ಬರ್ತಡೇ ಸ್ಪೆಷಲ್: ಚಂದನವನದ ಗೌರವ, ಕುಸ್ತಿಯಲ್ಲಿ ಕೌರವ

By Pavithra

Recommended Video

ರಿಷಬ್ ಶೆಟ್ಟಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದು ಮಾಹಿತಿ..!! | Filmibeat Kannada

ಕನ್ನಡ ಚಿತ್ರರಂಗದಲ್ಲಿ ಸುಮಾರು 13 ವರ್ಷಗಳು ಕೆಲಸ ಮಾಡಿದ ನಂತರ ಇವರು ಸಕ್ಸಸ್ ಫುಲ್ ಡೈರೆಕ್ಟರ್ ಆಗಿ ಪ್ರೇಕ್ಷಕರ ಮುಂದೆ ಗುರುತಿಸಿಕೊಂಡವರು. ಕಿರಿಕ್ ಡೈರೆಕ್ಟರ್ ಜೊತೆಗೆ ಸೂಪರ್ ಆಕ್ಟರ್ ಅಂತಾನೇ ಫೇಮಸ್. ಅಣ್ಣಾವ್ರ ಕಟ್ಟಾ ಅಭಿಮಾನಿ, ವಿಷ್ಣು ಅವರ ರೆಟ್ರೋ ಲುಕ್ ಅಂದ್ರೆ ಬಾರಿ ಪ್ರೀತಿ.

ಸಿನಿಮಾರಂಗದ ಏಳು ಬೀಳು ಕಂಡರು ಯಾವುದನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳದೆ ನಗುನಗುತ್ತಾ ಎಲ್ಲರಲ್ಲೂ ಬೆರೆಯುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ನಟ, ನಿರ್ದೇಶಕ, ನಿರ್ಮಾಪಕನಾಗಿ ಸ್ಯಾಂಡಲ್ ವುಡ್ ನಲ್ಲಿ ಶೈನ್ ಆಗಿರುವ ರಿಷಬ್ ಶೆಟ್ಟಿ ತೊಡೆ ತಟ್ಟಿ ಕುಸ್ತಿ ಅಖಾಡಕ್ಕೆ ಇಳಿದರೆ ಕೌರವ. ಹೀಗೆ ರಿಷಬ್ ಬಗ್ಗೆ ಗೊತ್ತಿಲ್ಲದ ವಿಚಾರಗಳು ಸಾಕಷ್ಟಿವೆ.

ನಟನೆ ಜೊತೆ ಜೊತೆಗೆ ಚಿತ್ರಗಳನ್ನು ನಿರ್ದೇಶನ ಮಾಡುತ್ತಿರುವ ರಿಷಬ್ ಬತ್ತಳಿಕೆಯಲ್ಲಿ ನಾಲ್ಕು ಸಿನಿಮಾಗಳಿದ್ದು ಹುಟ್ಟುಹಬ್ಬಕ್ಕೆ ನಾಥೂರಾಮ್ ಹೆಸರಿನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ಬರ್ತಡೇ ಸೆಲಬ್ರೆಷನ್ ಖುಷಿಯನ್ನು ರಿಷಬ್ ಶೆಟ್ಟಿ ಫಿಲ್ಮೀ ಬೀಟ್ ಜೊತೆ ಹಂಚಿಕೊಂಡಿದ್ದಾರೆ ಸಂಪೂರ್ಣ ಸಂದರ್ಶನ ಇಲ್ಲಿದೆ ಮುಂದೆ ಓದಿ..

ರಿಷಬ್ ಶೆಟ್ಟಿ ಹುಟ್ಟುಹಬ್ಬ

ರಿಷಬ್ ಶೆಟ್ಟಿ ಹುಟ್ಟುಹಬ್ಬ

ಕನ್ನಡ ಸಿನಿಮಾರಂಗದಲ್ಲಿ ಯಶಸ್ವಿ ನಿರ್ದೇಶಕ ಎನ್ನಿಸಿಕೊಂಡಿರುವ ಡೈರೆಕ್ಟರ್ ರಿಷಬ್ ಶೆಟ್ಟಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದಂದೇ 'ಅವನೇ ಶ್ರೀಮನ್ನಾರಾಯಣ' ಚಿತ್ರೀಕರಣದಲ್ಲಿ ಭಾಗಿ ಆಗಿ ಸೆಟ್ ನಲ್ಲಿರುವ ಸ್ನೇಹಿತರನ್ನು ಭೇಟಿ ಮಾಡುತ್ತಿದ್ದಾರೆ ಅದೇ ಹುಟ್ಟುಹಬ್ಬದ ಸಂಭ್ರಮ

ಯಶಸ್ವಿ ನಿರ್ದೇಶಕ ಉತ್ತಮ ಕಲಾವಿದ

ಯಶಸ್ವಿ ನಿರ್ದೇಶಕ ಉತ್ತಮ ಕಲಾವಿದ

ರಿಷಬ್ ಶೆಟ್ಟಿ ಕೇವಲ ನಿರ್ದೇಶಕ ಮಾತ್ರವಲ್ಲದೆ ಅತ್ಯುತ್ತಮ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಉತ್ತಮ ನಟ ಎನ್ನುವುದನ್ನು ಸಾಕಷ್ಟು ಚಿತ್ರಗಳ ಮೂಲಕ ನಿರೂಪಿಸಿದ್ದಾರೆ. ಸದ್ಯ ರಿಷಬ್ 'ಕಥಾಸಂಗಮ', 'ಅವನೇ ಶ್ರೀಮನ್ನಾರಾಯಣ',' ಸರ್ಕಾರಿ ಹಿ ಪ್ರಾ ಪಾಠ ಶಾಲೆ ಕಾಸರಗೋಡು', 'ನಾಥುರಮ್' ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ.

ಆಕ್ಟರ್ ಕಮ್ ಡೈರೆಕ್ಟರ್

ಆಕ್ಟರ್ ಕಮ್ ಡೈರೆಕ್ಟರ್

ಐದು ಸಿನಿಮಾಗಳಲ್ಲಿ ಅಭಿನಯ ಮಾಡುವುದರ ಜೊತೆಯಲ್ಲಿ ರಿಷಬ್ ಶೆಟ್ಟಿ ನಿರ್ದೇಶನವನ್ನು ಮಾಡುತ್ತಿದ್ದಾರೆ. ನಟ ಆಗಬೇಕು ಎಂದು ಚಿತ್ರರಂಗಕ್ಕೆ ಬಂದು ಯಶಸ್ವಿ ನಿರ್ದೇಶಕನಾಗಿ, ಈಗ ಆಕ್ಟರ್ ಆಗಿಯೂ.. ಡೈರೆಕ್ಟರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಯಶಸ್ವಿ ನಿರ್ದೇಶಕನಾಗಿದ್ದರು ಇಷ್ಟವಾಗುವಂತಹ ಸಣ್ಣ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಬಂದರೆ ಯಾವುದೇ ಮುಜುಗರವಿಲ್ಲದೇ ಬಣ್ಣ ಹಚ್ಚುತ್ತಾರೆ.

ಡಬ್ ಸ್ಮ್ಯಾಷ್ ನಿಂದ ಅವಕಾಶ

ಡಬ್ ಸ್ಮ್ಯಾಷ್ ನಿಂದ ಅವಕಾಶ

'ಬೆಲ್ ಬಾಟಂ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ರಿಷಬ್ ಅವರಿಗೆ ಅವಕಾಶ ಅರಸಿ ಬಂದಿದ್ದೆ ವಿಶೇಷ. ಚಿತ್ರ ನಿರ್ಮಾಪಕ ಸಂತೋಷ್ ರಿಷಬ್ ಮಾಡಿದ್ದ ಡಬ್ ಸ್ಮ್ಯಾಷ್ ಗಳನ್ನ ನೋಡಿ ಇಂಪ್ರೆಸ್ ಆಗಿ ಇವ್ರನ್ನೇ ಹೀರೋ ಮಾಡೋಣ ಎನ್ನುವ ನಿರ್ಧಾರಕ್ಕೆ ಬಂದರು. ನಂತರ ಸಿನಿಮಾತಂಡ ರಿಷಬ್ ಅವರನ್ನ ಭೇಟಿ ಮಾಡಿದ ಮೇಲೆ ಇವರೇ ನಾಯಕ ಆಗಬೇಕು ಎನ್ನುವುದನ್ನು ನಿರ್ಧಾರ ಮಾಡಿದ್ರು.

ನಾಥೂರಾಮ್ ಚಿತ್ರಕ್ಕೆ ನಾಯಕ

ನಾಥೂರಾಮ್ ಚಿತ್ರಕ್ಕೆ ನಾಯಕ

ಕಿರು ತೆರೆಯಲ್ಲಿ ಸಾಕಷ್ಟು ಪ್ರಖ್ಯಾತಿಗಳಿಸಿರುವ ವಿನು ಬಳಂಜ ಅವರ ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ 'ನಾಥೂರಾಮ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯ ಮಾಡುತ್ತಿದ್ದಾರೆ. ವಿಶೇಷ ಪಾತ್ರವನ್ನು ಚಿತ್ರದಲ್ಲಿ ನಿಭಾಯಿಸುತ್ತಿದ್ದು 'ರಂಗಿತರಂಗ' ನಿರ್ಮಾಪಕರಾದ ಪ್ರಕಾಶ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ಅಣ್ಣಾವ್ರ ಕಟ್ಟ ಅಭಿಮಾನಿ

ಅಣ್ಣಾವ್ರ ಕಟ್ಟ ಅಭಿಮಾನಿ

ರಿಷಬ್ ಶೆಟ್ಟಿ ಅಣ್ಣಾವ್ರ ಅಪ್ಪಟ ಅಭಿಮಾನಿ. ಚಿಕ್ಕದಿಂದಲೇ ಅವರ ಸಿನಿಮಾಗಳನ್ನು ನೋಡುತ್ತಾ ಅವರನ್ನೇ ಅನುಕರಣೆ ಮಾಡುತ್ತಾ ನಟನೆಯತ್ತಾ ಒಲವು ಬೆಳಸಿಕೊಂಡವರು. ವಿಷ್ಣು ಅವರ ರೆಟ್ರೋ ಸ್ಟೈಲ್ ನೋಡುತ್ತಾ ಅದನ್ನೇ ಫಾಲೋ ಕೂಡ ಮಾಡಿದ್ದಾರೆ. ಇವೆಲ್ಲವೂ ಸದ್ಯ ಅಭಿನಯ ಮಾಡುತ್ತಿರುವ 'ಬೆಲ್ ಬಾಟಂ' ಚಿತ್ರಕ್ಕೆ ತಯಾರಿ ಮಾಡಿಕೊಳ್ಳು ಉಪಯೋಗವಾಯ್ತಂತೆ.

ಅಪ್ಪನೇ ಸ್ಪೂರ್ತಿಕೊಟ್ಟಾತ

ಅಪ್ಪನೇ ಸ್ಪೂರ್ತಿಕೊಟ್ಟಾತ

ರಿಷಬ್ ಶೆಟ್ಟಿ ಅವರ ತಂದೆಯವನ್ನು ಅನುಕರಣೆ ಮಾಡುತ್ತಲೇ ಅಭಿನಯವನ್ನು ಕಲಿತವರು. ಕುಸ್ತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಿಕೊಂಡವರು. ಇದೇ ಕಾರಣದಿಂದ ಇಂದಿಗೂ ಫಿಟ್ ಅಂಡ್ ಫೈನ್ ಆಗಿದ್ದಾರೆ.

More from Filmibeat

English summary
Kannada actor Rishab Shetty is celebrating his birthday today. Rishab Shetty is acting in five Kannada films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X