For Quick Alerts
  ALLOW NOTIFICATIONS  
  For Daily Alerts

  ಈ ಜೂನಿಯರ್ ನಿವೇದಿತಾ ಗೌಡ ಅವರ ಪ್ರತಿಭೆ ನೋಡಿದ್ರೆ ಬೆರಗಾಗ್ತೀರಾ.!

  By Bharath Kumar
  |
  ಜೂನಿಯರ್ ನಿವೇದಿತಾ ಗೌಡ ವಿಡಿಯೋ ವೈರಲ್ | Filmibeat Kannada

  ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಈ ಬಾರಿ ವಿಶೇಷವಾಗಿ ಗಮನ ಸೆಳೆದ ಸ್ಪರ್ಧಿಗಳಲ್ಲಿ ಬೇಬಿ ಡಾಲ್ ನಿವೇದಿತಾ ಗೌಡ ಕೂಡ ಒಬ್ಬರು. ನಿವೇದಿತಾ ಮಾತನಾಡುವ ಕಂಗ್ಲೀಷ್ ಮಿಶ್ರಿತ ಕನ್ನಡದ ಮೂಲಕ ವಿಭಿನ್ನವೆನಿಸಿಕೊಂಡರು. ಹಾವ ಭಾವದ ಮೂಲಕ 'ಗೊಂಬೆ' ಆಗಿ ಗುರುತಿಸಿಕೊಂಡರು.

  ಇದನ್ನೆಲ್ಲ ಗಮನಿಸಿದ ಚಂದನ್ ಶೆಟ್ಟಿ ನಿವೇದಿತಾ ಅವರ ಮೇಲೆ ಒಂದು ಮುದ್ದಾದ ಹಾಡನ್ನ ಕೂಡ ಹಾಡೇ ಬಿಟ್ಟರು. ಅಲ್ಲಿಂದ ನಿವೇದಿತಾ ಹೆಸರು ಮತ್ತಷ್ಟು ಖ್ಯಾತಿಯಾಯಿತು. ಅದೇಷ್ಟೂ ಜನ ಬಿಗ್ ಬಾಸ್ ಬೇಬಿ ಡಾಲ್ ಗೆ ಫ್ಯಾನ್ಸ್ ಆದರು.

  ಹೀಗೆ, ಬಿಗ್ ಬಾಸ್ ಮನೆಯಲ್ಲಿ ಆ ನಿವೇದಿತಾ ಗೌಡ ಸುದ್ದಿ ಮಾಡಿದ್ರೆ, ಬಿಗ್ ಬಾಸ್ ಮನೆ ಹೊರಗೆ 'ಜೂನಿಯರ್ ನಿವೇದಿತಾ' ಸೌಂಡ್ ಮಾಡ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಅವರಂತೆ ಹಾಡಿ, ಕುಣಿಯುತ್ತಿದ್ದಾಳೆ ಈ ಪೋರಿ. ಈ ಬಾಲಕಿಯ ಪ್ರತಿಭೆ ನೋಡಿ ಪ್ರೇಕ್ಷಕರು ದಂಗಾಗಿದ್ದಾರೆ. ಅಷ್ಟಕ್ಕೂ, ಈ ಜೂನಿಯರ್ ನಿವೇದಿತಾ ಗೌಡ ಯಾರು? ಎಂಬುದರ ಬಗ್ಗೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

  ಜೂನಿಯರ್ ನಿವೇದಿತಾ ಗೌಡ

  ಜೂನಿಯರ್ ನಿವೇದಿತಾ ಗೌಡ

  ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಅವರನ್ನ ಹೆಚ್ಚು ಇಷ್ಟ ಪಡುವ ಮಾನ್ಯ, ನಿವೇದಿತಾ ಅವರಂತೆ ಅನುಕರಣೆ ಮಾಡ್ತಾರೆ. ನಿವೇದಿತಾ ಅವರ ನಡೆ, ನುಡಿ, ಭಾವನೆ, ಕಾಸ್ಟ್ಯೂಮ್ ಎಲ್ಲವನ್ನು ಮಾನ್ಯ ಫಾಲೋ ಮಾಡ್ತಾರೆ.

  ನಿವೇದಿತಾ ಗೌಡಗೆ ಬಂದಿದೆ ಎರಡು ಹೊಸ ಸಿನಿಮಾ ಆಫರ್!ನಿವೇದಿತಾ ಗೌಡಗೆ ಬಂದಿದೆ ಎರಡು ಹೊಸ ಸಿನಿಮಾ ಆಫರ್!

  ಗೊಂಬೆಯಂತೆ ಹಾಡ್ತಾರೆ, ಕುಣಿಯುತ್ತಾರೆ

  ಗೊಂಬೆಯಂತೆ ಹಾಡ್ತಾರೆ, ಕುಣಿಯುತ್ತಾರೆ

  ಕೇವಲ ನಿವೇದಿತಾ ಅವರಂತೆ ಕಾಣಿಸುವುದು ಮಾತ್ರವಲ್ಲ, ಯಥಾವತ್ ಗೊಂಬೆಯಂತೆ ಹಾಡ್ತಾರೆ ಮತ್ತು ಕುಣಿಯುತ್ತಾರೆ. ಮಾನ್ಯಗೆ ನಿವೇದಿತಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಅವರ ಬಿಗ್ ಬಾಸ್ ಮನೆಯಲ್ಲಿ ಮಾಡುತ್ತಿದ್ದ ಪ್ರತಿಯೊಂದನ್ನ ಮಾನ್ಯ ಕೂಡ ಮನೆಯಲ್ಲಿ ಅನುಕರಣೆ ಮಾಡುತ್ತಿದ್ದರು. ನಿವೇದಿತಾ ಮತ್ತು ಚಂದನ್ ಶೆಟ್ಟಿ ಅಂದ್ರೆ ಕೂಡ ತುಂಬ ಇಷ್ಟ.

  ಸಿಕ್ಕಾಪಟ್ಟೆ ವಿಡಿಯೋ ಮಾಡಿದ್ದಾರೆ

  ಸಿಕ್ಕಾಪಟ್ಟೆ ವಿಡಿಯೋ ಮಾಡಿದ್ದಾರೆ

  ನಿವೇದಿತಾ ಗೌಡ ಅವರಂತೆ ಮಾನ್ಯ ಮಾಡಿರುವ ಮಿಮಿಕ್ರಿ, ಅನುಕರಣೆ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿವೇದಿತಾ ಅವರಂತೆ ಡ್ಯಾನ್ಸ್ ಮಾಡಿರುವುದು, ಹಾಡು ಹೇಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.

  'ಬೊಂಬೆ' ನಿವೇದಿತಾ ಗೌಡಗೆ ಕೈಮುಗಿದ ಕಿಚ್ಚ ಸುದೀಪ್.!'ಬೊಂಬೆ' ನಿವೇದಿತಾ ಗೌಡಗೆ ಕೈಮುಗಿದ ಕಿಚ್ಚ ಸುದೀಪ್.!

  ಯಾರು ಈ ಮಾನ್ಯ?

  ಯಾರು ಈ ಮಾನ್ಯ?

  ಜೆಪಿ ನಗರದ ನಿವಾಸಿ ಚಿತ್ರಾಶ್ರೀ ಹರ್ಷ ಮತ್ತು ಹರ್ಷ ಬಿಎಸ್ ದಂಪತಿಯ ಮುದ್ದು ಮಗಳು ಮಾನ್ಯ. 7 ವರ್ಷದ ಮಾನ್ಯ ಹರ್ಷ ವಿಬ್ ಗಯಾರ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿ. ಓದುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಡ್ಯಾನ್ಸ್, ಹಾಡು, ಮಿಮಿಕ್ರಿ, ಆಕ್ಟಿಂಗ್, ಫ್ಯಾಶನ್, ಕ್ರೀಡೆ ಹೀಗೆ ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದಾರೆ.

  ಬಹುಮುಖ ಪ್ರತಿಭೆ

  ಬಹುಮುಖ ಪ್ರತಿಭೆ

  ಇಷ್ಟೆಲ್ಲಾ ಪ್ರತಿಭೆಯುಳ್ಳ ಮಾನ್ಯ ಕರಾಟೆ ಕೂಡ ಕಲಿತಿದ್ದಾಳೆ. ಇಂಗ್ಲೀಷ್ ನಲ್ಲಿ ಪದ್ಯಗಳನ್ನ ಕೂಡ ಬರೆಯುತ್ತಾಳೆ. ಮಾನ್ಯ ಬರೆದಿರುವ ಎರಡು ಪುಸ್ತಕಗಳು ಪಬ್ಲಿಷ್ ಆಗಬೇಕಿದೆ. ಇಷ್ಟೆಲ್ಲಾ ಆಸಕ್ತಿ ಬೆಳಸಿಕೊಂಡಿರುವ ಮಾನ್ಯ ಈಗ ಜೂನಿಯರ್ ನಿವೇದಿತಾ ಗೌಡ ಎಂದೇ ಖ್ಯಾತಿಗಳಿಸಿಕೊಂಡಿದೆ. ಬೇಬಿ ಡಾಲ್ ನಿವೇದಿತಾ ರೀತಿಯಲ್ಲೇ ಎಲ್ಲರ ಗಮನ ಸೆಳೆಯುತ್ತಿದೆ.

  English summary
  junior Niveditha Gowda Manya harsha Interview. she imitates like Bigg Boss Kannada 5 contestants Niveditha Gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X