For Quick Alerts
  ALLOW NOTIFICATIONS  
  For Daily Alerts

  'ಭಜರಂಗಿ 2' ಚಿತ್ರದ ಪಾತ್ರದ ಬಗ್ಗೆ ಶ್ರುತಿ ಹೇಳಿದ್ದೇನು?: ಸಂದರ್ಶನ

  |

  ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಭಜರಂಗಿ 2' ಕೂಡ ಒಂದು. ಡಾ. ಶಿವರಾಜ್ ಕುಮಾರ್ ಜನ್ಮದಿನಕ್ಕೆ ತೆರೆ ಕಾಣುವುದೆನ್ನುವ ನಿರೀಕ್ಷೆ ಇದ್ದಂಥ ಚಿತ್ರ ಅದು. ಆದರೆ ಕೊರೊನಾ ವೈರಸ್ ಮತ್ತು ಲಾಕ್ಡೌನ್ ಎಲ್ಲವನ್ನೂ ಬದಲಾಯಿಸಿದೆ.

  ಇನ್ನೂ ರಾಕಿ ಭಾಯ್ Poster ನೋಡಿದ್ರೆ ಕಳೆದು ಹೋಗುತ್ತೀರ | Garuda Ram | Part 2 | Filmibeat Kannada

  ಭಜರಂಗಿಯಲ್ಲಿ ಹಿರಿಯ ನಟಿ ಶ್ರುತಿ ಅವರದು ಕೂಡ ಒಂದು ಪ್ರಮುಖ ಪಾತ್ರ. ಸಿನಿಮಾ ಪ್ರೇಕ್ಷಕರಾಗಿ ಟೀಸರ್ ಮೂಲಕ ನಾವು ಹಿಂದೆಂದೂ ಕಂಡಿರದ ಒಂದು ಲುಕ್ ನಲ್ಲಿ ಅವರನ್ನು ನೋಡಿದ್ದೇವೆ. ಅದೇ ಕಾರಣಕ್ಕೆ ಅವರ ಪಾತ್ರದ ಬಗ್ಗೆ ಕೂಡ ಒಂದು ನಿರೀಕ್ಷೆ ಮನೆ ಮಾಡಿದೆ.

  ಶ್ರುತಿ ಅವರಿಗೆ ಆ ಪಾತ್ರ ಹೇಗಿತ್ತು? ಅವರ ಕಳೆದ ಮೂರು ತಿಂಗಳ ಯೋಜನೆ, ಯೋಚನೆಗಳಿಗೆ ತಡೆಯೊಡ್ಡುವಲ್ಲಿ ಲಾಕ್ಡೌನ್ ಪಾತ್ರ ಏನಿತ್ತು? ಲಾಕ್ಡೌನ್ ಆಚೆಗೆ ಅವರು ಸಕ್ರಿಯರಾಗಿ ಮಗಳು ಗೌರಿಗೆ ಕೊಟ್ಟ ಅಪರೂಪದ ಉಡುಗೊರೆ ಏನು? ಮೊದಲಾದ ಎಲ್ಲ ಪ್ರಶ್ನೆಗಳಿಗೆ ಅವರು ಸ್ವತಃ ಫಿಲ್ಮೀಬೀಟ್ ಜತೆಗೆ ಹಂಚಿಕೊಂಡಿರುವ ಉತ್ತರಗಳು ಇಲ್ಲಿವೆ.

  ಇದುವರೆಗಿನ ತಮ್ಮ ಇಮೇಜ್ ಗೆ ವಿರುದ್ಧವಾದ 'ಭಜರಂಗಿ 2' ಚಿತ್ರದ ಪಾತ್ರದ ಬಗ್ಗೆ ಶ್ರುತಿ ಏನು ಹೇಳಿದ್ದಾರೆ ಎನ್ನುವ ಆಕರ್ಷಕ ಸಂಗತಿಗಳನ್ನು ಮುಂದೆ ಓದಿ...

   ಲಾಕ್ಡೌನ್ ಕಾರಣದಿಂದ ನಿಮ್ಮ ಯಾವೆಲ್ಲ ಯೋಜನೆಗಳಿಗೆ ಅಡಚಣೆಯಾಯಿತು?

  ಲಾಕ್ಡೌನ್ ಕಾರಣದಿಂದ ನಿಮ್ಮ ಯಾವೆಲ್ಲ ಯೋಜನೆಗಳಿಗೆ ಅಡಚಣೆಯಾಯಿತು?

  ಕೆ.ಎಸ್.ಡಿಸಿಯಲ್ಲಿ ಹಲವಾರು ಕೆಲಸ ಯೋಜನೆ ಹಾಕಿದ್ದೆವು. ಹದಿನೈದು ದಿನಗಳ ಕಾಲ ವಿದೇಶದಲ್ಲಿ ಸೆಮಿನಾರ್ ನಡೆಯುವುದಿತ್ತು. ಸುಮಾರು ಆರು ದೇಶಗಳಿಗೆ ಹೋಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿತ್ತು. ಕೆಎಸ್ ಡಿಸಿಯ ನಾಲ್ಕು ಜನರ ಜತೆಗೆ ಟಿಕೆಟ್ಸ್ ಮತ್ತು ಟೈಮಿಂಗ್ಸ್ ಎಲ್ಲವೂ ನಿಗದಿಯಾಗಿತ್ತು! ಬಹುಶಃ ಆ ಸಮಯದಲ್ಲಿ ಸ್ಪೇನ್‌ನಲ್ಲಿ ವಿಮನ್ಸ್ ಡೇ ಆಚರಣೆಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಅಲ್ಲಿಂದ ನಮ್ಮ ದೇಶದ ಎಲ್ಲ ಹೆಣ್ಣುಮಕ್ಕಳಿಗೆ ಆ ದಿನವನ್ನು ಅರ್ಪಿಸುವ ಯೋಜನೆ ಇತ್ತು. ಹೀಗೆ ಸಾಕಷ್ಟು ಯೋಜನೆ ಹಾಕಿಕೊಂಡಿದ್ದು ನಡೆಯಲಿಲ್ಲ. ನಾನು ಕೂಡ ಪಾತ್ರ ಮಾಡಿರುವ `ಭಜರಂಗಿ 2' ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯಬೇಕಿತ್ತು. ಶಿವಣ್ಣನ ಜನ್ಮದಿನದ ಸಂದರ್ಭದಲ್ಲಿ ಭಜರಂಗಿಯ ಬಿಡುಗಡೆಯೂ ಆಗಬೇಕಿತ್ತು. ಆದರೆ ಯಾವುದೂ ನೆರವೇರಲಿಲ್ಲ.

  ಕಿರುತೆರೆಯ ಅನುಷ್ಕಾ ಶೆಟ್ಟಿ!: ಕನಸುಗಳ ತೆರೆದಿಟ್ಟ ಚಂದನಾ ಸುಬ್ರಹ್ಮಣ್ಯಕಿರುತೆರೆಯ ಅನುಷ್ಕಾ ಶೆಟ್ಟಿ!: ಕನಸುಗಳ ತೆರೆದಿಟ್ಟ ಚಂದನಾ ಸುಬ್ರಹ್ಮಣ್ಯ

   ಭಜರಂಗಿ 2 ಚಿತ್ರದಲ್ಲಿ ನಿಮ್ಮ ಪಾತ್ರ ಎಷ್ಟು ವಿಭಿನ್ನವಾಗಿದೆ?

  ಭಜರಂಗಿ 2 ಚಿತ್ರದಲ್ಲಿ ನಿಮ್ಮ ಪಾತ್ರ ಎಷ್ಟು ವಿಭಿನ್ನವಾಗಿದೆ?

  ಭಜರಂಗಿ 2ರಲ್ಲಿ ನಾನು ನಟಿಸಿದ್ದೇನೆ. ಒಂದಷ್ಟು ಭಾಗ ಮಾತ್ರ ಚಿತ್ರೀಕರಣವಾಗಿದೆ. ಉಳಿದ ಭಾಗವನ್ನು ಸ್ವಿಜರ್ಲೆಂಡ್‌ನಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕೂಡ ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಪಾತ್ರದ ಬಗ್ಗೆ ಅವರೇ ರಿವೀಲ್ ಮಾಡುವ ತನಕ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಒಂದಂತೂ ನಿಜ. ಎಲ್ಲರೂ ಟೀಸರಲ್ಲಿ ಈಗಾಗಲೇ ನೋಡಿರುವಂತೆ ನಾನು ಇದುವರೆಗೂ ಮಾಡಿರದಂಥ ವಿಭಿನ್ನ ಪಾತ್ರ ನನ್ನದು. ಇದುವರೆಗೆ ನಟಿಸಿರುವ ಬಹಳಷ್ಟು ಚಿತ್ರಗಳಲ್ಲಿ ನನ್ನ ಸ್ವಭಾವವೇ ಬೇರೆಯಾಗಿರುತ್ತದೆ. ನಾನು ತುಂಬಾನೇ ಸಾಫ್ಟ್ ಆಗಿ ಕಾಣಿಸಿರುವುದೇ ಹೆಚ್ಚು. ಹೆಣ್ಣಿನ ಯಾವ ಸಹಜವಾದ ಗುಣಗಳು ಕೂಡ ನನಗೆ ಈ ಸಿನಿಮಾದಲ್ಲಿ ಇಲ್ಲ! ಅಂಜಿಕೆ, ಅಳುಕು, ನಾಚಿಕೆ ಯಾವುದೂ ಇಲ್ಲ. ಆ ರೀತಿಯ ಪಾತ್ರ ಮಾಡಬೇಕಾದರೆ ಮಾನಸಿಕವಾಗಿ ಸಾಕಷ್ಟು ತಯಾರಿ ಬೇಕಾಗಿರುತ್ತದೆ. ಹೆಣ್ಣುಮಗಳು ಹೀಗೆಲ್ಲ ಮಾಡಬಹುದಾ ಎಂದು ಯೋಚಿಸಿ ಮಾಡಿದರೆ ಹೇಗೆ ಮಾಡಬಹುದು ಎಂದು ಯೋಚಿಸಬೇಕಾಯಿತು. ಪಾತ್ರದ ನಡವಳಿಕೆ ಮಾತ್ರವಲ್ಲ, ಪಾತ್ರದ ಲುಕ್ ಗೆ ಸಾಕಷ್ಟು ತಯಾರಿ ಮಾಡಬೇಕಾಯಿತು.

  ಕೆಲವೊಮ್ಮೆ ನಮ್ಮ ಎದುರಿಗೆ ಇರುವವರ ಮುಖ ನೋಡುವಾಗ ಅವರು ಒಳ್ಳೆಯವರಾ, ರೌಡಿಗಳಾ, ವಂಚಕರಾ ಎಂದು ಗೊತ್ತೇ ಆಗುವುದಿಲ್ಲ. ಇಲ್ಲಿ ಕಾಸ್ಟ್ಯೂಮ್ ನೋಡುತ್ತಿದ್ದಂತೆ ಇವನು ರೌಡಿ ಎಂದು ಗೊತ್ತಾಗುವಂತಿರಬೇಕು. ಅಥವಾ ನೋಡುತ್ತಿದ್ದಂತೆ ಸಾಧು ಅನಿಸುವಂತಿರಬೇಕು. ಆದರೆ ಇದರಲ್ಲಿ ಕಾಸ್ಟ್ಯೂಮ್ ಮೂಲಕ, ಮುಖಚಹರೆಯ ಮೂಲಕ ವ್ಯಕ್ತಪಡಿಸಿದ ಭಾವ ನೀಡಲು ನನ್ನೊಳಗೆ ಒಂದಷ್ಟು ತಯಾರಿ ಮಾಡಬೇಕಾಯಿತು.

  'ನಾನಿರುವುದೇ ಹೀಗೆ': ನಿಮಗೆ ಗೊತ್ತಿರದ ಸುಧಾರಾಣಿ ಬದುಕು...'ನಾನಿರುವುದೇ ಹೀಗೆ': ನಿಮಗೆ ಗೊತ್ತಿರದ ಸುಧಾರಾಣಿ ಬದುಕು...

   ಅಳುವ ನಾಯಕಿಯಾಗಿಯೇ ಕಾಣಿಸಿಕೊಂಡ ಸಂದರ್ಭದಲ್ಲಿ ಇಂಥದೊಂದು ಪಾತ್ರ ಮಾಡುವ ಆಸೆ ಇತ್ತೇ?

  ಅಳುವ ನಾಯಕಿಯಾಗಿಯೇ ಕಾಣಿಸಿಕೊಂಡ ಸಂದರ್ಭದಲ್ಲಿ ಇಂಥದೊಂದು ಪಾತ್ರ ಮಾಡುವ ಆಸೆ ಇತ್ತೇ?

  ಆರಂಭದಲ್ಲಿ ನಾನು ಪಾತ್ರಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ತುಂಬ ಸಣ್ಣ ವಯಸ್ಸಿನಲ್ಲೇ ನಾಯಕಿಯಾಗಿದ್ದೆ. ಸುಮಾರು ಐವತ್ತರಷ್ಟು ಸಿನಿಮಾಗಳು ಮಾಡಿದಾಗಲೂ ಅದರಲ್ಲಿ 48 ಸಿನಿಮಾಗಳಲ್ಲಿ ಇದೇ ಅಳುಮುಂಜಿಯಾದಾಗ ಬೇರೇನಾದರೂ ಮಾಡಬಹುದಿತ್ತೇನೋ ಎಂದು ಅನಿಸಿದ್ದು ನಿಜ.

  ಪ್ರತೀ ಬಾರಿಯೂ ಅತ್ತೆಯಿಂದ, ಗಂಡನಿಂದ ಹೊಡೆಸಿಕೊಳ್ಳುವುದು, ಮಾವನಿಂದ ಹೊಡೆಸಿಕೊಳ್ಳುವುದು, ಸೀಮೆ ಎಣ್ಣೆ ಸುರಿಸಿಕೊಳ್ಳುವುದು, ವಿಷ ಕುಡಿಯೋದರಲ್ಲೇ ಹೋಯಿತಲ್ಲ ಎಂದು ಚಿಂತೆ ಆಯಿತು. ಒಂದು ಬಾರಿ ತಿರುಗಿ ಬೀಳುವ ಪಾತ್ರ ನನ್ನಿಂದ ಯಾಕೆ ಮಾಡಿಸುತ್ತಿಲ್ಲ ಅನಿಸುತ್ತಿತ್ತು. ಯಾವಾಗಲೂ ನನ್ನ ಅತ್ತೆ, ಮಾವ ಪಾತ್ರ ಮಾಡುವವರಿಗೆ ಹೇಳುತ್ತಿದ್ದೆ; ''ಎಷ್ಟು ಸಿನಿಮಾ ಅಂತ ನನಗೆ ಹೊಡೆಯುತ್ತೀರಿ ನೀವು? ಒಂದಲ್ಲ ಒಂದು ದಿನ ಒಬ್ಬ ಪ್ರೊಡ್ಯೂಸರ್ ಅಥವಾ ಡೈರೆಕ್ಟರ್ ಬಂದು ನನ್ನನ್ನು ಒಬ್ಬ ರೆಬೆಲ್ ಸೊಸೆಯಾಗಿ ಮಾಡ್ತಾರೆ. ಆವಾಗ ನಿಮ್ಮೇಲೆ ರಿವೈಂಜ್ ತೀರಿಸ್ಕೋತೀನಿ'' ಅಂತ ಹೇಳುತ್ತಿದ್ದೆ. ಆನಂತರ ನೀವೇ ನೋಡಿದಂತೆ ಒಂದಷ್ಟು ವಿಭಿನ್ನ ಪಾತ್ರಗಳನ್ನು ಕೂಡ ಮಾಡಿದೆ. ಇದು ಅವೆಲ್ಲಗಳಿಗಿಂತ ವಿಭಿನ್ನವಾಗಿರುತ್ತದೆ.

   ಮಗಳ ಜನ್ಮದಿನಕ್ಕೆ ಮನೆ ಕಟ್ಟಿ ಕೊಟ್ಟಿದ್ದೀರಂತೆ?

  ಮಗಳ ಜನ್ಮದಿನಕ್ಕೆ ಮನೆ ಕಟ್ಟಿ ಕೊಟ್ಟಿದ್ದೀರಂತೆ?

  ಹೌದು; ಅದು ನಾನೇ ಕಟ್ಟಿಕೊಟ್ಟ ಮನೆ. ಅದು ಲಾಕ್ಡೌನ್ ಸಂದರ್ಭದಲ್ಲಿ ನಡೆದ ಕೆಲಸ. ಆ ಮನೆ ಕಟ್ಟಲು ನಾನೇ ಎಂಜಿನಿಯರ್ ಆಗಿ ಪ್ಲ್ಯಾನ್ ಹಾಕಿದ್ದೆ. ಮೊದಲಿನಿಂದಲೂ ಮನೆಯ ಇಂಟೀರಿಯರ್ ವಿಷಯಗಳಲ್ಲಿ ನಾನೇ ಭಾಗಿಯಾಗುತ್ತಿದ್ದೆ. ನಾನು ಈ ಹಿಂದೆ ಇದ್ದ ಮನೆಗಳಿಗೆ ಮತ್ತು ಈಗ ಇರುವ ಮನೆಗಳಿಗೆ ನಾನೇ ಇಂಟೀರಿಯರ್ ಡಿಸೈನ್ ಮಾಡಿದ್ದೇನೆ. ಮಗಳಿಗೆ ಕಟ್ಟಿಕೊಟ್ಟ ಮನೆಯ ವಿಚಾರಕ್ಕೆ ಬಂದರೆ ಸ್ಕೆಚ್ ನಿಂದ ಹಿಡಿದು ಎಲ್ಲವನ್ನು ನಾನೇ ಮಾಡಿದ್ದೆ. ಕೇವಲ ಬೆರಳೆಣಿಕೆಯ ಕೆಲಸಗಾರರನ್ನು ಬಳಸಿಕೊಂಡು ನಾನೇ ಸ್ವತಃ ಮನೆ ಕಟ್ಟಿರುವುದು ನನಗೂ ಹೆಮ್ಮೆ; ಅದನ್ನು ಗಿಫ್ಟಾಗಿ ಪಡೆದ ಮಗಳಿಗೂ ಖುಷಿ.

  ಕ್ವಾರಂಟೈನ್ ಕಲಿಸಿದ ಪಾಠದ ಬಗ್ಗೆ ಸುಮಲತಾ ಅಂಬರೀಷ್ ಮಾತುಕ್ವಾರಂಟೈನ್ ಕಲಿಸಿದ ಪಾಠದ ಬಗ್ಗೆ ಸುಮಲತಾ ಅಂಬರೀಷ್ ಮಾತು

  ರಾಮನಗರದಲ್ಲಿರುವ ಈ ಮನೆಯನ್ನು ಸಂಪೂರ್ಣವಾಗಿ ಕಲ್ಲುಗಳನ್ನು ಮಾತ್ರ ಬಳಸಿಕೊಂಡು, ಯಾವುದೇ ರೀತಿಯ ಸಿಮೆಂಟ್ ಇಟ್ಟಿಗೆಗಳ ಬಳಸದೆ ಮಾಡಿದ್ದೇನೆ. ಪ್ರಕೃತಿಯಲ್ಲೇ ಸಿಗುವ ಕಲ್ಲು, ಮಣ್ಣು, ಬಿದಿರು, ಹುಲ್ಲುಗಳನ್ನೇ ಬಳಸಿ ಮತ್ತೊಂದು ಮನೆ ಮಾಡಿದ್ದೇನೆ. ಆ ಟ್ರೀ ಹೌಸ್ ಕೂಡ ನಾನು ಮಗಳಿಗೆ ಕೊಟ್ಟಂಥ ಉಡುಗೊರೆ.

  English summary
  Veteran Kannada actress, politician Shruthi talks about how she spent lockdown days and her role in Bhajarangi 2 film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X