For Quick Alerts
  ALLOW NOTIFICATIONS  
  For Daily Alerts

  ಧ್ವನಿಗೆ ಬೆಲೆ; ಗುಣಮಟ್ಟಕ್ಕಿಲ್ಲ ಮನ್ನಣೆ: ಕಲಾವಿದೆ ದೀಪಾ ಸಂದರ್ಶನ

  |

  ಡಬ್ಬಿಂಗ್ ಪರ ಮತ್ತು ವಿರೋಧದ ಚರ್ಚೆ ಇವತ್ತು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ನಡೆಯುತ್ತಿದೆ. ಕಾನೂನು ಡಬ್ಬಿಂಗ್ ಗೆ ಮುಕ್ತ ಅವಕಾಶ ನೀಡಿದ ಬಳಿಕ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಿನಿಮಾಗಳು ಮತ್ತು ಧಾರಾವಾಹಿಗಳು ಸಂಖ್ಯೆ ಜಾಸ್ತಿಯಾಗುತ್ತಿದೆ.

  ಡಬ್ಬಿಂಗ್ ಹೆಚ್ಚಾಗುತ್ತಿದಂತೆ ಸಹಜವಾಗಿ ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಸಹ ಹೆಚ್ಚಾಗಿದೆ. ಡಬ್ಬಿಂಗ್ ಸಿನಿಮಾಗಳು ಮತ್ತು ಧಾರಾವಾಹಿಗಳಿಂದ ಗುಣಮಟ್ಟ ಕುಗ್ಗುತ್ತಿದೆ, ಕನ್ನಡ ಚಿತ್ರ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಆದರೂ ಪರಭಾಷಾ ಸಿನಿಮಾಗಳು ಮತ್ತು ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರದರ್ಶನಗೊಳ್ಳುತ್ತಿವೆ.

  ಡಬ್ಬಿಂಗ್ ಕಲಾವಿದರು ಕೇವಲ ಸ್ವಮೇಕ್ ಸಿನಿಮಾಗಳಿಗೆ ಮಾತ್ರ ಧ್ವನಿ ನೀಡುತ್ತ ಇಂಪಾದ ಕಂಠದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೀಗ ಬೇರೆ ಭಾಷೆಯ ಸಿನಿಮಾ ಮತ್ತು ಧಾರಾವಾಹಿಗಳಿಗೂ ಧ್ವನಿ ನೀಡುವ ಮೂಲಕ ಡಬ್ಬಿಂಗ್ ಲೋಕದಲ್ಲಿ ಹೊಸ ಬದಲಾವಣೆ ಬಂದಿದೆ.

  ಬದಲಾದ ಡಬ್ಬಿಂಗ್ ಲೋಕ ಹೇಗಿದೆ? ಧ್ವನಿ ಕಲಾವಿದರ ಬದುಕು ಹೇಗಿದೆ? ಎಂದು ಖ್ಯಾತ ಡಬ್ಬಿಂಗ್ ಕಲಾವಿದೆ ದೀಪಾ ಭಾಸ್ಕರ್ ಅವರ ಜೊತೆ 'ಫಿಲ್ಮಿ ಬೀಟ್ ಕನ್ನಡ' ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಮುಂದೆ ಓದಿ...

  ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿ ಎನ್ನಲಾಗುತ್ತಿದೆ, ಹೌದಾ?

  ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿ ಎನ್ನಲಾಗುತ್ತಿದೆ, ಹೌದಾ?

  ಅಗ್ತಿದೆ ಯೆಸ್, ಡಬ್ಬಿಂಗ್ ಸಿನಿಮಾ, ಸೀರಿಯಲ್ ಎಲ್ಲಾ ಬಂದಿರುವುದರಿಂದ ಅವಕಾಶ ಹೆಚ್ಚಾಗುತ್ತಿದೆ. ಈಗ ಡಬ್ಬಿಂಗ್ ಕಲಾವಿದರೇ ಆಗಬೇಕಾಗಿಲ್ಲ, ಡಬ್ಬಿಂಗ್ ಮಾಡೋಕೆ ಬರುವ ಕಲಾವಿದರು, ಉತ್ತಮ ಧ್ವನಿ ಇರುವವರು ಮಾಡಬಹುದು. ಡಬ್ಬಿಂಗ್ ಕಲಾವಿದರಿಗೆ ಈಗ ಬೇಡಕೆಯಂತೂ ಜಾಸ್ತಿ ಆಗಿದೆ.

  ಅಂದು ಅವಕಾಶ ಸಿಗುವುದೇ ಕಷ್ಟವಾಗಿತ್ತು

  ಅಂದು ಅವಕಾಶ ಸಿಗುವುದೇ ಕಷ್ಟವಾಗಿತ್ತು

  ಮುಂಚೆನೂ ಡಬ್ಬಿಂಗ್ ಕಲಾವಿದರು ಇದ್ದರು. ಆದರೆ ಅಷ್ಟು ಜನ ಒಟ್ಟಿಗೆ ಸಕ್ರೀಯರಾಗಿರಲಿಲ್ಲ. ಯಾಕೆಂದ್ರೆ ಇಷ್ಟು ಡಬ್ಬಿಂಗ್ ಧಾರಾವಾಹಿ ಮತ್ತು ಸಿನಿಮಾಗಳು ಬರ್ತಿರಲಿಲ್ಲ. ಅಂದು ಅವಕಾಶ ಸಿಗುವುದೇ ಕಷ್ಟವಾಗಿತ್ತು. ಕೊರೊನಾ ಬಳಿಕ ಸಿನಿಮಾ ಚಟುವಟಿಕೆಗಳು ನಿಂತು ಹೋಗಿತ್ತು. ಆದರೆ ಡಬ್ಬಿಂಗ್ ಗೆ ಮಾತ್ರ ಅವಕಾಶವಿತ್ತು. ಹಾಗಾಗಿ ಅನೇಕರು ಈಗ ಡಬ್ಬಿಂಗ್ ಮಾಡುತ್ತಿದ್ದಾರೆ.

  ಸ್ವಮೇಕ್ ಮತ್ತು ಡಬ್ಬಿಂಗ್ ಸಿನಿಮಾಗಳ ನಡುವೆ ಏನು ವ್ಯತ್ಯಾಸ ಇದೆ?

  ಸ್ವಮೇಕ್ ಮತ್ತು ಡಬ್ಬಿಂಗ್ ಸಿನಿಮಾಗಳ ನಡುವೆ ಏನು ವ್ಯತ್ಯಾಸ ಇದೆ?

  ಸ್ವಮೇಕ್ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಿಗುವ ಇಂಟ್ರೆಸ್ಟ ಬೇರೆ. ಇಲ್ಲಿ ಹೇಗೆ ಬೇಕು ಹಾಗೆ ಬದಲಾವಣೆ ಮಾಡಿಕೊಳ್ಳುತ್ತೇವೆ. ಡಬ್ಬಿಂಗ್ ಸಿನಿಮಾ ಆದರೆ ಸ್ಕ್ರಿಪ್ಟ್ ಕೊಟ್ಟಿರುತ್ತಾರೆ ಮಾಡಬೇಕು ಅಷ್ಟೆ. ಡಬ್ಬಿಂಗ್ ಸಿನಿಮಾಗಳಿಗೆ ಲಿಪ್ ಸಿಂಕ್ ಮಾಡಲಿಕ್ಕೆ ಆಗಲ್ಲ.

  ಡಬ್ಬಿಂಗ್ ಸಿನಿಮಾಗಳು, ಧಾರಾವಾಹಿಗಳು ಜಾಸ್ತಿ ಆಗುತ್ತಿದೆ ಏನು ಹೇಳುತ್ತೀರಿ?

  ಡಬ್ಬಿಂಗ್ ಸಿನಿಮಾಗಳು, ಧಾರಾವಾಹಿಗಳು ಜಾಸ್ತಿ ಆಗುತ್ತಿದೆ ಏನು ಹೇಳುತ್ತೀರಿ?

  ಕಾದು ನೋಡಬೇಕು ಅನಿಸುತ್ತಿದೆ. ಇಷ್ಟುದಿನ ಬೇಡಿಕೆ ಇತ್ತು ಒಪ್ಪಿಕೊಳ್ಳುತ್ತೇನೆ. ಈಗ ಬಿರುಗಾಳಿ ಬಂದು ಧೂಳ್ ಎದ್ದ ಹಾಗಾಗಿದೆ. ಒಮ್ಮೆ ಎಲ್ಲಾ ಸೆಟಲ್ ಆದಮೇಲೆ ಏನಾಗುತ್ತೆ ನೋಡಬೇಕು. ಆಗ ಈ ಡಬ್ಬಿಂಗ್ ಕಲಾವಿದರು ಎಲ್ಲಾ ಎಲ್ಲಿ ಹೋಗುತ್ತಾರೆ. ನಟನೆಗೆ ವಾಪಸ್ ಹೋಗುತ್ತಾರಾ ಎಂದು ಕಾದು ನೋಡಬೇಕು.

  ದ್ವನಿ ಚೆನ್ನಾಗಿ ಇಟ್ಟುಕೊಳ್ಳುವುದು ಎಷ್ಟು ಚಾಲೆಂಜ್ ಆಗಿದೆ?

  ದ್ವನಿ ಚೆನ್ನಾಗಿ ಇಟ್ಟುಕೊಳ್ಳುವುದು ಎಷ್ಟು ಚಾಲೆಂಜ್ ಆಗಿದೆ?

  ನಾನು ಹೋಟೆಲ್ ಹೋಗಿ ತಿನ್ನಲ್ಲ. ಧಾರಾವಾಹಿ ಮುಗಿದ ಬಳಿಕ ನಾನು ಐಸ್ ಕ್ರೀಮ್ ತಿನ್ನಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕೋವಿಡ್ ಬಂದ ಕಾರಣ ಅದು ಆಗಿಲ್ಲ. ನಾಟಕಗಳನ್ನು ಮಾಡಿದ ಮಾರನೆ ದಿನ ಡಬ್ಬಿಂಗ್ ಮಾಡಲ್ಲ. ನಾಟಕಗಳಿಗೆ ಸ್ಟೇಜ್ ವಾಯ್ಸ್ ಬೇಕು, ಜೋರಾಗಿ ಮಾತನಾಡಿರುತ್ತೇವೆ. ಅದೆ ಧ್ವನಿಯಲ್ಲಿ ಡಬ್ಬಿಂಗ್ ಮಾಡೋಕೆ ಆಗಲ್ಲ. ತುಂಬನೇ ಕೇರ್ ಆಗಿ ಇರಬೇಕು. ನಾನು ಐಸ್ ಕ್ರೀಮ್, ಹುಳಿ ತಿನ್ನಲ್ಲ ಯಾವುದನ್ನು ತಿನ್ನಲ್ಲ.

  ಡಬ್ಬಿಂಗ್ ಕಲಾವಿದರಗೆ ನಟನೆ ಗೊತ್ತಿದ್ದರೂ, ನಟನೆಯಲ್ಲಿ ಗುರುತಿಸಿಕೊಳ್ಳುವುದು ತೀರ ಕಡಿಮೆ ಯಾಕೆ?

  ಡಬ್ಬಿಂಗ್ ಕಲಾವಿದರಗೆ ನಟನೆ ಗೊತ್ತಿದ್ದರೂ, ನಟನೆಯಲ್ಲಿ ಗುರುತಿಸಿಕೊಳ್ಳುವುದು ತೀರ ಕಡಿಮೆ ಯಾಕೆ?

  ಎಲ್ಲಾ ನಟರು ಉತ್ತಮ ಡಬ್ಬಿಂಗ್ ಕಲಾವಿದರಲ್ಲ. ಎಲ್ಲಾ ಡಬ್ಬಿಂಗ್ ಕಲಾವಿದರು ಉತ್ತಮ ನಟರಲ್ಲ. ಎಷ್ಟೋ ಜನರನ್ನು ಗಮನಿಸಿರಬಹುದು ಅದ್ಭುತ ನಟ-ನಟಿಯರಾಗಿರುತ್ತಾರೆ. ಆದರೆ ಅವರ ವಾಯ್ಸ ಅವರಿಗೆ ದೊಡ್ಡ ಹಿನ್ನಡೆ ಆಗಿರುತ್ತೆ. ಈ ಕಾಂಬಿನೇಷನ್ ತುಂಬಾ ಕಡಿಮೆ. ಎರಡು ಕಡೆ ಮ್ಯಾನೇಜ್ ಮಾಡುತ್ತಾರೆ ಅಂದರೆ ಅದಕ್ಕೆ ರಂಗಭೂಮಿ ಕಾರಣ. ರಂಗಭೂಮಿಯಲ್ಲಿ ಧ್ವನಿಯನ್ನು ಪಳಗಿಸಿಕೊಂಡಿರುತ್ತೇವೆ. ಆಗ ತೆರೆಮೇಲೆ ಮತ್ತು ತೆರೆ ಹಿಂದೆ ಎರಡು ಕಡೆ ಮ್ಯಾನೇಜ್ ಮಾಡೋಕೆ ಸುಲಭ ಆಗುತ್ತೆ.

  ಡಬ್ಬಿಂಗ್ ಪರ-ವಿರೋಧ ಚರ್ಚೆ ನಡೆಯುತ್ತಿದೆ ಏನು ಹೇಳುತ್ತೀರಿ?

  ಡಬ್ಬಿಂಗ್ ಪರ-ವಿರೋಧ ಚರ್ಚೆ ನಡೆಯುತ್ತಿದೆ ಏನು ಹೇಳುತ್ತೀರಿ?

  ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈಗ ಗಲಾಟೆ ಮಾಡುವುದರಲ್ಲಿ ಅರ್ಥವಿಲ್ಲ. ಉತ್ತಮವಾದ ಕಂಟೆಂಟ್ ಬರಬೇಕು. ಜನಗಳಿಗೆ ಡಬ್ಬಿಂಗ್ ಬೇಡ, ಸ್ವಮೇಕ್ ಸಿನಿಮಾ ಅಥವಾ ಧಾರಾವಾಹಿ ನೋಡಿ ಪ್ರಮೋಟ್ ಮಾಡುತ್ತೀವಿ ಎನ್ನುವ ರೇಂಜ್ ಗೆ ಬೆಳೆಯಬೇಕಿದೆ. ಎಲ್ಲಾ ಭಾಷೆಯಲ್ಲೂ ಡಬ್ಬಿಂಗ್ ಇದೆ. ಆದರೆ ಅಲ್ಲಿ ಯಾಕೆ ಗಲಾಟೆ ಆಗುತ್ತಿಲ್ಲ. ಜನ ಆಯ್ಕೆ ಮಾಡುತ್ತಾರೆ. ಸ್ವಮೇಕ್ ಗೆ ತುಂಬಾ ಬೆಲೆ ಇದೆ. ಇದನ್ನು ಉಳಿಸಿಕೊಂಡು ಹೋಗಬೇಕು ಅಷ್ಟೆ.

  ಡಬ್ಬಿಂಗ್ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಸಾಹಿತ್ಯ ಮತ್ತು ವಾಕ್ಯಗಳು ತಪ್ಪಾಗಿ ಇರುತ್ತೆ ಏನು ಹೇಳುತ್ತೀರಿ?

  ಡಬ್ಬಿಂಗ್ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಸಾಹಿತ್ಯ ಮತ್ತು ವಾಕ್ಯಗಳು ತಪ್ಪಾಗಿ ಇರುತ್ತೆ ಏನು ಹೇಳುತ್ತೀರಿ?

  ಹೌದು ಈ ಬಗ್ಗೆ ತುಂಬಾ ಕೇಳಿದ್ದೇನೆ. ಅಂದು ಜಾಹೀರಾತುಗಳು ಕನ್ನಡಕ್ಕೆ ಡಬ್ ಆಗುವ ಸಮಯದಲ್ಲಿ ಎಲ್ಲಿ ಚಿತ್ರೀಕರಣ ಮಾಡುತ್ತಿದ್ದರು ಎನ್ನುವುದೇ ಗೊತ್ತಿರುತ್ತಿರಲ್ಲ. ಅಲ್ಲೆ ಸ್ವಲ್ಪ ಕನ್ನಡ ಬರುವವರ ಬಳಿ ಮಾಡಿಸುತ್ತಿದ್ದರು. ಅದನ್ನು ಕೇಳಲು ತುಂಬಾ ಕೆಟ್ಟದಾಗಿ ಇರುತ್ತಿತ್ತು. ನಾನು ಯಾವುದೇ ಡಬ್ಬಿಂಗ್ ಧಾರಾವಾಹಿ ಮತ್ತು ಸಿನಿಮಾ ನೋಡಲ್ಲ. ನನಗೆ ಮನಸ್ಸಿಗೆ ಹತ್ತಿರವಾಗಿದ್ದೇ ಇಲ್ಲ. ಸಿನಿಮಾಗಳನ್ನು ನಾನು ಅದೇ ಭಾಷೆಯಲ್ಲಿ ಸಿನಿಮಾ ನೋಡಲು ಇಷ್ಟ ಪಡುತ್ತೇನೆ.

  ಡಬ್ಬಿಂಗ್ ಕಲಾವಿದರಾಗಬೇಕು ಎನ್ನುವವರಿಗೆ ಹೇಗೆ ಎನ್ನುವುದು ಗೊತ್ತಿರಲ್ಲ, ಹೊಸಬರ ಬಗ್ಗೆ ಏನು ಹೇಳುತ್ತೀರಿ?

  ಡಬ್ಬಿಂಗ್ ಕಲಾವಿದರಾಗಬೇಕು ಎನ್ನುವವರಿಗೆ ಹೇಗೆ ಎನ್ನುವುದು ಗೊತ್ತಿರಲ್ಲ, ಹೊಸಬರ ಬಗ್ಗೆ ಏನು ಹೇಳುತ್ತೀರಿ?

  ಸಾಕಷ್ಟು ಕಡೆ ಕೋರ್ಸ್ ನಡೆಯುತ್ತಿದೆ. ಆದರೆ ನಾನು ಮೊದಲು ಹೇಳುವುದು ರಂಗಭೂಮಿಗೆ ಸೇರಿ. ಅಲ್ಲಿಂದ ಪ್ರಾರಂಭ ಮಾಡಿ, ಆಗ ಪ್ರಪಂಚ ಏನು ಅಂತ ಅರ್ಥ ಆಗುತ್ತೆ. ಅಲ್ಲಿ ನಮ್ಮನ್ನು ನಾವು ಹೊಂದಿಸಿಕೊಳ್ಳಲು ಸರಿ ಆಗುತ್ತೆ. ಅಲ್ಲಿಂದ ಪ್ರಾರಂಭ ಮಾಡಿದ್ರೆ ಸುಲಭವಾಗಿ ಅವಕಾಶ ಸಿಗುತ್ತೆ.

  ಡಬ್ಬಿಂಗ್ ಕಲಾವಿದರಿಗೆ ಸಂಭಾವನೆ ಕಡಿಮೆ ಎನ್ನುವ ಮಾತಿತ್ತು, ಈಗ ಹೇಗಿದೆ ಪರಿಸ್ಥಿತಿ?

  ಡಬ್ಬಿಂಗ್ ಕಲಾವಿದರಿಗೆ ಸಂಭಾವನೆ ಕಡಿಮೆ ಎನ್ನುವ ಮಾತಿತ್ತು, ಈಗ ಹೇಗಿದೆ ಪರಿಸ್ಥಿತಿ?

  ಖಂಡಿತ ಕಡಿಮೆ ಇದೆ. ನಾನು ಪ್ರತೀ ಬಾರಿ ಹೇಳುತ್ತೇನೆ. ಈಗ ಕೋವಿಡ್ ಸಂದರ್ಭ ಅಂತಲ್ಲ. ಸಿನಿಮಾದಿಂದ ಸಿನಿಮಾಗೆ ನಟರಿಗೆ ಅಥವಾ ನಿರ್ಮಾಪಕರ ಆದಾಯ ಬದಲಾಗುತ್ತೆ. ಆದರೆ ತಂತ್ರಜ್ಞರಿಗೆ ಹೀಗೆ ಆಗುವುದು ತುಂಬಾ ಕಡಿಮೆ. 10 ವರ್ಷದ ನಂತರನೂ ಅದೇ ಸಂಬಳಕ್ಕೆ ಕೆಲಸ ಮಾಡಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಯಾರು ಕೂಡ ಕಳೆದ ಸಿನಿಮಾಗೆ ಇಷ್ಟು ಕೊಟ್ಟಿದ್ದೆ ಮುಂದಿನ ಸಿನಿಮಾಗೆ ಜಾಸ್ತಿ ಕೊಡುತ್ತೀನಿ ಅಂತ ಕರೆಯಲ್ಲ.

  ನಟ-ನಟಿಯಗೆ ಮಾರ್ಕೆಟ್ ಇರುತ್ತೆ. ಆದರೆ ಡಬ್ಬಿಂಗ್ ಕಲಾವಿದರಿಗೆ ಇಲ್ಲದೆ ಇರಬಹುದು. ಅವರ ವಾಯ್ಸ್ ಇದ್ರೆನೇ ಸಿನಿಮಾ ಹಿಟ್ ಆಗುತ್ತೆ ಅಂಥ ನಾನು ಎಲ್ಲೂ ಕೇಳಿಲ್ಲ. ಇದೆಲ್ಲ ಗೊತ್ತಿದೆ ಆದರೂ ಡಬ್ಬಿಂಗ್ ಕಲಾವಿದರಿಗೆ ಸಂಬಳ ಕಡಿಮೆ. ಸಾಕಷ್ಟು ಡಬ್ಬಿಂಗ್ ಕಲಾವಿದರು ತಾವು ತೆಗೆದುಕೊಳ್ಳುವ ಸಂಬಳಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ.

  ಡಬ್ಬಿಂಗ್ ಕಲಾವಿದರ ಆದಾಯ ಎಷ್ಟಿದೆ?

  ಡಬ್ಬಿಂಗ್ ಕಲಾವಿದರ ಆದಾಯ ಎಷ್ಟಿದೆ?

  ನನಗೆ ನಿಜಕ್ಕೂ ಈ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಬೇರೆ ಭಾಷೆ ಸಿನಿಮಾಗಳನ್ನು ಡಬ್ ಮಾಡುವ ಕಲಾವಿದರಿಗೆ ದಿನಕ್ಕೆ 200 ರಿಂದ 500 ರೂಪಾಯಿ ಸಿಗುತ್ತಿದೆ. ಇದರಲ್ಲಿ ಮಧ್ಯವರ್ತಿಗಳ ಕಮಿಷನ್ ಎಲ್ಲಾ ಸೇರಿಕೊಂಡಿರುತ್ತೆ. ಜೊತೆಗೆ ಡಬ್ಬಿಂಗ್ ಸಿನಿಮಾ ತೆಗೆದುಕೊಂಡು ಬರುವ ನಿರ್ಮಾಪಕರು ಮತ್ತು ಚಾನೆಲ್ ಬಜೆಟ್ ಎಷ್ಟಿದೆ ಎನ್ನುವುದು ಗೊತ್ತಿಲ್ಲ. ಆದರೆ ಸಂಬಳ ಕಡಿಮೆ.

  ಡಬ್ಬಿಂಗ್ ಕಲಾವಿದರ ಕಷ್ಟಗಳ ಬಗ್ಗೆ ಹೇಳುವುದಾದರೆ

  ಡಬ್ಬಿಂಗ್ ಕಲಾವಿದರ ಕಷ್ಟಗಳ ಬಗ್ಗೆ ಹೇಳುವುದಾದರೆ

  ದೇವರ ದಯೆ ನಾನು ಹೇಗೊ ಮಾಡಿಕೊಂಡು ಬಂದಿದ್ದೇನೆ. ಜನ ನನ್ನನ್ನು ಬೆನ್ನು ತಟ್ಟಿ ಇಷ್ಟು ವರ್ಷಗಳು ಕಾಲ ನಡೆಸಿಕೊಂಡು ಬಂದಿದ್ದಾರೆ. ಆದರೆ ಮುಖ್ಯವಾದ ಸಮಸ್ಯೆ ಎಂದರೆ ಸಂಭಾವನೆ. ಅದು ಬಿಟ್ಟರೆ ದೊಡ್ಡ ಸಮಸ್ಯೆ ಅಂತ ಏನು ಕಂಡು ಬಂದಿಲ್ಲ.

  English summary
  Exclusive interview with Dubbing Artist Deepa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X