twitter
    For Quick Alerts
    ALLOW NOTIFICATIONS  
    For Daily Alerts

    'ನನ್ನ ಮಗುವೇ..ಮೌನವಾಗಿರು..' ಶಕುನಿ ಪಾತ್ರಕ್ಕೆ ಜೀವತುಂಬಿದ ಸುಮನ್ ಜಾದೂಗರ್ ಸಂದರ್ಶನ

    |

    ನನ್ನ ಮಗುವೇ...ಮೌನವಾಗಿರು...ಮಕ್ಕಳು, ಯುವಕರು ಮತ್ತು ವಯಸ್ಸಾದವರಿಗೂ ಈ ಡೈಲಾಗ್ ಅಚ್ಚುಮೆಚ್ಚು. ಸದ್ಯ ಈ ಡೈಲಾಗ್ ಟ್ರೆಂಡಿಂಗ್ ನಲ್ಲಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿಯ ಶಕುನಿಯ ಮಾತು. ಅದ್ಭುತ ಅಭಿನಯ ಮತ್ತು ವಿಶಿಷ್ಟ ಶೈಲಿಯ ಮಾತಿನ ಮೂಲಕ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿರುವ ಶಕುನಿ ಪಾತ್ರಕ್ಕೆ ಧ್ವನಿ ನೀಡಿದ್ದು ಯಾರು ಎಂದು ತಲೆಕೆಡಿಸಿಕೊಂಡವರು ಅನೇಕರು. ಶಕುನಿ ಪಾತ್ರ ಕನ್ನಡದಲ್ಲಿಯೂ ಸುಂದರವಾಗಿ ಮೂಡಿಬರಲು ಕಾರಣ ಸುಮನ್ ಜಾದೂಗರ್.

    Recommended Video

    French Biriyani Movie Review | Danish Sait | PuneethRajkumar | Filmibeat Kannada

    ವಿಭಿನ್ನ ಶೈಲಿಯ ಮಾತಿನ ಮೂಲಕ ನೋಡುಗರನ್ನು ಮಂತ್ರಮುಗ್ದಗೊಳಿಸಿರುವ ಶಕುನಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಸುಮನ್ ಜಾದೂಗರ್. ಹಿಂದಿಯ ಮಹಾಭಾರತ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಮಹಾಭಾರತ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿ ಮೂಡಿಬಂದಿವೆ. ಅದರಲ್ಲೂ ಶಕುನಿ ಪಾತ್ರ ಮತ್ತೆ ಮತ್ತೆ ಕಾಡುವಂತೆ ಮಾಡಿದೆ. ಶಕುನಿ ಪಾತ್ರದಲ್ಲಿ ಪ್ರಣೀತ್ ಭಟ್ ಅಭಿನಯಿಸಿದ್ದಾರೆ.

    ಪ್ರಣೀತ್ ಗೆ ಕನ್ನಡದಲ್ಲಿ ಸುಮನ್ ಜಾದೂಗರ್ ಧ್ವನಿ ನೀಡಿದ್ದಾರೆ. ಶಕುನಿ ಪಾತ್ರದ ಧ್ವನಿ ಮೂಲಕ ಸುಮನ್ ಕನ್ನಡಿಗರ ಮನಗೆದ್ದಿದ್ದಾರೆ. ಇವರ ವಿಭಿನ್ನ ಶೈಲಿಯ ಮಾತು ಶಕುನಿ ಪಾತ್ರದ ತೂಕ ಮತ್ತಷ್ಟು ಹೆಚ್ಚಿಸಿದೆ. ಶಕುನಿ ಪಾತ್ರಕ್ಕೆ ಕನ್ನಡದಲ್ಲಿ ಜೀವ ತುಂಬುತ್ತಿರುವ ಸುಮನ್ ಜಾದೂಗರ್ ಅವರ ಜೊತೆ 'ಫಿಲ್ಮಿ ಬೀಟ್ ಕನ್ನಡ' ನಡೆಸಿದ ಎಕ್ಸ್ಲೂಸಿವ್ ಸಂದರ್ಶನ ಇಲ್ಲಿದೆ.. ಮುಂದೆ ಓದಿ..

    ಸುಮನ್ ಜಾದೂಗರ್ ಬಗ್ಗೆ...

    ಸುಮನ್ ಜಾದೂಗರ್ ಬಗ್ಗೆ...

    ಸುಮನ್ ಜಾದೂಗರ್ ಅಪ್ಪಟ ಕನ್ನಡದ ಬಹುಮುಖ ಪ್ರತಿಭೆ. ಅಭಿನಯ, ನಿರ್ದೇಶನ, ರಂಗಭೂಮಿ ಜೊತೆಗೆ ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡುತ್ತಿದ್ದಾರೆ. ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲಿಯೂ ಬ್ಯುಸಿಯಾಗಿರುವ ಸುಮನ್ ಕನ್ನಡ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಕಮಲ್ ಹಾಸನ್ ಅಭಿನಯದ 'ಉತ್ತಮ್ ವಿಲನ್' ಸಿನಿಮಾದಲ್ಲಿ ಸುಮನ್ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ನಟ ಸೂರಜ್ ಮತ್ತು ಧನ್ಯ ರಾಮ್ ಕುಮಾರ್ ಅಭಿನಯದ 'ನಿನ್ನ ಸನಿಹಕೆ' ಸಿನಿಮಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೀಗ 'ನಿನ್ನ ಸನಿಹಕೆ' ನಿರ್ದೇಶನದ ಜವಾಬ್ದಾರಿಯನ್ನು ನಟ ಸೂರಜ್ ಗೆ ವಹಿಸಿದ್ದಾರೆ.

    ಶಕುನಿ ಪಾತ್ರಕ್ಕೆ ಧ್ವನಿ ನೀಡುತ್ತಿರುವ ಬಗ್ಗೆ ಹೇಳಿ?

    ಶಕುನಿ ಪಾತ್ರಕ್ಕೆ ಧ್ವನಿ ನೀಡುತ್ತಿರುವ ಬಗ್ಗೆ ಹೇಳಿ?

    "ಶಕುನಿ ಪಾತ್ರದ ವಾಯ್ಸ್ ಇಷ್ಟು ಅದ್ಭುತವಾಗಿ ಬರಲು ಎರಡು ಕಾರಣವಿದೆ. ಒಂದು ಶಕುನಿ ಪಾತ್ರದಲ್ಲಿ ಅಭಿನಯಿಸಿದ ನಟ ಮತ್ತೊಂದು ಕನ್ನಡದ ಸಾಹಿತ್ಯ. ಈ ಎರಡು ಕಾರಣದಿಂದ ಇಂದು ಶಕುನಿ ಪಾತ್ರದ ಧ್ವನಿ ಇಷ್ಟು ಖ್ಯಾತಿಗಳಿಸಿದೆ. ಹಿಂದಿಯಿಂದ ಯತಾವತ್ತಾಗಿ ಅನುವಾದ ಮಾಡಿ ಇಳಿಸಿಲ್ಲ. ಇಲ್ಲಿ ಭಾವಾಂತರ ಮಾಡಲಾಗಿದೆ. ಭಾಷೆಯಿಂದ ಮತ್ತೊಂದು ಭಾಷೆಗೆ ಭಾವಾಂತರ ಮಾಡಬೇಕು ಅನುವಾದ ಮಾಡಬಾರದು. ಹಿಂದಿ ಯಿಂದ ಕನ್ನಡಕ್ಕೆ ಭಾವಾಂತರ ಮಾಡಿದ್ದು ಸಾಹಿತಿ ಕ್ರಿಶ್ ಜೋಶಿ. ನಾಗೇಶ್ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲರ ಸಹಾಯದಿಂದ ಇದು ಸಾಧ್ಯವಾಗಿದೆ.

    ನನ್ನ ಮಗುವೇ ಮೌನವಾಗಿರು..ಡೈಲಾಗ್ ತುಂಬಾ ಫೇಮಸ್ ಆಗಿದೆ ಏನು ಹೇಳುತ್ತೀರಿ?

    ನನ್ನ ಮಗುವೇ ಮೌನವಾಗಿರು..ಡೈಲಾಗ್ ತುಂಬಾ ಫೇಮಸ್ ಆಗಿದೆ ಏನು ಹೇಳುತ್ತೀರಿ?

    ಡಬ್ಬಿಂಗ್ ಮಾಡಲು ಪ್ರಾರಂಭಿಸಿದಾಗ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿಗಳಿಸುತ್ತೆ ಎನ್ನುವುದು ಖಂಡಿತ ಗೊತ್ತಿರಲಿಲ್ಲ. ಶಕುನಿಯ ಬಾಯಲ್ಲಿ ಬರುವ ನನ್ನ ಮಗುವೇ.. ಮತ್ತು ಮೌನ ವಾಗಿರು.. ಹಾಗೂ ನಗು ತುಂಬಾ ಪ್ರಮುಖವಾಗಿದೆ. ಜನ ಇಷ್ಟು ಇಷ್ಟಪಡುತ್ತಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಆದರೆ ನಿರ್ದೇಶಕರು ಹೇಳುತ್ತಿದ್ದರು. ಅವರಿಗೆ ಮೊದಲ ತಿಳಿದಿತ್ತು.

    ಶಕುನಿ ಪಾತ್ರಕ್ಕೆ ಧ್ವನಿ ನೀಡುವ ಅವಕಾಶ ಹೇಗೆ ಸಿಕ್ಕಿತು?

    ಶಕುನಿ ಪಾತ್ರಕ್ಕೆ ಧ್ವನಿ ನೀಡುವ ಅವಕಾಶ ಹೇಗೆ ಸಿಕ್ಕಿತು?

    ಯಾವುದೆ ಪಾತ್ರಕ್ಕೆ ಧ್ವನಿ ನೀಡಬೇಕು ಎಂದರೆ ಮೊದಲ ವಾಯ್ಸ್ ಟೆಸ್ಟ್ ಕೊಡಬೇಕು. ಎಷ್ಟೇ ದೊಡ್ಡ ಡಬ್ಬಿಂಗ್ ಕಲಾವಿದರಾದರು ವಾಯ್ಸ್ ಟೆಸ್ಟ್ ಮಾಡಿಸುತ್ತಾರೆ. ಪಾತ್ರಕ್ಕೆ ನಮ್ಮ ಧ್ವನಿ ಹೊಂದಾಣಿಕೆಯಾಗುತ್ತಾ ಎನ್ನುವುದನ್ನು ನೋಡಬೇಕು. ಹೀಗೆ ಶಕುನಿ ಪಾತ್ರಕ್ಕೆ ವಾಯ್ಸ್ ಟೆಸ್ಟ್ ಕೊಡು ಅಂತ ಒಬ್ಬರು ಹೇಳಿದರು. ಮೊದಲು ವಾಯ್ಸ್ ಟೆಸ್ಟ್ ನೀಡಿದೆ. ನಂತರ ನನ್ನ ಧ್ವನಿ ಇಷ್ಟವಾಯ್ತು.

    ಶಕುನಿ ಪಾತ್ರಕ್ಕೆ ಧ್ವನಿ ನೀಡಿದ ಬಳಿಕ ಬೇಡಿಕೆ ಹೆಚ್ಚಾಗಿದೆಯಾ?

    ಶಕುನಿ ಪಾತ್ರಕ್ಕೆ ಧ್ವನಿ ನೀಡಿದ ಬಳಿಕ ಬೇಡಿಕೆ ಹೆಚ್ಚಾಗಿದೆಯಾ?

    ಬೇಡಿಕೆ ಜಾಸ್ತಿ ಆಗಿದೆ. ಆದರೆ ಎಲ್ಲವನ್ನು ಒಟ್ಟಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಶಕುನಿ ಪಾತ್ರಕ್ಕೆ ನೀಡಿದ ಧ್ವನಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಇದನ್ನು ಉಳಿಸಿಕೊಳ್ಳಬೇಕು. ಪರ್ಫಾಮೆನ್ಸ್ ಇದ್ದರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ಸದ್ಯಕ್ಕೆ ಯಾವುದನ್ನು ಒಪ್ಪಿಕೊಂಡಿಲ್ಲ. ಮಹಾಭಾರತ ಧಾರಾವಾಹಿ ಇನ್ನೂ ಮುಗಿದಿಲ್ಲ. ಇದು ಮುಗಿದ ಬಳಿಕ ನೋಡಬೇಕು.

    ಡಬ್ಬಿಂಗ್ ಕಲಾವಿದರಿಗೆ ಸಂಭಾವನೆ ಕಡಿಮೆ ಎಂದು ಹೇಳುತ್ತಾರೆ ನಿಜಾನಾ?

    ಡಬ್ಬಿಂಗ್ ಕಲಾವಿದರಿಗೆ ಸಂಭಾವನೆ ಕಡಿಮೆ ಎಂದು ಹೇಳುತ್ತಾರೆ ನಿಜಾನಾ?

    ನಿಜ ಹೇಳಬೇಕೆಂದರೆ ಇದರ ಬಗ್ಗೆ ಕಾಮೆಂಟ್ ಮಾಡಲು ಇಷ್ಟವಿಲ್ಲ. ಇದರ ಬಗ್ಗೆ ಹೇಳಲು ನಾನು ಅರ್ಹನಲ್ಲ. ಸಂಭಾವನೆ ಕಡಿಮೆ ಅಂತ ಏನು ಇಲ್ಲ. ಪ್ರಾಜೆಕ್ಟ್ ಮೇಲೆ ಅವಲಂಬಿತವಾಗಿರುತ್ತೆ. ದೊಡ್ಡ ಪ್ರಾಜೆಕ್ಟ್ ಗೆ ದೊಡ್ಡ ಮೊತ್ತದ ಸಂಭಾವನೆ ಸಂಭಾವನೆ ಸಿಗುತ್ತೆ. ಪ್ರಾಜೆಕ್ಟ್ ಮೇಲೆ ಡಿಪೆಂಡ್ ಆಗಿರುತ್ತೆ.

    ಪಾತ್ರ ಹಿಟ್ ಆದರು ತೆರೆ ಹಿಂದೆಯೇ ಉಳಿದಿರಬೇಕು ಎನ್ನುವ ಬೇಸರವಿದೆಯಾ?

    ಪಾತ್ರ ಹಿಟ್ ಆದರು ತೆರೆ ಹಿಂದೆಯೇ ಉಳಿದಿರಬೇಕು ಎನ್ನುವ ಬೇಸರವಿದೆಯಾ?

    ನಾನು ತೆರೆ ಮೇಲೆ ಮತ್ತು ತೆರೆ ಹಿಂದೆ ಕೆಲಸ ಮಾಡಿರುವುದರಿಂದ ಭಿನ್ನತೆ ಗೊತ್ತಿದೆ. ಒಂದು ಕಾರ್ಯಕ್ರಮದಲ್ಲಿ ಅಡುಗೆ ಚೆನ್ನಾಗಿ ಇದ್ದರೆ ಚೆನ್ನಾಗಿದೆ ಎಂದು ಹೇಳಿ, ಕೇಳಿ ಹಾಕಿಸಿಕೊಂಡು ಊಟ ಮಾಡುತ್ತಾರೆ. ಇನ್ನೂ ಕೆಲವರು ಯಾರು ಈ ಆಡುಗೆ ಮಾಡಿದ್ದು ಎಂದು ಹುಡುಕಿಕೊಂಡು ಹೋಗಿ ಅಡುಗೆ ಭಟ್ಟರನ್ನು ಮಾತನಾಡಿಸುತ್ತಾರೆ. ಅಡುಗೆ ಭಟ್ಟರಿಗೆ ಅಡುಗೆ ಮಾಡಲು ತುಂಬಾ ಜನ ಸಹಾಯ ಮಾಡಿರುತ್ತಾರೆ. ಇದು ಹಾಗೆ. ಆದರೆ ಈ ಬಗ್ಗೆ ನನಗೇನು ಬೇಸರವಿಲ್ಲ.

    ಡಬ್ಬಿಂಗ್ ಧಾರಾವಾಹಿಗಳು ಹೆಚ್ಚಾಗುತ್ತಿವೆ ಎಂದು ವಿರೋಧ ಕೂಡ ವ್ಯಕ್ತವಾಗುತ್ತಿದೆ. ಏನು ಹೇಳುತ್ತೀರಿ?

    ಡಬ್ಬಿಂಗ್ ಧಾರಾವಾಹಿಗಳು ಹೆಚ್ಚಾಗುತ್ತಿವೆ ಎಂದು ವಿರೋಧ ಕೂಡ ವ್ಯಕ್ತವಾಗುತ್ತಿದೆ. ಏನು ಹೇಳುತ್ತೀರಿ?

    ತಪ್ಪು ಸರಿ ಎನ್ನುವುದಕ್ಕಿಂತ ಏನಕ್ಕೆ ವಿರೋಧ ಮಾಡಬೇಕು. ಕಾನೂನು ಪ್ರಕಾರ ಡಬ್ಬಿಂಗ್ ಮಾಡಲಾಗುತ್ತಿದೆ. ಡಬ್ಬಿಂಗ್ ಕಲಾವಿದರಿಗೆ ಕೆಲಸ ಮತ್ತು ಊಟ ನೀಡುತ್ತಿದೆ. ಇದರಿಂದ ಯಾರಿಗೂ ಹಾನಿಯಾಗುತ್ತಿಲ್ಲ. ಡಬ್ಬಿಂಗ್ ನಿಂದ ಭಾಷೆ ಹಾಳಾಗುತ್ತಿಲ್ಲ. ಭಾಷೆ ಹಾಳಾಗಲು ಸಾಧ್ಯವಿಲ್ಲ. ಭಾಷೆ ಯಾರ ಸ್ವತ್ತು ಅಲ್ಲ. ಕಾಲಕ್ಕೆ ತಕ್ಕದಾಗಿ ಬದಲಾಗುತ್ತೆ. ಬಳಕೆ ರೀತಿ ಬೇರೆ ಬೇರೆಯಾಗಿರುತ್ತೆ. ಕನ್ನಡ ಅನುವಾದ ಸರಿಯಿಲ್ಲ ಎಂದರೆ ಡಬ್ಬಿಂಗ್ ವಿರೋಧ ಮಾಡಬಾರದು. ಅದಕ್ಕೆ ಸಂಬಂಧ ಪಟ್ಟವರು ಮತ್ತು ಧಾರಾವಾಹಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅನುವಾದ ಸರಿ ಇಲ್ಲದಿದ್ದರೆ ಅದನ್ನು ಉತ್ತಮ ಪಡಿಸಿಕೊಳ್ಳಬೇಕು. ಡಬ್ಬಿಂಗ್ ನಿಂದ ಯಾವುದೆ ಶೂಟಿಂಗ್ ನಿಂತಿಲ್ಲ. ಎಲ್ಲಾ ಶೂಟಿಂಗ್ ಗಳು ಪ್ರಾರಂಭವಾಗಿದೆ. ಸುರಕ್ಷತೆಯ ಜೊತೆಗೆ ಸರ್ಕಾರದ ನಿಯಮದ ಪ್ರಕಾರ ಚಿತ್ರೀಕರಣ ಮಾಡುತ್ತಿದ್ದಾರೆ.

    English summary
    Suman Jadugar gave voice to Shakuni role in mahabharata serial. Suman Jadugar interview.
    Saturday, July 25, 2020, 12:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X