twitter
    For Quick Alerts
    ALLOW NOTIFICATIONS  
    For Daily Alerts

    ಗರುಡ ಗಮನ ವೃಷಭ ವಾಹನದಲ್ಲಿ ಹರಿ ಮತ್ತು ಶಿವ ಗೆದ್ದಿದ್ದು ಇದೊಂದೇ ಕಾರಣಕ್ಕೆ- ರಿಷಬ್ ಶೆಟ್ಟಿ

    |

    ಕಳೆದ ವಾರ ತೆರೆಕಂಡ ಸಿನಿಮಾ 'ಗರುಡ ಗಮನ ವೃಷಭ ವಾಹನ' ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ರಕ್ತಸಿಕ್ತ ಚರಿತ್ರೆಯನ್ನು ಕನ್ನಡಿಗರು ಹಾಡಿ ಹೊಗಳಿದ್ದಾರೆ. ಹರಿ ಮತ್ತು ಶಿವನ ಅಭಿನಯಕ್ಕೆ ಥಿಯೇಟರ್‌ನಲ್ಲಿ ಬೇಜಾನ್ ಶಿಳ್ಳೆಗಳು ಬಿದ್ದಿವೆ. ದ್ವೇಷ, ಅಸೂಯೆ, ಹೊಡೆದಾಟ, ಕೊಲೆ, ಗ್ಯಾಂಗ್‌ಸ್ಟರ್ ಜೊತೆ ಭಾವನಾತ್ಮಕ ಸನ್ನಿವೇಶಗಳೂ ಇವೆ. ಕೆಲವರು ಇದೊಂದು ಕಲ್ಟ್ ಸಿನಿಮಾ ಅಂತಿದ್ದಾರೆ. ಮತ್ತೆ ಕೆಲವರು ಕ್ಲಾಸಿಕ್ ಅಂತ ಹೊಗಳುತ್ತಿದ್ದಾರೆ.

    'ಗರುಡ ಗಮನ ವೃಷಭ ವಾಹನ' ಸಿನಿಮಾ ಮಂಗಳೂರಿನ ಗ್ಯಾಂಗ್‌ಸ್ಟರ್ ಕಥೆಯನ್ನು ತೆರೆಮೇಲೆ ತೆರೆದಿಟ್ಟಿದ್ದಾಗಿದೆ. ರೌದ್ರಾವತಾರ ತಾಳುವ ಶಿವ ಅಲಿಯಾಸ್ ರಾಜ್ ಬಿ ಶೆಟ್ಟಿ. ಚಾಣಕ್ಷನಾಗಿ ಗೆಲ್ಲುವ ಹರಿ ಅಲಿಯಾಸ್ ರಿಷಬ್ ಶೆಟ್ಟಿ. ಇಬ್ಬರ ಪಾತ್ರಗಳೂ ಒಂದಕ್ಕಿಂತ ಒಂದು ವಿಭಿನ್ನ ಅಂತ ಅನಿಸದೆ ಇರುವುದಿಲ್ಲ. ಗೆಲುವಿನ ಖುಷಿಯಲ್ಲಿರುವ ರಿಷಬ್ ಶೆಟ್ಟಿ ಹರಿ ಪಾತ್ರದ ಬಗ್ಗೆ, ಸಿನಿಮಾದ ಬಗ್ಗೆ, ರಾಜ್‌ ಬಿ ಶೆಟ್ಟಿ ಬಗ್ಗೆ, ಎಲ್ಲಕ್ಕಿಂತ ಹೆಚ್ಚಾಗಿ ಹರಿ ಮತ್ತು ಶಿವ ಪ್ರೇಕ್ಷಕರ ಮನಗೆದ್ದಿದ್ದು ಹೇಗೆ ಅನ್ನುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಮೂರು ದಿನದ ರೆಸ್ಪಾನ್ಸ್ ಹೇಗಿದೆ?

    ಮೂರು ದಿನದ ರೆಸ್ಪಾನ್ಸ್ ಹೇಗಿದೆ?

    "ಮೂರು ದಿನದ ರೆಸ್ಪಾನ್ಸ್ ಅದ್ಭುತವಾಗಿದೆ. ಮೊದಲು ಪ್ರೀಮಿಯರ್ ಓಪನ್ ಮಾಡಿದ್ವಿ. ಟೀಮ್ ಮತ್ತು ಪ್ರೇಕ್ಷಕರಿಗೆ ಅಂತ. ಅಲ್ಲಿಂದ ಸುಮಾರು 12 ಪ್ರೀಮಿಯರ್ ಶೋ ಓಪನ್ ಆಗಿತ್ತು. ಇಡೀ ಕರ್ನಾಟಕದಲ್ಲಿ ಸುಮಾರು 20 ಪ್ರೀಮಿಯರ್ ಶೋ ನಡೆದಿದೆ. ಇಲ್ಲಿ ಸಿಕ್ಕ ರೆಸ್ಪಾನ್ಸ್ ನಮಗೆ ದೊಡ್ಡ ಪಬ್ಲಿಸಿಟಿ ಆಗಿಬಿಡ್ತು. ಮೌತ್ ಟಾಕ್ ಆಗಿ ರಿಲೀಸ್ ದಿನ ಅದ್ಭುತ ರೆಸ್ಪಾನ್ ಸಿಕ್ಕಿಬಿಡ್ತು. ಮಳೆ ಇದ್ದರೂ ಕೂಡ ಮಧ್ಯಾಹ್ನದ ವೇಳೆದ ಥಿಯೇಟರ್ ತುಂಬಲು ಶುರುವಾಗಿತ್ತು. ಇನ್ನು ಶನಿವಾರ ಹಾಗೂ ಭಾನುವಾರ ಮಲ್ಟಿಪ್ಲೆಕ್ಸ್ ನವರೇ ಶೋಗಳನ್ನು ಹೆಚ್ಚಿಗೆ ಮಾಡ್ಕೊಂಡಿದ್ದಾರೆ." ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಹರಿ-ಶಿವನಿಗಾಗಿ ಹೆಚ್ಚಾಗಿದೆ ಸ್ಕ್ರೀನ್‌ಗಳ ಸಂಖ್ಯೆ

    ಹರಿ-ಶಿವನಿಗಾಗಿ ಹೆಚ್ಚಾಗಿದೆ ಸ್ಕ್ರೀನ್‌ಗಳ ಸಂಖ್ಯೆ

    " ಮೊದಲು 150 ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಿದ್ದೆವು. ಈಗ ಎರಡು ದಿನಗಳಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಗೆ ಆಗಿದೆ. ಎರಡನೇ ದಿನಕ್ಕೆ ಕೇವಲ ಬೆಂಗಳೂರಿನಲ್ಲೇ 200 ಶೋಗಳಾಗಿವೆ. ಬೇರೆ ಬೇರೆ ರಾಜ್ಯಗಳಲ್ಲೂ ರಿಲೀಸ್ ಮಾಡಿದ್ದೇವೆ. ಕೊಚ್ಚಿಯಲ್ಲಿ ಮೂರು ದಿನವೂ ಸೋಲ್ಡ್ ಔಟ್ ಆಗಿತ್ತು. ಎಲ್ಲಾ ಕಡೆಯಿಂದಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲಾ ಕಡೆನೂ ಕನ್ನಡದಲ್ಲೇ ಸಿನಿಮಾ ರಿಲೀಸ್ ಮಾಡಿದ್ದೆವು." ಎನ್ನುತ್ತಾರೆ ನಟ ರಿಷಬ್ ಶೆಟ್ಟಿ.

    ವಿದೇಶದಲ್ಲೂ ಸಿನಿಮಾಗೆ ಹೆಚ್ಚಿದ ಬೇಡಿಕೆ

    ವಿದೇಶದಲ್ಲೂ ಸಿನಿಮಾಗೆ ಹೆಚ್ಚಿದ ಬೇಡಿಕೆ

    "ಅಮೆರಿಕಾ, ಸಿಂಗಾಪುರ, ಯುಎಇ ಸೇರಿದಂತೆ ಪ್ರಮುಖ ದೇಶಗಳಲ್ಲಿ ಗರುಡ ಗಮನ ವೃಷಭ ವಾಹನ ಸಿನಿಮಾ ರಿಲೀಸ್ ಆಗಿದೆ. ಜರ್ಮನಿಯಲ್ಲಿ ಬೇಡಿಕೆ ಹೆಚ್ಚಿದೆ. ಇನ್ನೂ ಬೇರೆ ಬೇರೆ ದೇಶಗಳಲ್ಲಿ ಕೇಳುತ್ತಿದ್ದಾರೆ. ಹಂತವಾಗಿ ಹಂತವಾಗಿ ರಿಲೀಸ್ ಆಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ದೆಹಲಿ, ಬಾಂಬೆ, ಕೊಚ್ಚಿ, ಚೆನ್ನೈನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಹೌಸ್‌ಫುಲ್ ಹೋಗಿದೆ. ಇದು ನಮಗೆ ತುಂಬಾನೇ ಖುಷಿ ಕೊಟ್ಟಿದೆ." ಅಂತ ಖುಷಿ ವ್ಯಕ್ತಪಡಿಸಿದ್ದಾರೆ.

    ಹರಿ-ಶಿವ ಗೆಲುವಿಗೆ ಕಾರಣವೇನು?

    ಹರಿ-ಶಿವ ಗೆಲುವಿಗೆ ಕಾರಣವೇನು?

    "ನಾವಿಬ್ಬರೂ ಒಳ್ಳೆ ಟೀಮ್. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವಾಗ, ನಾನು ಚಿಕ್ಕವನು.. ನೀನು ದೊಡ್ಡವನು ಅನ್ನುವ ಅಹಂ ಇಟ್ಟುಕೊಂಡು ಕೆಲಸ ಮಾಡಿಲ್ಲ. ಒಂದು ಸಿನಿಮಾವನ್ನು ಪ್ರಾಮಾಣಿಕವಾಗಿ ಚೆನ್ನಾಗಿ ಮಾಡ್ಬೇಕು ಅನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡುತ್ತೇವೆ. ವೈಯುಕ್ತಿವಾಗಿ ಇದೇ ಜನರನ್ನು ಇಷ್ಟು ಮಟ್ಟಿಗೆ ತಲುಪಲು ಕಾರಣ ಆಯ್ತು ಅಂತ ಅಂದುಕೊಳ್ಳುತ್ತೇನೆ. ಮುಂದೆನೂ ನಾವು ಜೊತೆಯಾಗಿ ಕೆಲಸ ಮಾಡಲು ಇಷ್ಟ ಪಡುತ್ತೇವೆ." ಅಂತಿದ್ದಾರೆ ರಿಷಬ್ ಶೆಟ್ಟಿ.

    English summary
    Rishab Shetty revels about the Success of the movie Garuda Gamana Vrushabha Vahana. He and Raj B Shetty does not have an ego to while working on films says Rishab Shetty
    Tuesday, November 23, 2021, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X