''ನಾನು ಗರ್ಭಿಣಿ ಅಲ್ಲ'' ಅಂತ ಒತ್ತಿ ಒತ್ತಿ ಹೇಳಿದ ನಟಿ ಇಲಿಯಾನಾ.!
ಪರ್ಸನಲ್ ಲೈಫ್ ಬಗ್ಗೆ ಪತ್ರಿಕೆ ಹಾಗೂ ಮಾಧ್ಯಮಗಳ ಮುಂದೆ ಇಲಿಯಾನಾ ಯಾವತ್ತೂ ಬಾಯಿ ಬಿಟ್ಟವರಲ್ಲ. ಪತ್ರಕರ್ತರು ಎಷ್ಟೇ ತಿರುಗುಮುರುಗು ಮಾಡಿ ಕೇಳಿದರೂ, ವೈಯುಕ್ತಿಕ ವಿಚಾರಗಳ ಬಗ್ಗೆ ಉತ್ತರ ಕೊಡಲು ನಯವಾಗಿಯೇ ನಿರಾಕರಿಸುವ ಜಾಣ್ಮೆ ಇಲಿಯಾನಾಗಿದೆ.
ಇಂತಿಪ್ಪ ಇಲಿಯಾನಾ ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ 'ಮದುವೆ' ಆಗಿರುವ ಬಗ್ಗೆ ಸುಳಿವು ಕೊಟ್ಟಿದ್ದರು. ಗೆಳೆಯ ಆಂಡ್ರ್ಯೂನ 'ಹಬ್ಬಿ' ಅಂತ ಕರೆದಿದ್ದರು. ಆದರೂ ಮದುವೆ ಬಗ್ಗೆ ಇಲಿಯಾನಾ ಇಲ್ಲಿಯವರೆಗೂ ಸ್ಪಷ್ಟನೆ ಕೊಟ್ಟಿಲ್ಲ.
ಮದುವೆ ಆದ್ಮೇಲೆ ಕೊಂಚ ದಪ್ಪ ಆಗಿರುವ ಇಲಿಯಾನಾ 'ಗರ್ಭಿಣಿ ಅಂತೆ' ಎಂಬ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಈ ಗಾಸಿಪ್ ಬಗ್ಗೆ ನಿಮ್ಮ 'ಫಿಲ್ಮಿಬೀಟ್'ಗೆ ನೀಡಿದ ಸಂದರ್ಶನದಲ್ಲಿ ನಟಿ ಇಲಿಯಾನಾ ಕ್ಲಾರಿಟಿ ಕೊಟ್ಟಿದ್ದಾರೆ. ಮುಂದೆ ಓದಿರಿ...

'ಫಿಲ್ಮಿಬೀಟ್'ಗೆ ಇಲಿಯಾನಾ ಸಂದರ್ಶನ
'ಅಮರ್ ಅಕ್ಬರ್ ಆಂಟೋನಿ' ಚಿತ್ರದ ಪ್ರಚಾರ ನಿಮಿತ್ತ ನಟಿ ಇಲಿಯಾನಾ ಹೈದರಾಬಾದ್ ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ನಿಮ್ಮ 'ಫಿಲ್ಮಿಬೀಟ್'ಗೆ ನೀಡಿದ ಸಂದರ್ಶನದಲ್ಲಿ ತಮ್ಮ ರಿಲೇಶನ್ ಶಿಪ್ ಸ್ಟೇಟಸ್ ಹಾಗೂ ಪ್ರೆಗ್ನೆನ್ಸಿ ರೂಮರ್ಸ್ ಬಗ್ಗೆ ಇಲಿಯಾನಾ ಸ್ಪಷ್ಟನೆ ನೀಡಿದ್ದಾರೆ.

ಗರ್ಭಿಣಿ ಅಲ್ಲ
''ನಾನು ಗರ್ಭಿಣಿ ಅಂತ ಎಲ್ಲೆಡೆ ಸುದ್ದಿ ಆಗಿದೆ. ಆದ್ರೆ, ಇದು ಸುಳ್ಳು. ನಾನು ಗರ್ಭವತಿ ಅಲ್ಲ'' ಅಂತ ನಟಿ ಇಲಿಯಾನಾ 'ಫಿಲ್ಮಿಬೀಟ್'ಗೆ ಕೊಟ್ಟ ಸಂದರ್ಶನದಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ.

ಮದುವೆ ಆಗಿರುವುದು ನಿಜವೇ.?
''ನಿಮ್ಮ ರಿಲೇಶನ್ ಶಿಪ್ ಸ್ಟೇಟಸ್ ಏನು.?'' ಅಂತ ಕೇಳಿದರೆ, ''ತುಂಬಾ ಖುಷಿ ಆಗಿದ್ದೇನೆ'' ಅಂತ ನಗುನಗುತ್ತಾ ಹೇಳುವ ಇಲಿಯಾನಾ, ''ಮದುವೆ ಆಗಿದ್ದೀರಾ.?'' ಅಂದ್ರೆ ''ಇಲ್ಲ. ಮದುವೆ ಹಾಗೂ ರಿಲೇಶನ್ ಶಿಪ್ ಬಗ್ಗೆ ಮಾತು ಯಾಕೆ.? ನಾನು ಖುಷಿ ಆಗಿದ್ದೇನೆ ಅಷ್ಟೇ'' ಎನ್ನುತ್ತಾರೆ.

ಇಷ್ಟ ಇಲ್ಲ.!
''ನನ್ನ ವೈಯುಕ್ತಿಕ ಬದುಕಿನ ಬಗ್ಗೆ ಹೆಚ್ಚು ಮಾತನಾಡಲು ನಾನು ಇಷ್ಟಪಡಲ್ಲ. ಏನಾದರೂ ಹೇಳಬೇಕು ಅನಿಸಿದರೆ, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವೆ'' ಎಂದಿದ್ದಾರೆ ನಟಿ ಇಲಿಯಾನಾ.


Click it and Unblock the Notifications











