ಮದುವೆ ಬಳಿಕ ಮೇಘನಾ ರಾಜ್ ಗೆ ಎದುರಾದ ಮೊದಲ ಚಾಲೆಂಜ್

Recommended Video

ಮೇಘನಾ ಮುಂದಿರುವ ದೊಡ್ಡ ಚಾಲೆಂಜ್ ಇದು..! | Filmibeat kannada

ನಟಿ ಮೇಘನಾ ರಾಜ್, ತಿಲಕ್, ಶ್ರೀಮಹಾದೇವ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಸಿನಿಮಾ ಇದೇ ವಾರ ತೆರೆಕಾಣ್ತಿದೆ. ಮದುವೆಯ ಬಳಿಕ ಮೇಘನಾಗೆ ಇದು ಮೊದಲ ಸಿನಿಮಾ ಹಾಗೂ ವೃತ್ತಿ ಜೀವನದಲ್ಲಿ ಇದು ತುಂಬಾ ಪ್ರಮುಖವಾದ ಚಿತ್ರ.

ಇದುವರೆಗೂ ಮೇಘನಾ ಮಾಡಿರುವ ಪಾತ್ರಗಳ ಪೈಕಿ ಇದು ಚಾಲೆಂಜಿಂಗ್ ಆಗಿದೆಯಂತೆ. ಮೇಘನಾಗೂ ಕೂಡ ಇದು ಮದುವೆ ಬಳಿಕ ಎದುರಾಗುತ್ತಿರುವ ಮೊದಲ ಚಾಲೆಂಜ್ ಅಂತಾನೇ ಹೇಳಬಹುದು. ಈ ಹಿಂದೆ 'ಜಲ್ಸಾ' ಚಿತ್ರ ನಿರ್ದೇಶನ ಮಾಡಿದ್ದ ಕಾಂತಕನ್ನಲ್ಲಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಇತ್ತೀಚಿಗಷ್ಟೆ ಮೇಘನಾ ರಾಜ್ ಮತ್ತು ಚಿತ್ರತಂಡ ಜಯನಗರದಲ್ಲಿರುವ ನಮ್ಮ ಒನ್ ಇಂಡಿಯಾ/ಫಿಲ್ಮಿಬೀಟ್ ಕಚೇರಿಗೆ ಭೇಟಿ ನೀಡಿ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. 'ಇರುವುದೆಲ್ಲವ ಬಿಟ್ಟು' ಸಿನಿಮಾದ ವಿಶೇಷತೆಗಳೇನು.? ಮೇಘನಾ ಅವರ ಪಾತ್ರ ಹೇಗಿತ್ತು.? ಎಂಬುದನ್ನ ನಮ್ಮೊಂದಿಗೆ ಹಂಚಿಕೊಂಡರು. ಮೇಘನಾ ರಾಜ್ ಮಾತು ಹೇಗಿತ್ತು ಎಂದು ಮುಂದೆ ಓದಿ....

ಇರೋದನ್ನ ಬಿಟ್ಟು ಎಲ್ಲ ಮಾಡ್ತಾರೆ

ಇರೋದನ್ನ ಬಿಟ್ಟು ಎಲ್ಲ ಮಾಡ್ತಾರೆ

''ಇದೊಂದು ಯೂನಿಕ್ ಪ್ರಯತ್ನ. ಈ ಪೀಳಿಗೆ ನೋಡಬೇಕಾದ ಸಿನಿಮಾ. ಲೀವಿಂಗ್ ರಿಲೇಶನ್, ಸ್ನೇಹ, ಸಂಬಂಧಗಳ ಬಗ್ಗೆ ಮಾತನಾಡಿದ್ದೇವೆ. ನಮ್ಮಲ್ಲಿರುವ ಪಾಸಿಟೀವ್ ಗಳನ್ನ ಬಿಟ್ಟು ಇಲ್ಲದಿರುವ ನೆಗಿಟೀವ್ ಗಳನ್ನ ಹೆಚ್ಚು ಗಮನ ಹರಿಸಿತ್ತೇವೆ. ಇಂತಹ ಕಥೆಯನ್ನಿಟ್ಟು ಮೂರು ಪಾತ್ರಗಳ ಮೂಲಕ ತೋರಿಸಲಾಗಿದೆ''

ನನಗೆ ಇದು ತುಂಬಾ ವಿಶೇಷವಾದ ಚಿತ್ರ

ನನಗೆ ಇದು ತುಂಬಾ ವಿಶೇಷವಾದ ಚಿತ್ರ

''ಈ ಸಿನಿಮಾದಲ್ಲಿ ನಾನು ಮಾಡಿದಂತ ಪಾತ್ರ ಮತ್ತು ಅದನ್ನ ನಿರ್ವಹಿಸುವಾಗ ಎದುರಾದ ಸವಾಲುಗಳು ಇದುವರೆಗು ಯಾವುದೇ ಸಿನಿಮಾದಲ್ಲೂ ಕಂಡಿಲ್ಲ. ನಿಜ ಜೀವನದಲ್ಲಿ ನನ್ನ ವ್ಯಕ್ತಿತ್ವವಲ್ಲದ ಪಾತ್ರವನ್ನ ಮಾಡಿರುವುದು. ಅದಕ್ಕಾಗಿ ಪೂರ್ವ ತಯಾರಿ ಮಾಡಿ ಅಭಿನಯಿಸುತ್ತಿದ್ದೆ. ನಿಜಕ್ಕೂ ನನಗೆ ಇದು ಬೆಸ್ಟ್ ಸಿನಿಮಾ''

ವಿಷ್ಣು ಸರ್ ಆಶೀರ್ವಾದ ನಮ್ಮ ಮೇಲೆ ಇದೆ

ವಿಷ್ಣು ಸರ್ ಆಶೀರ್ವಾದ ನಮ್ಮ ಮೇಲೆ ಇದೆ

''ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ವಾರವೇ ನಮ್ಮ ಸಿನಿಮಾ ರಿಲೀಸ್ ಆಗ್ತಿರುವುದು ನಮಗೆ ಒಂದು ರೀತಿ ಆಶೀರ್ವಾದ. ಇಂತಹ ಸಮಯದಲ್ಲಿ ಅವರ ವಾಚ್ ಒಂದು ಸಿಕ್ಕಿದೆ. ಅದನ್ನ ಕೈಯಲ್ಲಿ ಹಾಕ್ಕೊಂಡು ಥಿಯೇಟರ್ ಗೆ ಬರ್ತಿದ್ದೀನಿ''

ಪ್ರತಿಯೊಬ್ಬ ಮಗಳು ನೋಡಬೇಕಾದ ಚಿತ್ರ

''ಈ ಸಿನಿಮಾದಲ್ಲಿ ವಿಶೇಷವಾಗಿ ಅಪ್ಪ-ಮಗಳ ಬಾಂಧವ್ಯ, ಸಂಬಂಧಗಳನ್ನ ಕಳೆದುಕೊಳ್ಳಬೇಡಿ ಎಂಬುದನ್ನ ತುಂಬಾ ಚೆನ್ನಾಗಿ ಹೇಳಲಾಗಿದೆ. ಪ್ರತಿಯೊಬ್ಬ ಮಗಳು ಈ ಸಿನಿಮಾ ನೋಡಬೇಕು. ನಮ್ಮ ತಂದೆ ಇನ್ನು ಸಿನಿಮಾ ನೋಡಿಲ್ಲ. ಖಂಡಿತಾ ಎಲ್ಲ ಕುಟುಂದವರು ಒಟ್ಟಿಗೆ ನೋಡ್ತಾರೆ''

More from Filmibeat

English summary
Meghana Raj’s next Iruvudellava Bittu, directed by Kantha Kanalli, is extra special for the actor for whom it is the first release post marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X