twitter
    For Quick Alerts
    ALLOW NOTIFICATIONS  
    For Daily Alerts

    'ಕರಿಯ' ಮಾಡಿದ ಕೆಲೆಕ್ಷನ್ ಎಷ್ಟು? ಹಿಟ್ ಆಗಿದ್ದು ಹೇಗೆ? ಪ್ರೇಮ್ ಬಿಚ್ಚಿಟ್ಟ ಮಾಹಿತಿ

    |

    ದರ್ಶನ್ ಈಗ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ. ದರ್ಶನ್‌ರ ಈಗಿನ ಸಿನಿಮಾಗಳು ಕೋಟಿಗಟ್ಟಲೆ ಕಲೆಕ್ಷನ್ ಮಾಡುತ್ತವೆ. ಪಕ್ಕಾ ಪೈಸಾ ವಸೂಲ್ ನಟರೆಂದೇ ದರ್ಶನ್ ಖ್ಯಾತರು.

    ದರ್ಶನ್‌ರ ವೃತ್ತಿ ಬದುಕಿನಲ್ಲಿ ಹಿಟ್ ಆದ ಸಿನಿಮಾಗಳಿಂದಲೇ ಅವರು ಈ ದಿನ ಸ್ಟಾರ್ ಆಗಿದ್ದಾರೆ. ಸ್ವತಃ ದರ್ಶನ್ ಸಹ ಈ ಹೇಳಿಕೆಯನ್ನು ಒಪ್ಪಿಕೊಳ್ಳುತ್ತಾರೆ. ದರ್ಶನ್‌ರ ಮೊದಲ ಸಿನಿಮಾ (ನಾಯಕನಾಗಿ) 'ಮೆಜೆಸ್ಟಿಕ್' ಬಿಡುಗಡೆ ಆಗಿ ಇಪ್ಪತ್ತು ವರ್ಷ ಕಳೆದ ಖುಷಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಇದೇ ಮಾತುಗಳನ್ನಾಡಿದರು.

    'ಏಕ್ ಲವ್ ಯಾ' ಪ್ರೇಮ್ ದುಡ್ಡಲ್ಲಿ ಮಾಡಿದ್ದಲ್ಲ: ನಿರ್ಮಾಪಕಿ ರಕ್ಷಿತಾ Exclusive ಮಾತು'ಏಕ್ ಲವ್ ಯಾ' ಪ್ರೇಮ್ ದುಡ್ಡಲ್ಲಿ ಮಾಡಿದ್ದಲ್ಲ: ನಿರ್ಮಾಪಕಿ ರಕ್ಷಿತಾ Exclusive ಮಾತು

    ದರ್ಶನ್ ಮೊದಲ ಸಿನಿಮಾ 'ಮೆಜೆಸ್ಟಿಕ್' ಬಹಳ ದೊಡ್ಡ ಹಿಟ್ ಆಯಿತು. ಅದರ ಮರುವರ್ಷವೇ ಬಿಡುಗಡೆ ಆದ 'ಕರಿಯ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುವ ಮೂಲಕ ದರ್ಶನ್‌ಗೆ ಶಾಶ್ವತ ಮಾಸ್ ಇಮೇಜು ತಂದು ಕೊಟ್ಟಿತು. ಕನ್ನಡದಲ್ಲಿ ಬಂದಿರುವ ಕೆಲವೇ ಕ್ಲಾಸಿಕ್ ರೌಡಿಸಂ ಸಿನಿಮಾಗಳಲ್ಲಿ 'ಕರಿಯ' ಸಹ ಒಂದು ಎನ್ನಲಾಗುತ್ತದೆ. ಆ ಕಾಲಕ್ಕೆ 'ಕರಿಯ' ಒಂದು ವರ್ಷ ಓಡಿತ್ತು. ಆ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಎಂಬುದನ್ನು ನಿರ್ದೇಶಕ ಪ್ರೇಮ್ 'ಫಿಲ್ಮಿಬೀಟ್ ಕನ್ನಡ'ದೊಟ್ಟಿಗೆ ಹಂಚಿಕೊಂಡಿದ್ದಾರೆ.

    ಬೇರೆ ಚಿತ್ರ ಬಂದು ನಮ್ಮ ಸಿನಿಮಾ ತೆಗೆದುಬಿಟ್ಟರು: ಪ್ರೇಮ್

    ಬೇರೆ ಚಿತ್ರ ಬಂದು ನಮ್ಮ ಸಿನಿಮಾ ತೆಗೆದುಬಿಟ್ಟರು: ಪ್ರೇಮ್

    ''2003ರಲ್ಲಿ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿತ್ತು. ಆದರೆ ಅದೇ ಸಮಯಕ್ಕೆ ಇನ್ನೊಂದು ಸಿನಿಮಾ ಬಂದ ಕಾರಣ ನಮ್ಮ ಸಿನಿಮಾವನ್ನು ತೆಗೆದುಬಿಟ್ಟರು. ಆಗೆಲ್ಲ ಚಿತ್ರಮಂದಿರಗಳ ರಾಜಕೀಯ ಬಹಳ ಇತ್ತು. ಈಗ ಹಾಗೇನೂ ಇಲ್ಲ. ಅದರಲ್ಲೂ ನನ್ನ ಸಿನಿಮಾ ಎಂದರೆ ರಾಜಕೀಯ ಹೆಚ್ಚಾಗಿಯೇ ಮಾಡೋರು. ಹಾಗಾಗಿ ಚೆನ್ನಾಗಿ ಓಡುತ್ತಿದ್ದ ನಮ್ಮ ಸಿನಿಮಾವನ್ನು ಇನ್ನೊಂದು ಸಿನಿಮಾ ಬಂತೆಂದು ತೆಗೆದುಬಿಟ್ಟರು'' ಎಂದು ನೆನಪು ಮಾಡಿಕೊಂಡರು ಪ್ರೇಮ್.

    'ಜೋಗಿ' ಸಿನಿಮಾ ಆಗಿದ್ಹೇಗೆ? ಶಿವಣ್ಣ ಹಾಕಿದ್ದ ಕಂಡೀಷನ್ ಏನು?'ಜೋಗಿ' ಸಿನಿಮಾ ಆಗಿದ್ಹೇಗೆ? ಶಿವಣ್ಣ ಹಾಕಿದ್ದ ಕಂಡೀಷನ್ ಏನು?

    ಸಿನಿಮಾ ಹಿಟ್ ಆಗಿದ್ದು ಹೇಗೆ?

    ಸಿನಿಮಾ ಹಿಟ್ ಆಗಿದ್ದು ಹೇಗೆ?

    ''ಮೊದಲಿಗೆ ಸಿನಿಮಾದ ವಿತರಣೆ ಹಕ್ಕು ರಜಸು ಕಂಬೈನ್ಸ್ ಬಳಿ ಇತ್ತು. ಅವರು ಈಗಲೂ ಇದ್ದಾರೆ. ರಜಸು ಅವರು ವಿತರಣೆ ಹಕ್ಕನ್ನು ಇಕ್ಬಾಲ್ ಫಿಲಮ್ಸ್‌ನವರಿಗೆ ಕೊಟ್ಟರು. ಅವರು ಸಿನಿಮಾಕ್ಕೆ ಚೆನ್ನಾಗಿ ಪ್ರಚಾರ ಮಾಡಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಿದರು. ಆ ನಂತರ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿಬಿಟ್ಟಿತು. 'ಕರಿಯ' ಸಿನಿಮಾ ಆಗಿನ ಕಾಲಕ್ಕೆ ಒಂದು ವರ್ಷ ಓಡಿತು. ಭಾರಿ ದೊಡ್ಡ ಕಲೆಕ್ಷನ್ ಅನ್ನು ಆ ಸಿನಿಮಾ ಮಾಡಿತ್ತು'' ಎಂದರು ಪ್ರೇಮ್.

    ಆ ವ್ಯಕ್ತಿಯ ಜೀವನವೇ ಬದಲಾಗಿ ಹೋಯ್ತು: ಪ್ರೇಮ್

    ಆ ವ್ಯಕ್ತಿಯ ಜೀವನವೇ ಬದಲಾಗಿ ಹೋಯ್ತು: ಪ್ರೇಮ್

    ''ಬಿ-ಸಿ ಸೆಂಟರ್‌ನಲ್ಲಿ ಸಿನಿಮಾ ಬಹಳ ಒಳ್ಳೆಯ ಪ್ರದರ್ಶನ ಕಂಡಿತು. ಆಗಿನ ಕಾಲಕ್ಕೆ 2.50 ಕೋಟಿಗೂ ಹೆಚ್ಚು ಕಲೆಕ್ಷನ್ ಆ ಸಿನಿಮಾ ಮಾಡಿತು. ಇಕ್ಬಾಲ್ ಅವರು ಈಗಲೂ ಅದನ್ನು ನೆನಪು ಮಾಡಿಕೊಳ್ಳುತ್ತಾರೆ. ಸೈಕಲ್‌ನಲ್ಲಿ ಗಾಂಧಿ ನಗರಕ್ಕೆ ಬರುತ್ತಿದ್ದೆ, ಸಣ್ಣ ಕಚೇರಿ ಇಟ್ಟುಕೊಂಡು ನಾಲ್ಕು ಸಿನಿಮಾ ಪೋಸ್ಟರ್ ಹಾಕಿಕೊಂಡು ವ್ಯವಹಾರ ಮಾಡುತ್ತಿದ್ದೆ. 'ಕರಿಯ' ಸಿನಿಮಾ ನನ್ನ ಜೀವನವನ್ನೇ ಬದಲಾಯಿಸಿಬಿಡ್ತು, ಮನೆ ಮಾಡಿಕೊಂಡೆ, ಮಕ್ಕಳ ಮದುವೆ ಮಾಡಿದೆ. ಆಸ್ತಿ ಖರೀದಿಸಿದೆ. ಸಾಲಗಳನ್ನೆಲ್ಲ ತೀರಿಸಿದೆ. ನಿಮ್ಮ ಫೋಟೊವನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇನೆ ಎಂದು ಇಕ್ಬಾಲ್ ಹೇಳುತ್ತಾರೆ'' ಎಂದು ನಗುತ್ತ ನೆನಪು ಮಾಡಿಕೊಂಡರು ಪ್ರೇಮ್.

    'ಮೆಜೆಸ್ಟಿಕ್' ಮುಹೂರ್ತದಲ್ಲೇ ದರ್ಶನ್‌ ರನ್ನು 'ಕರಿಯ'ಗೆ ಬುಕ್ ಮಾಡಿದ್ದೆ: ಪ್ರೇಮ್'ಮೆಜೆಸ್ಟಿಕ್' ಮುಹೂರ್ತದಲ್ಲೇ ದರ್ಶನ್‌ ರನ್ನು 'ಕರಿಯ'ಗೆ ಬುಕ್ ಮಾಡಿದ್ದೆ: ಪ್ರೇಮ್

    'ಎಕ್ಸ್‌ಕ್ಯೂಸ್ ಮೀ' ಮಾಡಲು ಕಾರಣವೇನು?

    'ಎಕ್ಸ್‌ಕ್ಯೂಸ್ ಮೀ' ಮಾಡಲು ಕಾರಣವೇನು?

    ''ಕರಿಯ' ಸಿನಿಮಾ ಬಹಳ ದೊಡ್ಡ ಹಿಟ್ ಆಯ್ತು. ಆ ನಂತರ ನನ್ನ ಬಗ್ಗೆ ಗಾಂಧಿ ನಗರದಲ್ಲಿ ಟೀಕೆಗಳು, ಚರ್ಚೆಗಳು ಶುರುವಾಯ್ತು. ರೌಡಿಸಂ ಕತೆ ಇಟ್ಕೊಂಡು ಅದೃಷ್ಟದಲ್ಲಿ ಏನೋ ಮಾಡಿಬಿಟ್ಟಿದ್ದಾನೆ ಮುಂದೆ ಏನು ಮಾಡ್ತಾನೆ ಎಂದರು. ಚೆನ್ನಾಗಿ ಕಾಲೆಳೆದರು. ಅವರು ಹಾಗೆ ಮಾಡಿದ್ದರಿಂದಲೇ ಏನೋ ಅದನ್ನೇ ಸವಾಲಾಗಿ ತೆಗೆದುಕೊಂಡು ಹೊಸಬರನ್ನೇ ಹಾಕಿಕೊಂಡು ಮತ್ತೆ ಗೆದ್ದು ತೋರಿಸಬೇಕು, ನನ್ನ ಪ್ರತಿಭೆ ಪ್ರದರ್ಶನ ಮಾಡಬೇಕೆಂದು ನಿಶ್ಚಯಿಸಿ 'ಎಕ್ಸ್‌ಕ್ಯೂಸ್‌ ಮೀ' ಸಿನಿಮಾ ಮಾಡಿದೆ. ಹೊಸಬರನ್ನೇ ಹಾಕಿಕೊಂಡೆ, ಪ್ರೇಮಕತೆ ಸಿನಿಮಾ ಮಾಡಿದೆ ಆ ಸಿನಿಮಾ ಕೂಡ ಒಂದು ವರ್ಷ ಓಡಿಬಿಟ್ಟಿತು'' ಎಂದು ನೆನಪು ಮಾಡಿಕೊಂಡರು ಪ್ರೇಮ್. ಇದೀಗ ಪ್ರೇಮ್ ನಿರ್ದೇಶನದ ಹೊಸ ಸಿನಿಮಾ 'ಏಕ್ ಲವ್ ಯಾ' ಇಂದು (ಫೆಬ್ರವರಿ 24) ರಂದು ಬಿಡುಗಡೆ ಆಗಿದೆ.

    English summary
    How much money did Darshan starer 2003 movie Kariya collected. and how that movie became super hit director Prem explains it to Filmibeat Kannada.
    Thursday, February 24, 2022, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X