twitter
    For Quick Alerts
    ALLOW NOTIFICATIONS  
    For Daily Alerts

    ಮುಂದಿನ ವರ್ಷವೇ ಮದುವೆ ಎನ್ನುತ್ತಾರೆ ಮನುರಂಜನ್..!

    |

    ಮನುವಿನ ಜನ್ಮದಿನದಿಂದ ಶುರುವಾಗಲಿದೆ ಹೊಸ ಮನ್ವಂತರ. ಮನ್ವಂತರ ಎಂದೊಡನೆ ಹೊಸ ಚಿತ್ರದ ಹೆಸರು ಎಂದುಕೊಳ್ಳಬೇಡಿ. ಇದು ನಟ ಮನೋರಂಜನ್ ಅವರ ಹೊಸ ತಂತ್ರ. ಅವರ ಮುಂದಿನ ಚಿತ್ರಗಳು ಮನುರಂಜನ್ ಎನ್ನುವ ಬದಲಾದ ಹೆಸರಿನೊಂದಿಗೆ ತೆರೆಕಾಣಲಿದೆ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ. ಪ್ರಸ್ತುತ ಭರತ್ ನಾವುಂದ ನಿರ್ದೇಶನದ ಮುಗಿಲು ಪೇಟೆ' ಸಿನಿಮಾದ ಚಿತ್ರೀಕರಣದಲ್ಲಿರುವ ಮನುರಂಜನ್ ಡಿಸೆಂಬರ್ 11ರಂದು ಅಲ್ಲಿಯೇ ತಮ್ಮ 32ನೇ ವರ್ಷದ ಜನ್ಮದಿನಾಚರಣೆಯನ್ನು ಮಾಡಿಕೊಳ್ಳಲಿದ್ದಾರೆ.

    ತಿಂಗಳುಗಳ ಕಾಲ ಅಲ್ಲೇ ಶೂಟಿಂಗ್ ಶೆಡ್ಯೂಲ್ ಹಾಕಿರುವುದರಿಂದ ಬರ್ತ್ ಡೇ ಕೂಡ ಸೆಟ್ ನಲ್ಲೇ ಮಾಡುವುದೆಂದು ತೀರ್ಮಾನಿಸಲಾಗಿದೆಯಂತೆ. ಅವರು ಈ ಬಾರಿ ಕೆಲವೊಂದು ವಿಶೇಷ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳುವ ಸೂಚನೆ ಲಭಿಸಿದೆ. ಆ ಬಗ್ಗೆ ಮನುವನ್ನೇ ಮಾತನಾಡಿಸಿದಾಗ ಫಿಲ್ಮೀಬೀಟ್ ಜತೆಗೆ ಅವರು ಹಂಚಿಕೊಂಡ ವಿಶೇಷ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ಈ ಬಾರಿಯ ಬರ್ತ್ ಡೇ ಮೂಲಕ ತೆಗೆದುಕೊಳ್ಳುವ ಹೊಸ ನಿರ್ಧಾರಗಳೇನು?

    ಈ ಬಾರಿಯ ಬರ್ತ್ ಡೇ ಮೂಲಕ ತೆಗೆದುಕೊಳ್ಳುವ ಹೊಸ ನಿರ್ಧಾರಗಳೇನು?

    ನಿರ್ಧಾರ ಎಂದು ಏನನ್ನೂ ತೆಗೆದುಕೊಳ್ಳುತ್ತಿಲ್ಲ. ನನ್ನ ಸಿನಿಮಾ ಬಿಡುಗಡೆಯಾಗಿ ಜನವರಿಗೆ ಎರಡು ವರ್ಷಗಳಾಗುತ್ತಿವೆ. ನನ್ನ ಜನ್ಮದಿನದಿಂದು ನಾನು ದೇವರಲ್ಲಿ ಬೇಡುವುದು ಒಂದೇ, ಪ್ರತಿ ವರ್ಷ ನಾನು ನಟಿಸಿದ ಎರಡು ಅಥವಾ ಮೂರು ಸಿನಿಮಾಗಳು ತೆರೆಕಂಡು ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ. ಸ್ಟಾರಾಗಿ ಇಮೇಜ್ ಬಿಲ್ಡ್ ಆಗಬೇಕು. ಹಾಫ್ ಬೀಟ್ ಚಿತ್ರಗಳನ್ನು ಕೂಡ ಮಾಡುವ ಆಸೆ ಇದೆ. ಜನ ನನ್ನನ್ನು ವರ್ಸಟೈಲ್ ಆ್ಯಕ್ಟರ್ ಆಗಿ ಗುರುತಿಸಬೇಕು.

    ಮದುವೆ ಬಗ್ಗೆ ಯೋಚನೆ ನಡೆಯುತ್ತಿದೆಯಾ? ಲವ್ವಾಗಿದೆಯಾ?

    ಮದುವೆ ಬಗ್ಗೆ ಯೋಚನೆ ನಡೆಯುತ್ತಿದೆಯಾ? ಲವ್ವಾಗಿದೆಯಾ?

    ಲವ್ವಾಗಿಲ್ಲ. ಆದರೆ ಮದುವೆ ಯೋಚನೆ ಖಂಡಿತವಾಗಿ ಇದೆ. ತಂಗಿ ಮದುವೆ ಆದ ಕೂಡಲೇ ನನ್ನ ಮದುವೆ ಎಂದು ಇತ್ತು. ಈ ವರ್ಷ ತಂಗಿಯ ಮದುವೆ ಆಯಿತು. ಮುಂದಿನ ವರ್ಷಾಂತ್ಯದೊಳಗೆ ನನ್ನ ಮದುವೆಯೂ ಆಗಬಹುದು. ಕಾಲೇಜಲ್ಲೂ ಲವ್ವಾಗಿಲ್ಲ, ಇಂಡಸ್ಟ್ರಿಯಲ್ಲೂ ಆಗಿಲ್ಲ. ಹಾಗಾಗಿ ಅರೇಂಜ್ ಮ್ಯಾರೇಜ್ ಬೆಟರ್ ಎಂದುಕೊಂಡಿದ್ದೇನೆ. ಇನ್ನೊಂದು ಏಳೆಂಟು ತಿಂಗಳಲ್ಲೇ ನನ್ನಮ್ಮ ಹುಡುಗಿ ಹುಡುಕಿರ್ತಾರೆ.

    ತಿಂಗಳ ಕಾಲ ಮನೆಯಿಂದ ದೂರ ಇದ್ದು ಅಭ್ಯಾಸ ಇದೆಯಾ?

    ತಿಂಗಳ ಕಾಲ ಮನೆಯಿಂದ ದೂರ ಇದ್ದು ಅಭ್ಯಾಸ ಇದೆಯಾ?

    `ಬೃಹಸ್ಪತಿ' ಸಿನಿಮಾ ಮಾಡಿದಾಗ ಮೈಸೂರಲ್ಲೇ ಒಂದು ತಿಂಗಳು ಇದ್ದೆ. ಆದರೆ ಈ ಬಾರಿ 45 ದಿನ ಇರಬೇಕಾಗಿ ಬಂದಿದೆ. ಸ್ವಲ್ಪ ಕಷ್ಟಾನೇ. ಯಾಕೆಂದರೆ ಮನೇಲಿದ್ದಾಗ ಯಾವಾಗಲೂ ಅಮ್ಮನ ಜತೆ ಮಾತನಾಡಿಯೇ ಮಲಗೋಕೆ ಹೋಗೋದು. ಹಾಗಾಗಿ ಇಲ್ಲಿಂದಲೂ ದಿನಕ್ಕೆರಡು ಬಾರಿ ಫೋನು, ಎರಡು ದಿನಗಳಿಗೊಮ್ಮೆ ವಿಡಿಯೋ ಕಾಲ್ ಮಾಡುತ್ತಲೇ ಇರುತ್ತೇನೆ. ಎರಡು ದಿನ ಬೇಕೆಂದೇ ಅವರಿಗೆ ಫೋನ್ ಮಾಡಲಿಲ್ಲ. ಆದರೂ ಅವರು ವಾಪಾಸು ಮಾಡಲಿಲ್ಲ. ಯಾಕೆ ಎಂದು ಕೇಳಿದ್ರೆ ನೀನೇ ಮಾಡ್ತಿ ಎನ್ನುವ ನಂಬಿಕೆ ಇತ್ತು ಅಂದ್ರು. ಉಳಿದಂತೆ ಸಿನಿಮಾ ಫೀಲ್ಡ್ ನಲ್ಲಿ ಇಷ್ಟವಿದೆ ಎಂದ ಮೇಲೆ ಎಲ್ಲವೂ ಇಷ್ಟವೇ. ನಿತ್ಯದ ವ್ಯಾಯಾಮಕ್ಕಾಗಿ ಜಿಮ್ ಕಿಟ್ ತಂದಿದ್ದೇನೆ. ಸ್ನೇಹಿತರೇ ನಿರ್ಮಾಪಕರು. ಹಾಗಾಗಿ ಕಂಫರ್ಟೇಬಲ್ ಆಗಿದ್ದೇನೆ. ಒಟ್ಟಿನಲ್ಲಿ ಇಲ್ಲಿ ನನ್ನ ಕೆಲಸವನ್ನು ಎಂಜಾಯ್ ಮಾಡುತ್ತೇನೆ.

    `ಮುಗಿಲು ಪೇಟೆ’ ಚಿತ್ರವನ್ನು ನೀವು ಒಪ್ಪಿಕೊಳ್ಳಲು ಕಾರಣವೇನು?

    `ಮುಗಿಲು ಪೇಟೆ’ ಚಿತ್ರವನ್ನು ನೀವು ಒಪ್ಪಿಕೊಳ್ಳಲು ಕಾರಣವೇನು?

    ನನಗೆ ಆರಂಭದಿಂದಲೂ ಮೆಚ್ಯೂರ್ಡ್ ಎನಿಸುವ ಪಾತ್ರಗಳೇ ದೊರಕಿವೆ. `ಸಾಹೇಬ' ಆಗಲೀ, `ಬೃಹಸ್ಪತಿ' ಆಗಲೀ ಸಾಮಾನ್ಯವಾಗಿ ಹೊಸ ಹೀರೋ ಮಾಡದಂಥ ಸಬ್ಜೆಕ್ಟ್ಸ್ ಎಂದೇ ಹೇಳಬಹುದು. ಹಾಗಾಗಿ ಒಂದು ಫುಲ್ ಕಮರ್ಷಿಯಲ್ ಸಿನಿಮಾ ಮಾಡೋಣ ಎನ್ನುವ ಆಸೆಯಿತ್ತು. ಕಾಮಿಡಿಯಿಂದ ತುಂಬಿದ ಕ್ಯೂಟ್ ಲವ್ ಸ್ಟೋರಿ ಮಾಡಬೇಕು ಎಂದುಕೊಂಡಿದ್ದಾಗ ಸರಿಯಾಗಿ ಈ ಸಬ್ಜೆಕ್ಟ್ ಸಿಕ್ಕಿತು. ಡೈರೆಕ್ಟರು ನನಗೆ ವರ್ಷಕ್ಕೂ ಮುಂಚೆಯೇ ಈ ಕತೆ ಹೇಳಿದ್ದರು. ಜತೆಗೆ ಮೂರು ಆಕರ್ಷಕ ಹೊಡೆದಾಟದ ದೃಶ್ಯಗಳೂ ಚಿತ್ರದಲ್ಲಿವೆ. ತುಂಬ ಒಳ್ಳೆಯ ಫೀಲ್ ಇರುವ ಚಿತ್ರ ಇದು. ನನ್ನ ಪಾತ್ರಕ್ಕೆ ಎರಡು ಶೇಡ್ ಇವೆ.

    ನಿಮ್ಮ ನಾಯಕತ್ವದ `ಪ್ರಾರಂಭ’ ಚಿತ್ರ ಯಾವ ಹಂತದಲ್ಲಿದೆ?

    ನಿಮ್ಮ ನಾಯಕತ್ವದ `ಪ್ರಾರಂಭ’ ಚಿತ್ರ ಯಾವ ಹಂತದಲ್ಲಿದೆ?


    ಪ್ರಾರಂಭ ವರ್ಷಾರಂಭದಲ್ಲಿ ತೆರೆಗೆ ತರಲು ಯೋಜನೆ ಹಾಕಿದ್ದೇವೆ. ಅದರ ರಿರೆಕಾರ್ಡಿಂಗ್ ನಡೆಯುತ್ತಿದೆ. ಡಿಸೆಂಬರ್ 22ಕ್ಕೆ ಚಿತ್ರದ ಮೊದಲ ಕಾಪಿ ಕೈ ಸೇರುವ ನಿರೀಕ್ಷೆ ಇದೆ. ಜನವರಿಯಲ್ಲಿ ಒಂದೊಳ್ಳೆಯ ದಿನ ನೋಡಿ ಬಿಡುಗಡೆ ಮಾಡಲಿದ್ದೇವೆ.

    ನಿಮ್ಮಿಂದ ರವಿಚಂದ್ರನ್ ಅವರ ಇಮೇಜ್ ನಿರೀಕ್ಷಿಸುವ ಪ್ರೇಕ್ಷಕರಿಗೆ ಏನು ಹೇಳುತ್ತೀರಿ?

    ನಿಮ್ಮಿಂದ ರವಿಚಂದ್ರನ್ ಅವರ ಇಮೇಜ್ ನಿರೀಕ್ಷಿಸುವ ಪ್ರೇಕ್ಷಕರಿಗೆ ಏನು ಹೇಳುತ್ತೀರಿ?

    ನಿಜಕ್ಕೂ ನಾನು ಇಂದು ಚಿತ್ರರಂಗದಲ್ಲಿದ್ದರೆ ಅದಕ್ಕೆ ಕಾರಣ ನನ್ನ ತಂದೆ. ಆದರೆ ನನ್ನ ಪಾತ್ರಗಳಲ್ಲಿ ಅವರನ್ನು ಹೋಲಿಸಬಾರದು ಎಂದು ನನ್ನ ವಿನಂತಿ. ಅದೇ ಕಾರಣಕ್ಕೆ ಆರಂಭದಿಂದಲೇ ನನ್ನ ಆಯ್ಕೆಗಳು ಕೂಡ ವಿಭಿನ್ನವಾಗಿದ್ದವು. `ಸಾಹೇಬ' ಮಾಡಿದಾಗ ತುಂಬ ಜನ ಅಚ್ಚರಿಯಿಂದಲೇ ಮೆಚ್ಚುಗೆ ನೀಡಿದ್ದಾರೆ. ಯಾಕೆಂದರೆ ರವಿಚಂದ್ರನ್ ಮಗ ಅಂದಾಕ್ಷಣ ಅದ್ಧೂರಿ ಹಾಡು, ಸೆಟ್ ಇರುವ ಚಿತ್ರದೊಂದಿಗೆ ಬರುತ್ತೇನೆ ಎಂದುಕೊಂಡವರಿಗೆ ಒಂದು ಒಳ್ಳೆಯ ಕತೆ ಮಾತ್ರ ಇರುವ ಚಿತ್ರದಲ್ಲಿ ನಟಿಸಿದ್ದು ವಿಶೇಷವಾಗಿತ್ತು ಚಿಲಂ ವಿಚಾರಕ್ಕೆ ಬಂದರೆ ಅದರಲ್ಲಿ ನನಗೆ ಸಂಪೂರ್ಣ ನೆಗೆಟಿವ್ ಶೇಡ್ ಇದೆ. ಆದರೆ ನಿರ್ಮಾಪಕರಿಗೆ ಸ್ವಲ್ಪ ಸಮಸ್ಯೆಯುಂಟಾಗಿ ಚಿತ್ರ ಸ್ವಲ್ಪ ತಡವಾಗಿದೆ. ಆದರೆ ಖಂಡಿತವಾಗಿ ಅದು ಟೇಕಾಫ್ ಆಗಿ ಬರಲಿದೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.

    ತಂದೆಯ ಹೊರತಾಗಿ ನಿಮಗೆ ಕನ್ನಡ ಚಿತ್ರರಂಗದಲ್ಲಿ ತುಂಬ ಸ್ಫೂರ್ತಿಯಾಗಿರುವ ನಟ ಯಾರು?

    ತಂದೆಯ ಹೊರತಾಗಿ ನಿಮಗೆ ಕನ್ನಡ ಚಿತ್ರರಂಗದಲ್ಲಿ ತುಂಬ ಸ್ಫೂರ್ತಿಯಾಗಿರುವ ನಟ ಯಾರು?

    ನನಗೆ ಮೊದಲ ಸ್ಫೂರ್ತಿ ತಂದೆಯಾದರೆ, ನನ್ನ ತಮ್ಮನೇ ಎರಡನೇ ಸ್ಫೂರ್ತಿ! ಯಾಕೆಂದರೆ ಸಿನಿಮಾರಂಗದಲ್ಲಿರುವವರನ್ನು ನಾನು ಹತ್ತಿರದಿಂದ ನೋಡಿದ್ದೇ ಅವರ ಮೂಲಕ. ನನ್ನ ತಮ್ಮನೊಬ್ಬ ಹುಟ್ಟು ಕಲಾವಿದ. ನಾನಾದರೂ ಪರದೆ ಮುಂದೆ ಬರುವ ಮೊದಲು ಆ್ಯಕ್ಟಿಂಗ್ ಕ್ಲಾಸ್, ಡ್ಯಾನ್ಸ್ ಕ್ಲಾಸ್, ಫೈಟ್ ಕ್ಲಾಸ್ ಗೆ ಹೋಗಿದ್ದೇನೆ. ಆದರೆ ಅವನು ಚಿಕ್ಕೋನಾಗಿರಬೇಕಾದರೇನೇ ನೇರವಾಗಿ ನಟನಾದವನು. ಅವನ ಟ್ಯಾಲೆಂಟ್ ನೋಡಿನೇ ಸ್ಫೂರ್ತಿ ತಗೊಂಡಿದ್ದೇನೆ. ಶಿವಣ್ಣನ ಎಮೋಶನ್ ಸೀನ್ಸ್, ದರ್ಶನ್ ಸರ್ ಮಾಸ್ ಅಪೀಲು, ಸುದೀಪ್ ಸರ್ ಅವರ ಆ್ಯಟಿಟ್ಯೂಡು, ಪುನೀತ್ ಅವರ ಡ್ಯಾನ್ಸ್ ಎಲ್ಲವೂ ಇಷ್ಟ. ಯಶ್ ನನಗೆ ತುಂಬ ಆತ್ಮೀಯ. ಯಶ್ ನಲ್ಲಿರುವ ಕಾನ್ಫಿಡೆನ್ಸ್ ತುಂಬ ಇಷ್ಟ. ಹಾಗಾಗಿ ಎಲ್ಲರಿಂದ ಏನಾದರೂ ಒಂದು ಇಷ್ಟಪಡುತ್ತಿರುತ್ತೇನೆ.

    ನಿಮಗೆ ನಮ್ಮ ದೇಶದ ಚಿತ್ರಗಳಲ್ಲಿ ಯಾವ ಭಾಷೆಯ ನಿರ್ದೇಶಕರ ಚಿತ್ರಗಳು ಆಕರ್ಷಕವೆನಿಸಿವೆ?

    ನಿಮಗೆ ನಮ್ಮ ದೇಶದ ಚಿತ್ರಗಳಲ್ಲಿ ಯಾವ ಭಾಷೆಯ ನಿರ್ದೇಶಕರ ಚಿತ್ರಗಳು ಆಕರ್ಷಕವೆನಿಸಿವೆ?

    ಎಲ್ಲ ಭಾಷೆಯ ಚಿತ್ರಗಳಲ್ಲಿಯೂ ಒಳ್ಳೆಯ, ಮಹಾನ್ ನಿರ್ದೇಶಕರಿದ್ದಾರೆ. ಆದರೆ ನನಗೆ ಯಾರು ಪರ್ಸನಲ್ ಫೇವರಿಟ್ ಎಂದು ಮಾತ್ರ ಹೇಳಬಲ್ಲೆ. ತೆಲುಗಲ್ಲಿ ರಾಜಮೌಳಿಯವರ ಚಿತ್ರಗಳ ಬಗ್ಗೆ ಅಭಿಮಾನ ಇದೆ. ಅದು ಎಷ್ಟರ ಮಟ್ಟಿಗೆ ಎಂದರೆ ಅವರ ಚಿತ್ರಗಳ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ ಎಂದು ತಿಳಿದವನು ನಾನು. ಹಿಂದಿಯಲ್ಲಿ ರಾಜ್ ಕುಮಾರ್ ಹಿರಾನಿಯವರ ಚಿತ್ರಗಳು ಇಷ್ಟವಾಗುತ್ತವೆ. ಕನ್ನಡದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಮೆಚ್ಚಲೇಬೇಕು. ಯಾಕೆಂದರೆ ಅವರು ಇದುವರೆಗೆ ನೀಡಿರುವ ಎರಡು ಚಿತ್ರಗಳು ಕೂಡ ಆ ಮಟ್ಟದಲ್ಲಿವೆ.

    English summary
    Legendry Kannada Actor Ravichandran son Manoranjan now changed his name as Manuranjan. December 11th his birthday. He Acted Kannada Films Bruhaspathi And Sahe
    Saturday, December 7, 2019, 18:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X