twitter
    For Quick Alerts
    ALLOW NOTIFICATIONS  
    For Daily Alerts

    ಕಿರುತೆರೆಯ ಅನುಷ್ಕಾ ಶೆಟ್ಟಿ!: ಕನಸುಗಳ ತೆರೆದಿಟ್ಟ ಚಂದನಾ ಸುಬ್ರಹ್ಮಣ್ಯ

    |

    ಹೆಸರು ಚಂದನಾ ಸುಬ್ರಹ್ಮಣ್ಯ. ತಂದೆ ಸುಬ್ರಹ್ಮಣ್ಯ ಮತ್ತು ತಾಯಿ ಪದ್ಮಾ ಸೇರಿ ಮಗುವಿನ ಅಂದ ಚಂದಾನ ನೋಡಿಯೇ ಚಂದನಾ ಎಂದು ಹೆಸರಿಟ್ಟಿರಬೇಕು. ಅಂಥದೊಂದು ಚೆಲುವು ತುಂಬಿರುವ ಈಕೆಯನ್ನು ಕಿರುತೆರೆಯ ಅನುಷ್ಕಾ ಶೆಟ್ಟಿ ಎಂದು ಗುರುತಿಸುವವರಿದ್ದಾರೆ. ಅನುಷ್ಕಾ ನಿರ್ವಹಿಸುವಂಥ ಪಾತ್ರಗಳನ್ನು ಮಾಡಬೇಕೆನ್ನುವುದು ಈಕೆಯ ಅಭಿಲಾಷೆ. ವಿಭಿನ್ನವಾದ ಪಾತ್ರ, ಆಕರ್ಷಕ ಕತೆ ಇವರ ಕನಸು. ಅದಕ್ಕೆ ಚಂದನಾ ಉದಾಹರಣೆಯಾಗಿ ನೀಡುವುದು ಹಿಂದಿಯ 'ಡಿಯರ್ ಜಿಂದಗಿ' ಮಾದರಿಯ ಸಿನಿಮಾ.

    ಅಂದಹಾಗೆ ಲಾಕ್ಡೌನ್ ಬಳಿಕ ತಮಿಳು ಚಿತ್ರರಂಗದಿಂದ ಆಫರ್ ಬಂದಿರುವುದಕ್ಕೆ ಚಂದನಾಗೆ ಖುಷಿಯಿದೆ. ಬಹುಶಃ ಅನುಷ್ಕಾ ತೆಲುಗು ಚಿತ್ರರಂಗಕ್ಕೆ ಹೋದಂತೆ ಚಂದನಾ ಮುಂದೆ ತಮಿಳು ಚಿತ್ರರಂಗ ಪ್ರವೇಶ ಮಾಡಿದರೂ ಅಚ್ಚರಿ ಇಲ್ಲ. ಈ ಹಿಂದೆ ಸುವರ್ಣ ವಾಹಿನಿಯ ಗೀತಾಂಜಲಿ'ಯಲ್ಲಿ ಶ್ವೇತಾ, ಕಲರ್ಸ್ ನ'ಅಗ್ನಿ ಸಾಕ್ಷಿ'ಯಲ್ಲಿ ಸುರಭಿ ಮೊದಲಾದ ಪಾಸಿಟಿವ್ ಪಾತ್ರಗಳಿಂದ ಗಮನ ಸೆಳೆದ ಇವರಿಗೆ 'ನಾಗಿಣಿ'ಯಲ್ಲಿ ನೆಗೆಟಿವ್ ಶೇಡ್ ಪಾತ್ರ ದೊರಕಿತ್ತು. ಪ್ರಸ್ತುತ ಕಲರ್ಸ್ ಕನ್ನಡದ 'ಮೂರು ಗಂಟು' ಧಾರಾವಾಹಿಯಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಚಂದನಾ ಜತೆಗೆ 'ಫಿಲ್ಮೀಬೀಟ್' ನಡೆಸಿರುವ ಮಾತುಕತೆ ಇದು.

    'ನಾನಿರುವುದೇ ಹೀಗೆ': ನಿಮಗೆ ಗೊತ್ತಿರದ ಸುಧಾರಾಣಿ ಬದುಕು...'ನಾನಿರುವುದೇ ಹೀಗೆ': ನಿಮಗೆ ಗೊತ್ತಿರದ ಸುಧಾರಾಣಿ ಬದುಕು...

     ಒಂದು ಕಾಲದಲ್ಲಿ ಒಟ್ಟೊಟ್ಟಿಗೆ ಮೂರು ವಿಭಿನ್ನ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಿರಂತೆ?

    ಒಂದು ಕಾಲದಲ್ಲಿ ಒಟ್ಟೊಟ್ಟಿಗೆ ಮೂರು ವಿಭಿನ್ನ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಿರಂತೆ?

    ಹೌದು. ಸುವರ್ಣದಲ್ಲಿ 'ನೀಲಿ', ಜೀ ವಾಹಿನಿಯಲ್ಲಿ 'ನಾಗಿಣಿ' ಮಾಡುವ ಸಂದರ್ಭದಲ್ಲೇ 'ಕಲರ್ಸ್'ನಲ್ಲಿ ಕೂಡ ನಟಿಸುತ್ತಿದ್ದೆ. ಕಲರ್ಸ್ ಕನ್ನಡದಲ್ಲಿ ಈಗ ನಾನು ನಟಿಸುತ್ತಿರುವ `ಮೂರು ಗಂಟು' ನನ್ನ ನಾಲ್ಕನೇ ಧಾರಾವಾಹಿ! ಆ ಸಂದರ್ಭದಲ್ಲಿ ಆ ಮೂರು ವಾಹಿನಿಗಳ ಧಾರಾವಾಹಿಗಳಲ್ಲಿ ನಟಿಸುವುದರ ಜತೆಗೆ, ಉದಯ ವಾಹಿನಿಯಲ್ಲಿ ಒಂದು ಧಾರಾವಾಹಿಯ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್ ಕೂಡ ಮಾಡುತ್ತಿದ್ದೆ.

     ಆ ಮಟ್ಟಿಗೆ ವರ್ಕೋಹಾಲಿಕ್ ಆಗಿದ್ದ ನೀವು ಲಾಕ್ಡೌನ್ ಸಂದರ್ಭವನ್ನು ಹೇಗೆ ನಿಭಾಯಿಸಿದಿರಿ?

    ಆ ಮಟ್ಟಿಗೆ ವರ್ಕೋಹಾಲಿಕ್ ಆಗಿದ್ದ ನೀವು ಲಾಕ್ಡೌನ್ ಸಂದರ್ಭವನ್ನು ಹೇಗೆ ನಿಭಾಯಿಸಿದಿರಿ?

    ನನಗೆ ಒಳ್ಳೊಳ್ಳೆಯ ಹವ್ಯಾಸಗಳಿವೆ. ಬಿಡುವಾಗಿದ್ದಾಗ ಕ್ರಾಫ್ಟ್ ವರ್ಕ್ ಮಾಡ್ತೀನಿ. ಉದಾಹರಣೆಗೆ ವಾಲ್ ಹ್ಯಾಂಗಿಂಗ್ಸ್, ಫ್ಲವರ್ ಡೆಕೊರೇಶನ್ಸ್ ಮತ್ತು ಕುಂದನ್ ರಂಗೋಲಿಗಳನ್ನು ತಯಾರಿಸುತ್ತೇನೆ. ಅಲ್ಲದೆ ಅಡುಗೆ ಮಾಡುವುದು ಕೂಡ ನನ್ನ ಮೆಚ್ಚಿನ ಹವ್ಯಾಸ. ಎಲ್ಲ ಮಾದರಿಯ ಸಸ್ಯಾಹಾರಿ ಆಹಾರಗಳನ್ನು ನಾನು ಮಾಡಬಲ್ಲೆ. ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಚೈನೀಸ್ ನೂಡಲ್ಸ್ ಹೀಗೆ ಎಲ್ಲ ಆಹಾರ ತಿನಿಸುಗಳ ಪ್ರಯೋಗವೇ ಮಾಡಿದ್ದೇನೆ. ಅದರೊಂದಿಗೆ ರಸಂ ಪೌಡರ್, ಸಾಂಬಾರ್ ಪೌಡರ್ ತಯಾರಿಸಿಟ್ಟೆ. ಉಪ್ಪಿನ ಕಾಯಿ ಕೂಡ ತಯಾರು ಮಾಡಿದ್ದೇನೆ. ಎಲ್ಲವೂ ಈಗ ಶೂಟಿಂಗ್‌ಗೆ ಕ್ಯಾರಿಯರ್ ತೆಗೆದುಕೊಂಡು ಹೋಗಲು ಸಹಾಯವಾಗುತ್ತಿದೆ.

    ಕ್ವಾರಂಟೈನ್ ಕಲಿಸಿದ ಪಾಠದ ಬಗ್ಗೆ ಸುಮಲತಾ ಅಂಬರೀಷ್ ಮಾತುಕ್ವಾರಂಟೈನ್ ಕಲಿಸಿದ ಪಾಠದ ಬಗ್ಗೆ ಸುಮಲತಾ ಅಂಬರೀಷ್ ಮಾತು

     ನಿಮ್ಮ ಮೆಚ್ಚಿನ ಆಹಾರಗಳ ಬಗ್ಗೆ ಮತ್ತು ಒಂದಷ್ಟು ಫೇವರಿಟ್ ಸಂಗತಿಗಳ ಬಗ್ಗೆ ಹೇಳಿ

    ನಿಮ್ಮ ಮೆಚ್ಚಿನ ಆಹಾರಗಳ ಬಗ್ಗೆ ಮತ್ತು ಒಂದಷ್ಟು ಫೇವರಿಟ್ ಸಂಗತಿಗಳ ಬಗ್ಗೆ ಹೇಳಿ

    ನನಗೆ ಪನೀರ್ ಐಟಮ್ಸ್ ಇಷ್ಟ. ವೆಜಿಟೇಬಲ್ ಸಲಾಡ್ಸ್ ಸೇರಿದಂತೆ ಖಾರ ಕಡಿಮೆ ಇರುವ ಆಹಾರಗಳು ನನಗೆ ಇಷ್ಟ. ರಸ್ ಮಲಾಯಿ, ಖಾಜು ಬರ್ಫಿ, ಫ್ರೂಟ್ ಜೂಸ್ ಇಷ್ಟ. ಎಲ್ಲಕ್ಕಿಂತ ಮುಖ್ಯವಾಗಿ ಚೆನ್ನಾಗಿ ನಿದ್ದೆ ಮಾಡುವ ಹವ್ಯಾಸವಿದೆ. ತಿಂದುಂಡು ನಿದ್ದೆ ಮಾಡಿ ಈಗ ಒಂದಷ್ಟು ದಪ್ಪಗಾಗಿದ್ದೀನಿ. ಇನ್ನು ನಟನೆಯ ವಿಚಾರಕ್ಕೆ ಬಂದರೆ ಕನ್ನಡ ಸಿನಿಮಾದಲ್ಲಿ ದರ್ಶನ್ ತುಂಬ ಇಷ್ಟ. ತಮಿಳಲ್ಲಿ ಅಜಿತ್ ಲುಕ್ಕು, ವಿಜಯ್ ಸೇತುಪತಿ ನಟನೆ ಇಷ್ಟ. ತೆಲುಗಲ್ಲಿ ಅನುಷ್ಕಾ ಶೆಟ್ಟಿ, ಅಲ್ಲು ಅರ್ಜುನ್ ಮತ್ತು ನಾಗಾರ್ಜುನ ಮೊದಲಾದವರು ನನಗೆ ಫೇವರಿಟ್ ಕಲಾವಿದರು.

     ನಿಮಗೆ ಅನುಷ್ಕಾ ಶೆಟ್ಟಿಯ ಛಾಯೆ ಇದೆ ಎಂದು ಮೊದಮೊದಲು ಪತ್ತೆ ಮಾಡಿದ್ದು ಯಾರು?

    ನಿಮಗೆ ಅನುಷ್ಕಾ ಶೆಟ್ಟಿಯ ಛಾಯೆ ಇದೆ ಎಂದು ಮೊದಮೊದಲು ಪತ್ತೆ ಮಾಡಿದ್ದು ಯಾರು?

    ನನ್ನ ಮೊದಲ ಧಾರಾವಾಹಿಯಲ್ಲೇ ಆ ಹೋಲಿಕೆಯ ಮಾತು ಬಂತು. ಅದನ್ನು ನಿರ್ದೇಶಕ ವೆಂಕಟ್ ಕೊಟ್ಟೂರು ಅವರು ಹೇಳಿದರು. ಆಮೇಲೆ ನನಗೂ ಅನಿಸಿತು. ಅದರಲ್ಲಿಯೂ ಲಾಕ್ಡೌನ್ ಸಮಯದಲ್ಲಿ ನಾನು ಹೆಚ್ಚು ಹೆಚ್ಚು ಟಿಕ್‌ಟಾಕ್‌ನಲ್ಲಿ ತೊಡಗಿಸಿಕೊಂಡಿದ್ದೆ. ಆಗ ತುಂಬ ಮಂದಿ ನನ್ನಲ್ಲಿ ಅನುಷ್ಕಾ ಅವರ ಸಿನಿಮಾ ಸಂಭಾಷಣೆಗೆ ನಟಿಸುವಂತೆ ಹೇಳುತ್ತಿದ್ದರು. ನನಗೆ ಟಿಕ್‌ಟಾಕ್ ನಲ್ಲಿ ಹೆಚ್ಚು ಹೆಚ್ಚು ಆಂಧ್ರದ ಫಾಲೋವರ್ಸ್ ಬಂದಿದ್ದೇ ನಾನು ಅನುಷ್ಕಾ ತರಹ ಕಾಣಿಸುತ್ತೇನೆ ಎನ್ನುವ ಕಾರಣದಿಂದ. ನನಗೆ ಆಕೆ ನಿರ್ವಹಿಸಿರುವಂಥ ನಟನಾ ಪ್ರಾಧಾನ್ಯತೆ ಇರುವ ಪಾತ್ರಗಳನ್ನು ಮಾಡುವ ಆಸೆ ಇದೆ. ಅದರಲ್ಲಿಯೂ ಅವರು ಮಾಡಿದ ಪೌರಾಣಿಕ ಮಾದರಿಯ ಪಾತ್ರಗಳ ಬಗ್ಗೆ ಹೇಳುವುದೇ ಬೇಡ.

     ಈಗ `ಮೂರುಗಂಟು' ಧಾರಾವಾಹಿಯಲ್ಲಿನ ಅನುಭವ ಹೇಗಿದೆ?

    ಈಗ `ಮೂರುಗಂಟು' ಧಾರಾವಾಹಿಯಲ್ಲಿನ ಅನುಭವ ಹೇಗಿದೆ?

    ಸದ್ಯಕ್ಕೆ ನನ್ನ ಪಾತ್ರ ಒಂದಷ್ಟು ನೆಗೆಟಿವ್ ಶೇಡ್ ಜತೆಗೆ ಸಾಗುತ್ತಿದೆ. ನಾಯಕನಿಗೆ ಮೂರನೇ ಅಕ್ಕನ ಪಾತ್ರ ನನ್ನದು. ಮುಂದೆ ಯಾವ ರೀತಿ ಬದಲಾಗಲಿದೆ ಎಂದು ನನಗೆ ಗೊತ್ತಿಲ್ಲ. ಜೂನ್ ನಿಂದ ಮತ್ತೆ ಶೂಟಿಂಗ್ ಶುರುವಾಗಿದೆ. ಈಗ ಮನೆಯಿಂದ ಹೊರಗೆ ಕಾಲಿಟ್ಟೊಡನೆ ಅನ್ ಸೆಕ್ಯೂರ್ ಫೀಲ್ ಆಗುತ್ತಿದೆ. ಆದರೆ ಏನೂ ಮಾಡುವಂತಿಲ್ಲ. ಚಿತ್ರೀಕರಣದಲ್ಲಿ ಮೊದಲಿಗಿಂತ ಎಚ್ಚರಿಕೆ ವಹಿಸಲಾಗುತ್ತಿದೆ. ಕಾಫಿ, ಟೀ ಬದಲು ಕಷಾಯ ಕೊಡುತ್ತಾರೆ. ಶೀಘ್ರದಲ್ಲೇ ಕೊರೊನಾ ತೊಲಗುವ ದಿನಗಳ ಬಗ್ಗೆ ನಿರೀಕ್ಷೆ ಇದೆ. ಮುಂದೆ ಇನ್ನಷ್ಟು ನಟನೆಯಲ್ಲಿ ತೊಡಗಿಸಿಕೊಳ್ಳುವ ಇರಾದೆ ಇದೆ. ಅದಕ್ಕೆ ತಕ್ಕಂತೆ ತಮಿಳು ಸಿನಿಮಾರಂಗದಿಂದಲೂ ಆಫರ್ಸ್ ಬರುತ್ತಿವೆ.

    ಡ್ರೋನ್ ಪ್ರತಾಪ್ ಬಯೋಪಿಕ್ ಕಥೆ ಏನಾಯ್ತು?: ನಿರ್ದೇಶಕರು ತೆರೆದಿಟ್ಟ ರಸವತ್ತಾದ ಸಂಗತಿಡ್ರೋನ್ ಪ್ರತಾಪ್ ಬಯೋಪಿಕ್ ಕಥೆ ಏನಾಯ್ತು?: ನಿರ್ದೇಶಕರು ತೆರೆದಿಟ್ಟ ರಸವತ್ತಾದ ಸಂಗತಿ

    English summary
    Interview of Nagini, Mooru Gantu serials fame television actress Chandana Subramanya talks about lockdown period and her serial activities.
    Saturday, August 1, 2020, 9:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X