ಒಂದೂವರೆ ವರ್ಷದಿಂದ ಕಿರುತೆರೆಯಿಂದ ದೂರವಿದ್ದ ನಿಕಿತಾ ತಂಗಿಯ ಪಾತ್ರದಲ್ಲಿ ಎಂಟ್ರಿ: ಯಾವುದು ಆ ಸೀರಿಯಲ್?

By ಅನಿತಾ ಬನಾರಿ

ರಿಯಾಲಿಟಿ ಶೋಗಳ ಮೂಲಕ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡವೂ ಒಂದು. ಇಂತಿಪ್ಪ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ವಧು' ಎನ್ನುವ ಹೊಸ ಧಾರಾವಾಹಿ ಶುರುವಾಗಿದೆ. ಅದರಲ್ಲಿ ನಾಯಕ ಸಾರ್ಥಕ್ ನ ಚಿಕ್ಕಪ್ಪನ ಮಗಳಾಗಿ ನಟಿಸುವ ಮೂಲಕ ಕಿರುತೆರೆಗೆ ಮರಳಿದ್ದಾರೆ ನಿಕಿತಾ ದೊರ್ತೋಡಿ.

ಹೌದು, ತರಂಗ ಎನ್ನುವ ಪಾತ್ರದ ಮೂಲಕ ಕಿರುತೆರೆಗೆ ಮರಳಿರುವ ನಿಕಿತಾ ಅವರು ಕೊನೆಯದಾಗಿ ನಟಿಸಿದ್ದು 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ. 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಬೃಂದಾ ಮಗಳು ಡಾಕ್ಟರ್ ಮಹತಿಯಾಗಿ ಅಭಿನಯಿಸಿದ್ದ ನಿಕಿತಾ ತದ ನಂತರ ಒಂದೂವರೆ ವರ್ಷಗಳ ಕಾಲ ಕಿರುತೆರೆಯಿಂದ ದೂರವಿದ್ದರು. ಒಂದೆರಡು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಈಕೆ ಇದೀಗ ತರಂಗ ಆಗಿ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ.

actress Nikita Dortoody interview

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸುಂದರನ ಪ್ರೇಯಸಿ ಟೀನಾ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು ನಿಕಿತಾ ದೊರ್ತೋಡಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಿಣಿರಾಮ' ಧಾರಾವಾಹಿಯಲ್ಲಿ ಇಂಗ್ಲಿಷ್ ಟೀಚರ್ ಮಾಳವಿಕಾ ಪಾತ್ರಕ್ಕೆ ಜೀವ ತುಂಬಿದ್ದರು.

ನಂತರ 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಮಹತಿಯಾಗಿ ನಟಿಸಿದ್ದ ಈಕೆ ಇದೀಗ 'ವಧು' ಧಾರಾವಾಹಿಯ ತರಂಗ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. 'ವಧು' ಧಾರಾವಾಹಿಯಲ್ಲಿ ನಾನು ತರಂಗ ಆಗಿ ನಟಿಸುತ್ತಿದ್ದೇನೆ. ನಾಯಕನ ತಂಗಿಯ ಪಾತ್ರವದು. ನಾಯಕನ ಅಮ್ಮ ನನಗೆ ದೊಡ್ಡಮ್ಮ ಆಗಬೇಕು. ಇಬ್ಬರ ಅಣ್ಣಂದಿರ ಮುದ್ದಿನ ತಂಗಿ. ಆ ತರಹದ ಕ್ಯಾರೆಕ್ಟರ್ ನಂದು. ಬಬ್ಲಿ ಬಬ್ಲಿ ಹುಡುಗಿ. ಇತ್ತೀಚಿನ ಸಂಚಿಕೆಗಳಲ್ಲಿ ನನ್ನ ಪಾತ್ರ ಸ್ವಲ್ಪ ಟ್ವಿಸ್ಟ್ ತೆಗೊಂಡಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ನಿಕಿತಾ ದೊರ್ತೋಡಿ ಹಂಚಿಕೊಂಡಿದ್ದಾರೆ.

"ಇಡೀ ಮನೆಯವರ ಜೊತೆಗೆ ನಾನು ಚೆನ್ನಾಗಿ ಇರ್ತೀನಿ. ಅತ್ತಿಗೆ ಪ್ರಿಯಾಂಕಾ ಜೊತೆಗೆ ಮಾತ್ರ ನಂದು ಸ್ವಲ್ಪ ಡಿಫರೆಂಟ್ ಶೇಡ್ ಬರುತ್ತೆ. ಅಂದ ಮಾತ್ರಕ್ಕೆ ಕಂಪ್ಲೀಟ್ ನೆಗೆಟಿವ್ ಅಲ್ಲ. ಸದ್ಯಕ್ಕೆ ಮಾಡ್ತಿರುದು ಪಾಸಿಟಿವ್ ರೋಲ್. ಅಣ್ಣನ ವಿರೋಧ ಅಥವಾ ಮನೆಗೆ ವಿರುದ್ಧವಾಗಿ ನಾನು ಏನನ್ನು ಮಾಡುವುದಿಲ್ಲ. ಅತ್ತಿಗೆ ದುಡ್ಡು ಕೊಡ್ತಿರ್ತಾಳೆ ಅಂಥ ಅವಳಿಗೆ ಕೆಲವೊಂದು ಇನ್ ಫಾರ್ಮೇಶನ್ ಕೊಡ್ತಿರ್ತೇನೆ. ಕಂಪೆನಿ ಬಗ್ಗೆ, ಕಂಪೆನಿ ಪ್ರಾಫಿಟ್ ಬಗ್ಗೆ, ಮನೆ ವ್ಯವಹಾರ ಬಗ್ಗೆ ಎಲ್ಲಾ ಮಾಹಿತಿ ಕೊಡ್ತಿರ್ತೇನೆ. ಇದರಿಂದ ಮನೆಗೆ, ಅಣ್ಣನಿಗೆ ಪ್ರಾಬ್ಲಂ ಆಗೋದಿದ್ರೆ ನಾನು ಅವಳ ವಿರುದ್ಧ ತಿರುಗಿ ಬೀಳುವಂತ ಪಾತ್ರ" ಎಂದು ತರಂಗ ಪಾತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ ನಿಕಿತಾ ದೊರ್ತೋಡಿ ‌

"ಇದೇ ಮೊದಲ ಬಾರಿಗೆ ನಾನು ತಂಗಿಯ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ವಧು ಧಾರಾವಾಹಿಯ ಟೀಂ ಕೂಡಾ ಅಷ್ಟೇ. ತುಂಬಾ ಒಳ್ಳೆಯ ಟೀಂ. ವಧು ಧಾರಾವಾಹಿಯ ಪ್ರತಿಯೊಬ್ಬ ಕಲಾವಿದರುಗಳು ತುಂಬಾ ಸಪೋರ್ಟಿವ್ ಆಗಿದ್ದಾರೆ. ಧಾರಾವಾಹಿಯ ಸೆಟ್ ಗೆ ಹೋಗುವುದೆಂದರೆ ನನಗೆ ತುಂಬಾ ಖುಷಿ. ಅದರಲ್ಲೂ ಈ ಧಾರಾವಾಹಿಯಲ್ಲಿ ವಿನಯ ಮ್ಯಾಮ್ ಇರೋದೇ ನಂಗೆ ತುಂಬಾ ಖುಷಿ. ಅವರು ತುಂಬಾ ಹಂಬಲ್ ಮಾತ್ರವಲ್ಲ ವೆರಿ ಸ್ವೀಟ್. ಅಷ್ಟು ದೊಡ್ಡ ಸ್ಟಾರ್ ಆದ್ರೂ ಕೂಡಾ ಶೀ ಇಸ್ ವೆರಿ ಜಂಟಲ್, ಹಂಬಲ್ ಆ್ಯಂಡ್ ಕೈಂಡ್ ಪರ್ಸನ್ ಅಂತ ಹೇಳ್ಬಹುದು. ದಿಲೀಪ್ ಸರ್, ವಿದ್ಯಾ ಮೇಡಂ ಅವರೆಲ್ಲಾ ಸಾಕಷ್ಟು ಇನ್ ಪುಟ್ ಗಳನ್ನು ಕೊಡ್ತಾರೆ. ಏನಾದರೂ ಸರಿಯಾಗಿಲ್ಲ ಅಂದ್ರೆ ಹೇಳಿಕೊಡ್ತಾರೆ. ಎನ್ ಕರೇಜ್ ಮಾಡ್ತಾರೆ. ಟೋಟಲಿ ಹ್ಯಾಪಿ ವಿದ್ ದಿ ಟೀಮ್" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳಿಕೊಂಡಿದ್ದಾರೆ ನಿಕಿತಾ ದೊರ್ತೋಡಿ.

More from Filmibeat

English summary
Interview: Nikita Dortoody said that she is appearing in the role of a sister for the first time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X