For Quick Alerts
  ALLOW NOTIFICATIONS  
  For Daily Alerts

  'ಹಿಟ್' ಗೀತೆಗಳ ಸೃಷ್ಟಿಕರ್ತ: ಈ ಗೀತೆ ರಚನೆಕಾರನ ಬದುಕಲ್ಲಿ ಮೂಡುತ್ತಾ 'ಚಿತ್ತಾರ'?

  |

  ''ಚಾಣೂರನು.....
  ಅತಿ ಕ್ರೂರನು....
  ಘನ ಘೋರನು...
  ನಾ ಕಂಡ ಅಸುರ ನೀನೇನ...'' ಮಫ್ತಿ ಚಿತ್ರದ ಸೂಪರ್ ಹಿಟ್ ಹಾಡು.

  ''ಹುಡುಗಿ ಕಣ್ಣು.....,
  ಲೋಡೆಡ್ ಗನ್ನು....,
  ಹಾರ್ಟಿಗೆ ಬುಲ್ಲೆಟ್ಟು....,
  ಒನ್ ಬೈ ಒನ್ನು...'' ರಥಾವರ ಚಿತ್ರದ ಸೂಪರ್ ಹಿಟ್ ಗೀತೆ. ಆ ಸಮಯದಲ್ಲಿ ಲವ್ ಫೆಲ್ಯೂರ್ ಹುಡುಗರ ಆಂಥೆಮ್ ಗೀತೆಯಾಗಿತ್ತು.

  ''ಚಿತ್ತಾರ ಮೂಡೋ ವೇಳೆಲಿ, ಕೆಂದಾವರೆಯೇ...., ರಂಗೆಲ್ಲಾ ಮಾಯಾವಾಗಿದೆ....'' ಉಗ್ರಂ ಸಿನಿಮಾದ ಪ್ಯಾಥೋ ಹಾಡು....

  ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?

  ದಿನಗಳು ಕಳೆದರೂ ಈ ಹಾಡುಗಳು ಸದಾ ನೆನಪಿನಲ್ಲಿ ಉಳಿಯುತ್ತೆ. ಆದರೆ ಈ ಹಾಡಿಗೆ ಸಾಹಿತ್ಯ ಬರೆದ ಗೀತೆ ರಚನೆಕಾರನ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿರಲ್ಲ. ಇಂತಹ ಸೂಪರ್ ಹಿಟ್ ಗೀತೆ ಸೃಷ್ಟಿಸಿದ್ದು ಸಾಯಿ ಸರ್ವೇಶ್. ಕನ್ನಡ ಇಂಡಸ್ಟ್ರಿಯಲ್ಲಿ ಸುಮಾರು 15 ವರ್ಷದಿಂದ ಸಕ್ರಿಯರಾಗಿದ್ದರೂ ಈಗಲೂ ಹೊಸಬರಂತೆ ಅವಕಾಶಕ್ಕಾಗಿ ಕಾಯುತ್ತಿರುವ ವ್ಯಕ್ತಿ.

  ಚಿತ್ರರಂಗದ ಬಗ್ಗೆ ಆ ಕಾಲದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದರು ಡಾ. ರಾಜ್ ಕುಮಾರ್ಚಿತ್ರರಂಗದ ಬಗ್ಗೆ ಆ ಕಾಲದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದರು ಡಾ. ರಾಜ್ ಕುಮಾರ್

  ಸಣ್ಣ ವಯಸ್ಸಿನಿಂದಲೂ ಓದು-ಬರವಣಿಗೆ ಮೇಲಿದ್ದ ಶ್ರದ್ಧೆ ಹಾಗೂ ಆಸಕ್ತಿ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಪ್ರತಿಭೆ ಇದೆ, ಗೀತೆ ರಚಿಸುವ ಸಾಮರ್ಥ್ಯ ಇದೆ. ಹೆಚ್ಚಾಗಿ ಕನ್ನಡ ಭಾಷೆಯ ಮೇಲೆ ಅಭಿಮಾನವಿದೆ. ಆದರೂ ಅದಕ್ಕೆ ತಕ್ಕ ಪ್ರತಿಫಲ, ಗೌರವ, ಖ್ಯಾತಿ ಮಾತ್ರ ಸಿಕ್ಕಿಲ್ಲ. ಇದಕ್ಕೆಲ್ಲ ಎದೆಗುಂದದ ಸರ್ವೇಶ್ ಸಿಕ್ಕ ಅವಕಾಶಗಳ ಮೂಲಕವೇ ತಮ್ಮ ಇರುವಿಕೆಯನ್ನು ಪ್ರದರ್ಶಿಸುತ್ತಿದ್ದಾರೆ.

  ಗೀತೆರಚನೆಕಾರ, ಗಾಯಕ, ಸಂಗೀತ ನಿರ್ದೇಶಕ

  ಗೀತೆರಚನೆಕಾರ, ಗಾಯಕ, ಸಂಗೀತ ನಿರ್ದೇಶಕ

  60ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಸೃಷ್ಟಿಸಿದ್ದಾರೆ. ಹಲವು ಭಕ್ತಿಗೀತೆಗಳ ಆಲ್ಬಂ ರಚಿಸಿದ್ದಾರೆ. ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಒದಗಿಸಿದ್ದಾರೆ. ಹಾಡುಗಳನ್ನು ಸಹ ಹಾಡಿದ್ದಾರೆ. ಇತ್ತೀಚಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಹಾಡೊಂದನ್ನು ಸಹ ಮಾಡಿದ್ದರು.

  - 'ಕೃಷ್ಣ ಲೀಲಾ' ಚಿತ್ರದ 'ಕೃಷ್ಣ ಕಾಲಿಂಗ್...ಲೀಲಾ ಡಾರ್ಲಿಂಗ್...ಕಮ್...ಕಮ್..' ಹಾಡಿಗೂ ಸಾಯಿ ಸರ್ವೇಶ್ ಸಾಹಿತ್ಯ ಬರೆದಿದ್ದರು.

  - 'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ಬರುವ ''ಪಯಣವ...ಪಯಣವಾ ಹೊರಟಿದೆ....'' ಹಾಡಿಗೂ ಸಾಯಿ ಸರ್ವೇಶ್ ಅವರೇ ಸಾಹಿತ್ಯ ರಚಿಸಿದ್ದರು. ಸಂಚಿತ್ ಹೆಗ್ಡೆ ಹಾಡಿದ್ದ ಈ ಹಾಡು ದೊಡ್ಡ ಹಿಟ್ ಆಗಿತ್ತು.

  ಗೀತೆ ರಚಿಸುವುದನ್ನೇ ಜೀವನವನ್ನಾಗಿಸಿಕೊಂಡರು

  ಗೀತೆ ರಚಿಸುವುದನ್ನೇ ಜೀವನವನ್ನಾಗಿಸಿಕೊಂಡರು

  ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನವರಾದ ಸರ್ವೇಶ್ ಓದಿರುವುದು ಐಟಿಐ ಮಾತ್ರ. ಸಣ್ಣ ವಯಸ್ಸಿನಿಂದಲೂ ಕವನಗಳನ್ನು ಬರೆಯುವ ಹವ್ಯಾಸ ಹೊಂದಿದ್ದ ಇವರು ಬರವಣಿಗೆಯಲ್ಲಿಯೇ ಜೀವನ ಕಂಡುಕೊಳ್ಳುವ ಗುರಿಯಾಗಿಸಿಕೊಂಡಿದ್ದರು. ಹಾಗಾಗಿ, ಬೇರೆ ಯಾವುದೇ ಕೆಲಸವೂ ಸರ್ವೇಶ್ ಕೈಹಿಡಿಯಲಿಲ್ಲ. ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಅವರ ಪರಿಚಯಸ್ಥರ ಮೂಲಕ ಬೆಂಗಳೂರಿನ ಕಡೆ ಹೆಜ್ಜೆಯಿಟ್ಟ ಸರ್ವೇಶ್ ಈಗ ಸಿನಿಮಾ ಜಗತ್ತನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ.

  ಹೃದಯ ಐ ಮಿಸ್ ಯೂ' ಚಿತ್ರಕ್ಕೆ ಮೊದಲ ಸಲ ಹಾಡು ಬರೆದರು. ಈ ಚಿತ್ರಕ್ಕೆ ಸಂಗೀತ ನೀಡಿದ್ದು ಮುಂಬೈ ಮೂಲದ ರಾಮ್‌ಶಂಕರ್. ಮುಂಬೈಗೆ ಹೋಗಿ ಈ ಹಾಡುಗಳನ್ನು ಕಂಪೋಸ್ ಮಾಡಿದ್ದರು. ಆರು ಹಾಡುಗಳಿದ್ವು. ಮೂರು ಹಾಡಿಗೆ ಸಾಹಿತ್ಯ ರಚಿಸಿದ್ದರು.

  ಭಕ್ತಿಗೀತೆಗಾಗಿ ಒಲಿದ ಕೀಮಾ ಪ್ರಶಸ್ತಿ

  ಭಕ್ತಿಗೀತೆಗಾಗಿ ಒಲಿದ ಕೀಮಾ ಪ್ರಶಸ್ತಿ

  ''ಸಾಯಿ ಶಿವಾನಿ ಮೇಡಂ ಅವರನ್ನ ಸ್ಮರಿಸಿಕೊಳ್ಳಬೇಕು. ಅವರ ಜೊತೆ ಸೇರಿ ಹಲವು ಭಕ್ತಿಗೀತೆಗಳನ್ನು ರಚಿಸಿದ್ದೇನೆ. ಸಾಯಿಬಾಬರ ಅಪ್ಪಟ ಭಕ್ತೆಯಾಗಿದ್ದರು. ಅವರ ಪ್ರಭಾವ ನನ್ನ ಮೇಲೆಯೂ ಆಗಿದೆ. ಸಾಯಿಬಾಬರ ಕುರಿತು ಎರಡು ಆಲ್ಬಂ ರಚಿಸಿದ್ವಿ. ತುಂಬಾ ಚೆನ್ನಾಗಿ ಮೂಡಿಬಂತು. ಸಾಯಿ ಸ್ಮರಣೆಯಿಂದ ನನ್ನ ಜೀವನದಲ್ಲಿ ಏನೋ ಬದಲಾವಣೆ ಆಯಿತು ಎಂಬ ನಂಬಿಕೆ. ಸರ್ವೇಶ್ ಅಂತಿದ್ದ ನನ್ನ ಹೆಸರನ್ನು ಸಾಯಿ ಸರ್ವೇಶ್ ಅಂತ ಬದಲಾಯಿಸಿಕೊಂಡೆ'' ಎಂದು ತಮ್ಮ ಹೆಸರಿನ ಮುಂದೆ ಸಾಯಿ ಏಕೆ ಬಂತು ವಿವರಿಸಿದರು.

  ಕೀಮಾ ಅವಾರ್ಡ್‌ನಲ್ಲಿ ಸಾಯಿ ಸರ್ವೇಶ್ ಅವರು ರಚಿಸಿದ್ದ ಭಕ್ತಿಗೀತೆಗೆ 'ಅತ್ಯುತ್ತಮ ಸಂಯೋಜಕ' ಎಂಬ ಪ್ರಶಸ್ತಿ ಸಹ ಲಭಿಸಿದೆ.

  ನಡುಕ ನಡುಕ ನಡುಕ....ಇರಬೇಕು ಕೊನೆಯ ತನಕ

  ನಡುಕ ನಡುಕ ನಡುಕ....ಇರಬೇಕು ಕೊನೆಯ ತನಕ

  'ಗೌಡ್ರು ಸೈಕಲ್' ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ ಆಗಿದೆ. 'ನಮೋ' ಎಂಬ ಚಿತ್ರಕ್ಕೂ ಸಾಯಿ ಸರ್ವೇಶ್ ಅವರೇ ಸಂಗೀತ ಸಂಯೋಜನೆ ಒದಗಿಸಿದ್ದಾರೆ. ಈಗ 'ಜಾರ್ಡನ್' ಎಂಬ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾಗೂ ಸರ್ವೆಶ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  - ಪ್ರಥಮ್ ನಟನೆ 'ದೇವ್ರಂಥ ಮನುಷ್ಯ' ಚಿತ್ರದಲ್ಲಿ ಬರುವ 'ದೇವರಂಥಾ ಮನುಷ್ಯ ಇವನು, ದೇವಿ ಪಾಲಾದಾನು' ಹಾಡು ರಚಿಸಿದ್ದು ಸರ್ವೇಶ್. ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದರು.

  - ಅನಿಶ್ ತೇಜೇಶ್ವರ್ ನಟನೆಯ ರಾಮಾರ್ಜುನ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ''ನಡುಕ ನಡುಕ ನಡುಕ....ಇರಬೇಕು ಕೊನೆಯ ತನಕ....'' ಹಾಡಿಗೆ ಸಾಹಿತ್ಯ ರಚಿಸಿರುವುದು ಸಾಯಿ ಸರ್ವೇಶ್. ವಸಿಷ್ಠ ಸಿಂಹ ಈ ಸಾಂಗ್ ಹಾಡಿದ್ದಾರೆ. ಈ ಹಾಡಿನ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

  ಪ್ರತಿಭೆ ತಕ್ಕ ಫ್ರತಿಫಲ ಬೇಕಿದೆ

  ಪ್ರತಿಭೆ ತಕ್ಕ ಫ್ರತಿಫಲ ಬೇಕಿದೆ

  ದಶಕದಿಂದಲೂ ಇಂಡಸ್ಟ್ರಿಯಲ್ಲಿದ್ದರೂ ಈಗಲೂ ಹೊಸಬರಂತೆ ಅವಕಾಶಕ್ಕಾಗಿ ಹುಡುಕಿ ಸಾಗಬೇಕು ಎಂಬ ಬೇಸರ ವ್ಯಕ್ತಪಡಿಸುತ್ತಾರೆ. ಕನ್ನಡದವರನ್ನು ಬೆಳೆಸಬೇಕು, ಹೊಸಬರನ್ನು ಬೆಳಸಬೇಕು ಎಂದು ಬಾಯಿ ಮಾತಲ್ಲಿ ಹೇಳ್ತಾರೆ. ಆದರೆ, ಅಂತಹ ಬೆಳವಣಿಗೆ ಗೀತೆ ರಚನೆ ವಿಭಾಗದಲ್ಲಿ ಬಹಳ ಕಡಿಮೆ. ಖ್ಯಾತನಾಮರ ಕೈಯಿಂದ ಸಾಹಿತ್ಯ ಇದ್ರೆ ಅದು ಚಿತ್ರಕ್ಕೆ ಪ್ರಚಾರ ಎಂಬ ಆಲೋಚನೆ ನಮ್ಮವರಲ್ಲಿದೆ. ಅವಕಾಶ ಸಿಕ್ತು ಅಂತ ಸ್ವತಂತ್ರವಾಗಿ ಸಾಹಿತ್ಯ ರಚಿಸಿದರೂ, ಅದು ಬೇಡು, ಇದು ಬೇಡ ಎಂದು ಆ ಹಾಡಿನ ಮೂಲಸತ್ವವನ್ನೇ ಕಿತ್ತೊಗೆಯುತ್ತಾರೆ. ಕೆಲವೊಮ್ಮೆ ಕ್ರೆಡಿಟ್ ವಿಚಾರದಲ್ಲೂ ನಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲ್ಲ ಎಂಬ ಬೇಸರ ಹಂಚಿಕೊಂಡಿದ್ದಾರೆ.

  ''ನಮಗೆ ಸಿನಿಮಾ ಇಂಡಸ್ಟ್ರಿ ಬಿಟ್ಟರೆ ಬೇರೆ ಯಾವ ಕೆಲಸವೂ ಇಲ್ಲ. ಹಾಡು ಬರೆದ್ರೆನೇ ಜೀವನ'' ಎಂದು ಸರ್ವೆಶ್ ಕನ್ನಡ ಇಂಡಸ್ಟ್ರಿಯಲ್ಲಿ ಗೀತೆ ರಚನೆಕಾರರ ಪರಿಸ್ಥಿತಿ ಪರಿಚಯಿಸಿದ್ದಾರೆ.

  English summary
  Here is the interview with Sandalwood Lyricist Sai Sarvesh. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X