ಮದುವೆಯಾದ ಮೇಲೆ ನಟಿಯರಿಗೆ ಪ್ರಾಮುಖ್ಯತೆ ಕಡಿಮೆ: ಹೇಮ ಬೇಸರದ ನುಡಿ

Recommended Video

'ಅಮೆರಿಕಾ ಅಮೆರಿಕಾ' ಚಿತ್ರದ ನಟಿ ಹೇಮಾ ಜೊತೆ Exclusive Talk | Hema Prabath | Filmibeat Kannada

ಚಿತ್ರರಂಗದಲ್ಲಿ ನಟಿಯರು ಮದುವೆಯಾದ ನಂತರ ಸಿನಿಮಾ ಮಾಡುವುದು ತೀರ ಕಡಿಮೆ. ಆ ರೀತಿ ವಿವಾಹದ ನಂತರವೂ ದೊಡ್ಡ ಅವಕಾಶ, ಯಶಸ್ಸು ಪಡೆದ ನಟಿಯರು ಕೆಲವರು ಮಾತ್ರ.

ಇದೀಗ ಈ ಬಗ್ಗೆ ನಟಿ ಹೇಮಾ ಪ್ರಭಾತ್ ಕೂಡ ಮಾತನಾಡಿದ್ದಾರೆ. 'ಫಿಲ್ಮಿಬೀಟ್ ಕನ್ನಡ'ದ ಸಂದರ್ಶನದಲ್ಲಿ ಮಾತನಾಡುವ ವೇಳೆ ಚಿತ್ರರಂಗದಲ್ಲಿ ನಟಿಯರಿಗೆ ಮದುವೆಯ ನಂತರ ಸಿಗುವ ಪ್ರಾಮುಖ್ಯತೆ ಕಡಿಮೆ ಎಂದಿದ್ದಾರೆ.

'ಅಮೇರಿಕಾ ಅಮೇರಿಕಾ' ಸಿನಿಮಾ ದೊಡ್ಡ ಗೆಲುವು ಕಂಡ ಮೇಲೆ ಹೇಮಾ ನಟಿಸಿದ್ದು, ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರ. ಯಾಕೆ ನೀವು ಚಿತ್ರರಂಗದಿಂದ ಬೇಗ ನಿರ್ಗಮಿಸಿದ್ರಿ? ಎಂದರೆ, ಕೆಲವು ಕಾರಣಗಳನ್ನು ಅವರು ನೀಡಿದರು. ಅದರಲ್ಲಿ ಒಂದು ಗಮನಿಸಬೇಕಾದ ಅಂಶವಾಗಿದೆ.

ಮದುವೆ ನಂತರ ಬಂತು 'ಅಮೇರಿಕಾ ಅಮೇರಿಕಾ'

ಮದುವೆ ನಂತರ ಬಂತು 'ಅಮೇರಿಕಾ ಅಮೇರಿಕಾ'

'ಅಮೇರಿಕಾ ಅಮೇರಿಕಾ' ಸಿನಿಮಾದ ಸಮಯದಲ್ಲಿಯೇ ಹೇಮಾ ವಿವಾಹ ನಡೆಯಿತು. ಮದುವೆಯ ನಂತರ ಬಿಡುಗಡೆಯಾದ ಸಿನಿಮಾ ದೊಡ್ಡ ಹಿಟ್ ಆಯ್ತು. ಹೇಮಾ ನಟಿಸಿದ್ದ ಭೂಮಿ ಪಾತ್ರಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ, ಅನೇಕ ಅವಕಾಶಗಳು ಅವರಿಗೆ ಹುಡುಕಿಕೊಂಡು ಬಂದವು. ಆದರೆ, ಹೇಮಾ ಆ ಸಮಯದಲ್ಲಿ ಗೊಂದಲದಲ್ಲಿ ಇದ್ದರು.

ತಾಳಿ ಬಂದ ಮೇಲೆ ಪ್ರಾಮುಖ್ಯತೆ ಕಡಿಮೆ

ತಾಳಿ ಬಂದ ಮೇಲೆ ಪ್ರಾಮುಖ್ಯತೆ ಕಡಿಮೆ

ಮದುವೆಯ ನಂತರ ಹೇಮಾಗೆ ಅವಕಾಶಗಳು ಬಂದರೂ, ಯಾವುದು ಅಷ್ಟೊಂದು ಇಷ್ಟ ಆಗಲಿಲ್ಲವಂತೆ. ಆದರೆ, 'ರವಿಮಾಮ' ಹಾಗೂ 'ಸಂಭ್ರಮ' ಸಿನಿಮಾಗಳಲ್ಲಿ ನಟಿಸಿದರು. ಆ ನಂತರ ಯಾವುದೇ ಸಿನಿಮಾ ಮಾಡಲು ಮನಸ್ಸು ಒಪ್ಪಲಿಲ್ಲ. ವಿವಾಹವಾದ ಮೇಲೆ ನಟಿಯರಿಗೆ ಸಿಗುವ ಪ್ರಾಮುಖ್ಯತೆ ಕಡಿಮೆ ಆಗುತ್ತದೆ ಎಂದು ಆಗ ಅವರಿಗೆ ಅರ್ಥವಾಯಿತಂತೆ.

ಸಿನಿಮಾದಿಂದ ಕಿರುತೆರೆಗೆ

ಸಿನಿಮಾದಿಂದ ಕಿರುತೆರೆಗೆ

ಸಿನಿಮಾ ಕ್ಷೇತ್ರ ಬೇಡ ಎಂದು ನಿರ್ಧಾರ ಮಾಡಿದ ಹೇಮಾ ನಂತರ ಟಿವಿ ಕ್ಷೇತ್ರದಲ್ಲಿ ಬ್ಯುಸಿಯಾದರು. ಸತತ 10 ವರ್ಷ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದರು. ಟಿವಿ ಸೀರಿಯಲ್ ಗಳಲ್ಲಿಯೇ ಹೆಚ್ಚು ಖುಷಿ ಹೊಂದಿದ ಹೇಮಾ ಬಳಿಕ ಸಿನಿಮಾ ಮಾಡಲಿಲ್ಲ. ಈವರಗೆ ಆರು ಸಿನಿಮಾಗಳಲ್ಲಿ ಮಾತ್ರ ಹೇಮಾ ನಟಿಸಿದ್ದಾರೆ.

ಒಳ್ಳೆಯ ಪಾತ್ರ ಬಹಳ ಮುಖ್ಯ

ಒಳ್ಳೆಯ ಪಾತ್ರ ಬಹಳ ಮುಖ್ಯ

ಒಂದು ಸಿನಿಮಾದಲ್ಲಿ ತಮ್ಮ ಪಾತ್ರ ಏನು ಎನ್ನುವುದು ಹೇಮಾರಿಗೆ ಬಹಳ ಮುಖ್ಯವಂತೆ. ಹೀಗಾಗಿ ಬಂದ ಅದೆಷ್ಟೋ ಅವಕಾಶಗಳನ್ನು ನಿರಾಕರಿಸಿದ್ದಾರೆ. ಕಥೆ ಹೇಳಲಿಲ್ಲ ಎಂಬ ಕಾರಣಕ್ಕೆ ರಜನಿಕಾಂತ್ ಸಿನಿಮಾವನ್ನು ಕೈ ಬಿಟ್ಟಿದ್ದಾರೆ. ಕಡಿಮೆ ಸಿನಿಮಾ ಮಾಡಿದರೂ, ಒಳ್ಳೆಯ ಹಾಗೂ ಜನ ನೆನಪಿನಲ್ಲಿ ಇಟ್ಟುಕೊಳ್ಳುವ ಸಿನಿಮಾ ಮಾಡಬೇಕು ಎನ್ನವುದು ಹೇಮಾ ಅಭಿಪ್ರಾಯ.

More from Filmibeat

English summary
Kannada actress Hema Prabhath spoke about a actress life after marrige.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X