For Quick Alerts
  ALLOW NOTIFICATIONS  
  For Daily Alerts

  ''ದೊಡ್ಡ ಸೆಲೆಬ್ರಿಟಿ ಆಗ್ತೀನಿ, ಸಿನಿಮಾ ಆಫರ್ ಬರುತ್ತೆ ಅಂತ ಬಿಗ್‌ಬಾಸ್‌ಗೆ ಹೋಗಬೇಡಿ''

  |

  ''ಬಿಗ್ ಬಾಸ್‌ಗೆ ಹೋದ್ಮೇಲೆ ಸ್ಟಾರ್ ಆಗಿಬಿಡ್ತೀನಿ, ಸಿನಿಮಾ ಆಫರ್ ಬಂದು ಬಿಡುತ್ತೆ, ದೊಡ್ಡ ಸೆಲೆಬ್ರಿಟಿ ಆಗ್ತೀನಿ ಅಂದುಕೊಂಡು ಯಾರು ಹೋಗಬೇಡಿ......'' ಎಂದು ಸೇಲ್ಸ್‌ಮ್ಯಾನ್ ದಿವಾಕರ್ ಹೊಸದಾಗಿ ದೊಡ್ಮನೆ ಪ್ರವೇಶ ಮಾಡಲು ಸಜ್ಜಾಗಿರುವ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದ್ದಾರೆ.

  ಬಿಗ್‌ಬಾಸ್‌ಗೆ ಹೋಗಿ ಬಂದ್ಮೇಲೆ ದಿವಾಕರ್ ತಮ್ಮ ಸೇಲ್ಸ್‌ಮ್ಯಾನ್ ವೃತ್ತಿ ಬಿಡಲಿಲ್ಲ. ಸಿನಿಮಾ ಆಫರ್‌ಗಳು ಬಂತು. 'ರೇಸ್' ಎಂಬ ಚಿತ್ರದಲ್ಲಿ ನಟಿಸಿದರು. 'ಗುಲಾಲ್.ಕಾಮ್' ಸಿನಿಮಾದಲ್ಲಿ ಅಭಿನಯಿಸಿದ್ದು, ಬಿಡುಗಡೆಯಾಗಬೇಕಿದೆ. ಹೀರೋ ಆದರೂ ಸೇಲ್ಸ್‌ಮ್ಯಾನ್ ಕೆಲಸ ಬಿಟ್ಟಿಲ್ಲ. ಈಗಲೂ ಅದೇ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ. ಮುಂದೆ ಓದಿ...

  ಬಿಗ್ ಬಾಸ್ ದಿವಾಕರ್ ಮತ್ತೊಂದು ಹೊಸ ಸಿನಿಮಾ 'ಗುಲಾಲ್'ಬಿಗ್ ಬಾಸ್ ದಿವಾಕರ್ ಮತ್ತೊಂದು ಹೊಸ ಸಿನಿಮಾ 'ಗುಲಾಲ್'

  ''ಬಿಗ್ ಬಾಸ್ ಹೋಗಿ ಬಂದ್ಮೇಲೆ ಜೀವನದಲ್ಲಿ ಒಂದಿಷ್ಟು ಬದಲಾವಣೆ ಆಗಿರುವುದು ನಿಜ. ಹೀರೋ ಆದೆ, ಹೋದ ಕಡೆ ಜನ ಗುರುತಿಸ್ತಾರೆ. ಮಾತನಾಡಿಸುತ್ತಾರೆ, ಫೋಟೋ ತೆಗೆದುಕೊಳ್ತಾರೆ. ಹಾಗಂತ, ನನಗೆ ತಲೆ ಮೇಲೆ ಕಿರೀಟ ಇಲ್ಲ. ಈಗಲೂ ನಾನು ಸೇಲ್ಸ್‌ಮ್ಯಾನ್ ದಿವಾಕರ್, ಕಾಮನ್‌ಮ್ಯಾನ್ ದಿವಾಕರ್'' ಎಂದು ಫಿಲ್ಮಿಬೀಟ್ ಜೊತೆ ಮಾತನ್ನು ಹಂಚಿಕೊಂಡಿದ್ದಾರೆ.

  ಸಿನಿಮಾ ಹೀರೋ ಆಗ್ಬೇಕು ಅಂತ ಶ್ರಮಪಟ್ಟಿದ್ದೇನೆ

  ಸಿನಿಮಾ ಹೀರೋ ಆಗ್ಬೇಕು ಅಂತ ಶ್ರಮಪಟ್ಟಿದ್ದೇನೆ

  ''ಬೆಂಗಳೂರಿಗೆ ನಾನು ಬಂದಿದ್ದೆ ಸಿನಿಮಾ ಹೀರೋ ಆಗ್ಬೇಕು ಅಂತ. ಗಾಂಧಿನಗರದಲ್ಲಿ ತುಂಬಾ ವರ್ಷ ಸುತ್ತಾಡಿದ್ದೇನೆ. ಹತ್ತಾರು ಚಿತ್ರದಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದೇನೆ. ಯಾವ ದೊಡ್ಡ ಅವಕಾಶನೂ ಸಿಕ್ಕಿಲ್ಲ. ಸಿನಿಮಾ ನಮ್ಮಂತವರಿಗಲ್ಲ ಎಂದು ಸೆಲ್ಸ್‌ಮ್ಯಾನ್ ಕೆಲಸ ಆರಂಭಿಸಿದೆ. ಸೇಲ್ಸ್‌ಮ್ಯಾನ್‌ ಕೆಲಸ ಮಾಡುವ ವೇಳೆ ನನ್ನನ್ನು ನೋಡಿ ಜನರು ನೀವು ಹೀರೋ ಥರಾ ಇದ್ದಿಯಾ ಅಂತಿದ್ರು. ಆ ಹುಚ್ಚು ನನ್ನನ್ನು ಬಿಟ್ಟು ಹೋಗಿಲ್ಲ. ಮನಸ್ಸಿನಲ್ಲಿ ಹಾಗೆ ಉಳಿದುಕೊಂಡಿತ್ತು''.

  ಬಿಗ್‌ಬಾಸ್ ಅವಕಾಶ ನನಗೆ ಸುಮ್ಮನೆ ಸಿಕ್ಕಿಲ್ಲ...

  ಬಿಗ್‌ಬಾಸ್ ಅವಕಾಶ ನನಗೆ ಸುಮ್ಮನೆ ಸಿಕ್ಕಿಲ್ಲ...

  ಬಿಗ್‌ಬಾಸ್‌ಗೆ ಫಟ್ ಅಂತ ಹೋಗ್ಬಹುದು ಎನ್ನುವ ಭ್ರಮೆ ಇದ್ದರೆ ತೆಗೆದು ಹಾಕಿ. ಅದಕ್ಕಾಗಿ ನಾನು ತಿಂಗಳುಗಟ್ಟಲೆ ಶ್ರಮ ಪಟ್ಟಿದ್ದೇನೆ. ಚಾನಲ್‌ ಹತ್ರ ಅಲೆದಾಡಿದ್ದೇನೆ. ಹೋಗಲೇಬೇಕು ಎಂಬ ಹಠದಿಂದ ಪ್ರಯತ್ನ ಮಾಡಿದ್ದಕ್ಕೆ ಮಾತ್ರ ಅವಕಾಶ ಸಿಕ್ತು. ಜನ ಅಂದುಕೊಂಡಿರುವಂತೆ ನಾನು ಆರಾಮಾಗಿ ಬಿಗ್ ಬಾಸ್‌ಗೆ ಹೋಗಿಲ್ಲ.

  ನಾಟಕ ಮಾಡಿದ್ರೆ ಗೊತ್ತಾಗಿಬಿಡುತ್ತೆ

  ನಾಟಕ ಮಾಡಿದ್ರೆ ಗೊತ್ತಾಗಿಬಿಡುತ್ತೆ

  ಬಿಗ್ ಬಾಸ್ ಮನೆಯಲ್ಲಿ ಎಲ್ಲೇ ನಾಟಕ ಮಾಡಿದ್ರು ಗೊತ್ತಾಗಿಬಿಡುತ್ತೆ. ನೀವು ನೀವಾಗಿಯೇ ಇರಬೇಕು. ನಿಮ್ಮತನ ಬಿಟ್ಟುಕೊಡಬೇಡಿ. ಕ್ಯಾಮೆರಾ ಇದೆ ಅಂತ ಒಳ್ಳೆಯವರಾಗಬೇಡಿ. ಕೋಪ ಬಂದ್ರೆ ಕೋಪನೇ, ಒಳ್ಳೆದು ಇದ್ದರೆ ಒಳ್ಳಯದೆ, ಬಿಗ್ ಬಾಸ್ ಮನೆಯಲ್ಲಿದ್ದ ಪ್ರತಿ ಕ್ಷಣವನ್ನು ಜನ ನೋಡ್ತಾರೆ. ಅದನ್ನು ಗಮನಿಸುತ್ತಾರೆ. ಬಿಗ್ ಬಾಸ್‌ಗೆ ಹೋಗಿ ಬಂದ ತಕ್ಷಣ ಏನೋ ಆಗಿಬಿಡ್ತೀವಿ ಅನ್ನೋದನ್ನು ತಲೆಯಲ್ಲಿ ಇಟ್ಟುಕೊಳ್ಳಬೇಡಿ.

  ಸ್ಟಾರ್ ಆಗಿಬಿಡ್ತೇನೆ ಎಂದು ಹೋಗಬಾರದು

  ಸ್ಟಾರ್ ಆಗಿಬಿಡ್ತೇನೆ ಎಂದು ಹೋಗಬಾರದು

  ಬಿಗ್‌ಬಾಸ್‌ ಸ್ಪರ್ಧಿಗಳ ಮಾನಸಿಕ ಸ್ಥಿತಿ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ ದಿವಾಕರ್ ''ಬಿಗ್ ಬಾಸ್‌ಗೆ ಹೋದ್ಮೇಲೆ ಸ್ಟಾರ್ ಆಗಿಬಿಡ್ತೀನಿ, ಸಿನಿಮಾ ಆಫರ್ ಬಂದು ಬಿಡುತ್ತೆ, ದೊಡ್ಡ ಸೆಲೆಬ್ರಿಟಿ ಆಗ್ತೀನಿ ಅಂದುಕೊಂಡು ಯಾರೊಬ್ಬರು ಹೋಗಬೇಡಿ. ಅದನ್ನು ಬಿಟ್ಟು ಸಾಮಾನ್ಯ ವ್ಯಕ್ತಿಯಂತೆ ಹೋಗಬೇಕು. ಜನ ಗುರುತಿಸುತ್ತಾರೆ ಎನ್ನುವೊಂದೇ ಗಮನದಲ್ಲಿರಬೇಕು. ಅದನ್ನು ಬಿಟ್ಟು ಬೇರೆ ಏನೇನೋ ಯೋಚನೆ ಮಾಡಿ ಹೋಗುವುದು, ಅಂದುಕೊಂಡಂತೆ ಆಗಿಲ್ಲ ಅಂದಾಗ ಬಹುಶಃ ನಿರಾಸೆಯಾಗಬಹುದು'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

  ಮೆಡಿಸನ್ ಪ್ರಚಾರದಲ್ಲಿ ದಿವಾಕರ್

  ಮೆಡಿಸನ್ ಪ್ರಚಾರದಲ್ಲಿ ದಿವಾಕರ್

  ಅಂದ್ಹಾಗೆ, ದಿವಾಕರ್ ಈಗ ಉತ್ತರ ಕರ್ನಾಟದಲ್ಲಿದ್ದಾರೆ. ಕಳೆದ ಮೂರೂವರೆ ತಿಂಗಳಿನಿಂದ ರಾಜ್ಯದ ಬಹುತೇಕ ಎಲ್ಲ ಊರುಗಳಿಗೂ ಭೇಟಿ ನೀಡಿದ್ದಾರೆ. ''ದಿವಾಕರ್ ರೆಮಿಡಿಸ್ (Divakar Remedies)'' (ಮೂಳೆ ನೋವು, ಬೆನ್ನು ನೋವು, ಕಾಲುನೋವು, ಕೀಲು ನೋವಿಗೆ ಬಳಸಬಹುದು) ಪ್ರಮೋಟ್ ಮಾಡ್ತಿದ್ದಾರೆ. ದಿವಾಕರ್ ಹೋಗಿದ ಕಡೆ ಜನರು ಬಹಳ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಬಿಗ್‌ಬಾಸ್‌ ರನ್ನರ್ ಅಪ್ ಆದರೂ, ಸಿನಿಮಾದಲ್ಲಿ ಹೀರೋ ಆಗಿ ನಟಿಸಿದರೂ ಜನರ ಪಾಲಿಗೆ ನಾನು ಸೇಲ್ಸ್‌ಮ್ಯಾನ್ ಎನ್ನುತ್ತಿದ್ದಾರೆ. ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ ಸಹ ದಿವಾಕರ್ ಮೆಡಿಸನ್‌ಗೆ ಬೆಂಬಲ ಸೂಚಿಸಿದ್ದಾರೆ.

  English summary
  Here is the exclusive interview with Common man Former Bigg Boss Kannada Contestant Diwakar. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X