ಉತ್ತರ ಕರ್ನಾಟಕದ ಇಂಜಿನಿಯರ್ ಈಗ 'ಗುಳ್ಟು' ಹೀರೋ
ಕನ್ನಡ ಸಿನಿಮಾರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ವಾರಕ್ಕೆ ಎಂಟು-ಒಂಬತ್ತು ಸಿನಿಮಾಗಳು ಬಿಡುಗಡೆ ಆಗುತ್ತವೆ, ಲೆಕ್ಕಕ್ಕೆ ಇಲ್ಲದಂತೆ ಕಣ್ಮರೆ ಆಗುತ್ತವೆ. ಆದರೆ ಕೆಲ ಚಿತ್ರಗಳು ಮಾತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಕ್ಸಸ್ ಆಗುತ್ತೆ. ಸದ್ಯ ಅಂತದ್ದೇ ಸಾಲಿನಲ್ಲಿ ನಿಂತಿರುವ ಕನ್ನಡದ ಸಿನಿಮಾ ಗುಳ್ಟು.
ಗುಳ್ಟು ಚಿತ್ರ ಟೈಟಲ್ ನಿಂದಲೇ ಪ್ರೇಕ್ಷಕರನ್ನ ಆಕರ್ಷಣೆ ಮಾಡಿದ ಸಿನಿಮಾ. ನಿರ್ಮಾಪಕರಿಗಾಗಿ ಚಿತ್ರತಂಡ ಮಾಡಿದ್ದ ಪ್ರೀ ಟೀಸರ್ ನಿಂದಲೇ ಗಾಂಧಿನಗರದ ಮಂದಿ ಗುಳ್ಟು ಹಿಂದೆ ಬಿದ್ದಿದ್ದರು. ಗುಳ್ಟು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನ ಎಂಟ್ರಿ ಆಗುತ್ತಿದೆ. ಉತ್ತರ ಕರ್ನಾಟಕದ ಮೂಲಕ ಯುವ ನಾಯಕ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುವ ಎಲ್ಲಾ ಸೂಚನೆ ನೀಡಿದ್ದಾನೆ.
ಗುಳ್ಟು ಚಿತ್ರದ ನಾಯಕ ಯಾರು? ಹೊಸ ನಾಯನ ಎಂಟ್ರಿ ಕನ್ನಡ ಸಿನಿಮಾರಂಗದಲ್ಲಿ ಸ್ವಾಗತ ಹೇಗಿದೆ? ಗುಟ್ಳು ಚಿತ್ರದ ಬಗ್ಗೆ ನವ ನಾಯಕ ನವೀನ್ ಶಂಕರ್ ಹೇಳಿದ್ದೇನು? ಚಿತ್ರರಂಗದ ಅನುಭವ ಹಾಗೂ ಗುಳ್ಟು ಬಗ್ಗೆ ಫಿಲ್ಮಿ ಬೀಟ್ ಜೊತೆ ಮಾತನಾಡಿದ್ದಾರೆ. ಮುಂದೆ ಓದಿ

ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿದ್ದೀರಾ ನಿಮ್ಮ ಪರಿಚಯ?
ನಾನು ನವೀನ್ ಶಂಕರ್. ಗುಳ್ಟು ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಬರುತ್ತಿದ್ದೇನೆ, ಉತ್ತರಕರ್ನಾಟಕದ ಇಳಕಲ್ ಬಳಿ ಒಂದು ಹಳ್ಳಿಯಿಂದ ಬಂದಿದ್ದು, ವಿದ್ಯಾಭ್ಯಾಸ ಎಲ್ಲಾ ಇಳಕಲ್ ನಲ್ಲೇ. ಇಂಜಿನಿಯರಿಂಗ್ ಮಾಡುವಾಗಲೇ ಸಿನಿಮಾರಂಗಲ್ಲಿ ಗುರುತಿಸಿಕೊಳ್ಳಬೇಕು, ಕೆಲಸಮಾಡಬೇಕು ಎನ್ನುವ ಆಸೆ ಇತ್ತು.

ಗುಳ್ಟು ಸಿನಿಮಾ ಆಫರ್ ಸಿಕ್ಕಿದ್ದು ಹೇಗೆ.?
ಗುಳ್ಟು ನಿರ್ದೇಶಕರು ಹಾಗೂ ನಾನು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದು. ಇಬ್ಬರಿಗೂ ಕಾಲೇಜ್ ಟೈಂ ನಲ್ಲಿಯೇ ಸಿನಿಮಾ ಮಾಡುವ ಉದ್ದೇಶ ಇತ್ತು. ನಾನು ಕೆಲ ವರ್ಷಗಳು ರಂಗಭೂಮಿಯಲ್ಲಿ ಕೆಲಸ ಮಾಡಿದ್ದೆ ನಂತರ ಇಬ್ಬರು ಬಿಡುವು ಮಾಡಿಕೊಂಡು ಸಿನಿಮಾ ಮಾಡುವ ನಿರ್ಧಾರ ಮಾಡಿದ್ವಿ.

ಸಿನಿಮಾದಲ್ಲಿ ನಿಮ್ಮ ಪಾತ್ರ?
ಚಿತ್ರದಲ್ಲಿಯೂ ನಾನು ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ, ತನ್ನ ಆಸೆ ಕನಸುಗಳನ್ನ ಪೂರ್ತಿ ಮಾಡಿಕೊಳ್ಳುವ ಸಮಯದಲ್ಲಿ ಕ್ರೈಂ ಅವರ ಲೈಫ್ ನಲ್ಲಿ ಹೇಗೆ ಎಂಟ್ರಿ ಆಗುತ್ತೆ ನಾಯಕ ನಂತರ ಇವುಗಳನ್ನ ಹೇಗೆ ನಿಭಾಯಿಸುತ್ತಾನೆ ಎನ್ನುವುದೇ ನನ್ನ ಪಾತ್ರ.

'ಗುಳ್ಟು' ಅಂದರೆ ಯಾರು?
'ಗುಳ್ಟು' ಅಂದರೆ ಪದ ಅಥವಾ ವ್ಯಕ್ತಿ ಅಂತ ಹೇಳಲು ಸಾಧ್ಯವಿಲ್ಲ. ಸಿನಿಮಾ ನೋಡುವಾಗ ಅದಕ್ಕೆ ಸೂಕ್ತ ಅರ್ಥ ಸಿಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ನಾವುಗಳು ಗೊತ್ತಿಲ್ಲದೆ ಒಬ್ಬನಿಗೆ ಶರಣಾಗಿದ್ದೇವೆ. ಅವನನ್ನ ಕಳ್ಳ ಅಂತಲೂ ಹೇಳುವುದಕ್ಕೆ ಸಾಧ್ಯವಿಲ್ಲ, ನಮಗೆ ತಿಳಿದಿದ್ದೇ ನಮ್ಮೆಲ್ಲಾ ಮಾಹಿತಿಯನ್ನ ಕೊಟ್ಟಿದ್ದೇವೆ ಅವನೇ ಗುಳ್ಟು. ಒಟ್ಟಾರೆ ಚಿತ್ರ ನೋಡಿದಾಗ ಸರಿಯಾದ ಅರ್ಥ ಸಿಗುತ್ತೆ.

ಸೋನು ಗೌಡ ಬಗ್ಗೆ ಹೇಳಿ.?
ಸೋನು ಅವರನ್ನ ಭೇಟಿ ಮಾಡಿದ್ದು ಸಿನಿಮಾ ಆರಂಭಕ್ಕೂ ಮುಂಚೆ ಟೀಸರ್ ಶೂಟಿಂಗ್ ಮಾಡುವ ಸಂದರ್ಭದಲ್ಲಿ. ತುಂಬಾ ಒಳ್ಳೆ ಕಲಾವಿದೆ ಅವರು, ಯಾವತ್ತಿಗೂ ಸೀನಿಯರ್ ಎನ್ನುವುದನ್ನ ತೋರಿಸಿಕೊಂಡಿಲ್ಲ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.

'ಗುಳ್ಟು' ಸಿನಿಮಾ ಯಾಕೆ ನೋಡಬೇಕು?
ಗುಳ್ಟು ಸಾಮಾನ್ಯವಾದ ಚಿತ್ರ ಅಲ್ಲ. ಸಚಿತ್ರ ನೋಡಿ ಹೊಸ ಬರುವಾಗ ನಿಮ್ಮಲ್ಲಿ ಚಿಕ್ಕ ಬದಲಾವಣೆ ಆಗಿತ್ತು. ಹೊಸ ರೀತಿಯ ವಿಭಿನ್ನ ಚಿತ್ರ ಅಂತ ಹೇಳಬಹುದು. ಸೈಬರ್ ಕ್ರೈಂ ಇದೆ ಅನ್ನುವುದು ಗೊತ್ತಿರುವ ವಿಚಾರ ಅದರ ಬಗ್ಗೆಯೂ ಸಿನಿಮಾದಲ್ಲಿ ಮನೋರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದೇವೆ.

ವಿಭಿನ್ನ ರೀತಿ ಪ್ರಮೋಷನ್ ಏಕೆ?
ಸಾಮಾನ್ಯವಾಗಿ ನಮ್ಮ ಸಿನಿಮಾ ಚೆನ್ನಾಗಿದೆ, ಹಾಡುಗಳು ಚೆನ್ನಾಗಿದೆ ಎಂದು ಹೇಳುವುದು ಕಾಮನ್ ಎನ್ನಿಸಿತ್ತು, ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಚಿತ್ರದ ಕಂಟೆಂಟ್ ಮೇಲೆ ಪ್ರಚಾರ ಆರಮಭ ಮಾಡಬೇಕು ಎನ್ನುವ ಆಲೋಚನೆ ಇತ್ತು. ಹಾಗಾಗಿ ಹೊಸ ರೀತಿಯ ಪ್ರಯತ್ನಗಳನ್ನ ಮಾಡಿದ್ದೇವೆ.


Click it and Unblock the Notifications











