ಸೂಪರ್ ಹಿಟ್ ಸಿನಿಮಾ ನಟರಿಗೆ ಸಂಭಾವನೆ ಬದಲು ಪಲ್ಸರ್ ಬೈಕ್ ನೀಡಿದ್ದ ನಿರ್ಮಾಪಕ

'ಜೋಶ್' ಹೆಸರಿನ ಕನ್ನಡ ಸಿನಿಮಾವೊಂದು ಬಹು ಹಿಂದೆ ಬಂದಿದ್ದು ಹಲವರಿಗೆ ನೆನಪಿರಬೇಕು. ಈ ಸೂಪರ್ ಹಿಟ್ ಸಿನಿಮಾವನ್ನು ನೋಡದವರ ಸಂಖ್ಯೆ ಕಡಿಮೆ.

ಬಹುತೇಕ ಹೊಸ ಹುಡುಗರೇ ಇದ್ದ ಈ ಸಿನಿಮಾ ಹಾಸ್ಯ, ಪ್ರೇಮದ ಜೊತೆಗೆ ಜೀವನ ಮೌಲ್ಯವನ್ನು ಸಾರುತ್ತಿದ್ದ ಸಿನಿಮಾವಾಗಿತ್ತು. ಶಿವಮಣಿ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಎಸ್‌ವಿ ಬಾಬು ನಿರ್ಮಾಣ ಮಾಡಿದ್ದರು.

ಸಿನಿಮಾದಲ್ಲಿ ನಾಯಕ ರಾಕೇಶ್ ಅಡಿಗ ಸೇರಿದಂತೆ ಮುಖ್ಯ ಪಾತ್ರಗಳಲ್ಲಿದ್ದ ಬಹುತೇಕ ನಟರು ಹೊಸ ಕಲಾವಿದರೇ ಆಗಿದ್ದರು. ಇದೇ ಸಿನಿಮಾದಲ್ಲಿ ಈಗಿನ ದೊಡ್ಡ ಸ್ಟಾರ್ ನಟಿ ನಿತ್ಯಾ ಮೆನನ್ ಸಹ ನಾಯಕಿ ಪಾತ್ರದಲ್ಲಿ ನಟಿಸಿದ್ದರು ಎಂಬುದು ವಿಶೇಷ. ಈ ಸಿನಿಮಾ ಬಹಳ ದೊಡ್ಡ ಯಶಸ್ಸು ಗಳಿಸಿತು. ಆದರೆ ಮೊದಲ ಸಿನಿಮಾದಲ್ಲಿ ನಟಿಸಿದ್ದ ಮುಖ್ಯ ಪಾತ್ರದಲ್ಲಿ ಆರು ಮಂದಿ ಹುಡುಗರಿಗೆ ಸಿಕ್ಕಿದ್ದು ಸಂಭಾವನೆ ಅಲ್ಲ ಬದಲಿಗೆ ಒಂದೊಂದು ಬೈಕ್!

ಹೌದು, ಮುಖ್ಯ ಪಾತ್ರದಲ್ಲಿ ನಟಿಸಿದ್ದ ನಟ ರಾಕೇಶ್ ಅಡಿಗ, ಅಕ್ಷಯ್, ವಿಷ್ಣು ಪ್ರಸನ್ನ, ಅಮಿತ್, ಅಲೋಕ್ (ಆಲ್‌ ಓಕೆ) ಹೀಗೆ ಒಟ್ಟು ಆರು ಮಂದಿ ಯುವ ನಟರಿಗೆ ಆರು ಪಲ್ಸರ್ 150 ಬೈಕ್ ಕೊಡಿಸಿದ್ದರು ನಿರ್ಮಾಪಕ ಎಸ್‌ವಿ ಬಾಬು. ತಮ್ಮ ಮೊದಲ ಸಂಭಾವನೆಯಾಗಿ ದೊರೆತ ಪಲ್ಸರ್ ಬೈಕ್ ಅನ್ನು ಈಗಲೂ ಜೋಪಾನವಾಗಿ ಇರಿಸಿಕೊಂಡಿರುವ ಅಕ್ಷಯ್, 'ಫಿಲ್ಮಿಭಿಟ್ ಕನ್ನಡ'ದ ಜೊತೆ ಮಾತನಾಡಿ, ''ಈ ಬೈಕ್ ನನಗೆ ಒಂದು ರೀತಿಯ ಸ್ಪೂರ್ತಿಯನ್ನು ಒದಗಿಸುತ್ತದೆ. ಮತ್ತೊಮ್ಮೆ ಸೊನ್ನೆಯಿಂದ ಪ್ರಾರಂಭ ಮಾಡಲು ಪ್ರೇರಣೆ ನೀಡುತ್ತದೆ'' ಎಂದರು.

ಇಬ್ಬರ ಬಳಿ ಮಾತ್ರವೇ ಬೈಕ್ ಉಳಿದುಕೊಂಡಿದೆ

ಇಬ್ಬರ ಬಳಿ ಮಾತ್ರವೇ ಬೈಕ್ ಉಳಿದುಕೊಂಡಿದೆ

''ಕಳೆದ ಆರು ವರ್ಷಗಳ ಹಿಂದೆ ಈ ಗಾಡಿಯನ್ನು ಓಡಿಸದೆ ನಿಲ್ಲಿಸಿಬಿಟ್ಟಿದ್ದೆ. ಆದರೆ ಈಗ ಮತ್ತೆ ಬೈಕ್ ಅನ್ನು ರಿಪೇರಿ ಮಾಡಿಸಿದ್ದೇನೆ. ಈ ಗಾಡಿಯೊಟ್ಟಿಗೆ ಹಲವು ಆಪ್ತ ನೆನಪುಗಳು ನನಗಿವೆ. ಆರು ವರ್ಷಗಳ ಹಿಂದೆ ಈ ಗಾಡಿ ಓಡಿಸುವುದು ನಿಲ್ಲಿಸುವಾಗಲೇ 1.50 ಲಕ್ಷಕ್ಕೂ ಹೆಚ್ಚು ಕಿ.ಮೀ ಓಡಿಸಿದ್ದೆ. ಆಗ ಆರು ಪಲ್ಸರ್‌ಗಳನ್ನು ನಮಗೆ ನೀಡಿದ್ದರು ಅದರಲ್ಲಿ ನನ್ನ ಹಾಗೂ ವಿಷ್ಣು ಬಳಿಯಷ್ಟೆ ಪಲ್ಸರ್ ಬೈಕ್ ಉಳಿದುಕೊಂಡಿದೆ. ರಾಕೇಶ್ ಅಡಿಗ ಬಳಿ ಇದ್ದ ಬೈಕ್ ಕಳ್ಳತನವೇ ಆಗಿಬಿಟ್ಟಿತು'' ಎಂದಿದ್ದಾರೆ ಅಕ್ಷಯ್.

ಕರಿಶ್ಮಾ 225 ಬೇಕೆಂದು ಹಠ ಹಿಡಿದಿದ್ದೆ: ಅಕ್ಷಯ್

ಕರಿಶ್ಮಾ 225 ಬೇಕೆಂದು ಹಠ ಹಿಡಿದಿದ್ದೆ: ಅಕ್ಷಯ್

''ಆ ಸಿನಿಮಾ ಮಾಡಿದ ಮುಖ್ಯ ನಟರಲ್ಲಿ ನಾನು ಬಹಳ ಕಿರಿಯವ. ಆಗ ಕರಿಜ್ಮಾ 225 ಬೈಕ್‌ ಬಹಳ ಪ್ರಚಲಿತದಲ್ಲಿತ್ತು. ನಾನು ನನಗೆ ಅದೇ ಬೈಕ್ ಬೇಕೆಂದು ಹಠ ಹಿಡಿದಿದ್ದೆ. ಆದರೆ ರಾಕೇಶ್ ಹಾಗೂ ಇತರರು ಕರಿಶ್ಮಾ 225 ಅನ್ನು ಮೇಂಟೇನ್ ಮಾಡುವುದು ಕಷ್ಟವೆಂದು ಪಲ್ಸರ್ ಬೈಕ್‌ಗೆ ಒಪ್ಪಿಕೊಂಡರು. ನಿರ್ಮಾಪಕರು ಒಟ್ಟಿಗೆ ಆರು ಬೈಕ್ ಕೊಡಿಸಿದ್ದರು. ಆರು ಬೈಕ್‌ಗೂ ಒಂದೇ ಸರಣಿಯ ಸಂಖ್ಯೆಯನ್ನು ಹಾಕಿಸಿದ್ದರು'' ಎಂದು ಹಳೆಯ ನೆನಪು ಮೆಲಕು ಹಾಕಿದರು ಅಕ್ಷಯ್.

ಹೊಸ ಆರಂಭದ ಸಂಕೇತ ಈ ಬೈಕ್: ಅಕ್ಷಯ್

ಹೊಸ ಆರಂಭದ ಸಂಕೇತ ಈ ಬೈಕ್: ಅಕ್ಷಯ್

''ಈ ಬೈಕ್‌ ಒಂದು ರೀತಿಯ ಬೂಸ್ಟ್ ಅಪ್ ನನಗೆ. ನನ್ನ ಹಳೆಯ ದಿನಗಳನ್ನು ನೆನಪಿಸುವ ಜೊತೆಗೆ ಮುಂದಿನ ಭವಿಷ್ಯದ ಬಗ್ಗೆ ಸ್ಪಷ್ಟತೆ ನೀಡುತ್ತದೆ. ನನ್ನ ನಟನಾ ವೃತ್ತಿ ಜೀವನದಲ್ಲಿ 'ಜೋಶ್' ನಂತರ ಕೆಲವು ತಪ್ಪು ನಿರ್ಣಯಗಳನ್ನು ಮಾಡಿದ್ದೇನೆ. ಸರಿಯಾದ ಮಾರ್ಗದರ್ಶನದ ಕೊರತೆಯಿಂದಲೋ ಬೇರೆ ಸಮಸ್ಯೆಯಿಂದಲೋ ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಕೆಲವು ಒಳ್ಳೆಯ ಸಿನಿಮಾಗಳನ್ನು ಕೈಬಿಟ್ಟಿದ್ದೂ ಸಹ ಇದೆ. ಈಗ ಮತ್ತೊಮ್ಮೆ ಸರಿಯಾದ ದಾರಿಯಲ್ಲಿ ಹೋಗೋಣವೆಂದು ಈ ಬೈಕ್ ಅನ್ನು ಮತ್ತೆ ಬಳಸಲು ಆರಂಭಿಸಿದ್ದೇನೆ. ಗೆಳೆಯರೆಲ್ಲ ಸೇರಿ ನಿರ್ಮಿಸಿರುವ 'ನೈಟ್ ಔಟ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಮತ್ತೆ ವೃತ್ತಿ ಗ್ರಾಫು ಮೇಲೇರುವ ನಿರೀಕ್ಷೆ ಇದೆ'' ಎಂದು ಭರವಸೆಯ ಮಾತುಗಳನ್ನಾಡಿದರು ಅಕ್ಷಯ್.

ಪಾಸ್‌ಪೋರ್ಟ್ ಫೋಟೊ ಕೊಟ್ಟಿದ್ದ ಅಕ್ಷಯ್

ಪಾಸ್‌ಪೋರ್ಟ್ ಫೋಟೊ ಕೊಟ್ಟಿದ್ದ ಅಕ್ಷಯ್

'ಜೋಶ್' ಸಿನಿಮಾದ ದಿನಗಳನ್ನು ನೆನಪಿಸಿಕೊಂಡ ಅಕ್ಷಯ್, ''ರಾಕೇಶ್ ಅಡಿಗ ಹಾಗೂ ಇತರರು ಸಿನಿಮಾದ ಆಡಿಷನ್‌ಗೆ ಹೋಗಿ ಬಂದಿದ್ದರು. ನಾನು ಮೂರನೇ ಸುತ್ತಿನ ಆಡಿಷನ್‌ಗೆ ನೇರವಾಗಿ ಕಚೇರಿಗೆ ಹೋಗಿದ್ದೆ. ಅಂದು ಅಲ್ಲಿಯೇ ಶಿವಮಣಿ ಎಲ್ಲ ಇದ್ದರು, ನನಗೆ ಅವರ್ಯಾರೆಂದು ಸಹ ಗೊತ್ತಿರಲಿಲ್ಲ. ಅಂದು ಅವರು ಫೋಟೊ ಕೇಳಿದಾಗ ಪಾಸ್‌ಪೋರ್ಟ್‌ ಸೈಜಿನ ಫೋಟೊ ಕೊಟ್ಟು ಬಂದಿದ್ದೆ. 'ಜೋಶ್' ಸಿನಿಮಾಕ್ಕೆ ಮುಂಚೆ ರಾಕೇಶ್ ಅಡಿಗ ಇತರ ಯಾರ ಪರಿಚಯವೂ ನನಗೆ ಇರಲಿಲ್ಲ. ನಂತರ ಎಲ್ಲರೂ ಗೆಳೆಯರಾದೆವು. ಈಗಲೂ ನಾವು ಹಲವರು ಗೆಳೆಯರಾಗಿಯೇ ಉಳಿದುಕೊಂಡಿದ್ದೇವೆ'' ಎಂದರು ಅಕ್ಷಯ್.

ದೊಡ್ಡ ಸ್ಟಾರ್ ಆದ ನಟಿ ನಿತ್ಯಾ ಮೆನನ್

ದೊಡ್ಡ ಸ್ಟಾರ್ ಆದ ನಟಿ ನಿತ್ಯಾ ಮೆನನ್

'ಜೋಶ್' ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿ ನಿತ್ಯಾ ಮೆನನ್ ನಟಿಸಿದ್ದರು. ಅದು ಅವರ ಎರಡನೇಯ ಸಿನಿಮಾ ಆಗಿತ್ತಷ್ಟೆ. ಆದರೆ ಇಂದು ಆಕೆ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಿ ಬಂದಿದ್ದಾರೆ. ಅವರ ಬಗ್ಗೆಯೂ ಮಾತನಾಡಿದ ಅಕ್ಷಯ್, ''ನಿತ್ಯ ಮೆನನ್ ಎರಡನೇ ಶೆಡ್ಯೂಲ್‌ನಲ್ಲಿ 'ಜೋಶ್' ಚಿತ್ರೀಕರಣಕ್ಕೆ ಬಂದರು. ಅವರು ಬಹಳ ಡೌನ್‌ ಟು ಅರ್ಥ್ ಯುವತಿಯಾಗಿದ್ದರು. ಬಹಳ ಕೂಲ್ ಆಗಿ ಎಲ್ಲರೊಟ್ಟಿಗೆ ಬೆರೆಯುತ್ತಿದ್ದರು. ಆಗಲೇ ನಟಿಯಾಗಿದ್ದರೂ ಯಾವುದೇ ಹಮ್ಮಿ ಬಿಮ್ಮು ಇಲ್ಲದೆ ನಮ್ಮೊಂದಿಗೆ ನಟಿಸಿದರು. ಈಗ ಅವರು ಬೆಳೆದಿರುವ ಎತ್ತರ ನೋಡಿ ಖುಷಿ, ಆಶ್ಚರ್ಯವಾಗುತ್ತದೆ'' ಎಂದಿದ್ದಾರೆ ಅಕ್ಷಯ್.

More from Filmibeat

English summary
Josh Kannada movie producer S Sanjay Babu gifted Pulsar 150 bikes to actors instead of giving remuneration. Josh movie actor Akshay talked about movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X