ಮಾಡ್ತೀನಿ ಅಂದ್ರೆ ಒಪ್ಪಲ್ಲ. ನಟನೆ ಮಾಡಿ ಹೋಗಿ ಎಂದು ಹುರಿದುಂಬಿಸುತ್ತಾರೆ. ಮದುವೆ ಬಳಿಕ ನಟನೆ ಬೇಡ, ಇಂಡಸ್ಟ್ರಿ ಬೇಡ ಎಂದು ಹೇಳುವವರೇ ಹೆಚ್ಚು. ಆದರೆ ನಮ್ಮ ಮನೆಯಲ್ಲಿ ಪ್ರೋತ್ಸಾಹ ಚೆನ್ನಾಗಿದೆ.

ನಿಜ ಜೀವನದಲ್ಲಿ ಕೂಡ ನೀವು ತುಂಬಾ ಜೋರಾ?

ನಾನು ಸಾಫ್ಟ್ ಕಂಡಿತ ಅಲ್ಲ. ಧಾರಾವಾಹಿಗಳಲ್ಲಿ ಕೆಟ್ಟ ಪಾತ್ರ ಮಾಡ್ತೀನಿ ಅಂತ ಆ ರೀತಿ ಇರಲ್ಲ. ಆದರೆ ಮಾತನಾಡುವ ಶೈಲಿ ಸ್ವಲ್ಪ ಖಡಕ್ ಆಗಿಯೇ ಇರುತ್ತದೆ. ಮನೆಯಲ್ಲಿ ಮುದ್ದು ಮಾಡಿ ಬೆಳೆಸಿದ್ದಾರೆ. ಹಾಗಾಗಿ ಸ್ವಲ್ಪ ಜೋರೇ. ಕೆಟ್ಟ ಬುದ್ದಿ ಏನಿದ್ದರೂ ಬರೀ ಕ್ಯಾಮರಾ ಮುಂದೆ ನಟನೆ ಅಷ್ಟೆ. ಕೆಲವೊಮ್ಮೆ ನೆಗೆಟಿವ್ ಪಾತ್ರದಲ್ಲಿ ಹೀಗೆಲ್ಲಾ ನಟಿಸ್ಬೇಕಾ ಅನ್ನಿಸುತ್ತೆ. ಆದರೆ ಪಾತ್ರಕ್ಕೆ 100% ನ್ಯಾಯ ಒದಗಿಸಬೇಕು. ಆಗಲೇ ಜನ ಒಪ್ಪುವುದು. ಹಾಗಾಗಿ ಅದನ್ನು ಸವಾಲಾಗಿ ಸ್ವೀಕರಿಸುತ್ತೇನೆ.

ವೀಕ್ಷಕರಿಂದ ನಿಮ್ಮ ನಟನೆಗೆ ರೆಸ್ಪಾನ್ಸ್ ಹೇಗಿದೆ?

'ದೇವತೆ' ಅನ್ನೋ ಧಾರಾವಾಹಿಯಲ್ಲಿ ನಟಿಸಿದ್ದೆ. ನಾನು ಗರ್ಭಿಣಿಯನ್ನು ಸಾಯಿಸುವಂತಹ ಸನ್ನಿವೇಶಗಳಿತ್ತು. ಆಗ ರಸ್ತೆಯಲ್ಲಿ ಒಬ್ಬ ತಾಯಿ ಬಂದು ಬೈದಿದ್ದರು. ಮನೆಹಾಳಿ ನೀನು, ನಿನ್ನಂತ ಹೆಣ್ಣನ್ನು ಯಾರು ಹೆರಬಾರದು. ಇಂತಹ ಹೆಣ್ಣು ಮಕ್ಕಳು ನನಗೆ ಇದ್ದಿದ್ರೆ ವಿಷ ಹಾಕಿ ಸಾಯಿಸಿಬಿಡ್ತಿದ್ದೆ. ಬಸುರಿ ಹೆಂಗಸನ್ನು ಬಿಟ್ಟಿಲ್ಲ ನೀನು ಅಂತ ಬೈದಿದ್ದರು. ಮೊನ್ನೆ ಮಂತ್ರಾಲಯಕ್ಕೆ ಹೋದಾಗಲೂ ಜನ ಇದೇ ರೀತಿ ಕಾಂಪ್ಲಿಮೆಂಟ್ ಕೊಟ್ಟಿದ್ರು. ಜನ ನನ್ನ ಬೈಯ್ಬೇಕು. ಆಗ ನಾನು ಚೆನ್ನಾಗಿ ನಟಿಸಿದ್ದೀನಿ ಅಂತ ಅರ್ಥ.

ನಿಮ್ಮ ಮುಂದಿನ ಯೋಜನೆಗಳು?

ಸದ್ಯಕ್ಕೆ 'ಮೈನಾ' ಹಾಗೂ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಗಳಲ್ಲಿ ನಟಿಸ್ತಿದ್ದೀನಿ. ಹೊಸದಾಗಿ ಯಾವುದನ್ನು ಒಪ್ಪಿಕೊಂಡಿಲ್ಲ. ಮತ್ತೆ ನೆಗೆಟಿವ್ ಪಾತ್ರಗಳೇ ಬರ್ತಿವೆ. ಸದ್ಯಕ್ಕೆ ನಟನೆ ನಿಲ್ಲಿಸಿ ಬ್ಯುಸಿನೆಸ್ ಮಾಡುವ ಆಲೋಚನೆ ಇಲ್ಲ. ಬ್ಯುಸಿನೆಸ್ ಜೊತೆ ಜೊತೆಗೆ ನಟಿಸುತ್ತೇನೆ. ಎಷ್ಟು ದಿನ ಅವಕಾಶಗಳು ಸಿಗುತ್ತೋ ಅಷ್ಟು ದಿನ ನಟಿಸುತ್ತೇನೆ.

More from Filmibeat

Read more about: serial actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X