For Quick Alerts
  ALLOW NOTIFICATIONS  
  For Daily Alerts

  'ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ

  By ಸುನೀ
  |

  ಸ್ಟೂಡೆಂಟ್ ಗಳಿಗೆ ಹೀರೋ ಆಗಿದ್ದೋರು, ಯಾಕೋ ಬಹುಬೇಗ ಶಿಕ್ಷಕ ವೃತ್ತಿ ಬಿಟ್ಟು, ಸಿನಿಮಾಗೆ ಬಂದು ವಿಲನ್ ಆಗಿ ಕಾಣಿಸಿಕೊಂಡು, ಪೊಲೀಸ್‌, ರಾಜಕಾರಣಿ ಸೇರಿದಂತೆ ಹಲವು ಪಾತ್ರಗಳಲ್ಲಿ ಮಿಂಚಿದವರು ನಟ ಕಿಶೋರ್.

  2004 ರಲ್ಲಿ 'ಕಂಠಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅಪ್ಪಟ ಕನ್ನಡಿಗ ಕಿಶೋರ್, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಚತುರ್ಭಾಷೆಗಳಲ್ಲಿ ನಾಯಕ ನಟನಾಗಿ, ಫೋಷಕ ನಟ, ಖಳನಾಯಕನಾಗಿ ಅಭಿನಯಿಸಿರುವ ಖ್ಯಾತಿ ನಟ ಕಿಶೋರ್ ರದ್ದು. [ರಜನಿಕಾಂತ್ 'ಕಬಾಲಿ' ಚಿತ್ರಕಥೆ ಹೇಳ್ತೀವಿ ಕೇಳಿ!]

  ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ ನಟ ಕಿಶೋರ್. ಬಿಜಿ ಶೆಡ್ಯೂಲ್ ಮಧ್ಯೆ ನಟ ಕಿಶೋರ್ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕಿದ್ದರು. 'ಕಬಾಲಿ' ಚಿತ್ರದ ಬಗ್ಗೆ, ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ನಟ ಕಿಶೋರ್ ಏನೆಲ್ಲಾ ಹೇಳಿದರು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  ಶಿಕ್ಷಕರಾಗಿದ್ದವರು ನೀವು, ಸಿನಿಮಾದಲ್ಲಿ ಹೆಚ್ಚಾಗಿ ವಿಲನ್ ಪಾತ್ರಗಳಲ್ಲೇ ಕಾಣಿಸ್ತೀರಲ್ಲಾ?

  ಶಿಕ್ಷಕರಾಗಿದ್ದವರು ನೀವು, ಸಿನಿಮಾದಲ್ಲಿ ಹೆಚ್ಚಾಗಿ ವಿಲನ್ ಪಾತ್ರಗಳಲ್ಲೇ ಕಾಣಿಸ್ತೀರಲ್ಲಾ?

  ಹೀರೋ ವಿಲನ್ ಎಂಬ ಪಾತ್ರಗಳ ಡೆಫಿನೇಷನ್ ಬದಲಾಗಿದೆ. ಅಲ್ಲದೇ ಸಿನಿಮಾದ ಗ್ಲಾಮರ್ ಬದಲಾಗಿದೆ. ಟಿಪಿಕಲ್, ಕಮರ್ಷಿಯಲ್ ಮೂವಿನಲ್ಲಿ ಮಾತ್ರ ಈಗ ಸಂಪೂರ್ಣ ನೆಗೆಟಿವ್‌ ರೋಲ್‌ ಕಾಣುತ್ತೆ. ಉದಾಹರಣೆಗೆ 'ಯೂಟರ್ನ್' ಸಿನಿಮಾದಲ್ಲಿ ಯಾರನ್ನ ವಿಲನ್ ಅಂತೀರೀ ಹೇಳಿ ನೋಡೋಣ.? [ಸೂಪರ್ ಸ್ಟಾರ್ ರಜನಿ 'ಕಬಾಲಿ' ಟೀಸರ್ ಟ್ರೆಂಡಿಂಗ್!]

  ಅಪ್ಪಟ ಕನ್ನಡಿಗರಾದರೂ 4 ಭಾಷೆಗಳಲ್ಲಿ ಅಭಿನಯ ಮಾಡಿದ್ದೀರಿ, ಹೇಗೆ ಸಾಧ್ಯವಾಯಿತು ಇದು?

  ಅಪ್ಪಟ ಕನ್ನಡಿಗರಾದರೂ 4 ಭಾಷೆಗಳಲ್ಲಿ ಅಭಿನಯ ಮಾಡಿದ್ದೀರಿ, ಹೇಗೆ ಸಾಧ್ಯವಾಯಿತು ಇದು?

  ನಾನು ತಮಿಳು, ತೆಲುಗು, ಮಲೆಯಾಳಂ ಭಾಷೆಗಳನ್ನ ಕಲಿತದ್ದು ಸಿನಿಮಾ ಮಾಡ್ಬೇಕಾದ್ರೇನೇ...ಸಿನಿಮಾ ಮಾಡುವವರ ಜೊತೆಗಿದ್ದಾಗ ಅಲ್ಲಿನವರ ಸಹಕಾರದಿಂದಲೇ ಈ ಭಾಷೆಗಳನ್ನ ಕಲಿತದ್ದು. ನಾನೇ ಡಬ್ ಮಾಡುತ್ತೇನೆ. ಯಾವ ಭಾಷೆಗಳಿಗೂ ಡಬ್ಬಿಂಗ್ ನಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ. ತಮಿಳು ಕಲಿಯಲು 'ಪೊಲ್ಲಾದವನ್' ಸಿನಿಮಾ ಹೆಚ್ಚು ಸಹಕಾರಿ ಆಯ್ತು.

  ಸಿನಿಮಾಗೆ ನೀವು ಬಂದದ್ದು ಹೇಗೆ?

  ಸಿನಿಮಾಗೆ ನೀವು ಬಂದದ್ದು ಹೇಗೆ?

  ಅದು ಆಕಸ್ಮಿಕ. ಕಾಲೇಜ್‌ ಥಿಯೇಟರ್‌ಗಳಲ್ಲಿ ನಾಟಕ ಮಾಡ್ತಿದ್ದೆ. ಅದೇ ಸಂದರ್ಭದಲ್ಲಿ ಕನ್ನಡದ 'ಕಂಠಿ' ಸಿನಿಮಾ ಆರಂಭವಾಗಿ ಅಲ್ಲಿದ್ದ ನನ್ನ ಸ್ನೇಹಿತನ ಕಡೆಯಿಂದ ಆಕಸ್ಮಿಕವಾಗಿ ಆಕ್ಟ್ ಮಾಡಲು ಅವಕಾಶ ಸಿಕ್ತು. [ಕನ್ನಡದಲ್ಲೂ ರಾರಾಜಿಸುತ್ತಿದೆ ರಜನಿಯ 'ಕಬಾಲಿ' ಪೋಸ್ಟರ್]

  ಸೂಪರ್‌ ಸ್ಟಾರ್‌ ರಜನಿಕಾಂತ್ ಗೆ ವಿಲನ್ ಆಗಿದ್ದೀರಿ...

  ಸೂಪರ್‌ ಸ್ಟಾರ್‌ ರಜನಿಕಾಂತ್ ಗೆ ವಿಲನ್ ಆಗಿದ್ದೀರಿ...

  ನಿಜ ಹೇಳ್ಬೇಕಂದ್ರೆ, 'ಕಬಾಲಿ' ಸಿನಿಮಾಗಾಗಿ ಪ್ರಕಾಶ್‌ ರಾಯ್‌ ರವರ ಜೊತೆ ಮೊದಲು ಮಾತುಕತೆಯಾಗಿದೆ, ನಿಮ್ಗೆ ಕರೆ ಬರಬಹುದು ಅಂತ ನನಗೂ ಹೇಳಿದ್ರು. ನಂತರ 'ಕಬಾಲಿ' ಸಿನಿಮಾ ನಿರ್ದೇಶಕ ರಂಜಿತ್ ಮತ್ತು ನಿರ್ಮಾಪಕರಾದ ಧಾಮು ರವರು ನನಗೆ ಕರೆ ಮಾಡಿದ್ರು.

  ರಜಿನಿಕಾಂತ್ ಜೊತೆ ತೆರೆ ಹಂಚಿಕೊಂಡ ಅನುಭವ...

  ರಜಿನಿಕಾಂತ್ ಜೊತೆ ತೆರೆ ಹಂಚಿಕೊಂಡ ಅನುಭವ...

  ತುಂಬಾ ಸಿಂಪಲ್. ಸಿಂಪ್ಲಿಸಿಟಿಗೆ ಇನ್ನೊಂದ್ ಹೆಸರು ರಜಿನಿ ಸರ್‌ ಅಂತ ಹೇಳ್ಬಹುದು. ಅವರ ಸರಳತೆಯಿಂದ ಎಂತಹವರಿಗೂ ಅವರ ಜೊತೆಯಲ್ಲಿ ಅಭಿನಯಿಸಲು ಕಂಫರ್ಟ್ ಅನಿಸುತ್ತೆ. ಆದ್ದರಿಂದ ಎಲ್ಲಾ ಆಕ್ಟರ್‌ಗಳ ಜೊತೆ ಆಕ್ಟ್ ಮಾಡೋ ರೀತಿನೇ ಫೀಲ್ ಆಯ್ತು ನನಗೆ.

  ಶೂಟಿಂಗ್ ಗ್ಯಾಪ್ ನಲ್ಲಿ ರಜನಿ ಜೊತೆ ಮಾತುಕತೆ ಏನಾದ್ರೂ..

  ಶೂಟಿಂಗ್ ಗ್ಯಾಪ್ ನಲ್ಲಿ ರಜನಿ ಜೊತೆ ಮಾತುಕತೆ ಏನಾದ್ರೂ..

  ಕನ್ನಡದವರ ಜೊತೆ ಕನ್ನಡ ಭಾಷೆಯಲ್ಲೇ ರಜನಿ ಸರ್ ಮಾತನಾಡ್ತಾರೆ. ನನಗೆ ತಮಿಳು ಬಂದ್ರೂ ಸಹ ನನ್ನ ಜೊತೆ ರಜನಿ ಸರ್ ಕನ್ನಡ ಭಾಷೆಯಲ್ಲೇ ಮಾತನಾಡ್ತಿದ್ರು.

  ನಿಮ್ಮ ಮುಂದಿನ ಪ್ರಾಜೆಕ್ಟ್‌?

  ನಿಮ್ಮ ಮುಂದಿನ ಪ್ರಾಜೆಕ್ಟ್‌?

  'ವಡಾ ಚೆನ್ನೈ' ಮತ್ತು 'ಸಾಟ್ಟೈ ಪಾರ್ಟ್-2' ಸಿನಿಮಾಗಳು ಕೈಯಲ್ಲಿವೆ. ಎರಡು ಸಹ ತಮಿಳಿನ ಸಿನಿಮಾಗಳೇ. 'ಸಾಟ್ಟೈ ಪಾರ್ಟ್-2'ನಲ್ಲಿ ನನ್ನದು ಲೀಡ್ ರೋಲ್‌.

  'ಕಬಾಲಿ' ಟೀಸರ್ ನೋಡಿದ್ರಾ?

  'ಕಬಾಲಿ' ಟೀಸರ್ ನೋಡಿದ್ರಾ?

  'ಕಬಾಲಿ' ಚಿತ್ರದ ಟೀಸರ್ ಇಲ್ಲಿದೆ. ಒಮ್ಮೆ ನೋಡಿಬಿಡಿ....

  English summary
  Kannada Actor Kishore is playing Villain in Super Star Rajinikanth starrer Tamil Movie 'Kabali'. Here is an interview with the Kishore. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X