'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸಿದ್ದ ಅಶ್ವಿನ್ ಈಗ ನಿರ್ದೇಶಕ

By Naveen

'ಕಿರಿಕ್ ಪಾರ್ಟಿ' ಸಿನಿಮಾ ಗೆದ್ದ ಮೇಲೆ ಆ ಚಿತ್ರದಲ್ಲಿ ನಟಿಸಿದ್ದ ಎಲ್ಲ ಕಲಾವಿದರು ಬಿಜಿಯಾದರು. ಅದೇ ರೀತಿ ನಟ ರಕ್ಷಿತ್ ಶೆಟ್ಟಿ ಗೆಳೆಯನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಶ್ವಿನ್ ರಾವ್ ಪಲ್ಲಕ್ಕಿ ಈಗ ನಿರ್ದೇಶಕನಾಗಿದ್ದಾರೆ.

ಇತ್ತೀಚಿಗಷ್ಟೆ ನಟ ದಿಗಂತ್ ಅವರ 'ಕಥೆಯೊಂದು ಶುರುವಾಗಿದೆ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಸಹ ಅಶ್ವಿನ್ ರಾವ್ ಪಲ್ಲಕ್ಕಿ ನಟಿಸಿದ್ದಾರೆ. ಈ ಚಿತ್ರದ ಜೊತೆಗೆ 'ಕ್ಯಾಫೆ ಗ್ಯಾರೆಜ್' ಎಂಬ ಚಿತ್ರದಲ್ಲಿ ಸಹ ಅವರು ಅಭಿನಯಿಸುತ್ತಿದ್ದಾರೆ.

kannada actor ashwin rao pallaki directing a new movie

ನಟನೆಯ ಜೊತೆಗೆ ಈಗ ನಿರ್ದೇಶನಕ್ಕೆ ಅಶ್ವಿನ್ ಇಳಿದಿದ್ದಾರೆ. 'ಕ್ಯೂರಿಯಸ್ ಕೇಸಸ್ ಆಫ್ ಎದೆಬಡಿತ' ಎಂಬ ಚಿತ್ರಕ್ಕೆ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಚಿತ್ರದ ಅರ್ಧ ಶೂಟಿಂಗ್ ಮುಗಿದಿದೆಯಂತೆ. ನಾಲ್ಕು ಹುಡುಗರ ಬ್ರೇಕ್ ಅಪ್ ನಂತರದ ಕಥೆ ಚಿತ್ರದಲ್ಲಿ ಇದೆಯಂತೆ. ಸಿನಿಮಾದಲ್ಲಿ ನಾಲ್ಕು ಹೀರೋಗಳು ಹಾಗೂ ಮೂರು ಹೀರೋಯಿನ್ ಗಳು ಇರಲಿದ್ದಾರಂತೆ.

ಅಂದಹಾಗೆ, ಅಶ್ವಿನ್ ರಾವ್ ಪಲ್ಲಕ್ಕಿ ಅವರ ಪೂರ್ಣ ಸಂದರ್ಶನದ ವಿಡಿಯೋ ಇಲ್ಲಿದೆ ವೀಕ್ಷಿಸಿ.

More from Filmibeat

English summary
'Kirik Party' movie fame kannada actor Ashwin Rao Pallaki is directing 'Curious Cases Of Edebaditha' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X