ಜಾನಕಿ ತಾಯಿ ಅರ್ಧದಲ್ಲಿಯೇ ಸೀರಿಯಲ್ ಬಿಟ್ಟಿದ್ದು ಏಕೆ?

By Pavithra

'ಮಗಳು ಜಾನಕಿ' ಆರಂಭದಿಂದಲೇ ಕುತೂಹಲ ಮೂಡಿಸಿಕೊಂಡು ಬರುತ್ತಿರುವ ಧಾರಾವಾಹಿ. ಟೈಟಲ್ ಹಾಡಿನಿಂದ ಹಿಡಿದು ಪ್ರತಿ ವಿಚಾರವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿರುವ 'ಮಗಳು ಜಾನಕಿ' ಧಾರಾವಾಹಿಯಲ್ಲಿನ ಪಾತ್ರಗಳು ಕೂಡ ನೋಡುಗರ ಗಮನ ಸೆಳೆಯುವುದರಲ್ಲಿ ಯಶಸ್ವಿ ಆಗಿತ್ತು.

ಜಾನಕಿ ಪಾತ್ರ, ನಿರಂಜನ್ ಪಾತ್ರಧಾರಿ ಹೀಗೆ ಮುಂದುವರೆಯುತ್ತಾ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಶ್ಮಿ ಭಾರ್ಗಿ ಕೂಡ ಒಬ್ಬರು. ನೋಡುಗರನ್ನು ತಮ್ಮ ಅಭಿನಯದ ಮೂಲಕವೇ ಸೆಳೆಯುವಂತಹ ಶಕ್ತಿ ರಶ್ಮಿ ಅವರಲ್ಲಿತ್ತು. ಮೆಲುವಾದ ಧ್ವನಿ, ಸ್ಪಷ್ಟ ಉಚ್ಛಾರದಿಂದ ಪ್ರಖ್ಯಾತಿಗಳಿಸಿದ್ದ ರಶ್ಮಿ ಕೆಲವು ದಿನಗಳ ಹಿಂದಿನಿಂದ ಕಣ್ಮರೆಯಾಗಿದ್ದಾರೆ. ಈಗಾಗಲೇ ಅವರ ಪಾತ್ರಕ್ಕೆ ಬೇರೆಯವರು ಬಂದಾಗಿದೆ.

ಆದರೆ ಆರಂಭದಿಂದ ಧಾರಾವಾಹಿ ನೋಡುತ್ತಿದ್ದ ಅಭಿಮಾನಿಗಳಿಗೆ ರಶ್ಮಿ ಭಾರ್ಗಿ ಅವರೇ ಜಾನಕಿ ತಾಯಿಯ ಪಾತ್ರ ನಿರ್ವಹಿಸಬೇಕು ಎನ್ನುವ ಆಸೆ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಕೂಡ ಸಲ್ಲಿಸುತ್ತಿದ್ದಾರೆ. ಅಷ್ಟಕ್ಕೂ ರಶ್ಮಿ ಭಾರ್ಗಿ ಪಾತ್ರಧಾರಿ ಬದಲಾಗಿದ್ದು ಏಕೆ? ರಶ್ಮಿ ಭಾರ್ಗಿಯ ನಿಜವಾದ ಹೆಸರೇನು? ಮತ್ತಷ್ಟು ಮಾಹಿತಿ ಈ ಸಂದರ್ಶನದಲ್ಲಿದೆ ಮುಂದೆ ಓದಿ...

ರಶ್ಮಿ ಭಾರ್ಗಿ ನಿಮ್ಮ ಪರಿಚಯ ಮಾಡಿಕೊಡಿ

ರಶ್ಮಿ ಭಾರ್ಗಿ ನಿಮ್ಮ ಪರಿಚಯ ಮಾಡಿಕೊಡಿ

ನಾನು ಮೂಲತಃ ಬೆಂಗಳೂರಿನವಳೇ. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದೇನೆ. ನನ್ನ ನಿಜವಾದ ಹೆಸರು ರಶ್ಮಿ ಹರಿಪ್ರಸಾದ್. ಸೀತಾರಾಂ ಸರ್ ನಿರ್ದೇಶನದ ಬಹುತೇಕ ಧಾರಾವಾಹಿಯಲ್ಲಿ ನಟಿಸಿದ್ದೇನೆ. ಡಿಡಿ9 ನಲ್ಲಿ ಪ್ರಸಾರ ಆಗುತ್ತಿದ್ದ 'ವನಿತಾ' ಧಾರಾವಾಹಿಯಿಂದ ನನ್ನ ವೃತ್ತಿ ಜೀವನ ಆರಂಭ ಆಗಿದ್ದು.

ನೀವು ಭರತನಾಟ್ಯ ಕಲಾವಿದೆಯಂತೆ?

ನೀವು ಭರತನಾಟ್ಯ ಕಲಾವಿದೆಯಂತೆ?

ಅಭಿನಯದ ಜೊತೆ ನೃತ್ಯವನ್ನು ಕಲಿತ್ತಿದ್ದೇನೆ. ರಾಧ ಶ್ರೀಧರ್ ನನ್ನ ಭರತನಾಟ್ಯ ಗುರುಗಳು. ಸುಮಾರು 35ಕ್ಕೂ ಹೆಚ್ಚು ಸೀರಿಯಲ್ ನಲ್ಲಿ ಅಭಿನಯ ಮಾಡಿದ್ದೇನೆ. ಸಿನಿಮಾದಲ್ಲಿಯೂ ಅಭಿನಯ ಮಾಡಿದ್ದು ಹೆಚ್ಚು ಪ್ರಖ್ಯಾತಿ ತಂದುಕೊಟ್ಟಿದ್ದು ಕಿರುತೆರೆ.

ರಶ್ಮಿ ಭಾರ್ಗಿ 'ಮಗಳು ಜಾನಕಿ' ಬಿಟ್ಟಿದ್ದೇಕೆ?

ರಶ್ಮಿ ಭಾರ್ಗಿ 'ಮಗಳು ಜಾನಕಿ' ಬಿಟ್ಟಿದ್ದೇಕೆ?

'ಮಗಳು ಜಾನಕಿ' ಧಾರಾವಾಹಿ ಬಿಟ್ಟಿದ್ದು ಯಾವುದೇ ಸಮಸ್ಯೆಯಿಂದಾಗಿ ಅಲ್ಲ. ನಾನು ಕನ್ನಡ ಹಾಗೂ ಮಲೆಯಾಳಂ ಎರಡು ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದೇನೆ. ಅಲ್ಲಿ ಮತ್ತೊಂದು ಧಾರಾವಾಹಿಗೆ ಡೇಟ್ಸ್ ಕೊಟ್ಟಿದ್ದೆ. ಕೇರಳ ಪ್ರವಾಹದ ತೊಂದರೆಯಿಂದಾಗಿ ಡೇಟ್ಸ್ ಬದಲಾಯ್ತು. ಆದರೆ ಅಲ್ಲಿ ಅಗ್ರಿಮೆಂಟ್ ಆಗಿತ್ತು. ಹಾಗಾಗಿ ಹೋಗಲೇಬೇಕಾಯ್ತು.

'ಮಗಳು ಜಾನಕಿ' ನೆನಪಾಗುತ್ತಾಳಾ?

'ಮಗಳು ಜಾನಕಿ' ನೆನಪಾಗುತ್ತಾಳಾ?

ಖಂಡಿತಾ ಆಗುತ್ತೆ. ನನಗೆ ಬೇಸರ ಇದೆ ಸೀತಾರಾಂ ಸರ್ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು. ಅವರ ಧಾರಾವಾಹಿಯಲ್ಲಿ ಅಭಿನಯ ಮಾಡುವುದರಿಂದ ಸಾಕಷ್ಟು ಕಲಿಯಲು ಅವಕಾಶ ಸಿಗುತ್ತೆ. ಆದರೆ ಏನು ಮಾಡುವುದು? ಮಲೆಯಾಳಂ ಧಾರಾವಾಹಿಯಲ್ಲಿ ನಟಿಸಲು ಹೋಗಲೇಬೇಕಾಗಿದೆ.

ನೀವೇ ಅಭಿನಯ ಮಾಡಬೇಕು ಅಂತಿದ್ದಾರೆ ಪ್ರೇಕ್ಷಕರು?

ನೀವೇ ಅಭಿನಯ ಮಾಡಬೇಕು ಅಂತಿದ್ದಾರೆ ಪ್ರೇಕ್ಷಕರು?

ಫೇಸ್ ಬುಕ್, ವಾಟ್ಸಾಪ್ ನಲ್ಲಿ ಮೆಸೆಜ್ ಮಾಡುತ್ತಿರುತ್ತಾರೆ. ಫೇಸ್ ಬುಕ್ ನಲ್ಲಿ ಬರುವ ಮೆಸೆಜ್ ಗಳಿಗೆ ಉತ್ತರ ನೀಡುತ್ತೇನೆ. ಖುಷಿ ಆಗುತ್ತೆ. ಒಬ್ಬ ಕಲಾವಿದೆಗೆ ಇನ್ನೇನು ಬೇಕು? ನಾವು ಮಾಡಿದ ಪಾತ್ರ ಪ್ರೇಕ್ಷಕರು ಮೆಚ್ಚಿಕೊಳ್ಳುವಂತಾಗಬೇಕು ಅದೇ ಖುಷಿ.

ಮಲೆಯಾಳಂ ಚಿತ್ರರಂಗ ಹೇಗಿದೆ?

ಮಲೆಯಾಳಂ ಚಿತ್ರರಂಗ ಹೇಗಿದೆ?

ಮಲೆಯಾಳಂ ಚಿತ್ರರಂಗ ಚೆನ್ನಾಗಿದೆ. 'ನೀಳಾ ಕಾಯಲು' ರಾಧಾಮಣಿ ಅಂತಾನೇ ಅಲ್ಲಿ ಫೇಮಸ್, ಫ್ಯಾನ್ಸ್ ಕ್ಲಬ್ ಕೂಡ ಮಾಡಿಕೊಂಡಿದ್ದಾರೆ. ನಾನು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುತ್ತಿದೆ ಎನ್ನುವುದೇ ಖುಷಿ.

ನಿಮ್ಮ ಮನೆಯವರ ಬೆಂಬಲ ಹೇಗಿದೆ?

ನಿಮ್ಮ ಮನೆಯವರ ಬೆಂಬಲ ಹೇಗಿದೆ?

ನಾನು ಚಿಕ್ಕ ವಯಸ್ಸಿನಿಂದಲೂ ಅಭಿನಯ ಮಾಡುತ್ತಾ ಬರುತ್ತಿದ್ದೇನೆ. ನಮ್ಮ ಮನೆಯ ಪ್ರತಿಯೊಬ್ಬರು ನನಗೆ ಪ್ರೋತ್ಸಹ ನೀಡುತ್ತಾ ಬಂದಿದ್ದಾರೆ. ಅದರಿಂದಾಗಿಯೇ ಇಂದು ಇಷ್ಟೆಲ್ಲಾ ಸಾಧಿಸಲು ಅನುಕೂಲವಾಯ್ತು.

More from Filmibeat

English summary
Kannada 'Magalu Janaki' fame Actress Rashmi Hariprasad interviews
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X