For Quick Alerts
  ALLOW NOTIFICATIONS  
  For Daily Alerts

  'ಆ' ತರಹದ ಸಿನಿಮಾ ಮಾಡುವ ಜರೂರತ್ತು ಗಣೇಶ್ ಗೆ ಇಲ್ಲ.!

  By Harshitha
  |

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'Zooಮ್' ಸಿನಿಮಾ ಮೊನ್ನೆ ಶುಕ್ರವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿದೆ.

  ಇದೇ ಖುಷಿಯಲ್ಲಿ ಇವತ್ತು ಬೆಳಗ್ಗೆ ಗಣೇಶ್ ನಿವಾಸ 'ಗಣಪ'ದಲ್ಲಿ 'Zooಮ್' ಚಿತ್ರದ ಪತ್ರಿಕಾಗೋಷ್ಟಿ ನಡೆಯಿತು. ಮೂರು ದಿನಗಳಲ್ಲಿ ಬರೋಬ್ಬರಿ ಐದು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ 'Zooಮ್' ಬಗ್ಗೆ ಗಣೇಶ್ ಮಾತಿಗಿಳಿದರು. [ಚಿತ್ರ ವಿಮರ್ಶೆ: 'Zooಮ್' ಮಾಡಿ ನೋಡಿದ್ರೂ, 'ಜುಮ್' ಎನಿಸದು.!]

  ಅದೇ ಗ್ಯಾಪ್ ನಲ್ಲಿ ''ಆ' ತರಹದ ಸಿನಿಮಾ ಮಾಡುವ ಜರೂರತ್ತು ನನಗೆ ಇಲ್ಲ'' ಅಂತ ಖುದ್ದು ಗಣೇಶ್ ಹೆಮ್ಮೆಯಿಂದ ಹೇಳಿಕೊಂಡರು. ಅಷ್ಟಕ್ಕೂ ಗಣೇಶ್ 'ಆ' ಮಾತು ಹೇಳಿದ್ದು ಯಾಕೆ.? ಪತ್ರಿಕಾಗೋಷ್ಟಿಯಲ್ಲಿ ಗಣೇಶ್ ಜೊತೆಗೆ ನಡೆದ ಸಂವಾದ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ, ಓದಿರಿ....

  * 'Zooಮ್' ಚಿತ್ರದ ಝೂಮಿಂಗ್ ಕಲೆಕ್ಷನ್ ಬಗ್ಗೆ ನಿಮ್ಮ ಮಾತು....

  * 'Zooಮ್' ಚಿತ್ರದ ಝೂಮಿಂಗ್ ಕಲೆಕ್ಷನ್ ಬಗ್ಗೆ ನಿಮ್ಮ ಮಾತು....

  - ನಾವು ತುಂಬು ಇಷ್ಟ ಪಟ್ಟು ಮಾಡಿದ ಸಿನಿಮಾಗೆ ಈ ತರಹ ಪ್ರತಿಕ್ರಿಯೆ ಸಿಕ್ಕಾಗ ತುಂಬಾ ಖುಷಿ ಆಗುತ್ತೆ. ಪ್ರಶಾಂತ್ ರಾಜ್ ಕಲರ್ ಫುಲ್ ಡೈರೆಕ್ಟರ್. ಅವರ ಮ್ಯೂಸಿಕ್ ಸೆನ್ಸ್ ಬಹಳ ಚೆನ್ನಾಗಿದೆ. ಗಣೇಶ್ ಗೆ ಹೊಸ ಹೇರ್ ಸ್ಟೈಲ್ ಮಾಡಿ, ಕಾಸ್ಟ್ಯೂಮ್ಸ್ ಡಿಸೈನ್ ಕೂಡ ಮಾಡಿದ್ದಾರೆ. ಓವರ್ ಆಲ್ 'Zooಮ್' ಎಂಟರ್ ಟೇನಿಂಗ್ ಪ್ಯಾಕೇಜ್. ಅದು ಚೆನ್ನಾಗಿ ಬಂದಿರುವುದರಿಂದಲೇ ಇವತ್ತು ರೆಸ್ಪಾನ್ಸ್ ಕೂಡ ಚೆನ್ನಾಗಿದೆ.

  * ನಿಮ್ಮ ಹುಟ್ಟುಹಬ್ಬ ಸಂಭ್ರಮದ ಜೊತೆಗೆ ಸಕ್ಸಸ್. ಡಬಲ್ ಧಮಾಕಾ ಅನ್ಬಹುದಲ್ಲಾ..!

  * ನಿಮ್ಮ ಹುಟ್ಟುಹಬ್ಬ ಸಂಭ್ರಮದ ಜೊತೆಗೆ ಸಕ್ಸಸ್. ಡಬಲ್ ಧಮಾಕಾ ಅನ್ಬಹುದಲ್ಲಾ..!

  - ಬರ್ತಡೆಗೆ ನನ್ನ ಕಡೆಯಿಂದ ಆಡಿಯನ್ಸ್ ಗೆ 'Zooಮ್' ಗಿಫ್ಟ್ ಆಗಿತ್ತು. ಅದರ ರಿಟರ್ನ್ ಗಿಫ್ಟ್ ಆಗಿ ಜನ ನನಗೆ ಯಶಸ್ಸು ಕೊಟ್ಟಿದ್ದಾರೆ.

  * ಪರಭಾಷೆಯ ಚಿತ್ರಗಳಿಗೆ ಗುರುತಿಸಿಕೊಂಡಿರುವ ಥಿಯೇಟರ್ ಗಳಲ್ಲೂ 'Zooಮ್' ಕಲೆಕ್ಷನ್ ಚೆನ್ನಾಗಿದ್ಯಂತೆ.?

  * ಪರಭಾಷೆಯ ಚಿತ್ರಗಳಿಗೆ ಗುರುತಿಸಿಕೊಂಡಿರುವ ಥಿಯೇಟರ್ ಗಳಲ್ಲೂ 'Zooಮ್' ಕಲೆಕ್ಷನ್ ಚೆನ್ನಾಗಿದ್ಯಂತೆ.?

  - ಹೌದು, ಊರ್ವಶಿ ಥಿಯೇಟರ್ ನಲ್ಲಿ ಭಾನುವಾರ ಹೌಸ್ ಫುಲ್ ಓಡಿದೆ. ಇದನ್ನ ಕೇಳಿ ನನಗೆ ತುಂಬಾ ಖುಷಿ ಆಯ್ತು. ಒಳ್ಳೆ ಸಿನಿಮಾ ಜೊತೆಗೆ ಪ್ರಮೋಷನ್ ಚೆನ್ನಾಗಿದ್ದರೆ, ಎಲ್ಲಿ ಬೇಕಾದರೂ ಓಡುತ್ತೆ ಅನ್ನೋದಕ್ಕೆ ನಮ್ಮ 'Zooಮ್' ಸಿನಿಮಾ ಉದಾಹರಣೆ.

  * ನಿಮ್ಮ ಪತ್ನಿ ಶಿಲ್ಪಾ ಕೂಡ ಊರ್ವಶಿ ಥಿಯೇಟರ್ ನಲ್ಲಿ 'Zooಮ್' ಸಿನಿಮಾ ನೋಡಿದ್ರಂತೆ. ಅವರ ಪ್ರತಿಕ್ರಿಯೆ ಹೇಗಿತ್ತು?

  * ನಿಮ್ಮ ಪತ್ನಿ ಶಿಲ್ಪಾ ಕೂಡ ಊರ್ವಶಿ ಥಿಯೇಟರ್ ನಲ್ಲಿ 'Zooಮ್' ಸಿನಿಮಾ ನೋಡಿದ್ರಂತೆ. ಅವರ ಪ್ರತಿಕ್ರಿಯೆ ಹೇಗಿತ್ತು?

  - She was very happy. ಅಲ್ಲಿ ಜನ ತುಂಬಾ ಖುಷಿ ಪಡ್ತಿದ್ದನ್ನ ನೋಡಿ, ಅವರಿಗೂ ಸಖತ್ ಖುಷಿ ಆಗಿದೆ. ಸಿನಿಮಾ ನೋಡಿ ಶಿಲ್ಪಾ ಕೂಡ ತುಂಬಾ ನಗ್ತಿದ್ರು.

  * 'Zooಮ್' ಸಿನಿಮಾ ನೋಡೋರಿಗೆ, 'Zooಮ್' ಬತ್ತಾಸ್ ಕೂಡ ಸಿಕ್ತಿದ್ಯಂತೆ.?

  * 'Zooಮ್' ಸಿನಿಮಾ ನೋಡೋರಿಗೆ, 'Zooಮ್' ಬತ್ತಾಸ್ ಕೂಡ ಸಿಕ್ತಿದ್ಯಂತೆ.?

  - ಹ್ಹಾ...ಹ್ಹಾ...ಮುಖ್ಯ ಚಿತ್ರಮಂದಿರಗಳಲ್ಲಿ ಮಾತ್ರ ಟಿಕೆಟ್ ಜೊತೆ ಬತ್ತಾಸ್ ಕೂಡ ಹಂಚ್ತಿದ್ವಿ. ಮೊದಲು ತಿಂದು ನಂತರ ಸಿನಿಮಾ ನೋಡಿದ್ಮೇಲೆ 'ನಾವು ತಿಂದ್ವಲ್ಲಾ, ನಮಗೇನಾಗುತ್ತೆ' ಅಂತ ಜನ 'ಧೂಮಕೇತು ಲ್ಯಾಬ್' ಒಳಗೆ ಬಂದುಬಿಡ್ತಾರೆ. ಈ ತರಹ ಒಂದು ಪ್ರಮೋಷನ್ ಸ್ಟ್ರಾಟೆಜಿ ಮಾಡಿಕೊಂಡ್ವಿ. ಅದು ವರ್ಕೌಟ್ ಆಗಿದೆ.

  * 'Zooಮ್' ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್ಸ್ ಹೇರಳವಾಗಿದೆ. ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ನೀವೇನ್ ಹೇಳುತ್ತೀರಾ.?

  * 'Zooಮ್' ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್ಸ್ ಹೇರಳವಾಗಿದೆ. ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ನೀವೇನ್ ಹೇಳುತ್ತೀರಾ.?

  - ಆ ತರಹದ ಸಿನಿಮಾಗಳನ್ನ ನಾನು ಮಾಡುವುದಿಲ್ಲ. ಅಂತಹ ಸಿನಿಮಾಗಳು ನನಗೆ ಇಷ್ಟವಾಗುವುದಿಲ್ಲ. ಇದು ಕೂಡ ಫ್ಯಾಮಿಲಿ ಎಂಟರ್ಟೇನ್ಮೆಂಟ್. Vulgar ಮತ್ತು Naughty ಮಧ್ಯೆ ತುಂಬಾ ದೊಡ್ಡ ಗ್ಯಾಪ್ ಇದೆ. ಆ ತರಹದ ಸಿನಿಮಾ ಮಾಡಿ ಕಲೆಕ್ಷನ್ ಮಾಡ್ಬೇಕು ಎಂಬ ಜರೂರತ್ತು ಗಣೇಶ್ ಗೆ ಇಲ್ಲ. ನಾನೂ 'ಸೂಪರ್ ಮಿನಿಟ್' ಅಂತ ಒಂದು ಕಾರ್ಯಕ್ರಮ ಮಾಡಿದ್ದೀನಿ. ಅದರಲ್ಲಿ ಚಿಕ್ಕ-ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರನ್ನೂ ನೋಡಿದ್ದೇನೆ. ಪ್ರೇಕ್ಷಕರು ನನ್ನಿಂದ ಏನನ್ನ ನಿರೀಕ್ಷೆ ಮಾಡ್ತಾರೆ ಎಂಬ ಜವಾಬ್ದಾರಿ ನನ್ನ ಮೇಲಿದೆ.

  English summary
  Golden Star Ganesh and Radhika Pandit starrer Kannada Movie 'Zoom' has collected more than 5 crores in just 3 days at Boxoffice. Here is an interview with Ganesh on 'Zoom' movie success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X