ಹ್ಯಾಟ್ರಿಕ್ ಹೀರೋ ಶಿವಣ್ಣಗಾಗಿ ಬಿಗ್ ಬಜೆಟ್ ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ ಅಶ್ವಿನ್
'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ಫ್ರೆಂಡ್ ಕ್ಯಾರೆಕ್ಟರ್ ನಿರ್ವಹಿಸಿದ್ದ ಅಶ್ವಿನ್ ರಾವ್ ಪಲ್ಲಕ್ಕಿಗೆ ಅದೃಷ್ಟ ಖುಲಾಯಿಸಿದೆ. 'ಕಥೆಯೊಂದು ಶುರುವಾಗಿದೆ', 'ಕೆಫೆ ಗ್ಯಾರೇಜ್' ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿರುವ ಅಶ್ವಿನ್ ರಾವ್ ಪಲ್ಲಕ್ಕಿ ಸೈಲೆಂಟ್ ಆಗಿ 'ಕ್ಯೂರಿಯಸ್ ಕೇಸಸ್ ಆಫ್ ಎದೆಬಡಿತ' ಎಂಬ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ಈ ಎಲ್ಲದರ ನಡುವೆ ಅಶ್ವಿನ್ ರಾವ್ ಪಲ್ಲಕ್ಕಿ ಒಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳುವ ಇಚ್ಛೆ ಅವರಿಗಿದೆ.
ನಾಲ್ಕು ವರ್ಷಗಳಿಂದ ಈ ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದು, ಚಿತ್ರ ನಿರ್ಮಾಣಕ್ಕೆ ನಲವತ್ತು ಕೋಟಿ ಬಜೆಟ್ ಬೇಕಾಗುತ್ತಂತೆ. ಬಿಗ್ ಬಜೆಟ್ ಚಿತ್ರಕ್ಕೆ ನಿರ್ದೇಶಕನಾಗಲು ಅಶ್ವಿನ್ ರಾವ್ ಪಲ್ಲಕ್ಕಿ ಅಂತೂ ರೆಡಿ ಇದ್ದಾರೆ. ಆದ್ರೆ, ಅಷ್ಟೊಂದು ಬಂಡವಾಳ ಹಾಕಲು ನಿರ್ಮಾಪಕರು ಮನಸ್ಸು ಮಾಡಬೇಕಷ್ಟೆ.

ಪ್ರತಿಭೆಯಿಂದಲೇ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ಅಶ್ವಿನ್ ರಾವ್ ಪಲ್ಲಕ್ಕಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿರುವ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ..


Click it and Unblock the Notifications











