'ಮೆಜೆಸ್ಟಿಕ್' ಮುಹೂರ್ತದಲ್ಲೇ ದರ್ಶನ್‌ ರನ್ನು 'ಕರಿಯ'ಗೆ ಬುಕ್ ಮಾಡಿದ್ದೆ: ಪ್ರೇಮ್

ನಟ ದರ್ಶನ್ ಮನೆ ಮುಂದೆ ಈಗ ನಿರ್ದೇಶಕ, ನಿರ್ಮಾಪಕ ದಂಡೇ ಇರುತ್ತದೆ. ಅವರ 50 ದಿನದ ಕಾಲ್‌ ಶೀಟ್ ಸಿಕ್ಕರೆ ಸಾಕು ಎಂದು ನಿರ್ಮಾಪಕರು ಕಾಯುತ್ತಿರುತ್ತಾರೆ. ಆದರೆ ದರ್ಶನ್‌ ವೃತ್ತಿ ಜೀವನದ ಆರಂಭದಲ್ಲಿ ಅವರನ್ನು ಗುರುತಿಸಿದವರ ಸಂಖ್ಯೆ ಕಡಿಮೆ.

ದೊಡ್ಡ ನಟ ತೂಗುದೀಪ ಶ್ರೀನಿವಾಸ್‌ರ ಮಗನಾಗಿದ್ದರೂ ಲೈಟ್‌ಬಾಯ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದ ದರ್ಶನ್‌ ಜೀವನಕ್ಕೆ, ವೃತ್ತಿ ಜೀವನಕ್ಕೆ ತಿರುವು ನೀಡಿದ್ದು 'ಮೆಜೆಸ್ಟಿಕ್' ಸಿನಿಮಾ. ಈ ಸಿನಿಮಾ ಬಿಡುಗಡೆ ಆಗಿ ಇದೀಗ 20 ವರ್ಷವಾಗಿದೆ.

ದರ್ಶನ್‌ಗೆ ಆರಂಭದಲ್ಲಿಯೇ ಮಾಸ್ ಹೀರೋ ಎಂಬ ಪಟ್ಟ ಕೊಟ್ಟ ಸಿನಿಮಾಗಳೆಂದರೆ 'ಮೆಜೆಸ್ಟಿಕ್' ಹಾಗೂ 'ಕರಿಯ'. ದರ್ಶನ್‌ರ ಮೊದಲ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗುವ ಮುನ್ನವೇ ನಿರ್ದೇಶಕ ಪ್ರೇಮ್‌ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟು 'ಕರಿಯ'ಕ್ಕೆ ಬುಕ್ ಮಾಡಿಕೊಂಡಿದ್ದರಂತೆ. ಈ ವಿಷಯವನ್ನು 'ಫಿಲ್ಮಿಬೀಟ್ ಕನ್ನಡ'ದೊಟ್ಟಿಗೆ ಪ್ರೇಮ್ ಹಂಚಿಕೊಂಡಿದ್ದಾರೆ.

''ಮೆಜೆಸ್ಟಿಕ್' ಮುಹೂರ್ತದಲ್ಲಿಯೇ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೆ''

''ಮೆಜೆಸ್ಟಿಕ್' ಮುಹೂರ್ತದಲ್ಲಿಯೇ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೆ''

ದರ್ಶನ್‌ರ ಮೊದಲ ಸಿನಿಮಾ 'ಮೆಜೆಸ್ಟಿಕ್‌' ಮುಹೂರ್ತ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಮಾಡಿದ್ರು ನಾನು ಅಲ್ಲಿಗೆ ಹೋಗಿ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟು ನಾನೂ ಸಹ ಸಿನಿಮಾ ಮಾಡ್ತೀನಿ ಎಂದು ಹೇಳಿ ಬುಕ್ ಮಾಡಿಕೊಂಡು ಬಂದಿದ್ದೆ. ನಂತರ ದರ್ಶನ್‌ಗೆ ಬೇರೆ ಗೆಟಪ್ ಎಲ್ಲ ಹಾಕಿಸಿ, ಹೊಸ ರೀತಿಯಾಗಿ ಪ್ರೆಸೆಂಟ್ ಮಾಡಿದೆವು. ಅದೃಷ್ಟವೋ, ನಮ್ಮ ಶ್ರಮವೊ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿಬಿಟ್ಟಿತು'' ಎಂದು ಹಳೆಯ ಘಟನೆ ನೆನಪು ಮಾಡಿಕೊಂಡಿದ್ದಾರೆ ನಟ, ನಿರ್ದೇಶಕ ಪ್ರೇಮ್.

ಸೇಠು ಯುವತಿಯೊಬ್ಬಳು ಆಗಾಗ್ಗೆ ಬರುತ್ತಿದ್ದಳು: ಪ್ರೇಮ್

ಸೇಠು ಯುವತಿಯೊಬ್ಬಳು ಆಗಾಗ್ಗೆ ಬರುತ್ತಿದ್ದಳು: ಪ್ರೇಮ್

'ಕರಿಯ'ದ ಇನ್ನಷ್ಟು ಆಸಕ್ತಿಕರ ಸಂಗತಿಗಳನ್ನು 'ಫಿಲ್ಮಿಬೀಟ್' ಜೊತೆ ಹಂಚಿಕೊಂಡ ಪ್ರೇಮ್, ''ನಾವು ಕಪಾಲಿ ಚಿತ್ರಮಂದಿರದ ಹಿಂದೆ ಇರುತ್ತಿದ್ದೆವು. ಹೆಚ್ಚಿನ ಕಾಲ ಅಲ್ಲೆ ಓಡಾಡಿಕೊಂಡು ಇರುತ್ತಿದ್ದೆವು. ಆಗ ಅಲ್ಲಿಗೆ ಆವಾಗಾವಾಗ ಸೇಠು ಯುವತಿಯೊಬ್ಬಾಕೆ ಬರುತ್ತಿದ್ದಳು. ನಾವು ಹೋದಲ್ಲಿಗೆ ಬರುವುದು, ನೋಡುತ್ತಾ ನಿಲ್ಲುವುದು ಮಾಡುತ್ತಿದ್ದಳು. ನಮ್ಮ ಹುಡುಗರು ನನ್ನನ್ನು ರೇಗಿಸೋರು. ನಂತರ ಇದೇ ವಿಷಯ 'ಕರಿಯ' ಸಿನಿಮಾದ ಹಾಡಿ, ನಾಯಕಿಯ ಪಾತ್ರಕ್ಕೂ ಸ್ಪೂರ್ತಿಯಾಯಿತು'' ಎಂದರು ಪ್ರೇಮ್.

ಗುರುಕಿರಣ್ ಮನೆಗೆ ಬೆಳಿಗ್ಗೆ 5ಕ್ಕೆ ಹೋಗುತ್ತಿದ್ದೆ: ಪ್ರೇಮ್

ಗುರುಕಿರಣ್ ಮನೆಗೆ ಬೆಳಿಗ್ಗೆ 5ಕ್ಕೆ ಹೋಗುತ್ತಿದ್ದೆ: ಪ್ರೇಮ್

'ಕರಿಯ' ಸಿನಿಮಾದ ಹಾಡು ಮಾಡಿಸಲು ನಾನು ಗುರುಕಿರಣ್ ಮನೆಗೆ ಹೋಗುತ್ತಿದ್ದೆ. ಬೆಳಿಗ್ಗೆ ಐದು ಗಂಟೆಗೆ ನಾನು ಗುರುಕಿರಣ್ ಮನೆಗೆ ಹೋಗಿಬಿಡುತ್ತಿದ್ದೆ. ಅವರು ನನ್ನನ್ನು ಬೈಯ್ಯುತ್ತಿದ್ದರು. ಆದರೆ ಅವರನ್ನು ಬಿಡುತ್ತಿರಲಿಲ್ಲ. ಹಲವು ದಿನ ಅವರಿಗೆ ಕಾಟ ಕೊಟ್ಟಿದ್ದೇನೆ. ಅವರ ಮನೆಯಲ್ಲಿಯೇ ತಿಂಡಿ ಊಟ ಎಲ್ಲ ಆಗುತ್ತಿತ್ತು. ನಾನು ಕೆಂಚಾಲೊ ಮಂಚಾಲೊ ಹೆಂಗವ್ಲಾ ನಿನ್ನ ಡೌವ್‌ಗಳು, ಗೋವಿಂದ ಜೇಡ್ರಳ್ಳಿ ಎಂಗವ್ಲಾ ನಿನ್ ಕನಸ್‌ಗಳು ಎಂದು ಸಾಲು ಬರೆದುಕೊಂಡಿದ್ದೆ. ಆ ಸಾಲನ್ನು ನಾಗೇಂದ್ರ ಪ್ರಸಾದ್‌ಗೆ ಕೊಟ್ಟು ಹಾಡು ಬರೆಯಲು ಹೇಳಿದ್ದೆ. ಅವರಿಗೆ ಸೇಠು ಫಿಗರ್ ಸಾಲನ್ನೂ ಹೇಳಿದ್ದೆ. ಉಳಿದಿದ್ದೆಲ್ಲವನ್ನೂ ಅವರೇ ಸೇರಿಸಿಕೊಂಡು ಹಾಡು ಬರೆದರು. ಹಾಡುಗಳು ಸೂಪರ್ ಡೂಪರ್ ಹಿಟ್ ಆದವು. ನಾನು ಸ್ವಾತಂತ್ರ್ಯವಾಗಿ ಹಾಡು ಬರೆಯಲು ಕಲಿತದ್ದು ಅದೇ ಸಮಯದಲ್ಲಿ'' ಎಂದರು ಪ್ರೇಮ್.

ಫೆಬ್ರವರಿ24ಕ್ಕೆ 'ಏಕ್ ಲವ್ ಯಾ' ಬಿಡುಗಡೆ

ಫೆಬ್ರವರಿ24ಕ್ಕೆ 'ಏಕ್ ಲವ್ ಯಾ' ಬಿಡುಗಡೆ

ಪ್ರೇಮ್ ನಿರ್ದೇಶನದ ಹೊಸ ಸಿನಿಮಾ 'ಏಕ್‌ ಲವ್ ಯಾ' ನಾಳೆ (ಫೆಬ್ರವರಿ 24) ಬಿಡುಗಡೆ ಆಗುತ್ತಿದೆ. ರಕ್ಷಿತಾರ ಸಹೋದರ ರಾಣಾ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ನಾಯಕಿ ರೇಷ್ಮಾ. ಸಿನಿಮಾದಲ್ಲಿ ರಚಿತಾ ರಾಮ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಟಿ, ಸಿನಿಮಾದ ನಿರ್ಮಾಪಕಿಯೂ ಆಗಿರುವ ರಕ್ಷಿತಾ ಪ್ರೇಮ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮಕತೆಯುಳ್ಳ ಈ ಸಿನಿಮಾದ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ದೊಡ್ಡ ಹಿಟ್ ಆಗಿವೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

More from Filmibeat

English summary
Director Prem said he booked Darshan by giving advance money to his first movie Kariya even before Darshan's first movie's shooting starts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X