twitter
    For Quick Alerts
    ALLOW NOTIFICATIONS  
    For Daily Alerts

    2020ರ ಅನುಭವ: ಕೊರೊನಾ, ಪ್ಯಾನ್ ಇಂಡಿಯಾ, ಒಟಿಟಿ ಬಗ್ಗೆ ಒಡೆಯರ್ ಮಾತು

    |

    ''2020ರಲ್ಲಿ ನಮ್ಮ ರೆಮೋ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದ್ರೆ, ನನ್ನ ಮಗ ರಿಲೀಸ್ ಆಗ್ಬಿಟ್ಟ......'' ಎಂದು ಬಹಳ ಸಂತೋಷದಿಂದ ಮಾತು ಆರಂಭಿಸಿದ ಪವನ್ ಒಡೆಯರ್, 'ಕೊರೊನಾದಿಂದ ಚಿತ್ರರಂಗ ಬಹಳ ಕಷ್ಟ ಎದುರಿಸಬೇಕಾಯಿತು, ಆ ಬಗ್ಗೆ ಬೇಸರ ಇದೆ' ಎಂದು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

    ಈ ಸಂದರ್ಶನದಲ್ಲಿ ಪವನ್ ಒಡೆಯರ್ ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಪ್ಯಾನ್ ಇಂಡಿಯಾ ಸಿನಿಮಾದ ಬೆಳವಣಿಗೆ, ಚಿತ್ರರಂಗದ ಮೇಲೆ ಒಟಿಟಿ ಯಾವ ರೀತಿ ಪ್ರಭಾವ ಬೀರುತ್ತಿದೆ ಎಂಬ ಪ್ರಮುಖ ವಿಚಾರಗಳ ಕುರಿತು ಸಹ ಮಾತನಾಡಿದ್ದಾರೆ. ಹಾಗಾದ್ರೆ, ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ಅವರ ಪಾಲಿಗೆ 2020ನೇ ವರ್ಷ ಹೇಗಿತ್ತು? ಮುಂದೆ ಓದಿ....

    ಸಂದರ್ಶಕ- ಭರತ್ ಕುಮಾರ್

    2020ನೇ ವರ್ಷ ನಿಮ್ಮ ಪಾಲಿಗೆ ಹೇಗಿತ್ತು?

    2020ನೇ ವರ್ಷ ನಿಮ್ಮ ಪಾಲಿಗೆ ಹೇಗಿತ್ತು?

    ''2020ನೇ ವರ್ಷದಲ್ಲಿ ಎರಡು ವಿಷಯ. ನಮ್ಮ ರೆಮೋ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ, ನನ್ನ ಮಗ ಬಂದ್ಬಿಟ್ಟ. ಇದು ಬಹಳ ಖುಷಿ ಕೊಟ್ಟಿದೆ. ಕೊರೊನಾದಿಂದ ಚಿತ್ರರಂಗಕ್ಕೆ ಭಾರಿ ಕಷ್ಟ ಆಗಿದೆ, ಇದರಿಂದ ಸಾವು-ನೋವು ಆಗಿದೆ. ಇದು ಬಹಳ ಬೇಸರ ತಂದಿದೆ'' - ಪವನ್ ಒಡೆಯರ್.

    ಸಿನಿಮಾ, ಸಮಾಜ ಸೇವೆ ಹಾಗೂ ಇನ್ನಷ್ಟು: 2021 ಕ್ಕೆ ಚೇತನ್ ಅಹಿಂಸಾ ಗುರಿಗಳೇನು?ಸಿನಿಮಾ, ಸಮಾಜ ಸೇವೆ ಹಾಗೂ ಇನ್ನಷ್ಟು: 2021 ಕ್ಕೆ ಚೇತನ್ ಅಹಿಂಸಾ ಗುರಿಗಳೇನು?

    ಈ ವರ್ಷ ಮರೆಯಲಾಗದ ಸನ್ನಿವೇಶ

    ಈ ವರ್ಷ ಮರೆಯಲಾಗದ ಸನ್ನಿವೇಶ

    ''2020 ಎನ್ನುವುದನ್ನು ನನ್ನ ಜೀವನದಲ್ಲಿ ಮರೆಯಲಾಗದ ವರ್ಷ. ನನ್ನ ಮಗ ಹುಟ್ಟಿದ ವರ್ಷ. ನಾನು ಹುಟ್ಟಿದ ದಿನವೇ ನನ್ನ ಮಗ ಹುಟ್ಟಿದ್ದು ಇನ್ನೊಂದು ರೀತಿ ಖುಷಿ. ಕೊರೊನಾ ಅಂತಹ ಎಷ್ಟೇ ಕಷ್ಟ ಬಂದಿದ್ದರೂ ಈ ಕ್ಷಣ ಸದಾ ನೆನಪಲ್ಲಿ ಉಳಿಯುತ್ತೆ''

    ಕೊರೊನಾ ನಂತರ ಚಿತ್ರರಂಗ ಹೇಗಿರಲಿದೆ?

    ಕೊರೊನಾ ನಂತರ ಚಿತ್ರರಂಗ ಹೇಗಿರಲಿದೆ?

    ''ಕೊರೊನಾಗೂ ಮುಂಚೆ ನಾವು ಬಹಳ ವೇಗವಾಗಿ ಓಡ್ತಿದ್ವಿ. ಯಾವುದೇ ಕಾಂಪಿಟೇಶನ್‌ನಲ್ಲಿದ್ದೀವಿ ಅಂತ ಅಂದುಕೊಂಡು ಸಾಗ್ತಿದ್ವಿ. ವಿಷಯ ಮೇಲೆ ಹೆಚ್ಚು ಗಮನ ಕೊಡದೆ, ಸಿನಿಮಾ ಮಾಡಿ ಮುಗಿಸಿಬಿಟ್ರೆ ಸಾಕು ಅನ್ನೋ ಭಾವನೆ ಇತ್ತು. ಅದಕ್ಕೆ ಕೊರೊನಾ ಒಂದು ಬ್ರೇಕ್ ನೀಡಿದೆ. ಈ ಅವಧಿಯಲ್ಲಿ ಅನೇಕರ ಕಂಟೇಂಟ್ ಬಗ್ಗೆ ಯೋಚನೆ ಮಾಡಿರ್ತಾರೆ. ಹಳೆ ಸಿನಿಮಾಗಳನ್ನು ನೋಡಿ ತಮ್ಮ ಆಲೋಚನೆಗಳನ್ನು ಬದಲಾಯಿಸಿಕೊಂಡಿರ್ತಾರೆ. ಹೊಸ ದೃಷ್ಟಿಕೋನ ಬೆಳಸಿಕೊಂಡಿರ್ತಾರೆ. ಬಹುಶಃ ಕೊರೊನಾ ನಂತರದ ದಿನದಲ್ಲಿ ಒಳ್ಳೆಯ ಕಂಟೇಂಟ್ ಇರುವ ಚಿತ್ರಗಳನ್ನು ನೋಡಬಹುದು'' - ಪವನ್ ಒಡೆಯರ್

    2021ರಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ ಬಹುನಿರೀಕ್ಷೆಯ ಚಿತ್ರಗಳು2021ರಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ ಬಹುನಿರೀಕ್ಷೆಯ ಚಿತ್ರಗಳು

    ಒಟಿಟಿಗಳು ಚಿತ್ರಮಂದಿರ ಸಂಪ್ರದಾಯಕ್ಕೆ ಮಾರಕ ಆಗುತ್ತಾ?

    ಒಟಿಟಿಗಳು ಚಿತ್ರಮಂದಿರ ಸಂಪ್ರದಾಯಕ್ಕೆ ಮಾರಕ ಆಗುತ್ತಾ?

    ''ಸಿನಿಮಾ ಅಂದ್ರೆ ಚಿತ್ರಮಂದಿರ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ರೆ, ಇಂದಿನ ಬದುಕಿನಲ್ಲಿ ಒಟಿಟಿ ಮತ್ತು ಚಿತ್ರಮಂದಿರ ಎರಡು ಬೇಕಿದೆ. ಒಟಿಟಿ ಮಾರಕ ಎನ್ನುವುದು ಸುಳ್ಳು. ಚಿತ್ರಮಂದಿರ ಆಗಿರಬಹುದು ಅಥವಾ ಒಟಿಟಿ ಆಗಿರಬಹುದು ಜನರಿಗೆ ತಲುಪುವುದು ಮುಖ್ಯ. ನಿರ್ಮಾಪಕ ಹಾಕಿದ ಬಂಡವಾಳವೂ ವಾಪಸ್ ಬಂದು ಜನರಿಗೂ ಸಿನಿಮಾ ತಲುಪುತ್ತಿದೆ ಎನ್ನುವುದಾದರೇ ಯಾವುದಾದರೂ ಓಕೆ.'' - ಪವನ್ ಒಡೆಯರ್

    ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ನಿಮ್ಮ ಅಭಿಪ್ರಾಯ?

    ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ನಿಮ್ಮ ಅಭಿಪ್ರಾಯ?

    ''ನಮ್ಮ ಕೈಯಲ್ಲಿರುವ ಬೆರಳುಗಳೇ ಸಮ ಇರಲ್ಲ. ಈ ವಿಚಾರದಲ್ಲಿ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಡಬ್ಬಿಂಗ್ ಬರುವುದರಿಂದ ಕನ್ನಡಿಗರಿಗೆ ಕೆಲಸ ಸಿಗಲ್ಲ ಎನ್ನುವುದು ವಾಸ್ತವ ಇರಬಹುದು. ಅದೇ ರೀತಿ ನಮ್ಮ ಪ್ರತಿಭೆ, ಕ್ರಿಯೆಟಿವಿಟಿಯನ್ನು ದೇಶಾದ್ಯಂತ ತೋರಿಸುವ ಅವಕಾಶನೂ ಇದೆ. ಕನ್ನಡಿಗರಿಗೆ ಅವಕಾಶನೂ ಕೊಡಬೇಕು, ಪ್ಯಾನ್ ಇಂಡಿಯಾನೂ ಮಾಡಬೇಕು. ಇದನ್ನು ಸಮತೋಲನವಾಗಿ ಮಾಡಿದ್ರೆ ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ'' - ಪವನ್ ಒಡೆಯರ್

    2020 ವರ್ಷದಲ್ಲಿ ಈ ಸಿನಿಮಾಗಳ ಟಿಕೆಟ್‌ಗಳು ಅತಿ ಹೆಚ್ಚು ಸೇಲ್ ಆಗಿವೆ2020 ವರ್ಷದಲ್ಲಿ ಈ ಸಿನಿಮಾಗಳ ಟಿಕೆಟ್‌ಗಳು ಅತಿ ಹೆಚ್ಚು ಸೇಲ್ ಆಗಿವೆ

    ರೆಮೋ ರಿಲೀಸ್‌ಗೆ ರೆಡಿ

    ರೆಮೋ ರಿಲೀಸ್‌ಗೆ ರೆಡಿ

    ''ರೆಮೋ ಸಂಪೂರ್ಣ ಚಿತ್ರೀಕರಣ ಮುಗಿದಿದೆ. ಹತ್ತು ದಿನಗಳ ಶೂಟಿಂಗ್ ಬಾಕಿ ಇದೆ. ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಬೇರೆ ಭಾಷೆಯಲ್ಲಿ ದೊಡ್ಡ ನಟರ ಕೈಯಿಂದ ಪೋಸ್ಟರ್, ಟೀಸರ್ ಬಿಡುಗಡೆ ಮಾಡಿಸುವ ಪ್ಲಾನ್ ನಡೆಯುತ್ತಿದೆ. ಅದೇ ರೀತಿ ನನ್ನ ನಿರ್ಮಾಣದಲ್ಲಿ ತಯಾರಾಗಿರುವ ಡೊಳ್ಳು ಸಿನಿಮಾ ಸಂಪೂರ್ಣವಾಗಿ ಮುಗಿದಿದೆ, ಸದ್ಯದಲ್ಲೇ ಅದು ತೆರೆಕಾಣಲಿದೆ'' - ಪವನ್ ಒಡೆಯರ್

    2021ಕ್ಕೆ ನಿಮ್ಮಿಂದ ಏನು ನಿರೀಕ್ಷೆ ಮಾಡಬಹುದು?

    2021ಕ್ಕೆ ನಿಮ್ಮಿಂದ ಏನು ನಿರೀಕ್ಷೆ ಮಾಡಬಹುದು?

    ''ಸಿನಿಮಾದಿಂದ ಸಿನಿಮಾಗೆ, ವರ್ಷದಿಂದ ವರ್ಷಕ್ಕೆ ಸಿನಿಮಾ ಶೈಲಿ ಹಾಗೂ ಅದರಲ್ಲಿ ಪ್ರೌಢತೆ ಬೆಳಯಬೇಕು. ಬಹುಶಃ 2021ಕ್ಕೆ ನನ್ನಿಂದ ಮತ್ತಷ್ಟು ಒಳ್ಳೆಯ ಚಿತ್ರಗಳ ಬರಲಿದೆ. ಸದ್ಯಕ್ಕೆ ರೆಮೋ ಬಹಳ ವಿಶೇಷತೆಯಿಂದ ಕೂಡಿರಲಿದೆ'' ಎಂದು ನಿರ್ದೇಶಕ ಪವನ್ ಒಡೆಯರ್ ಭರವಸೆ ನೀಡಿದ್ದಾರೆ.

    English summary
    Here is the exclusive interview with director Pawan Wadeyar regarding kannada movie industry in 2020 and more. Read on.
    Monday, December 28, 2020, 14:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X