twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಹಾಡುಗಳನ್ನು ಪಬ್‌ಗಳಲ್ಲಿ ಹಾಕೋದರ ಬಗ್ಗೆ ರ್‍ಯಾಪರ್ ಚಿರಾಯು ಏನಂದ್ರು?

    |

    ರ್‍ಯಾಪ್ ಸಾಂಗ್ ಅನ್ನುವಂತದ್ದು ಇತ್ತೀಚೆಗೆ ಹೆಚ್ಚಾಗಿ ಬೆಳೆಯುತ್ತಿದೆ. ಯೂಟ್ಯೂಬ್‌ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ರ್ಯಾಪ್ ಹಾಡುಗಳು ಈಗ ಸಿನಿಮಾದಲ್ಲೂ ಹೆಚ್ಚೆಚ್ಚು ಬಳಕೆಯಾಗುತ್ತಿದೆ. ವೀಕ್ಷಕರಿಂದಲೂ ಈ ರ್‍ಯಾಪ್ ಹಾಡಿಗೆ ಒತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ರ್‍ಯಾಪ್ ಸಾಂಗ್ ಬೆಳವಣಿಗೆಗೆ ಇದು ಕಾರಣವಾಗುತ್ತಿದೆ. ಸ್ಪೀಡ್ ರ್‍ಯಾಪ್, ಫ್ರೀ ಸ್ಟೈಲ್ ರ್‍ಯಾಪ್, ಲೈವ್ ರ್ಯಾಪ್ ಅಂತೆಲ್ಲ ಈ ರ್‍ಯಾಪ್ ಹಾಡುಗಳಲ್ಲಿ ವೆರೈಟಿಗಳಿದ್ದು, ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ಈಗಾಗಲೇ ಪಳಗಿದ್ದಾರೆ. ಅದರಲ್ಲೇ ಹೆಸರು ಮಾಡುತ್ತಿದ್ದಾರೆ. ಸೀನಿಯರ್‌ಗಳು, ಜೂನಿಯರ್‌ಗಳು ಅಂತೆಲ್ಲ ಹೆಸರು ಮಾಡಿಕೊಂಡು ಬೆಳೆಯುತ್ತಿರೋ ರ್‍ಯಾಪರ್ಸ್ ಒಬ್ಬರಿಂದ ಒಬ್ಬರಿಗೆ ಕಾಂಪಿಟೇಷನ್ ನೀಡುತ್ತಿದ್ದಾರೆ. ಇದೀಗ ಇದೇ ಪಟ್ಟಿಗೆ ಸೇರಿರೋದು ಯುವ ಪ್ರತಿಭೆ, ಕಾಂಟ್ರವರ್ಸಿ ಹಾಡುಗಳ ಮೂಲಕವೇ ಹೆಚ್ಚು ಸುದ್ದಿ ಮಾಡಿರುವ ರ್‍ಯಾಪರ್ ಚಿರಾಯು.

    ರ್‍ಯಾಪರ್ ಚಿರಾಯು ಅವರ ಹೆಸರು ಕೆಲ ವರ್ಷಗಳ ಹಿಂದೆ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಅವರ ಫಸ್ಟ್ ರ್‍ಯಾಪ್ ಸಾಂಗ್ ರಿಲೀಸ್ ಆಯ್ತೋ ಅಲ್ಲಿಂದ ಇವರ ಹೆಸರು ಅಲ್ಲಲ್ಲಿ ಕೇಳಿ ಬರಲು ಆರಂಭಿಸಿತ್ತು.

    ಈಗ ರ್‍ಯಾಪ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಚಿರಾಯು, ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸುತ್ತಿದ್ದಾರೆ. ಹೆಚ್ಚೆಚ್ಚು ಸಿನಿಮಾಗಳಿಂದಲೂ ಇವರಿಗೂ ಆಫರ್‌ಗಳು ಬರುತ್ತಿದ್ದು ಫುಲ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಫಿಲ್ಮಿಬೀಟ್ ಕನ್ನಡ ಚಿರಾಯು ಸಂದರ್ಶನವನ್ನು ಮಾಡಿದ್ದು ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ನಮ್ಮ ಬಳಿ ಹಂಚಿಕೊಂಡಿದ್ದಾರೆ. ತನ್ನ ಜರ್ನಿ ಹೇಗಿತ್ತು. ರ್‍ಯಾಪರ್ ಹೇಗೆ ಆದೆ, ತನ್ನ ಕಷ್ಟದ ಜೀವನ ಇವೆಲ್ಲವನ್ನು ರ್‍ಯಾಪರ್ ಚಿರಾಯು ಮೆಲುಕು ಹಾಕಿಕೊಂಡಿದ್ದಾರೆ. ಅವರು ಏನೇನು ಮಾತನಾಡಿದ್ದಾರೆ ಎಂದು ಮುಂದೆ ಓದಿ.

    ಚಿರಾಯು ರ್‍ಯಾಪರ್ ಆಗಿದ್ದು ಹೇಗೆ?

    ಚಿರಾಯು ರ್‍ಯಾಪರ್ ಆಗಿದ್ದು ಹೇಗೆ?

    ಚಿರಾಯು ರ್‍ಯಾಪರ್ ಆಗಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಾಕಷ್ಟು ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದಿದ್ದ ಚಿರಾಯು ಅವರಿಗೆ ತಾನು ಒಂದು ದಿನ ರ್‍ಯಾಪರ್ ಆಗುತ್ತೀನಿ ಎಂದು ಕನಸು ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ಯಾಕಂದರೆ ಎಲ್ಲಾ ವಿಷಯದಲ್ಲೂ ಟ್ಯಾಲೆಂಟೆಡ್ ಆಗಿದ್ದ ಚಿರಾಯು ಹಾಡು ಹಾಡೋದರಲ್ಲಿ ಕೊಂಚ ಹಿಂದೆ ಇದ್ದರು. ತನ್ನ ಧ್ವನಿ ಹಾಗೂ ಹಾಡು ಹಾಡುತ್ತೀನಿ ಎಂಬ ಬಗ್ಗೆ ಕಾನ್ಫಿಡೆಂಟ್ ಇಲ್ಲದ ಚಿರಾಯುಗೆ ಲಿರಿಕ್ಸ್ ಬರೆಯುವಲ್ಲಿ ಹೆಚ್ಚು ಆಸಕ್ತಿ ಇತ್ತು. ಹೀಗಾಗಿ ರ್‍ಯಾಪ್ ಸಾಂಗ್‌ಗಳನ್ನು ಹೆಚ್ಚು ಗಮನಿಸುತ್ತಿದ್ದ ಚಿರಾಯು ತಾನು ಯಾಕೆ ರ್‍ಯಾಪರ್ ಆಗಬಾರದು ಎಂದುಯೋಚಿಸಿ, ಒಂದು ದಿನ ಈ ಬಗ್ಗೆ ತೀರ್ಮಾನಿಸಿಯೇ ಬಿಟ್ಟಿದ್ದರು, ಹಾಡು ಹಾಡಲು ಬರದಿದ್ದರೂ, ತನ್ನ ಧ್ವನಿಯ ಬಗ್ಗೆ ಕಾನ್ಫಿಡೆಂಟ್ ಇಲ್ಲದೇ ಹೋದರು, ರ್‍ಯಾಪ್ ಸಾಂಗ್‌ನಲ್ಲಿ ಇದು ಯಾವುದು ಹೆಚ್ಚು ಅಗತ್ಯ ಇಲ್ಲ, ಲಿರಿಕ್ಸ್ ಒಂದು ಇದ್ದರೆ ಸಾಕು ಎಂದು ತಿಳಿದು ರ್‍ಯಾಪ್ ಸಾಂಗ್ ಮಾಡೋದಕ್ಕೆ ಚಿರಾಯು ಮುಂದಾಗಿದ್ದರು.

    ಮೊದಲ ರ್‍ಯಾಪ್ ಸಾಂಗಿಗೆ ಬಂದ ಪ್ರತಿಕ್ರಿಯೆ ಹೇಗಿತ್ತು?

    ಮೊದಲ ರ್‍ಯಾಪ್ ಸಾಂಗಿಗೆ ಬಂದ ಪ್ರತಿಕ್ರಿಯೆ ಹೇಗಿತ್ತು?

    ನಾನು ನನ್ನ ಮೊದಲ ರ್‍ಯಾಪ್ ಸಾಂಗ್ ಅಂತ ಈಗ ಯಾವುದು ಗುರುತಿಸಿಕೊಂಡಿದೆ, ಅದಕ್ಕೂ ಮುಂಚೆಯೇ ನಾನು ಸಾಕಷ್ಟು ರ್‍ಯಾಪ್ ಸಾಂಗ್‌ಗಳನ್ನು ಮಾಡಿದ್ದೆ. ಆದರೆ ಅದು ಯಾವುದು ಅಷ್ಟರ ಮಟ್ಟಿಗೆ ಹೆಸರು ಮಾಡಲಿಲ್ಲ ಹಾಗೂ ರಿಲೀಸ್ ಕೂಡ ಆಗಿಲ್ಲ. ಹೀಗಿದ್ದಾಗ ಜನರನ್ನು ರೀಚ್ ಆಗೋದಕ್ಕೆ ಎನಾದರೂ ಮಾಡಲೇ ಬೇಕು ಅಂತಾ ಅನ್ನಿಸಿ ಕಾಂಟ್ರವರ್ಸಿ ಲಿರಿಕ್ಸ್‌ ಬರೆದು ಅದರ ಮೇಲೆ ರ್‍ಯಾಪ್ ಸಾಂಗ್ ರಿಲೀಸ್ ಮಾಡ್ದೆ. ಆಗ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಅಭಿಮಾನಿಗಳು ಹುಟ್ಟಿಕೊಂಡರು, ಹೆಚ್ಚಾಗಿ ಆ ಹಾಡಿನಿಂದ ಒಂದಷ್ಟು ವಿರೋಧಿಗಳು ಬೆಳೆದುಕೊಂಡರು. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ನನಗೆ ಆಗ ಯಾರು ಸಪೋರ್ಟ್ ಮಾಡಿಲ್ಲ. ಎಲ್ಲರೂ ಹಾಡು ಚೆನ್ನಾಗಿದೆ ಅಂತ ಮೇಸೆಜ್‌ನಲ್ಲಿ ಹೇಳುತ್ತಿದ್ದರು, ಅದು ಬಿಟ್ಟರೇ ಹಾಡನ್ನು ಶೇರ್ ಮಾಡಿ ನೋಡಿ ಅಂತ ಯಾರು ಹೇಳುತ್ತಿರಲಿಲ್ಲಾ. ಇದೆಲ್ಲ ಬೇಸರ ಇದ್ದರೂ, ಈಗ ಒಂದು ಮಟ್ಟಿಗೆ ಬೆಳೆದಿದ್ದೀನೆ ಅನ್ನೋ ಖುಷಿ ಇದೆ ಎಂದಿದ್ದಾರೆ ಚಿರಾಯು.

    ಲಿರಿಕ್ಸ್‌ಗಳನ್ನು ಹಾಗೆ ಬರೆಯೋದು ಯಾಕೆ?: ಈಗ ನಾವು ಹಾಡುಗಳಲ್ಲಿ ರಿಯಾಲಿಟಿಯನ್ನು ಜನರಿಗೆ ಮುಟ್ಟಿಸಬೇಕು. ಇದೇ ಪ್ರಯತ್ನ ನನ್ನದು ಕೂಡ ಆಗಿತ್ತು. ಎಲ್ಲರೂ ತಮ್ಮ ತಮ್ಮಲ್ಲಿ ಅಂತಹ ಪದಗಳನ್ನು ಬಳಸಿ ಮಾತನಾಡುತ್ತಾರೆ. ನಾವು ಹೇಗಿದ್ದೇವೆ ಅದನ್ನು ಜನರ ಮುಂದೆ ಇಡುವ ಪ್ರಯತ್ನ ಅಷ್ಟೆ. ನನ್ನ ಕಾಂಟ್ರವರ್ಸಿ ಲಿರಿಕ್ಸ್‌ಗೆ ಪರ ವಿರೋಧ ಎರೆಡೂ ಇತ್ತು. ಆದರೆ ನನಗೆ ಖುಷಿ ಇದೆ ನನ್ನ ಹಾಡಿನ ಬಗ್ಗೆ. ಯಾರು ಏನೇ ಹೇಳಿದರೂ ನಾನು ಅದಕ್ಕೆ ಬೇಸರಮಾಡಿಕೊಳ್ಳುವುದಿಲ್ಲ.ಮುಂದೆಯೂ ಕೂಡ ಮತ್ತಷ್ಟು ಒಳ್ಳೆ ಪ್ರಯತ್ನವನ್ನು ನಾನು ಜನರ ಮುಂದೆ ಇಡುತ್ತೇನೆ.

    ಶತ್ರುಗಳು ಯಾಕೆ ಹುಟ್ಟಿಕೊಂಡರು?

    ಶತ್ರುಗಳು ಯಾಕೆ ಹುಟ್ಟಿಕೊಂಡರು?

    ನಾನು ಕಾಂಟ್ರವರ್ಸಿ ಹಾಡು ಮಾಡಿದಾಗಿನಿಂದ ಸಾಕಷ್ಟು ಹೇಟರ್ಸ್‌ಗಳು ನನಗೆ ಇದ್ದಾರೆ. ನಾನು ಈ ರ್‍ಯಾಪ್ ಫೀಲ್ಡ್‌ಗೆ ಹೊಸಬನು ಅಲ್ಲ, ತುಂಬ ಹಳಬನೂ ಅಲ್ಲ. ಆದರೆ ಎಲ್ಲವೂ ನನಗೆ ತಿಳಿಯುತ್ತೆ. ನಾನು ಯಾವತ್ತೂ ಒಬ್ಬ ವ್ಯಕ್ತಿಯನ್ನು ವೈಯುಕ್ತಿಕವಾಗಿ ದ್ವೇಷ ಮಾಡಲ್ಲ. ಅವರ ಕೆಲಸಗಳು ಹಾಗೆ ಮಾಡಿಸುತ್ತೆ. ಇತ್ತೀಚೆಗೆ ಕೆಲವರು ವಲ್ಗರ್ ಲಿರಿಕ್ಸ್ ಇಟ್ಟುಕೊಂಡು ರ್‍ಯಾಪ್ ಮಾಡುವವರು ರ್‍ಯಾಪರ್ಸ್ ಅಲ್ಲ ಅಂತೆಲ್ಲ ಹೇಳಿಕೆ ನೀಡಿದ್ದರು. ಹಾಗಿದ್ದರೇ ನಾನು ಏನು? ನಾನು ವಲ್ಗರ್ ಆಗಿ ರ್‍ಯಾಪ್ ಮಾಡಿದರೂ ಅದು ರಿಯಾಲಿಟಿ. ಅದನ್ನು ಸಹಿಸಿಕೊಳ್ಳಲು ಯಾರಿಗೂ ಆಗೋದಿಲ್ಲ. ಹೀಗೆ ಅವರಿಗೆ ಇಷ್ಟ ಇಲ್ಲದೇ ಇರೋದನ್ನು ನಾನು ಮಾಡುತ್ತಿದ್ದೇನೆ ಎಂದು ಒಂದಷ್ಟು ಸೀನಿಯರ್ ರ್‍ಯಾಪರ್ಸ್ ನನ್ನನ್ನು ನನ್ನ ರ್‍ಯಾಪ್ ಹಾಡುಗಳನ್ನು ಹೇಟ್ ಮಾಡುತ್ತಾರೆ. ಇದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ. ಅಂತವರು ಯಾವತ್ತಿದ್ದರೂ ನನ್ನ ಕಾಲಕೆಳಗೆ ಇರುತ್ತಾರೆ ಅಷ್ಟೆ.

    ಮನೆಯವರ ಸಪೋರ್ಟ್ ಹೇಗಿತ್ತು?

    ಮನೆಯವರ ಸಪೋರ್ಟ್ ಹೇಗಿತ್ತು?

    ಮನೆಯವರ ಸಪೋರ್ಟ್ ನನಗೆ ತುಂಬಾ ಚೆನ್ನಾಗಿ ಇತ್ತು. ಯಾವತ್ತೂ ನನ್ನನ್ನು ಅವರು ತಡೆದಿಲ್ಲ. ನಿನಗೆ ಏನು ಮಾಡಬೇಕು ಅನ್ನಿಸುತ್ತೆ ಅದನ್ನೆ ಮಾಡು ಎಂದು ಸಪೋರ್ಟ್ ಮಾಡಿದ್ದರು. ಅವರಿಗೆ ಈಗ ನಾನು ಏನಾಗಿದ್ದೀನಿ ಅದರಲ್ಲೇ ಖುಷಿ ಇದೆ. ನಾನು ಯಾವತ್ತು ನಾನು ರ್‍ಯಾಪರ್ ಆಗುತ್ತಿನಿ ಹಾಡು ಮಾಡೋದಕ್ಕೆ ದುಡ್ಡು ಬೇಕು ಅಂತ ಅವರನ್ನು ಕೇಳಿಲ್ಲಾ. ನನ್ನದೇ ಖರ್ಚಿನಲ್ಲಿ ನನ್ನ ಮೊದಲ ಹಾಡುಗಳನ್ನು ತಯಾರಿಸುತ್ತಿದ್ದೆ. ಹಾಗೇ ಸ್ನೇಹಿತರೆಲ್ಲ ಸೇರಿಕೊಂಡು ಒಂದು ತಂಡವಾಗಿ ಅದರ ಮೂಲಕ ನನ್ನ ರ್‍ಯಾಪ್ ಹಾಡುಗಳನ್ನು ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡುತ್ತಿದೆ. ನಾನು ಯಾವುದಕ್ಕೂ ಮನೆಯವರಿಗೆ ತೊಂದರೆ ಮಾಡಿಲ್ಲ. ಹಂಗೆ ಅವರು ಕೂಡ ನನಗೆ ಯಾವುದೇ ತಡೆ ಮಾಡಿಲ್ಲ.

    ಕನ್ನಡದ ಹಾಡುಗಳನ್ನು ಪಬ್‌ಗಳಲ್ಲಿ ಪ್ಲೇ ಮಾಡದಿರುವ ಬಗ್ಗೆ ನಿಮ್ಮ ಅಭಿಪ್ರಾಯ?

    ಕನ್ನಡದ ಹಾಡುಗಳನ್ನು ಪಬ್‌ಗಳಲ್ಲಿ ಪ್ಲೇ ಮಾಡದಿರುವ ಬಗ್ಗೆ ನಿಮ್ಮ ಅಭಿಪ್ರಾಯ?

    ನಾನು ಕೇಳೊದು ಇಷ್ಟೆ. ಬಲವಂತವಾಗಿ ನಾವು ಏನಾದರು ಮಾಡಿಸೋಕೆ ಆಗುತ್ತಾ? ಅವರಿಗೆ ಯಾವ ಹಾಡು ಇಷ್ಟ ಆಗುತ್ತೆ ಅದನ್ನು ಪ್ಲೇ ಮಾಡುತ್ತಾರೆ. ಹಾಗೇ ಯಾವ ಆಡಿಯನ್ಸ್ ಹೆಚ್ಚಾಗಿ ಅಲ್ಲಿ ಇದ್ದಾರೆ ಅವರಿಗೆ ಇಷ್ಟ ಆಗುವ ಹಾಡನ್ನು ಪ್ಲೇ ಮಾಡುತ್ತಾರೆ. ಬಲವಂತವಾಗಿ ಕನ್ನಡ ಹಾಡನ್ನು ಹಾಕಿ ಅಂದರೇ ಅಲ್ಲಿ ಕನ್ನಡದವರೇ ಹೆಚ್ಚಾಗಿ ಇರೋದಿಲ್ಲ ಅದಕ್ಕೆ ಅವರು ಪ್ಲೇ ಮಾಡೊದಿಲ್ಲ. ಹಂಗೂ ಕರ್ನಾಟಕದಲ್ಲಿ ಕನ್ನಡ ಹಾಡುಗಳನ್ನು ಹಾಕಲೇ ಬೇಕು ಅಂತ ನಾವು ಬಾಯಿ ಬಡ್ಕೊಂಡ್ರೆ ಏನು ಆಗಲ್ಲ. ಸರ್ಕಾರ ಅದರ ಬಗ್ಗೆ ಯೋಚಿಸಬೇಕು. ಒಂದು ರೂಲ್ಸ್ ಅಂತ ತರಬೇಕು. ಆಗ ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನ ಹಾಕುತ್ತಾರೆ. ಸರ್ಕಾರ ಈ ಬಗ್ಗೆ ರೂಲ್ಸ್ ತಂದರೇ ಅಷ್ಟೆ ಇದು ಸರಿ ಆಗುತ್ತೆ. ಇಲ್ಲ ಅಂದ್ರೆ ಪಬ್, ರೆಸ್ಟೋರೆಂಟ್‌ಗಳಲ್ಲಿ ಅವರಿಗೆ ಇಷ್ಟ ಆಗೋ ಹಾಡುಗಳನ್ನಷ್ಟೆ ಹಾಕುತ್ತಾರೆ. ಇದರಲ್ಲಿ ಅವರ ತಪ್ಪೇನಿಲ್ಲ. ಬಲವಂತವಾಗಿ ನಾವು ಏನನ್ನು ಮಾಡಿಸಲು ಸಾಧ್ಯ ಇಲ್ಲ ಅನ್ನೋದು ನನ್ನ ಅಭಿಪ್ರಾಯ.

    ಫ್ಯಾನ್ಸ್‌ಗಿಂತ ಹೇಟರ್ಸ್ ಜಾಸ್ತಿ ನಿಮಗೆ ಯಾಕೆ ?

    ಫ್ಯಾನ್ಸ್‌ಗಿಂತ ಹೇಟರ್ಸ್ ಜಾಸ್ತಿ ನಿಮಗೆ ಯಾಕೆ ?

    ನನಗೆ ಇದೇ ಇಷ್ಟ. ಫ್ಯಾನ್ಸ್‌ ಇಂದ ನಾವು ಉತ್ತೇಜನ ಪಡೆಯಬಹುದು. ಅವರು ಸಾಂಗ್ ಚೆನ್ನಾಗಿದ್ದರೇ ತುಂಬಾ ಚೆನ್ನಾಗಿದೆ ಅಂತ ಹೇಳುತ್ತಾರೆ ಅಷ್ಟೇ. ಆದರೆ ಹೇಟರ್ಸ್ ನೋಡೋ ಎಷ್ಟು ಕೆಟ್ಟದಾಗಿ ಹಾಡು ಮಾಡಿದ್ದಾನೆ ಅಂತ ಅದನ್ನು ಶೇರ್ ಮಾಡ್ತಾರೆ. ಇದರಿಂದ ನಮಗೆ ಲಾಭ ಆಗೋದು. ಹೀಗಾಗಿ ಹೇಟರ್ಸ್ ಜಾಸ್ತಿ ಅಂತ ನಾನು ಬೇಜಾರಾಗಿಲ್ಲ. ತುಂಬಾ ಖುಷಿ ಇಂದ ಇದ್ದೇನೆ. ಅವರಿಂದಲೇ ನಾನು ಹೆಚ್ಚು ಗುರುತಿಸಿಕೊಳ್ಳುತ್ತಿದ್ದೇನೆ.

    ಕಾಂಪಿಟೇಷನ್ ಮತ್ತು ಕೌಂಟರ್ ಕೊಡೊದು ರ್‍ಯಾಪ್ ಸಾಂಗ್ ಅಲ್ಲಿ ಹೆಚ್ಚಾಗ್ತಿದೆ?

    ಕಾಂಪಿಟೇಷನ್ ಮತ್ತು ಕೌಂಟರ್ ಕೊಡೊದು ರ್‍ಯಾಪ್ ಸಾಂಗ್ ಅಲ್ಲಿ ಹೆಚ್ಚಾಗ್ತಿದೆ?

    ಇದು ಇದ್ದರೇನೆ ರ್‍ಯಾಪ್ ಸಾಂಗ್‌ಗೆ ಮಜಾ ಸಿಗೋದು. ಇವೆಲ್ಲ ಹೆಚ್ಚಾದರೇ ಏನು ತೊಂದರೆ ಇಲ್ಲ ಆದರೆ ಅತೀಯಾಗಿ ಆಗಬಾರದು ಅಷ್ಟೆ. ಕಾಂಪಿಟೇಷನ್ ಇದ್ದರೇನೆ ನಾವು ಬೆಳೆಯಲು ಸಾಧ್ಯವಾಗೋದು. ಕೌಂಟರ್ ಕೂಡ ಹಾಗೆ. ನಾವು ಯಾವುದನ್ನು ಬೇಕು ಅಂತ ಮಾಡೊದಿಲ್ಲ. ಆದರೆ ನಮ್ಮ ವಿಚಾರಕ್ಕೆ ಯಾರಾದರೂ ಬಂದರೇ, ನಮ್ಮ ಬಗ್ಗೆ ಏನಾದರೂ ಹೇಳಿದರೇ ನಾವು ಕೌಂಟರ್ ಕೊಡಬೇಕಾಗುತ್ತೆ. ಹೀಗಾಗಿ ಇದೆಲ್ಲ ನಡೆಯುತ್ತೆ. ಇದರಿಂದ ಯಾರಿಗೂ ಹರ್ಟ್ ಮಾಡುವ ಉದ್ದೇಶ ನಮ್ಮದಲ್ಲ. ಬದಲಾಗಿ ಜನರಲ್ಲಿ ಗುರುತಿಸಿಕೊಳ್ಳಲು ಹಾಗೆಲ್ಲ ಮಾಡಬೇಕಾಗುತ್ತೆ.

    ಮುಂದಿನ ಪ್ಲಾನ್ ಏನು?

    ಮುಂದಿನ ಪ್ಲಾನ್ ಏನು?

    ಈಗಾಗಲೇ ನಾನು ಸಾಕಷ್ಟು ಪ್ಲಾನ್‌ಗಳನ್ನು ಮಾಡಿಕೊಂಡಿದ್ದೇನೆ. ಒಂದು ಪ್ರಯತ್ನವನ್ನು ಮಾಡಿದ್ದೇವೆ. 56 ಜನ ರ್‍ಯಾಪರ್ಸ್‌ನ್ನು ಬಳಸಿಕೊಂಡು ಒಟ್ಟಿಗೆ ರ್‍ಯಾಪ್ ಹಾಡುಗಳನ್ನು ಹಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪಟ್ಟಿಯಲ್ಲಿ ಸೇರಿದ್ದೇವೆ. ಇದನ್ನು ಮಾಡಲು ಸಾಕಷ್ಟು ಶ್ರಮ ಪಟ್ಟಿದ್ದೇವೆ. ಒಂದು ತಂಡವನ್ನು ಸೇರಿಸಬೇಕಿತ್ತು. ಅವರಿಗೆ ತರಬೇತಿ ನೀಡಬೇಕಿತ್ತು. ಕೆಲವರು ಉತ್ತಮವಾಗಿ ರ್‍ಯಾಪ್ ಸಾಂಗ್‌ಗಳನ್ನು ಹಾಡುತ್ತಿದ್ದರು, ಮತ್ತೆ ಕೆಲವರಿಗೆ ನಾನೇ ಗೈಡ್ ಮಾಡಿ ಒಂದು ಹಂತಕ್ಕೆ ಅವರನ್ನು ತಯಾರು ಮಾಡಿದ್ದೆ. ತುಂಬಾ ಪ್ರಾಕ್ಟೀಸ್ ಕೂಡ ಮಾಡಿದ್ದೆವು. ಒಂದು ದಿನ ಎಲ್ಲರೂ ಸೇರಿ ರ್‍ಯಾಪ್ ಸಾಂಗ್ ಒಂದನ್ನು ಒಂದು ರೀ ಟೇಕ್ ಇಲ್ಲದೇ , ಹಾಗೂ ತಪ್ಪಿಲ್ಲದಂತೆ ಹಾಡಿದ್ದೆವು. ಇದೇ ಕಾರಣಕ್ಕೆ ಈ ಒಂದು ಪ್ರಯತ್ನ ಗಿನ್ನಿಸ್ ವರ್ಲ್ಡ್ ರೆಕಾರ್ಟ್ ಸೇರ್ಪಡೆಯಾಗಿದೆ. ಇದು ತುಂಬಾ ಖುಷಿ ಕೊಟ್ಟಿದೆ. ಮುಂದೆ ಇದೇ ತಂಡವನ್ನು ದೊಡ್ಡದು ಮಾಡುವ ಕನಸಿದ್ದು 100 ಮಂದಿಯ ತಂಡ ರಚಿಸುವ ಯೋಚನೆ ನನ್ನದಾಗಿದೆ. ಅದನ್ನು ಮಾಡುತ್ತೇನೆ ಕೂಡ

    ಸಿನಿಮಾ ಆಫರ್‌ಗಳು ಎಷ್ಟಿದೆ

    ಸಿನಿಮಾ ಆಫರ್‌ಗಳು ಎಷ್ಟಿದೆ

    ಈ ಹಿಂದೆ ಕೂಡ ತುಂಬ ಆಫರ್‌ಗಳು ಇತ್ತು. ಒಂದಷ್ಟು ಸಿನಿಮಾಗಳಿಗೆ ಮ್ಯೂಸಿಕ್ ಮಾಡಿದ್ದೀನಿ ಕೂಡ. ಆದರೆ ಅವು ಯಾವುದು ರಿಲೀಸ್ ಆಗಿಲ್ಲ. ಒಂದಷ್ಟು ಮೂವಿಗಳಿಗೆ ಸಂಗೀತ ನೀಡಿದ ಮೇಲೆ ಶೂಟಿಂಗ್ ನಿಂತೋಗುತ್ತಿತ್ತು, ಮತ್ತೊಂದಷ್ಟು ಶೂಟಿಂಗ್ ಆದರೂ ರಿಲೀಸ್ ಆಗುತ್ತಿರಲಿಲ್ಲ. ಹೀಗಾಗಿ ನಾನು ಮಾಡಿದ ಹಾಡುಗಳೆಲ್ಲ ಹಂಗೆ ಮರೆಯಾಗಿ ಹೋಯ್ತು. ಈಗ ಸದ್ಯಕ್ಕೆ ಮೂರು ಚಿತ್ರಗಳಿಗೆ ಸಂಗೀತ ನೀಡಿದ್ದೇನೆ, ಪ್ರಜ್ವಲ್ ದೇವರಾಜ್, ಕಿರಣ್ ರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಹೊಸ ಸಿನಿಮಾಗಳಲ್ಲಿ ನಾನು ಭಾಗಿ ಆಗಿದ್ದೇನೆ. ಇದು ಮತ್ತಷ್ಟು ಯಶಸ್ಸು ತಂದುಕೊಡುವ ನಿರೀಕ್ಷೆ ಇದೆ.

    English summary
    Exclusive interview with Kannada rapper chirayu; He talks about his life journey, upcoming songs and other things with filmibeat kannada. Read on.
    Thursday, December 2, 2021, 21:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X