twitter
    For Quick Alerts
    ALLOW NOTIFICATIONS  
    For Daily Alerts

    ಒನ್‌ಇಂಡಿಯಾ ಕಚೇರಿಯಲ್ಲಿ ಕೆಂಡಸಂಪಿಗೆಯ ರವಿ ಮತ್ತು ಗೌರಿ

    |

    ಕನ್ನಡ ಚಿತ್ರರಂಗದ ದಿಕ್ಕು ಬದಲಾಗಿದೆ. ರಂಗಿತರಂಗ, ಉಪ್ಪಿ-2, ಆಟಗಾರ ಮತ್ತು ಇದೀಗ ಕೆಂಡಸಂಪಿಗೆಯ ಪರಿಮಳಕ್ಕೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಕನ್ನಡ ಚಿತ್ರಗಳಿಗೆ ಬೇಡಿಕೆಯಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಎಂಬುದನ್ನು ಚಿತ್ರಗಳು ನಿರೂಪಿಸುತ್ತಿವೆ.

    ಕೆಂಡಸಂಪಿಗೆಯ ರವಿ ಮತ್ತು ಗೌರಿ ಒನ್ ಇಂಡಿಯಾದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರ ಬಿಡುಗಡೆ ನಂತರ ಆದ ಅನುಭವಗಳೇನು? ಮುಂದಿನ ಹೊಸ ಹೆಜ್ಜೆಗಳೇನು? ದುನಿಯಾ ಸೂರಿಯವರ ಪ್ರಭಾವ ಎಂಥದ್ದು? ಚಿತ್ರ ವಿಭಿನ್ನವಾಗಿ ಮೂಡಿಬರಲು ಕಾರಣವೇನು? ಎಂಬ ಹಲವಾರು ಅಂಶಗಳನ್ನು ಒನ್ ಇಂಡಿಯಾ ಕಚೇರಿಗೆ ಆಗಮಿಸಿದವರು ಎಳೆ ಎಳೆಯಾಗಿ ಬಿಚ್ಚಿಟ್ಟರು.[ಕೆಂಡಸಂಪಿಗೆ ಸೂರಿಯ ಹೊಸ ದುನಿಯಾ]

    ಬಿಳಿ ಪಂಚೆ, ಶರ್ಟ್ ನಲ್ಲಿ ಪಕ್ಕಾ ಸಾಂಪ್ರದಾಯಿಕವಾಗಿ ನಟ ವಿಕ್ಕಿ ಮಿಂಚುತ್ತಿದ್ದರೆ, ನಟಿ ಮಾನ್ವಿತಾ ನೀಲಿ ಮಿಶ್ರಿತ ಚೂಡಿದಾರ್ ನಲ್ಲಿ ಕಂಗೊಳಿಸುತ್ತಿದ್ದರು. ಒಂದು ಕಾಲದಲ್ಲಿ ಆರ್ ಜೆ ಆಗಿದ್ದ ಮಾನ್ವಿತಾ ಪಟಪಟನೇ ಮಾತನಾಡುತ್ತಲೇ ಹೋದರು. ಅವರ ಮಾತಿನಲ್ಲೇ ಚಿತ್ರದ ಯಶಸ್ಸಿನ ಅನುಭವದ ಪಯಣವನ್ನು ಕೇಳೋಣ....!

    ನಟನೆ ಮಾಡಿಲ್ಲ

    ನಟನೆ ಮಾಡಿಲ್ಲ

    ನಮಗೆ ನಟನೆ ಬೇಡ ಎಂದೇ ನಿರ್ದೇಶಕ ಸೂರಿ ಹೇಳಿದ್ದರು. ಆಕ್ಟಿಂಗ್ ಬೇಡ, ಬಿಹೆವಿಯರ್ ಸಾಕು ಎಂದಿದ್ದರು. ಜನ ಇದನ್ನು ಹೇಗೆ ಸ್ವೀಕಾರ ಮಾಡುತ್ತಾರೋ ಅಂದುಕೊಂಡಿದ್ದೇವು, ಆದರೆ ಸೂರಿ ವಿಭಿನ್ನತೆಯನ್ನು ಕನ್ನಡದ ಜನ ಮೆಚ್ಚಿಕೊಂಡಿದ್ದಾರೆ.

    ಜಾಲತಾಣಗಳಿಗೆ ನಮೋ ನಮಃ

    ಜಾಲತಾಣಗಳಿಗೆ ನಮೋ ನಮಃ

    ನಮ್ಮ ಚಿತ್ರಕ್ಕೆ ಭರಾಟೆಯ ಪ್ರಚಾರ ನೀಡಿರಲಿಲ್ಲ. ಆದರೆ ಚಿತ್ರ ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಅಭಿಪ್ರಾಯಗಳೇ ಜನರನ್ನು ಚಿತ್ರ ಮಂದಿರದ ಕಡೆ ಕರೆದುಕೊಂಡು ಬಂದಿತು.

    ವಿದೇಶದಲ್ಲೂ ಬಿಡುಗಡೆ ಮಾಡ್ತಿವಿ

    ವಿದೇಶದಲ್ಲೂ ಬಿಡುಗಡೆ ಮಾಡ್ತಿವಿ

    ವಿದೇಶದಲ್ಲೂ ಚಿತ್ರ ಬಿಡುಗಡೆ ಮಾಡಿ ಎಂಬ ಕರೆಗಳು ಬರುತ್ತಿವೆ. ಹಾಗಾಗಿ ವಿದೇಶದಲ್ಲಿರುವ ಕನ್ನಡಿಗರು ಕೆಂಡ ಸಂಪಿಗೆ ಘಮವನ್ನು ಕೆಲವೇ ದಿನದಲ್ಲಿ ಅನುಭವಿಸಬಹುದು.

    ಬ್ರ್ಯಾಂಡ್ ಆಗಲ್ಲ

    ಬ್ರ್ಯಾಂಡ್ ಆಗಲ್ಲ

    ಇಂಥದ್ದೇ ಪಾತ್ರಕ್ಕೆ ಅಂಥ ಬ್ರ್ಯಾಂಡ್ ಆಗಲ್ಲ. ಸದಾ ವಿಭಿನ್ನ ಪಾತ್ರಗಳ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂಬುದು ನಟ ವಿಕ್ಕಿಯವರ ಒನ್ ಲೈನ್ ಉತ್ತರ.

    ಪರಭಾಷೆಗಳಿಂದಲೂ ಆಫರ್

    ಪರಭಾಷೆಗಳಿಂದಲೂ ಆಫರ್

    ಪರಭಾಷೆಗಳಿಂದಲೂ ಆಫರ್ ಬಂದಿದೆ. ಆದರೆ ಕನ್ನಡದಲ್ಲೇ ಗಟ್ಟಿಯಾಗಿ ನೆಲೆ ನಿಲ್ಲಬೇಕು ಅಂದುಕೊಂಡಿದ್ದೀನಿ. ಅಭಿಮಾನಿ ವರ್ಗದ ಬೆಂಬಲವಿದ್ದರೇ ಅದು ಸಾಧ್ಯ ಎಂದು ಮಾನ್ವಿತಾ ಹೇಳಿದರು.

    English summary
    Duniya Soori Directorial Kannada Movie 'Kendasampige' got good response. Hero Santosh and Heroine Manvita shared their experience about the people response after the film released. Here is the full conversation between OneIndia FilmiBeat and Kendasampige team.
    Friday, September 18, 2015, 18:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X