For Quick Alerts
  ALLOW NOTIFICATIONS  
  For Daily Alerts

  ಶ್ರುತಿ ಸಿನಿಮಾ ಜೀವನದಲ್ಲಿ ಆ ಒಂದು ಕೊರಗು ಈಗಲೂ ಕಾಡ್ತಿದೆ!

  |

  90ರ ದಶಕದಲ್ಲಿ ಕನ್ನಡ ಕಲಾಭಿಮಾನಿಗಳ ಮನೆಮಗಳು ಎನಿಸಿಕೊಂಡಿದ್ದ ನಟಿ ಶ್ರುತಿಗೂ ಈಗಲೂ ಒಂದು ಕೊರಗು ಕಾಡುತ್ತಿದೆ. ಎರಡು ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಈ ನಟಿ ಮೇರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಡಾ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಶಶಿಕುಮಾರ್, ರಮೇಶ್ ಅರವಿಂದ್, ಜಗ್ಗೇಶ್, ದೇವರಾಜ್, ಸುನೀಲ್, ರಾಮ್ ಕುಮಾರ್, ಅಭಿಜಿತ್ ಹೀಗೆ ಬಹುತೇಕ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ಸಾಮಾಜಿಕ ಕ್ರಾಂತಿ ಮಾಡಿದ ರಾಜ್ ಕುಮಾರ್ ಚಿತ್ರದ ಹಿಂದಿನ ಕಥೆ ಸಾಮಾಜಿಕ ಕ್ರಾಂತಿ ಮಾಡಿದ ರಾಜ್ ಕುಮಾರ್ ಚಿತ್ರದ ಹಿಂದಿನ ಕಥೆ

  ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ಶ್ರುತಿ ಅಭಿನಯಿಸಿದ್ದಾರೆ. ಈಗ ನಿಧಾನವಾಗಿ ಚಿತ್ರರಂಗದಿಂದ ಸ್ವಲ್ಪ ಮಟ್ಟಿಗೆ ಅಂತರ ಕಾಯ್ದುಕೊಂಡಿರುವ ಶ್ರುತಿ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಷ್ಟಕ್ಕೂ, ಶ್ರುತಿ ಸಿನಿಮಾ ಜೀವನದಲ್ಲಿ ಕಾಡುತ್ತಿರುವ ಆ ಕೊರಗು ಯಾವುದು? ಮುಂದೆ ಓದಿ...

  ಅಪ್ಪಾಜಿ ಜೊತೆ ಆಕ್ಟ್ ಮಾಡಿಲ್ಲ

  ಅಪ್ಪಾಜಿ ಜೊತೆ ಆಕ್ಟ್ ಮಾಡಿಲ್ಲ

  ಎರಡು ದಶಕಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಶ್ರುತಿ ಅವರು ಡಾ ರಾಜ್ ಕುಮಾರ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಪಡೆದಿಲ್ಲ. ಈ ಕೊರಗು ಈಗಲೂ ಶ್ರುತಿ ಅವರನ್ನು ಕಾಡುತ್ತಿದೆ. ಈ ಕುರಿತು ಫಿಲ್ಮಿಬೀಟ್ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ಜೀವನಚೈತ್ರದಲ್ಲಿ ನಾನು ಇರಬೇಕಿತ್ತು

  ಜೀವನಚೈತ್ರದಲ್ಲಿ ನಾನು ಇರಬೇಕಿತ್ತು

  ಡಾ ರಾಜ್ ಕುಮಾರ್ ಮತ್ತು ಮಾಧವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಜೀವನವೈತ್ರ ಚಿತ್ರದಲ್ಲಿ ಶ್ರುತಿ ಅವರು ನಟಿಸಬೇಕಿತ್ತು. ಅಣ್ಣಾವ್ರ ಮಗಳ ಪಾತ್ರದಲ್ಲಿ ಶ್ರುತಿಗೆ ಅಭಿನಯಿಸಲು ಅವಕಾಶ ಬಂದಿತ್ತು. ಆದ್ರೆ, ಕಾರಣಾಂತರಗಳಿಂದ ಆ ಸಿನಿಮಾ ಮಾಡಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಸ್ಕ್ರಿಪ್ಟ್ ಬರೆಯವಾಗ ನನ್ನ ಹೆಸರಿತ್ತು

  ಸ್ಕ್ರಿಪ್ಟ್ ಬರೆಯವಾಗ ನನ್ನ ಹೆಸರಿತ್ತು

  ''ಜೀವನಚೈತ್ರ ಚಿತ್ರದ ಸ್ಕ್ರಿಪ್ಟ್ ಬರೆಯುವ ವೇಳೆ ನನ್ನನ್ನು ಗಮನದಲ್ಲಿಟ್ಟುಕೊಂಡಿದ್ದಂತೆ. ಆ ಪಾತ್ರಕ್ಕೆ ಶ್ರುತಿ ಅಂತ ಹೆಸರು ಸಹ ಇಟ್ಟುಕೊಂಡಿದ್ದರು. ಆ ಸಮಯದಲ್ಲಿ ನಾನು ಬೇರೆ ಚಿತ್ರಗಳಲ್ಲಿ ನಟಿಸುತ್ತಿದ್ದ ಕಾರಣ ಡೇಟ್ ಹೊಂದಾಣಿಕೆ ಆಗಿಲ್ಲ ಅನಿಸುತ್ತಿದೆ. ಯಾಕಂದ್ರೆ, ಆ ಸಮಯದಲ್ಲಿ ನಮ್ಮ ಅಪ್ಪ-ಅಮ್ಮ ನನ್ನ ಡೇಟ್ ನೋಡಿಕೊಳ್ಳುತ್ತಿದ್ದರು'' ಎಂದು ಶ್ರುತಿ ಸ್ಮರಿಸಿಕೊಂಡಿದ್ದಾರೆ.

  'ಭಜರಂಗಿ 2' ಚಿತ್ರದ ಪಾತ್ರದ ಬಗ್ಗೆ ಶ್ರುತಿ ಹೇಳಿದ್ದೇನು?: ಸಂದರ್ಶನ'ಭಜರಂಗಿ 2' ಚಿತ್ರದ ಪಾತ್ರದ ಬಗ್ಗೆ ಶ್ರುತಿ ಹೇಳಿದ್ದೇನು?: ಸಂದರ್ಶನ

  ಭಜರಂಗಿ-2 ಚಿತ್ರದಲ್ಲಿ ಶ್ರುತಿ

  ಭಜರಂಗಿ-2 ಚಿತ್ರದಲ್ಲಿ ಶ್ರುತಿ

  ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಮುಂದುವರಿಯುತ್ತಿರುವ ಶ್ರುತಿ ಪ್ರಸ್ತುತ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ಮತ್ತೆರಡು ಹೊಸ ಪ್ರಾಜೆಕ್ಟ್ ಗೂ ಸಹಿ ಹಾಕಿದ್ದಾರೆ. ಕೊವಿಡ್‌ ಕಾರಣದಿಂದ ಆ ಸಿನಿಮಾಗಳು ಇನ್ನು ಶುರುವಾಗಿಲ್ಲ.

  English summary
  Kannada actress shruthi interview: Shruthi revealed how she missed the chance in dr rajkumar's jeevana chaitra movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X